ಮಗುವಿನಲ್ಲಿ ಶೀತ ಸಾಮಾನ್ಯವಾಗಿ ಕಂಡು ಬರುತ್ತದೆ. ಶೀತ, ಕೆಮ್ಮು ಮತ್ತು ಮುಚ್ಚಿದ ಮೂಗುವಿನಿಂದ ಮಕ್ಕಳು ಸರಿಯಾಗಿ ನಿದ್ರೆ ಮಾಡುವುದಿಲ್ಲ. ಊಟ ಮಾಡುವುದಿಲ್ಲ. ಹಾಗಾಗಿ ನಿಮ್ಮ ಮಗು ವಿಗೆ ಶೀತದಿಂದಾಗಿ ಮೂಗು ಕಟ್ಟಿದರೆ ವೈದ್ಯರನ್ನು ಸಂಪರ್ಕಿಸಬಹುದು. ಇಲ್ಲವೇ ಮನೆ ಮದ್ದುಗಳನ್ನು ಟ್ರೈ ಮಾಡಿ.

ಮಕ್ಕಳಲ್ಲಿ ಮೂಗು ಕಟ್ಟಿದರೆ ನಿವಾರಿಸಲು ಕೆಲ ಮನೆ ಮದ್ದುಗಳು ಇಲ್ಲಿವೆ

ತಾಯಿಯ ಹಾಲು..!
ತಾಯಿಯ ಹಾಲಿನಲ್ಲಿ ಅಗತ್ಯವಾದ ಪೋಷಕಾಂಶಗಳು ಇರುವುದರಿಂದ ಮಗುವಿಗೆ ರೋಗ ನಿರೋಧಕದಂತೆ ಕೆಲಸ ಮಾಡುತ್ತದೆ. ಮಕ್ಕಳಿಗೆ ಶಕ್ತಿ ನೀಡಲು ಹಾಗೂ ಬಲಪಡಿಸಲು ಸಹಾಯ ಮಾಡುತ್ತದೆ. ಉತ್ತಮ ರೋಗ ನಿರೋಧಕ ಶಕ್ತಿ ದೊರೆತು, ನಿಮ್ಮ ಮಗುವನ್ನು ಶೀತ ಹಾಗೂ ಕೆಮ್ಮಿನಿಂದ ದೂರವಿರಿಸುತ್ತದೆ.
ಮಗುವಿಗೆ ಶೀತದಿಂದಾಗಿ ಮೂಗು ಕಟ್ಟಿದರೆ, ಕೆಲವು ಹನಿ ತಾಯಿಯ ಹಾಲನ್ನು ಮಗುವಿನ ಮೂಗಿಗೆ ಹಾಕಬಹುದು. ಇದು ಕಟ್ಟಿದ ಮೂಗಿಗೆ ಪರಿಹಾರ ದೊರೆಯುತ್ತದೆ.
ನೀವು ಮನೆಯಲ್ಲಿ ನಿಮ್ಮ ಈ ರೀತಿ ತಯಾರಿಸಬಹುದು. 8 ಟೀ ಸ್ಪೂನ್ ನೀರಿಗೆ 1/2 ಟೀ ಸ್ಪೂನ್ ಉಪ್ಪು ಸೇರಿಸಿ, ಮತ್ತು ಅದನ್ನು ಶುದ್ಧವಾಗಿರುವ ಚಮಚ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಣ್ಣಗಾಗಲೂ ಬಿಡಿ. ನಂತರ ಅದನ್ನು ಕೆಲವು ಹನಿಗಳನ್ನು ನಿಮ್ಮ ಮಗುವಿನ ಮೂಗಿಗೆ ಹಾಕಬಹುದು.

ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆಯನ್ನು ಶೀತ ಹಾಗೂ ಮೂಗು ಕಟ್ಟಿದಾಗ ಬಳಸಲಾಗುತ್ತದೆ. ನಿಮ್ಮ ಮಗುವಿನ ಹಾಸಿಗೆಯ ಮೇಲೆ ಕೆಲ ನೀಲಗಿರಿ ಎಣ್ಣೆ ಹನಿಗಳನ್ನು ಸಿಂಪಡಿಸಿ, ನೀಲಗಿರಿ ವಾಸನೆ ಶಿಶುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ನಿಮ್ಮ ಮಗುವಿನ ಚರ್ಮದ ಮೇಲೆ ನೇರವಾಗಿ ಬಳಸಬೇಡಿ.
ಮಲಗಿರುವ ಮಗುವ ತಲೆಯನ್ನು ಮೇಲಕ್ಕೆ ಎತ್ತರವಾಗಿ ಇರಿಸಿ. ಇದು ಮೂಗಿನ ಲೋಳೆ ಹೊರ ಬರಲು ಸಹಾಯ ಮಾಡುತ್ತದೆ. ಬ್ಲಾಕ್ ಆಗಿರುವ ಮೂಗು ದೂರವಾಗುತ್ತದೆ.
ವಿಶೇಷವಾಗಿ ಚಳಿಗಾಲ ಮತ್ತು ಶೀತದ ಸಮಯದಲ್ಲಿ ಮಗುವಿಗೆ ಸಾಕಷ್ಟು ಪ್ರಮಾಣದ ನೀರು ಕುಡಿಸಬೇಕು. ಕಟ್ಟಿದ ಮೂಗನ್ನು ನಿವಾರಿಸುತ್ತದೆ.ನಿಮ್ಮ ಮಗುವಿಗೆ 6 ತಿಂಗಳಾಗಿದ್ದರೆ, ನೀವು ಸೇಬನ್ನು ಕುದಿಸಿ ಅದರ ರಸವನ್ನು ಹೊರತೆಗೆದು ನಿಮ್ಮ ಮಗುವಿಗೆ ನೀಡಬಹುದು. ಅಥವಾ ಜೇನುತುಪ್ಪವನ್ನು ಬಳಸದೇ, ಕ್ಯಾಮೊಮೈಲ್ ಚಹಾ ನೀಡಬಹುದು.

ಕೆಮ್ಮು ಮತ್ತು ಕಟ್ಟಿದ ಮೂಗಿಗೆ ಚಿಕನ್ ಸೂಪ್ ಸಹ ಉಪಯುಕ್ತ ಎಂದು ಹೇಳಲಾಗುತ್ತದೆ. ಚಿಕನ್ ಉರಿಯೂತದ ಲಕ್ಷಣಗಳನ್ನು ಹೊಂದಿದ್ದು, ಕಟ್ಟಿದ ಮಗುವಿನ ಮೂಗನ್ನು ಗುಣಪಡಿಸಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೂಗು ಕಟ್ಟಿದಾಗ ಮಗುವಿಗೆ ಬಿಸಿ ನೀರಿನ ಹಬೆ ನೀಡಿ. ರಾತ್ರಿ ಮಗುವಿನ ಕೋಣೆಯಲ್ಲಿ ಒಂದು ಬಕೆಟ್ ಬೆಚ್ಚಗಿನ ನೀರನ್ನು ಇರಿಸಿ, ಬಿಸಿ ನೀರಿನ ಉಗಿ ಮಗುವಿನ ಮುಚ್ಚಿದ ಮೂಗು ತೆರೆಯುವಲ್ಲಿ ಸಹಾಯ ಮಾಡುತ್ತದೆ.
ಮೂಗಿನಲ್ಲಿ ಲೋಳೆಯ ಶುಷ್ಕತೆ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಹತ್ತಿ ತೆಗೆದುಕೊಂಡು ಮಗುವಿನ ಮೂಗನ್ನು ಸ್ವಚ್ಛಗೊಳಿಸಿ. ಎಚ್ಚರಿಕೆಯಿಂದ ನಿಧಾನವಾಗಿ ಮಾಡಿ.
ಸಾಸಿವೆ ಎಣ್ಣೆಯಲ್ಲಿ ಆಂಟಿವೈರಲ್, ಆಂಟಿ ಹಿಸ್ಟಾಮೈನ್ ಗುಣಗಳಿವೆ. ಇದು ಮೂಗಿನ ವಿವಿಧ ಸಮಸ್ಯೆಗಳಿಂದ ತಕ್ಷಣ ಪರಿಹಾರವನ್ನು ನೀಡುತ್ತದೆ. ಸಾಸಿವೆ ಎಣ್ಣೆ ಸುಹಾಸನೆ ಮೂಗನ್ನು ಕ್ಲೀಯರ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಮಕ್ಕಳ ಮೂಗಿನಲ್ಲಿ 2 ಹನಿ ಸಾಸಿವೆ ಎಣ್ಣೆಯನ್ನು ಸುರಿಯಿರಿ. ಮುಚ್ಚಿದ ಮೂಗು ತಕ್ಷಣ ತೆರೆದುಕೊಳ್ಳುತ್ತದೆ.

ಈ ಮನೆ ಮದ್ದುಗಳು ನಿಮ್ಮ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದಿದ್ದರೆ, ವೈದ್ಯಕೀಯ ಪರೀಕ್ಷೆ ಅಗತ್ಯವಿರುತ್ತದೆ. ಕಟ್ಟಿದ ಮೂಗಿನ ಕಾರಣದಿಂದಾಗಿ ನಿಮ್ಮ ಮಗುವಿಗೆ ಈ ಕೆಳಗಿನ ಸಮಸ್ಯೆಗಳಿದ್ದರೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಮೂರು ವಾರಗಳಲ್ಲಿ ಶೀತ ಗುಣವಾಗದಿದ್ದರೆ..!
ಮಗು ವೇಗವಾಗಿ ಉಸಿರಾಡುತ್ತಿದ್ದರೆ..
ಮಗುವಿಗೆ ತೀವ್ರ ಜ್ವರ ಇದ್ದರೆ
ಮಗುವಿನ ಸ್ಥಿತಿ ಹದಗೆಡುತ್ತಿದ್ದರೆ,
ಮಗುವಿಗೆ ಕೆಮ್ಮಿದ ಸಮಯದಲ್ಲಿ ರಕ್ತ ಬರುತ್ತಿದ್ದರೆ
ಮಗುವಿನ ಗಂಟಲಿನಲ್ಲಿ ನಿರಂತರ ನೋವು ಇದ್ದರೆ,
ಮಗುವಿಗೆ ಉಬ್ಬಸ ಇದ್ದರೆ, ಮತ್ತು ಅವನ ದೇಹವು ಹಳದಿ ಮತ್ತು ನೀಲಿ ಬಣ್ಣಕ್ಕೆ ತಿರುಗುತ್ತಿದ್ದರೆ.
ಹೇಗೆ ನಿರ್ಣಯಿಸಬಹುದು…?
ವೈದ್ಯರು ಮಗುವಿನ ಜ್ವರ ಮತ್ತು ಉಸಿರಾಟದ ತೀವ್ರತೆಯನ್ನು ಪರಿಶೀಲಿಸುತ್ತಾರೆ. ಮಗುವಿನ ಆರೋಗ್ಯ ಸ್ಥಿತಿಯನ್ನು ಸ್ಪಷ್ಟವಾಗಿ, ತಿಳಿಯಲು ವೈದ್ಯರು ಎಕ್ಸರೆಗಳನ್ನು ಸಹ ಶಿಫಾರಸು ಮಾಡಬಹುದು.
ಮಕ್ಕಳಲ್ಲಿ ಮೂಗು ಬ್ಲಾಕ್ ಆಗುವ ಲಕ್ಷಣಗಳು!
ಸಾಮಾನ್ಯ ಸೋಂಕು, ಶೀತ, ಜ್ವರ ಮುಂತಾದ ಹಲವು ಕಾರಣಗಳಿಂದಾಗಿ ಮಕ್ಕಳಲ್ಲಿ ಮೂಗಿನ ತೊಂದರೆಗಳು ಉಂಟಾಗಬಹುದು. ಮಕ್ಕಳಲ್ಲಿ ಮೂಗು ಕಟ್ಟಿದಾಗ ಉಬ್ಬಸ, ಊಟ ಮಾಡಲು ತೊಂದರೆಯಾಗುವುದು. ಮಗುವಿಗೆ ಹಾಲುಣಿಸುವ ಮತ್ತು ಹಾಲು ಕುಡಿಯುವಲ್ಲಿ ತೊಂದರೆಯಾಗಬಹುದು.