ಈರುಳ್ಳಿ ಕತ್ತರಿಸುವ ಟೈಮಲ್ಲಿ ಕಣ್ಣಲ್ಲಿ ನೀರು ಬರುತ್ತದೆ.. ಎಂದು ಹೇಳುವುದು ಎಷ್ಟು ಸತ್ಯನೋ ಹಾಗೇ, ಭವಿಷ್ಯದಲ್ಲಿ ಈರುಳ್ಳಿ ಕಣ್ಣೀರು ತರಿಸುವುದಿಲ್ಲ. ಈರುಳ್ಳಿಯನ್ನು ಅನೇಕ ಪಾಕಪದ್ಧತಿಗಳಲ್ಲಿ ತಾಜಾ, ಮಸಾಲೆಯಾಗಿ ಬಳಸಲಾಗುತ್ತದೆ. ಅದರ ವಿಶಿಷ್ಟವಾದ ರುಚಿಗೆ ಇದು ಎಲ್ಲರಿಗೂ ಇಷ್ಟವಾಗುತ್ತದೆ. ಈರುಳ್ಳಿಯನ್ನು ಸಾಂಪ್ರದಾಯಿಕ ಔಷಧೀಯ ಗುಣಗಳಿಗಾಗಿ ಸಾಂಪ್ರದಾಯಿಕ ಗಡಿಯ ಹೊರಗೆ ಬಳಸಲಾಗುತ್ತಿದೆ. ಕ್ಯಾನ್ಸರ್, ಅಸ್ತಮಾ, ಸಂಧಿವಾತ ಹಾಗೂ ಮಧುಮೇಹದಂತಹ ರೋಗಗಳನ್ನು ತಡೆಗಟ್ಟುವಂತಹ ಅನೇಕ ಗುಣಗಳು ಈರುಳ್ಳಿಯಲ್ಲಿವೆ. ಈ ಬಹುಮುಖ ತರಕಾರಿಯ ಆರೋಗ್ಯ ಪ್ರಯೋಜನಗಳೇನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಪ್ರಾಚೀನ ಕಾಲದಿಂದಲೂ ಈರುಳ್ಳಿ ಬಳಕೆ…?
ಈರುಳ್ಳಿಯನ್ನಪ ಸಾವಿರಾರು ವರ್ಷಗಳಿಂದ ಬೆಳೆಯಲಾಗುತ್ತದೆ. ಕ್ರಿ.ಪೂ 5000 ರ ಸುಮಾರು ವರ್ಷಗಳಿಂದಲೂ ಬಳಸಲಾಗುತ್ತದೆ. ಈರುಳ್ಳಿಯ ಎಲೆಗಳು, ಹೂವುಗಳನ್ನು ವಿಶ್ವದ ಅನೇಕ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಈರುಳ್ಳಿ ಒಂದು ಪವಾಡದ ಮೂಲಿಕೆಯಾಗಿದ್ದು, ಇದನ್ನು ಅನೇಕ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ಬಹುತೇಕ ಎಲ್ಲಾ ಮನೆಗಳಲ್ಲಿ ಈರುಳ್ಳಿ ಸಾಮಾನ್ಯವಾಗಿ ಬಳಸಲಾಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ಕತ್ತರಿಸಿದ ಈರುಳ್ಳಿಯನ್ನು ಅಗಿಯುವಾಗ ಈರುಳ್ಳಿ ಆರ್ಗನೊಸಲ್ಫರ್ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಎನ್ ಸಿಬಿಐ ಪ್ರಕಾರ, ಈರುಳ್ಳಿಯಂತಹ ಆಲಿಯಮ್ ಬಲ್ಬ್ ಗಳು ಆಗ್ರನೊಸಲ್ಫರ್ ಸಂಯುಕ್ತಗಳ ಆಂಟಿ ಆಕ್ಸಿಡೆಂಟ್ ಗಳು ಜೀವಕೋಶಗಳ ರಚನೆ, ಹಾನಿ ಹಾಗೂ ದೇಹದಲ್ಲಿನ ಡಿಎನ್ ಎ ನಷ್ಟವನ್ನು ತಡೆಯುತ್ತದೆ.
ತೂಕವನ್ನು ಕಡಿಮೆ ಮಾಡುತ್ತದೆ.
ಈರುಳ್ಳಿಯಲ್ಲಿ ಕಂಡು ಬರುವ ಕ್ವೆರ್ಸೆಟಿನ್ ಮತ್ತು ಗಂಧಕದಂತಹ ಅಂಶಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ಪ್ರಕಟಿಸಿದ ಸಂಶೋಧನೆ ಪ್ರಕಾರ, ಈರುಳ್ಳಿ ರಸವು ಉರಿಯೂತದಂತಹ ಅನೇಕ ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ.

ಮಾರಕ ಕಾಯಿಲೆ ನಿವಾರಣೆ
ಈರುಳ್ಳಿ ಹಾಗೂ ಅರಶಿಣವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ವಿಶೇಷವಾಗಿ ಕರುಳಿಗೆ ಸಂಬಂಧಪಟ್ಟ ಕಾಯಿಲೆ ಹಾಗೂ ಇತರ ಕಾಯಿಲೆಗಳನ್ನು ತಡೆಗಟ್ಟುತ್ತದೆ.
ಸಂಧಿವಾತವನ್ನು ತಡೆಗಟ್ಟುತ್ತದೆ.
ಮೂಳೆ ಕಾಯಿಲೆಗಳಾದ ಸಂಧಿವಾತ ಅಪಾಯವನ್ನು ಕಡಿಮೆ ಮಾಡುತ್ತದೆ. ಅನೇಕ ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರ ಈರುಳ್ಳಿ ಎಂದು ಹೇಳಬಹುದು.
ಅಸ್ತಮಾವನ್ನು ಕಡಿಮೆ ಮಾಡುತ್ತದೆ
ಅಲರ್ಜಿ ಹಾಗೂ ಅಸ್ತಮಾವನ್ನು ಕಡಿಮೆ ಮಾಡಲು ಈರುಳ್ಳಿ ಪರಿಣಾಮಕಾರಿ ಎಂದು ನಂಬಲಾಗಿದೆ. ಮಧುಮೇಹವನ್ನು ಕಡಿಮೆ ಮಾಡುತ್ತದೆ
ಮಧುಮೇಹವನ್ನು ಕಡಿಮೆ ಮಾಡಲು ಈರುಳ್ಳಿ ಮಹತ್ವದ ಪಾತ್ರ ವಹಿಸುತ್ತದೆ. ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕ್ಲಿನಿಕಲ್ ಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈರುಳ್ಳಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಈರುಳ್ಳಿಯಲ್ಲಿ ಕಂಡು ಬರುವ ಕ್ವಾರ್ಟಿನ್ ಎಂಬ ಸಂಯುಕ್ತ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಬ್ಯಾಕ್ಟೇರಿಯಾ ಸೋಂಕನ್ನು ತಡೆಗಟ್ಟುತ್ತದೆ.
ಸಂಶೋಧನೆ ಪ್ರಕಾರ, ಈರುಳ್ಳಿ ಹಾಗೂ ಈರುಳ್ಳಿ ರಸದಲ್ಲಿ ಬ್ಯಾಕ್ಟೇರಿಯಾ ವಿರೋಧಿ ಗುಣಗಳಿವೆ. ಈರುಳ್ಳಿ ದೇಹಕ್ಕೆ ಹೆಚ್ಚು ಹಾನಿಯನ್ನುಂಟು ಮಾಡಬಲ್ಲ ಬ್ಯಾಕ್ಟೇರಿಯಾವನ್ನು ತಡೆಗಟ್ಟುತ್ತದೆ. ವಿವಿಧ ಸೋಂಕುಗಳಿಗೆ ಚಿಕಿತ್ಸೆ ನೀಡಲು ಇದು ಪರಿಣಾಮಕಾರಿಯಾದ ಮದ್ದಾಗಿದೆ. ಈರುಳ್ಳಿಯಲ್ಲಿರುವ ಸೆಲೆನಿಯಂ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ದೃಷ್ಟಿ ಸುಧಾರಿಸುತ್ತದೆ. ಪ್ರತಿ ದಿನ ಈರುಳ್ಳಿ ತೆಗೆದುಕೊಳ್ಳುವುದರಿಂದ ದೃಷ್ಟಿ ಸುಧಾರಿಸುತ್ತದೆ. ಪ್ರತಿ ದಿನ ಈರುಳ್ಳಿ ಸೇವಿಸುವುದರಿಂದ ಕಣ್ಣಿನ ಮಬ್ಬು ನಿವಾರಣೆಯಾಗುತ್ತದೆ.

100 ಗ್ರಾಂ ಈರುಳ್ಳಿಯಲ್ಲಿ ಪೌಷ್ಟಿಕಾಂಶದ ಮೌಲ್ಯಗಳು!
ಶಕ್ತಿ -166 ಕೆ.ಜಿ
ಕ್ಯಾಲೋರಿ – 40
ನೀರು – ಶೇ 89
ಕಾರ್ಬೋಹೈಡ್ರೇಟ್ – 9.34 ಗ್ರಾಂ
ಸಕ್ಕರೆ – 4.2 ಗ್ರಾಂ
ಫೈಬರ್ – 1.7 ಗ್ರಾಂ
ಕೊಬ್ಬು 1.7 ಗ್ರಾಂ
ಕೊಬ್ಬು 0.1 ಗ್ರಾಂ
ಪ್ರೋಟೀನ್, 1.1 ಗ್ರಾಂ
ಈರುಳ್ಳಿಯ ಮುನ್ನಚ್ಚರಿಕೆ ಕ್ರಮ ಹಾಗೂ ಸೈಡ್ ಎಫೆಕ್ಟ್ ..!
ನೀವು ನಂಬ್ತೀರೋ ಇಲ್ಲವೋ, ಕೆಲವು ಸಲ ಈರುಳ್ಳಿ ಅಲರ್ಜಿ ಉಂಟು ಮಾಡಬಹುದು. ನೀವು ಅಲರ್ಜಿಯನ್ನು ಹೊಂದಿದ್ದರೆ, ತುರಿಕೆ, ಬಾಯಿಯಲ್ಲಿ ಊತ, ಉಬ್ಬಸ ಹಾಗೂ ಉಸಿರಾಟದ ತೊಂದರೆ ಅನುಭವಿಸಬಹುದು. ಈರುಳ್ಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆಯ ಗ್ಯಾಸ್ ಹಾಗೂ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ಈರುಳ್ಳಿ ಕೆಲವು ಸಲ ವಾಯು ಉಂಟು ಮಾಡಬಹುದು. ಹೆಚ್ಚು ಈರುಳ್ಳಿ ಸೇವಿಸದರೆ ಆಸಿಡ್ ರಿಫ್ಲೆಕ್ಸ್ ಅಥವಾ ಎದೆಯ ಕಿರಿ ಕಿರಿ ಉಂಟಾಗುತ್ತದೆ.