ನಿಂಬೆಹಣ್ಣನ್ನು ಸಿಟ್ರೆಸ್ ಫ್ರೂಟ್ ಆಗಿ ಹೆಚ್ಚು ಬಳಸಲಾಗುತ್ತದೆ. ಇದನ್ನು ಪ್ರಪಂಚದಾದ್ಯಂತ ಹೆಚ್ಚು ಜನರು ಬಳಸುತ್ತಾರೆ. ನಿಂಬೆಯ ತಿರುಳು ಹಾಗೂ ರಸದಿಂದ ಹೆಚ್ಚು ಪ್ರಯೋಜನಗಳುಂಟು, ಆದರೆ ಸಿಪ್ಪೆಯಿಂದ ಯಾವುದು ಪ್ರಯೋಜನವಿಲ್ಲ ಎಂದು ಜನ್ರು ನಂಬಿರುತ್ತಾರೆ. ಆದ್ರೆ ನಿಮಗೆ ಗೊತ್ತಾ, ಬೇರೆ ಹಣ್ಣುಗಳಿಗೆ ಹೋಲಿಸಿದರೆ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪಾಲಿಮೆಥಾಕ್ಸೈಲೇಟೆಡ್ ಫ್ಲೇವೊನ್ಸ್ ಎಂದು ಕರೆಯಲ್ಪಡುವ ಫ್ಲೇವನಾಯ್ಡ್ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇದು ಹೊಂದಿದೆ.
ಇನ್ನು ನಿಂಬೆಹಣ್ಣಿನಲ್ಲಿ ಉತ್ಕರ್ಷಕ ನಿರೋಧಕ ಅಂಶಗಳಿಂದ ಕೂಡಿದೆ.
ನಿಂಬೆ ಹಣ್ಣಿನಲ್ಲಿ ಪೌಷ್ಟಿಕಾಂಶ ಎಷ್ಟಿರುತ್ತೆ..?
೧೦೦ ಗ್ರಾಂ ನಿಂಬೆಹಣ್ಣಿನ ಸಿಪ್ಪೆಯಲ್ಲಿ ೮೧.೬ ಗ್ರಾಂ ನೀರಿನಂಶ ಒಳಗೊಂಡಿರುತ್ತದೆ. ೪೭ ಕೆಸಿಎಲ್ ಶಕ್ತಿ ಇರುತ್ತದೆ. ಅಲ್ಲದೇ, ೧.೫ ಗ್ರಾಂ ಪ್ರೋಟೀನ್, ೦.೩ ಫ್ಯಾಟ್, ಹಾಗೂ ೧೬ ಗ್ರಾಂ ಕಾರ್ಬೋಹೈಡ್ರೇಟ್. ೧೦.೬ ಗ್ರಾಂ ಫೈಬರ್, ೪.೧೭ ಶುಗರ್, ೧೩೪ ಗ್ರಾಂ ತಾಮ್ರ. ೬ ಮಿ.ಗ್ರಾಂ ಸೋಡಿಯಂ ಹಾಗೂ ೦.೨೫ ಮೀ.ಗ್ರಾಂ ಸತು, ೦.೭ ಎಂಸಿಜಿ ಸೆಲೆನಿಯಮ್, ೧೨೯ ಮೀ.ಗ್ರಾಂ ಪ್ಯಾಂಟೊಥೆನಿಕ್ ಆಮ್ಲ, ೦.೧೭೨ ಮೀ.ಗ್ರಾಂ ವಿಟಮಿನ್ ಬಿ೬, ಗಳನ್ನು ಸಿಪ್ಪೆಯಲ್ಲಿ ಕಾಣಬಹುದು.

ನಿಂಬೆಹಣ್ಣಿನ ಸಿಪ್ಪೆ ಅತ್ಯಧಿಕ ವಿಟಮಿನ್ ಸಿ ಒಳಗೊಂಡಿರುತ್ತದೆ. ಆರೋಗ್ಯ ವೃದ್ಧಿಯಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ.
೧. ಕುದಲಿನ ಬುಡಕ್ಕೆ ನಿಂಬೆಯ ಸಿಪ್ಪೆಯನ್ನು ತಿಕ್ಕಿ ಹತ್ತು ನಿಮಿಷ ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಹೊಟ್ಟು ನಿವಾರಣೆಯಾಗುತ್ತದೆ.

೨. ಜ್ವರದಿಂದ ಬಳಲಿಕೆ ಉಂಟಾದಾಗ ನಿಂಬೆರಸವನ್ನು ಸೇವಿಸಿದರೆ ಬಳಲಿಕೆ ಕಡಿಮೆಯಾಗುತ್ತದೆ.
೩.ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರೆಸ್ ಅಂಶ ಹೆಚ್ಚಿದ್ದು ಒತ್ತಡ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಾತ್ರವಲ್ಲ ಸಿಟ್ರೆಸ್ ಬಯೋಫ್ಲೇವನಾಯ್ಡ್ ಅಂಶ ನಿಂಬೆ ಸಿಪ್ಪೆಯಲ್ಲಿ ಅತ್ಯಧಿಕವಾಗಿದ್ದು, ಅವು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
೪. ನಿಂಬೆಹಣ್ಣಿನ ಸಿಪ್ಪೆಯಲ್ಲಿರುವ ಪೊಟ್ಯಾಶಿಯಂ ಅಂಶವು ರಕ್ತದೋತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ. ಹೃದಯ ಸಂಬಂಧಿ ರೋಗಗಳು, ಹೃದಯ ಸ್ಥಂಬನ , ಮಧುಮೇಹ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಇದೆ.
೫. ಇಮ್ಯೂನ್ ಸಿಸ್ಟಮ್ ಹೆಚ್ಚಿಸುತ್ತದೆ.
ಬೇರೆ ಹಣ್ಣಿಗಿಂತ ನಿಂಬೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದು ಆರೋಗ್ಯದ ಇಮ್ಯೂನ್ ಸಿಸ್ಟಮ್ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಿಮಗೆ ಸಿಕ್ ಫೀಲ್ ಆಗುತ್ತಿದ್ದರೆ, ನಿಮ್ಮ ಆಹಾರದಲ್ಲಿ ಅಥವಾ ಚಹಾದಲ್ಲಿ ನಿಂಬೆ ಸಿ್ಪಪೆಯನ್ನು ಉಪಯೋಗಿಸಿದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.