ಸ್ನಾನ ಮಾಡುವುದು ನಮ್ಮ ದಿನಚರಿಗಳಲ್ಲೊಂದು. ಸ್ನಾನ ನಮ್ಮ ದೇಹದ ಸ್ವಚ್ಛತೆಯನ್ನು ಕಾಪಾಡುವುದಲ್ಲದೇ, ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಹವಾಮಾನಕ್ಕೆ ಅನುಗುಣವಾಗಿ ಕೆಲವರು ಬಿಸಿ ಹಾಗೂ ತಣ್ಣನೇಯ ನೀರಿನಿಂದ ಸ್ನಾನ ಮಾಡುತ್ತಾರೆ. ಆದರೆ ನೀವು ಪ್ರತಿ ದಿನ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಆರೋಗ್ಯವಾಗಿರಲು ಸಾಧ್ಯ. ನೀವು ಬಿಸಿ ನೀರಿನಿಂದ ಸ್ನಾನ ಮಾಡಿದರೆ ದೇಹ ರಿಲ್ಯಾಕ್ಸ್ ಆಗುತ್ತದೆ. ಇದರ ಪ್ರತಿಯಾಗಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಬಿಸಿ ಸಹಾಯಕಾರಿ..!
ತೂಕ ನಷ್ಟ ಮಾಡಿಕೊಳ್ಳಲು ಬಯಸುವವರು ಬಿಸಿ ನೀರಿನ ಸ್ನಾನ ಮಾಡಿದರೆ ಒಳ್ಳೆಯದು. ಇತ್ತೀಚಿನ ಅಧ್ಯಯನದ ಪ್ರಕಾರ, ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ವಾಗುತ್ತದೆ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಸುಮಾರು 140 ಕ್ಯಾಲೋರಿ ಗಳು ಬರ್ನ್ ಆಗುತ್ತವೆ. ನೀವು ಸ್ನಾನ ಮಾಡಿದ ತಕ್ಷಣ ನಿಮ್ಮ ಕೆಲವು ಕ್ಯಾಲೋರಿಗಳು ಸುಟ್ಟು ಹೋಗುತ್ತದೆ. ಕ್ರಮೇಣ ತೂಕವು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಬಿಸಿ ನೀರಿನಿಂದ ಸ್ನಾನ ಮಾಡುವುದು ಸುಮಾರು 30 ನಿಮಿಷಗಳ ನಡಿಗೆಗೆ ಸಮಾನ ಎಂದು ಪರಿಗಣಿಸಲಾಗಿದೆ.
ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ
ನೀವು ಹೃದಯ ರೋಗಿಯಾಗಿದ್ದರೆ ಬಿಸಿ ನೀರಿನ ಸ್ನಾನ ಮಾಡಿದರೆ ಒಳ್ಳೆಯದು. ಬಿಸಿ ನೀರಿನ ಸ್ನಾನ ಮಾಡುವುದರಿಂದ ಹೃದಯಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನೀವು ಬಿಸಿ ನೀರಿನ ಸ್ನಾನ ಮಾಡುವಾಗ, ನಿಮ್ಮ ದೇಹಕ್ಕೆ ರಿಲ್ಯಾಕ್ಸ್ ಸೀಗುತ್ತದೆ.

ನರಮಂಡಲಕ್ಕೆ ಹೆಚ್ಚು ಉಪಯುಕ್ತ..!
ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಇದು ನಿಮ್ಮ ನರಮಂಡಲವನ್ನು ಸಡಿಲಗೊಳಿಸುತ್ತದೆ. ಇದಲ್ಲದೇ, ಇದು ದೇಹದಲ್ಲಿನ ಯಾವುದೇ ರೀತಿಯ ತೀವ್ರವಾದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ ನರಮಂಡಕ್ಕೆ ಸಂಬಂಧಪಟ್ಟ ನೋವು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ನಾನ ಮಾಡುವುದರಿಂದ ಸ್ನಾಯುಗಳು, ಮೂಳೆಗಳ ನೋವು ನಿವಾರಣೆಯಾಗಲು ಪ್ರಮುಖ ಪಾತ್ರ ವಹಿಸುತ್ತದೆ.
ಉತ್ತಮ ನಿದ್ರೆ..!
ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನಿರಾಳ ಭಾವ ಮೂಡುತ್ತದೆ. ಅಲೇಲದೇ ಇದು ನಿಮ್ಮ ರಕ್ತದೋತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುವುದಲ್ಲದೇ, ಉತ್ತಮ ನಿದ್ರೆ ಹೊಂದಲು ನೆರವಾಗುತ್ತದೆ. ನಿಮ್ಮ ರಕ್ತದೋತ್ತಡವನ್ನು ಕಡಿಮೆ ಮಾಡುತ್ತದೆ. ಕಣ್ಣುಗಳಿಗೆ ಹಾಗೂ ಮೆದುಳಿಗೆ ರಿಲ್ಯಾಕ್ಸ್ ನೀಡಿ, ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ರೋಗ ಹಾಗೂ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ.
ದೀರ್ಘಕಾಲಿಕ ಕಾಯಿಲೆಗಳಿಂದ ನರಳುತ್ತಿರುವ ಜನರು ಅಥವಾ ಖಿನ್ನತೆ ಯಿಂದ ಬಳಲುತ್ತಿರುವ ಜನರಿಗೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಅನೇಕ ದೈಹಿಕ ನೆಮ್ಮದಿ, ತೃಪ್ತಿ ಸಿಗುತ್ತದೆ. ಅಲ್ಲದೇ ದೀರ್ಘಕಾಲಿಕ ನೋವನ್ನು ನಿವಾರಿಸುತ್ತದೆ. ಬಿಸಿ ನೀರಿನ ಸಹಾಯದಿಂದ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು.

ಬಿಸಿ ನೀರು, ತಣ್ಣೀರು ಆರ್ಯುವೇದದ ಪ್ರಕಾರ, ಯಾವುದು ಉತ್ತಮ..?
ಯಾವ ನೀರಿನಿಂದ ಸ್ನಾನ ಮಾಡುವುದು ಹೆಚ್ಚು ಉತ್ತಮ. ತಣ್ಣೀರಾ ಅಥವಾ ಬಿಸಿನೀರಿನ ಸ್ನಾನನಾ.. ಎಂದು ಹಲವರ ಪ್ರಶ್ನೆಗೆ ಉತ್ತರ ಇಲ್ಲಿದೆ. ಆಯುರ್ವೇದದ ಪ್ರಕಾರ, ನಿಮ್ಮ ಶರೀರಕ್ಕೆ ಬಿಸಿ ನೀರು ಹೆಚ್ಚು ಉತ್ತಮವಾದದ್ದು. ಅಲ್ಲದೇ ತಲೆ ಸ್ನಾನಕ್ಕೆ ತಣ್ಣೀರು ಹೆಚ್ಚು ಉಪಯುಕ್ತ ಎಂದು ಹೇಳಲಾಗುತ್ತದೆ. ಏಕೆಂದರೆ ಕಣ್ಣು ಹಾದೂ ಕೂದಲನ್ನು ಬಿಸಿ ನೀರನಿಂದ ತೊಳೆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಅಲ್ಲದೇ ಬಿಸಿ ನೀರನ ತಾಪಮಾನ ಸಾಮಾನ್ಯವಾಗಿರಬೇಕು.
ಚಳಿಗಾಲದಲ್ಲಿ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಪ್ರಯೋಜನಗಳು!
ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಶೀತ ನಿವಾರಣೆಗೆ ಬಿಸಿ ನೀರಿನ ಸ್ನಾನ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅಲ್ಲದೇ ಚಳಿಗಾಲದಲ್ಲಿ ಬಿಸಿ ನೀರನಿಂದ ಸ್ನಾನ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ದೇಹವನ್ನು ಕುತ್ತಿಗೆ ತನಕ ಬೆಚ್ಚಗಿನ ನೀರಿನಲ್ಲಿ ಮುಳುಗುಸಿದರೆ ಅದು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ತಲೆ ನೋವು ನಿವಾರಣೆ..!
ನೀವು ತಲೆ ನೋವಿನಿಂದ ಬಳಲುತ್ತಿದ್ದರೆ ಬಿಸಿ ನೀರಿನಿಂದ ಸ್ನಾನ ಮಾಡಬಹುದು. ತಲೆ ನೋವನ್ನು ಕಡಿಮೆ ಮಾಡುವ ಗುಣ ಬಿಸಿ ನೀರಿನಲ್ಲಿದೆ. ತ್ವರಿತವಾಗಿ ತಲೆ ನೋವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ. ಬಿಸಿ ನೀರು ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಮುಖದ ಕಾಂತಿ ಹೆಚ್ಚಿಸುತ್ತೆ ಬಿಸಿ ನೀರು..!
ಬಿಸಿ ನೀರಿನ ಸ್ನಾನವು ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸುವುದಲ್ಲದೇ, ಕಾಂತಿ ಹೆಚ್ಚಿಸುತ್ತದೆ. ಸೌಂದರ್ಯಕ್ಕೂ ಬಿಸಿ ನೀರು ನೆರವಾಗುತ್ತದೆ. ಬೆಚ್ಚಗಿನ ನೀರು ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಮುಖದಲ್ಲಿನ ರಂಧ್ರಗಳಲ್ಲಿರುವ ಕೊಳೆಯನ್ನು ನಿವಾರಿಸುತ್ತದೆ. ಇದ್ರಿಂದ ನೀವು ಫ್ರೆಶ್ ಆಗಿ ಕಾಣಿಸುವುದಲ್ಲದೇ, ಯಂಗ್ ಆಗಿ ಕಾಣುವಿರಿ.