ಜೇನುತುಪ್ಪವನ್ನು ಹಲವು ಔಷಧೀಯ ರೂಪದಲ್ಲಿ ಬಳಸಲಾಗುತ್ತದೆ. ಹಲ್ಲು ನೋವು ಮತ್ತು ಗಾಯಗಳನ್ನು ಮಾಯ ಮಾಡುವಲ್ಲಿ ಗತಕಾಲದಿಂದಲೂ ಜೇನುತುಪ್ಪವನನ್ನು ಶೀತ ಮತ್ತು ಕೆಮ್ಮು ನಿವಾರಿಸಲು ಭಾರತೀಯರು ಬಳಸುತ್ತಿದ್ದರು, ಆದ್ರೆ ಶಿಶುಗಳಿಗೆ ತಾಯಂದಿರು ಜೇನುತುಪ್ಪವನ್ನು ತಿನ್ನಿಸದೇ ಇರುವುದು ಸೂಕ್ತ. ಏಕೆಂದರೆ ಜೇನುತುಪ್ಪದಲ್ಲಿರುವ ಬ್ಯಾಕ್ಟೇರಿಯಾ ಬೀಜಗಳು ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿ ಸಂಪೂರ್ಣವಾಗಿ ಬೆಳವಣಿಗೆಯಾಗಿರದೇ ಇರುವ ಕಾರಣ, ನಿಮ್ಮ ಮಗು ಈ ಬೀಜಕಗಳ ಬೆಳವಣಿಗೆಯನ್ನು ಸಹಿಸದೇ ಸೋಂಕು ಉಂಟು ಮಾಡಬಹುದು. ಈ ಬೀಜಗಳು ಮಾನವನ ಜೀರ್ಣಾಂಗಗಳಲ್ಲಿ ಬೆಳೆದು, ಒಂದು ಬಗೆಯ ಆಹಾರದ ಸೋಂಕಿಗೆ ಕಾರಣವಾಗಬಹುದು. ನಿಮ್ಮ ಮಗುವಿನ ಶಕ್ತಿ ಗುಂದಿಸಿ, ಆರೋಗ್ಯ ಕೆಡುವಂತೆ ಮಾಡಿ, ಶಿಶುವಿನ ಮರಣಕ್ಕೂ ಕಾರಣವಾಗಬಹುದು.

ಅಲ್ಲದೇ ಶಿಶುವಿಗೆ ಸಿಹಿಯಾದ ಪದಾರ್ಥಗಳನ್ನು ತಿನ್ನಿಸುವುದರಿಂದ ನಿಮ್ಮ ಮಗು ನಂತರದ ವಯಸ್ಸಿನಲ್ಲಿ ಸಿಹಿ ಪದಾರ್ಥಗಳ ಬಯಕೆ ಹೆಚ್ಚಾಗಬಹುದು. ಮಕ್ಕಳಿಗೆ ಕಿವುಚಿದ ಹಣ್ಣುಗಳನ್ನು ಹಾಗೂ ಬಾಳೆಹಣ್ಣಿನ ರಸವನ್ನು ಅಥವಾ ಮೊಸರನ್ನು ಸೇರಿಸಿ. ಈ ಪದಾರ್ಥಗಳಲ್ಲಿ ವಿಟಮಿನ್ ಮತ್ತು ಮಿನಿರಲ್ಸ್ ಹೊಂದಿರುತ್ತವೆ. ಇದು ಆಹಾರ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸುತ್ತವೆ.
ಎಲ್ಲಾ ಬಗೆಯ ಜೇನುತುಪ್ಪ ಬ್ಯಾಕ್ಟೇರಿಯಾ ಬೀಜಗಳನ್ನು ಹೊಂದಿರುವುದಿಲ್ಲ. ಆದರೆ ಯಾವ ಜೇನುತುಪ್ಪ ಬೀಜಕಗಳನ್ನು ಹೊಂದಿಲ್ಲ ಎನ್ನುವುದು ಕಂಡು ಹಿಡಿಯಲಾಗುವುದಿಲ್ಲ. ಹಾಗಾಗಿ ಜೇನುತುಪ್ಪ ಮಕ್ಕಳಿಗೆ ನೀಡಬೇಡಿ. ಆರು ತಿಂಗಳವರೆಗೂ ಮಗುವಿಗೆ ಆರು ತಿಂಗಳವರೆಗೆ ಕೇವಲ ಎದೆ ಹಾಲುಣಿಸುವುದು ಒಳಿತು.
ಒಂದು ವೇಳೆ ನೀವು ಮಕ್ಕಳಿಗೆ ಹೆಚ್ಚು ಹೆಚ್ಚು ಸಕ್ಕರೆ ನೀಡುತ್ತಿದ್ದರೆ, ಪ್ರತಿಯೊಂದು ತಿಂಡಿಯಲ್ಲಿ ಮಕ್ಕಳು ಸಕ್ಕರೆ ಮಾತ್ರ ತಿನ್ನಲು ಅಭ್ಯಾಸ ಮಾಡಿಕೊಳ್ಳಬಹುದು. ಹಾಗಾಗಿ ಸಕ್ಕರೆ ಸೇವನೆ ತುಂಬಾ ಹಾನಿಕಾರಕ. ಇದ್ರಿಂದ ದಂತಕುಳಿ , ಬೊಜ್ಜು , ಅಧಿಕ ರಕ್ತದೋತ್ತಡ, ಯಕೃತ ಉಬ್ಬುವುದು ಮತ್ತು ಮಧುಮೇಹ ಕೂಡ ಬರಬಹುದು. ಬೊಜ್ಜು , ಆದ್ರೆ ಮಕ್ಕಳಿಗೆ ಅಪಾಯಕಾರಿ ಆಹಾರ ನೀಡುವುದು ಅಷ್ಟು ಸುಲಭದ ಮಾತಲ್ಲ. ಚಾಕಲೇಟ್ ಬಿಟ್ಟು ಬೇರೆ ತರಕಾರಿ ತಿನ್ನಿ ಎನ್ನಲು ಆಗದು. ಆದ್ದರಿಂದ ಮಕ್ಕಳಿಗೆ ಸಕ್ಕರೆ ಅಂಶ ಹೆಚ್ಚು ತಿನ್ನದೆ ಇರುವಂತಹ ಆಹಾರವನ್ನು ನೀಡಬೇಕು.

ಮಗುವಿಗೆ ಜೇನುತುಪ್ಪ ತಿನ್ನಿಸುತ್ತಿದ್ದರೆ ಮಲಬದ್ಧತೆ, ಹಸಿವಿನ
ಕೊರೆತೆ ಕಾಡಬಹುದು. ಇನ್ನು ನಿಮ್ಮ ಮಗುವಿಗೆ ಜೇನುತುಪ್ಪ ಹಾದೂ
ಸಕ್ಕರೆಯನ್ನು ನೀಡದಿರಲು ಪ್ರಮುಖ ಕಾರಣವೆಂದರೆ, ನಿಮ್ಮ ಮಕ್ಕಳ ಹಲ್ಲುಗಳಿಗೆ ಹಾನಿಯಾಗಬಹುದು.
ಇತರರಿಗೂ ಜೇನುತುಪ್ಪ ಸೇವಿಸಿದರೆ ಹಾನಿಯಾಗುವ ಸಂಭವ..
ಜೇನುತುಪ್ಪ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯಲ್ಲಿ ಇನ್ಸೂಲಿನ ಉತ್ಪಾದನೆಯು ಸಕ್ಕರೆ ಮಟ್ಟ ಹೆಚ್ಚಳವನ್ನು ಪ್ರತಿರೋಧಿಸುತ್ತದೆ. ಹಾಗಾಗಿ ಮಧುಮೇಹಗಳು ಜೇನು ತುಪ್ಪವನ್ನು ಸೇವಿಸಬಾರದು.

ಶೇ. ೮೨ ರಷ್ಟು ಪ್ರತಿಶತದಷ್ಟು ಜೇನುತುಪ್ಪವನ್ನು ಸಕ್ಕರೆ ಒಳಗೊಂಡಿರುತ್ತದೆ. ಇದು ಸುಲಭವಾಗಿ ದಂತಕ್ಷಯವನ್ನು ಉತ್ತೇಜಿಸುತ್ತದೆ. ಬಾಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೇರಿಯಾ ಹುಟ್ಟುವಂತೆ ಮಾಡಬಹುದು. ಜತೆಗೆ ದಂತ ಕವಚದ ಸವೆತ ಉಂಟು ಮಾಡುವ ಸಾಧ್ಯತೆ ಹೆಚ್ಚು
ತೂಕ ಹೆಚ್ಚಳಕ್ಕೆ ಜೇನುತುಪ್ಪ
ಅತಿಯಾದ ಜೇನುತುಪ್ಪ ಸೇವನೆಯಿಂದ ತೂಕ ಹೆಚ್ಚಳವಾಗುವ ಸಾಧ್ಯತೆ ಹೆಚ್ಚು. ಅತಿಯಾದ ಸಕ್ಕರೆ ಪ್ರಮಾಣದಿಂದ ಬೊಜ್ಜು ಹೆಚ್ಚುವುದಲ್ಲದೇ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಜೇನುತುಪ್ಪವನ್ನು ಅತಿಯಾಗಿ ಸೇವನೆ ಮಾಡುತ್ತಿದ್ದರೆ, ಮಲಬದ್ಧತೆ ಉಂಚಾಗುವ ಸಾಧ್ಯತೆ ಹೆಚ್ಚು. ಇದರಲ್ಲಿ ಫ್ರಕ್ಟೋಸ್ ಪ್ರಮಾಣ ಜೀರ್ಣಕ್ರಿಯೆಯಿಂದ ಅನೇಕ ತೊಂದರೆ ಉಂಟಾಗಬಹುದು. ಕಡಿಮೆ ರಕ್ತದೋತ್ತಡ ಇರುವ ವ್ಯಕ್ತಿಗಳು ಜೇನುತುಪ್ಪವನ್ನು ಸೂಕ್ತ ರೀತಿಯಲ್ಲಿ ಸೇವಿಸಬೇಕು. ಇಲ್ಲವಾದರೆ ಆರೋಗ್ಯದಲ್ಲಿ ಹಲವು ತೊಂದರೆಗಳಾಗಬಹುದು.
ಜೇನುತುಪ್ಪ ಸೇವನೆ ಮಾಡುವಾಗ ಸೂಕ್್ತ ಪ್ರಮಾಣದ ಅಳತೆ ಹೊಂದಿರಬೇಕು. ಪ್ರತಿ ದಿನ ಸರಿಸುಮಾರು 10 ಟೀ ಚಮಚ ಎಂದರೆ ಹಾಗೂ 50 ಮೀ .ಟೀ ಚಮಚಾ ಸೇವಿಸಬಹುದು.
ಗರ್ಭಾವಸ್ಥೆಯಲ್ಲಿ ಜೇನುತುಪ್ಪ…

ಗರ್ಭಾವಸ್ಥೆಯಲ್ಲಿ ತಾಯಿ ದೇಹ ಮತ್ತು ಆರೋಗ್ಯ ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಇರುತ್ತದೆ. ಹಾಗಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದ ಮೇಲೆ ಗಮನ ನೀಡಬೇಕು. ಜತೆಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಸೋಂಕುಗಳಂತಹ ಆರೋಗ್ಯ ಸಮಸ್ಯೆಯಿಂದ ದೂರ ಇರುವಂತೆ ಕಾಯ್ದುಕೊಳ್ಳಬೇಕು.