ಚಹಾ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಒಂದು ದಿನಾ ಟೀ ಸೇವಿಸದಿದ್ದರೆ, ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ನೀವು ಸಹ ಚಹಾ ಕುಡಿಯುವುದನ್ನು ಇಷ್ಟಪಡುತ್ತಿದ್ದರೆ, ಇವತ್ತಿನ ಲೇಖನದಲ್ಲಿ ನಾವು ನಿಮಗೆ ಗಿಡಮೂಲಿಕೆಯ ಚಹಾದ ಬಗ್ಗೆ ತಿಳಿಸಲಿದ್ದೇವೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಟೀ ಕುಡಿಯುವುದರಿಂದ ದಿನವಿಡೀ ಕಾಡುವ ದಣಿವು ಸಮಸ್ಯೆಯನ್ನು ನಿವಾರಿಸಬಹುದು.ಕೆಲವು ಔಷಧೀಯ ಸತ್ವಗಳು ಗಿಡಮೂಲಿಕೆಯಲ್ಲಿವೆ. ಆದ್ದರಿಂದ ದಾಲ್ಚಿನ್ನಿ ಹಾಕಿದ ಚಹಾ, ಪುದೀನಾ ಚಹಾ, ಶುಂಠಿ ಚಹಾ , ಮ್ಯಾಂಗೊ ಜಿಂಜರ್ ಟೀ ಇತ್ಯಾದಿಗಳ ಸೇವನೆ ಆರೋಗ್ಯಕ್ಕೆ ಪ್ರಯೋಜನಗಳಾಗುತ್ತವೆ. ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ.

ಹರ್ಬಲ್ ಟೀ ಎಂದರೇನು?
ಆಯುರ್ವೇದ ಪ್ರಕಾರ, ಹರ್ಬಲ್ ಟೀ ವೈದಿಕ ಚಹಾ ಎಂದು ಕರೆಯಲಾಗುತ್ತದೆ. ಎಂದರೆ ತುಂಬಾ ಟೆಸ್ಟಿಯಾಗಿರುವ ಹಾಗೂ ಔಷಧೀಯ ಗುಣಗಳು ಇದರಲ್ಲಿ ಕಂಡು ಬರುತ್ತವೆ. ವಾಸ್ತವವಾಗಿ ಇದರಲ್ಲಿ ಯಾವುದೇ ಕೆಫೀನ್ ಅಂಶ ವಿರುವುದಿಲ್ಲ
ಮನೆಯ ಗಿಡಮೂಲಿಕೆಗಳಿಂದ ಹರ್ಬಲ್ ಟೀ ತಯಾರಿಸಬಹುದಾಗಿದೆ. 1 ಕಪ್ ಅಂದರೆ 100 ಗ್ರಾಂ ಹರ್ಬಲ್ ಚಹಾದಲ್ಲಿ 0.005 ಗ್ರಾಂ ಸ್ಯಾಚುರೇಟೆಡ್ ಕೊಬ್ಬು 0.012 ಮೊನೊಸಾಚುರೇಟೆಡ್ ಕೊಬ್ಬು, ಸೋಡಿಯಂ 2 ಮಿ,ಗ್ರಾಂ, ಪೊಟ್ಯಾಶಿಯಂ ಹಾಗೂ ಕೊಲೆಸ್ಟ್ರಾಲ್ , ಫೈಬರ್ ಮತ್ತು ಸಕ್ಕರೆ ಅಂಶವಿರುವುದಿಲ್ಲ. ಆದರೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಂಡು ಬರುತ್ತದೆ.

ತೂಕ ನಷ್ಟಕ್ಕೆ ಹರ್ಬಲ್ ಟೀ…!
ಇತ್ತೀಚಿನ ದಿನಗಳಲ್ಲಿ ಅನಿಯಮಿತ ಜೀವನ ಶೈಲಿಯಿಂದಾಗಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲೇ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚುತ್ತಿರುವ ಸ್ಥೂಲಕಾಯತೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಹರ್ಬಲ್ ಟೀ ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಇದು ಕ್ಯಾಲೋರಿಗಳನ್ನು ಬರ್ನ್ ಮಾಡಲು ಹಾಗೂ ತೂಕವನ್ನು ಕಡಿಮೆ ಮಾಡುವುದಲ್ಲದೇ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
ನೋವು ನಿವಾರಿಸುತ್ತೆ ಹರ್ಬಲ್ ಟೀ..!
ದೇಹದಲ್ಲಿ ಆಗಾಗ್ಗೆ ನೋವು ಕಾಡುವುದು ಸಾಮಾನ್ಯ. ಕೆಲವು ಬಾರಿ ಗಂಭೀರವಾದ ಗಾಯ, ಶಸ್ತ್ರಚಿಕಿತ್ಸೆ , ಅನಾರೋಗ್ಯ ಅಥವಾ ಜ್ವರದಿಂದಾಗಿ ಜನರು ದೀರ್ಘಕಾಲ ನೋವಿನಿಂದ ಬಳಲುತ್ತಿರುತ್ತಾರೆ. ಚಿಕಿತ್ಸೆಯ ಹೊರತಾಗಿಯೂ, ಗಿಡಮೂಲಿಕೆಯ ಚಹಾ ಸಹಾಯ ಮಾಡಬಲ್ಲದ್ದು.
ಸಂಧಿವಾತ ನಿವಾರಣೆ
ದೇಹದಲ್ಲಿ ಉರಿಯೂತದಂತಹ ಅನೇಕ ಸಮಸ್ಯೆಗಳನ್ನು ಹರ್ಬಲ್ ಟೀ ನಿವಾರಿಸುತ್ತದೆ. ಸಂಧಿವಾತದಂತಹ ಸಮಸ್ಯೆಗಳ ನಿವಾರಣೆಗೆ ನೆರವಾಗುತ್ತದೆ.

ರಕ್ತದೋತ್ತಡ ನಿಯಂತ್ರಿಸುತ್ತದೆ.
ಹರ್ಬಲ್ ಟೀ ಯಲ್ಲಿ ದಾಸವಾಳದ ಚಹಾ ಕೂಡಾ ಮುಖ್ಯವಾಗಿದೆ. ರಕ್ತದೋತ್ತಡವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದಾಸವಾಳದಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ. ರಕ್ತದೋತ್ತಡ ಸಮಸ್ಯೆ ಆರಂಭಿಕ ಹಂತದಲ್ಲಿದ್ದರೆ ನಿವಾರಿಸಬಹುದಾಗಿದೆ.ಅಲ್ಲದೇ ಯಕೃತ್ತ ಆರೋಗ್ಯಕ್ಕೆ ಗ್ರೀನ್ ಟೀ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಬಹುದು.
ಹರ್ಬಲ್ ಟೀ ಸೈಡ್ ಎಫೆಕ್ಟ್…
ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಕ್ಯಾಮೊಮೈಲ್ ಚಹಾ ಸೇವಿಸಬೇಡಿ
ಗರ್ಭಾವಸ್ಥೆಯಲ್ಲಿ ಯಾಕೆ ಟೀ ಸೇವಿಸಬಾರದು..?
ಹರ್ಬಲ್ ಚಹಾ ದೊರೆಯುವ ಮುಖ್ಯ ಬ್ರ್ಯಾಂಡ್ ಹೆಸರುಗಳೆಂದರೆ ಕರಿಮೆಣಸಿನ ಚಹಾ, ನಿಂಬೆ ಚಹಾ, ಅಥವಾ ಶುಂಠಿ ಚಹಾ. ಹೀಗೆ ಹಲವು ರೀತಿಯಲ್ಲಿ ವೈವಿಧ್ಯತೆಗಳನ್ನು ಕಾಣಬಹುದು. ಹರ್ಬಲ್ ಚಹಾ ಗರ್ಭಿಣಿಯರು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿದರೆ ಒಳ್ಳೆಯದು. ನೀವು ಕಾಫಿ ಬಿಟ್ಟು ಇದನ್ನೇ ಸೇವಿಸುತ್ತೀರಿ ಎಂದಾದರೆ, ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.