ನಿಮೆಲ್ಲರೂ ದಾಸವಾಳದ ಎಣ್ಣೆ ಹೆಸರನ್ನು ಕೇಳಿರಬಹುದು. ಆದರೆ ಇದನ್ನು ಎಂದಾದರೂ ಬಳಸಿದ್ದೀರಾ. ಈ ಎಣ್ಣೆಯನ್ನು ಉಪಯೋಗಿಸಿ ಅಧ್ಬುತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ದಾಸವಾಳದ ಬಳಕೆಯು ಪುರುಶರು ಮತ್ತು ಮಹಿಳೆಯರಲ್ಲಿ ಕೂದಲು ಉದರುವಿಕೆಯ ಸಮಸ್ಯೆಯನ್ನು ದಾಸವಾಳದ ಎಣ್ಣೆ ಕಡಿಮೆ ಮಾಡುತ್ತದೆ. ಕೂದಲಿನ ಬೇರುಗಳನ್ನು ಬಲಪಡಿಸಲು ನೆರವಾಗುತ್ತದೆ.

ದಾಸವಾಳ ಎಣ್ಣೆಯ ಪ್ರಯೋಜನಗಳು
ದಪ್ಪ ಹಾಗೂ ಉದ್ದ ಕೂದಲಿಗೆ
ದಾಸವಾಳದ ಹೂವು ಕೂದಲನ್ನು ಪೋಷಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ನಿಮ್ಮ ಕೂದಲನ್ನು ದಪ್ಪವಾಗಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಕಾರಣವಾಗುತ್ತದೆ.
ಡ್ಯಾಂಡ್ರಫ್ ನಿವಾರಣೆ..!
ತಲೆಹೊಟ್ಟು ಸಮಸ್ಯೆಗೆ ದಾಸವಾಳವನ್ನು ಬಳಸಲಾಗುತ್ತದೆ. ದಾಸವಾಳ, ಬೆಲ್ಲ, ಅಲೋವೆರಾ ಮತ್ತು ಶುಂಠಿಯ ಬಳಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಶುಂಠಿಯಲ್ಲಿ ನಂಜು ನಿರೋಧಕ ಗುಣಗಳಿವೆ. ಇವು ಶೀಲಿಂಧ್ರಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಕೂದಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ದಾಸವಾಳ, ಶುಂಠಿ ಹಾಗೂ ಅಲೋವೆರಾ ವನ್ನು ಒಳಗೊಂಡಿರುತ್ತದೆ. ಹೇರ್ ಮಾಸ್ಕ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಬಲವಾದ ಕೂದಲಿಗೆ
ದಾಸವಾಳದ ಎಣ್ಣೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಬೇರುಗಳಿಂದ ಕೂದಲನ್ನು ಬಲಪಡಿಸುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ದಾಸವಾಳದ ಎಣ್ಣೆ ಕೂದಲನ್ನು ಬಲಪಡಿಸುವಲ್ಲಿ ನೆರವಾಗುತ್ತದೆ.
ಒರಟು ಕೂದಲು ನಿವಾರಣೆ
ದಾಸವಾಳದ ಎಲೆಗಳು ನಿಮ್ಮ ಕೂದಲನ್ನು ಸಧೃಢವಾಗಿರಿಸುವುದಲ್ಲದೇ, ಪೋಷಣೆ ಮಾಡಿ, ಹೈಡ್ರೀಕರಿಸುತ್ತದೆ. ಬಿರುಕು ಹಾಗೂ ಒರಟು ಕೂದಲನ್ನು ಮೃದುವಾಗಿರಿಸುತ್ತದೆ.ಕೂದಲಿನ ಹೊಳಪು ಹೆಚ್ಚಿಸುತ್ತದೆ. ದಾಸವಾಳದ ಹೂವುಗಳಿಂದ ತಯಾರಿಸಿದ ಎಣ್ಣೆ, ಸಾಕಷ್ಟು ಪೋಷಕಾಂಶಗಳಿಂದ ಕೂಡಿದ್ದು, ಇದು ಕೂದಲಿನ ಆರೈಕೆಗೆ ಉತ್ತಮ ಎಂದು ಹೇಳಬಹುದು. ದಾಸವಾಳದ ಹೂವಿನ ಪೇಸ್ಟ್ ತಯಾರಿಸಿ ತಲೆ ಕೂದಲಿಗೆ ಹಚ್ಚಿದರೆ, ಕೂದಲು ತುಂಬಾ ಮೃದುವಾಗುವುದಲ್ಲದೇ, ಹೊಳೆಯುತ್ತದೆ.
ದಾಸವಾಳದ ಎಣ್ಣೆ ತಯಾರಿಸುವ ವಿಧಾನ..!
ಬಾಣಲೆಯಲ್ಲಿ 1 ಕಪ್ ಎಳ್ಳಿನ ಎಣ್ಣೆ , ಇಲ್ಲವೇ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಯನ್ನು ಬಿಸಿ ಮಾಡಿ, ಅದಕ್ಕೆ ದಾಸವಾಳದ ಎಲೆ ಹಾಗೂ ಹೂವುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆ ತಣ್ಣಗಾಗಲು ಬಿಡಿ. ಎಣ್ಣೆಯಲ್ಲಿ ಉಳಿದ ಎಲ್ಲಾ ಹೂ ಹಾಗೂ ಎಲೆಯನ್ನು ತೆಗೆಯಿರಿ. ನಂತರ ಈ ಎಣ್ಣೆಯನ್ನು ಉಪಯೋಗಿಸುವುದಕ್ಕೆ ಬಿಗಿಯಾದ ಬಾಟಲಿಯಲ್ಲಿ ಹಾಕಿ, ಇಡಬೇಕು. ನಂತರ ಈ ಎಣ್ಣೆಯನ್ನು ಕೂದಲಿಗೆ ಬಳಸಿ 10 ನಿಮಿಷಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡೀ ನಿಮ್ಮ ಕೂದಲಿನ ಮೇಲೆ ಎಣ್ಣೆ ಹಾಗೇ ಇರಲಿ. ಮರುದಿನ ಬೆಳಿಗ್ಗೆ ಗಿಡಮೂಲಿಕೆಗಳ ಶಾಂಪು ಬಳಸಿ ಕೂದಲನ್ನು ಸ್ವಚ್ಛಗೊಳಿಸಿ. ಈ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಬಹುದು.
ಹೇರ್ ಮಾಸ್ಕ್..!
ಕೂದಲು ಹೆಚ್ಚಾಗಿ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಿಂದ ಕೂಡಿದೆ. ಅವುಗಳ ಕೊರತೆ ಉಂಟಾದಾಗ ಕೂದಲು ಉದರಲು ಶುರುವಾಗುತ್ತದೆ. ಮೊಟ್ಟೆಯ ಹಳದಿ ಲೋಳೆ ಹಾಗೂ ದಾಸವಾಳದ ಹೂವುಗಳನ್ನು ಬಳಸಬಹುದು. ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಎ ಇದ್ದು, ಇದು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ನೈಸರ್ಗಿಕ ತೇವಾಂಶ ಮತ್ತು ಕೂದಲನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತೆ.
4 ಮೊಟ್ಟೆಗಳು ಮತ್ತು 15 ರಿಂದ 20 ದಾಸವಾಳದ ಹೂವು ಹಾಗೂ ಎಲೆಗಳನ್ನು ತೆಗೆದುಕೊಂಡು, ಹೇರ್ ಮಾಸ್ಕ್ ತಯಾರಿಸಬಹುದು.
ಮೊಟ್ಟೆ ಹಾಗೂ ಹೂ,ಎಲೆಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಬೇಕು. ನಂತರ ಈ ಪೇಸ್ಟ್ ನ್ನು ಕೂದಲಿಗೆ 40 ರಿಂದ 50ನಿಮಿಷಗಳ ಕಾಲ ಹಚ್ಚಿ, ನಂತರ ಕೂದಲನ್ನು ತೊಳೆಯಬೇಕು. ಸುರಳಿಯಾಕಾರದ ಕೂದಲು ನಿವಾರಿಸಲು ಹಾಗೂ ಕೂದಲು ಮೃದುವಾಗಿಸಲು ವಾರಕ್ಕೆ 2 ಬಾರಿಯಾದರೂ ಆ ಹೇರ್ ಮಾಸ್ಕ್ ಉಪಯೋಗಿಸಿ