ಪ್ರತಿ ದಿನ ರಾತ್ರಿ ಉತ್ತಮ ನಿದ್ರೆ ಪಡೆಯುವುದರಿಂದ ಅನೇಕ ಆರೋಗ್ಯಕ್ಕೆ ಲಾಭಗಳನ್ನು ಕಾಣಬಹುದಾಗಿದೆ. ನಿದ್ರೆ ಬೊಜ್ಜು ಕಡಿಮೆ ಮಾಡಲು ಸಹಕಾರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಿದ್ರೆಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ನಿದ್ರೆ ನಿಮ್ಮ ದೇಹವು ಶಕ್ತಿಯನ್ನು ಸಂಗ್ರಹಿಸುತ್ತದೆ. ಮತ್ತು ಕೆಲಸವನ್ನು ಸುಲಭವಾಗಿ ನಿರ್ವಹಿಸಲು ಸುಲಭವಾಗುತ್ತದೆ.

ನಾವೆಲ್ಲರೂ ಆರೋಗ್ಯವಾಗಿರಲು ನಿಯಮಿತವಾಗಿ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಸೇವನೆ ಮಾಡುತ್ತೇವೆ. ಆದರೆ ನಿದ್ರೆ ಕೂಡಾ ಬಹಳ ಮುಖ್ಯವಾದದ್ದು. ಇದು ತೂಕ ನಷ್ಟಕ್ಕೆ ಹೆಚ್ಚು ಸಹಕಾರಿಯಾಗಬಲ್ಲದ್ದು. ನಿದ್ರೆಯ ಅಭ್ಯಾಸವು ತೂಕ ಇಳಿಸುವಲ್ಲಿ ಪರಿಣಾಮ ಬೀರುತ್ತದೆ.
ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡುವುದರಿಂದ ನಿಮ್ಮ ಜೀವತಾವಧಿಯನ್ನು ಹೆಚ್ಚಿಸಬಹುದು. ಮತ್ತು ಅಪೂರ್ಣ ನಿದ್ರೆ ಒತ್ತಡ , ಅಧಿಕ , ರಕ್ತದೋತ್ತಡದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ತೂಕ ಹೆಚ್ಚಾಗುವುದು ನಿಮ್ಮ ದೇಹದ ಹಾರ್ಮೋನ್ ಗಳಿಗೆ ಸಂಬಂಧಿಸಿದೆ.
ರಾತ್ರಿಯಲ್ಲಿ ಉತ್ತಮ ನಿದ್ದೆ ಮಾಡುವುದರಿಂದ ದಿನವಿಡೀ ನಿಮಗೆ ತುಂಬಾ ಹಸಿವಾಗುವುದಿಲ್ಲ. ಈ ಕಾರಣದಿಂದ ನೀವು ಕಡಿಮೆ ಆಹಾರ ಸೇವಿಸಬಹುದು. ಈ ಸಂಪೂರ್ಣ ಪ್ರಕ್ರಿಯೆಯೂ ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮತ್ತೊಂದೆಡೆ ನಿಮಗೆ ನಿದ್ರೆ ಬರದಿದ್ದರೆ, ನೀವು ದಿನವಿಡಿ ಹಸಿವನ್ನು ಅನುಭವಿಸುತ್ತೀರಿ. ಮತ್ತು ಹಸಿವು ಹೆಚ್ಚಾಗುತ್ತದೆ. ಇದು ಆಹಾರ ಸೇವಿಸುವಂತೆ ಮಾಡುವಂತೆ. ಪೂರ್ಣವಾಗಿ ನಿದ್ರೆ ಮಾಡದೇ ಇರುವುದರಿಂದ ಅಜೀರ್ಣ ಸಮಸ್ಯೆ ಉಂಟಾಗಬಹುದು. ಕ್ಯಾಲೋರಿಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯ ವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ನಿಮ್ಮ ದೇಹವು ಹೆಚ್ಚು ಕೊಬ್ಬು ಶೇಖರಣೆಯಾಗಲು ಪ್ರಾರಂಭವಾಗುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.
ನಿದ್ರೆಯ ಕೊರತೆಯಿಂದ ಆಗುವ ಅಪಾಯಗಳು
ನಿದ್ರೆಯ ಕೊರತೆಯು ದೇಹದ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಹಸಿವನ್ನು ಹೆಚ್ಚಿಸುವ ಗ್ರೆಲಿನ್ ಹಾರ್ಮೋನ್ ಉತ್ಪಾದನೆಯೂ ಹೆಚ್ಚುತ್ತದೆ . ನಿದ್ರೆಯ ಕೊರತೆಯಿಂದ ಮೆದಳು ಆಹಾರದ ಬಗ್ಗೆ ಹೆಚ್ಚು ಯೋಚಿಸಲು ಪ್ರಾರಂಭಿಸುತ್ತದೆ. ಇದು ಆಹಾರದ ಹಂಬಲವನ್ನು ಹೆಚ್ಚಿಸುತ್ತದೆ.
ಚಯಾಪಚಯ ಕ್ರಿಯೆ ಮೇಲೆ ಪರಿಣಾಮ!
ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಅಧ್ಯಯನದ ಪ್ರಕಾರ, ನಿದ್ರೆಯ ಕೊರತೆಯಿಂದಾಗಿ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಕುಳಿತುಕೊಳ್ಳುವಾಗ, ನಡೆಯುವಾಗ, ನಿಂತಾಗ ಮತ್ತು ಸಾಕಷ್ಟು ನಿದ್ರೆ ಸಿಗದಿದ್ದಾಗ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ.
ನಿದ್ರೆಯ ಕೊರತೆಯಿಂದಾಗಿ ಸ್ನಾಯು ನಷ್ಟ ಸಂಭವಿಸಬಹುದು. ಮತ್ತು ಕ್ಯಾಲೋರಿಗಳನ್ನು ಬರ್ನ್ ಮಾಡುವಲ್ಲಿ ಚಯಾಪಚಯ ವೇಗಗೊಳಿಸಲು ಸ್ನಾಯುಗಳು ಆರೋಗ್ಯಕರವಾಗಿರುವುದು ತುಂಬಾ ಮುಖ್ಯ.
ತಾಲೀಮಿನ ಮೇಲೆ ಪರಿಣಾಮ ಬೀರುತ್ತದೆ..!
ಉತ್ತಮ ನಿದ್ರೆ ಪಡೆಯುವ ಮೂಲಕ ನೀವು ಹೆಚ್ಚು ಸಕ್ರೀಯರಾಗಿ ಇರಬಹುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಿದ್ರೆಯ ಕೊರತೆ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ಬೇಗನೆ ದಣಿವು ಹಾಗೂ ಆಯಾಸ ಸಮಸ್ಯೆ ಉಂಟಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳು ಕಂಡು ಬರಬಹುದು. ಅತಿಯಾದ ನಿದ್ರೆ ರಕ್ತಹೀನತೆ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಎಷ್ಟು ನಿದ್ರೆ ಮಾಡಬೇಕು?
ಪ್ರತಿ ದಿನ ರಾತ್ರಿ ಸಮಯಕ್ಕೆ ನಿದ್ರೆ ಮಾಡಿ ಬೆಳಿಗ್ಗೆ ಎದ್ದೇಳಿ. ಪ್ರತಿ ದಿನ 7ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ನಿಮ್ಮದಾಗಿರಬೇಕು. ಇದು ತೂಕ ನಷ್ಟಕ್ಕೂ ಕಾರಣವಾಗುತ್ತದೆ. ನಿಮ್ಮನ್ನು ಅನಾರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಅದೇ ಸಮಯದಲ್ಲಿ ಸಮತೋಲಿತ ಆಹಾರ ಕ್ರಮ ಹಾಗೂ ಸಾಕಷ್ಟು ತಾಲೀಮು ಮಾಡಬೇಕು. ಸಾಕಷ್ಟು ನಿದ್ರೆ ಮಾಡುವತ್ತ ಗಮನ ಹರಿಸಬೇಕು. ನಿದ್ರೆಯ ಕೊರತೆಯಿಂದ ತೂಕ ನಷ್ಟಕ್ಕೆ ಅಡ್ಡಿಯಾಗಬಹುದು. ಅಲ್ಲದೇ ಅನೇಕ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು.