ಕೊರೊನಾ ವೈರಸ್ ಇಡೀ ಜಗತ್ತಿನಾದ್ಯಂತ ಆತಂಕ ಮೂಡಿಸಿದೆ. ಈ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಎಲ್ಲರೂ ಮನೆಯಲ್ಲಿರುವುದರಿಂದ ಸಹಜವಾಗಿಯೇ ಬೇಸರ, ಒತ್ತಡಕ್ಕೆ ಒಳಗಾಗಿದ್ದಾರೆ. ಕೆಲವರು ಓವರ್ ಈಟಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಡಿಟೇಲ್ಸ್ ಇಲ್ಲಿದೆ.

ಈ ಸಮಯದಲ್ಲಿ ಆಗಾಗ್ಗೆ ಹಸಿವಿನಿಂದ ನೀವು ಅತಿಯಾಗಿ ಸೇವಿಸುತ್ತಿದ್ದರೆ, ಅದರ ನೇರ ಪರಿಣಾಮವು ನಿಮ್ಮ ದೇಹದ ಮೇಲೆ ಆಗಬಹುದು. ಹಾಗಾಗಿ ಕೆಲ ವಿಷಯಗಳ ಬಗ್ಗೆ ನೀವು ಕಾಳಜಿ ವಹಿಸದಿದ್ದರೆ, ಭವಿಷ್ಯದಲ್ಲಿ ಅನೇಕ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಚಹಾ ಕಡಿಮೆ ನೀರು ಜಾಸ್ತಿ ಕುಡಿಯಿರಿ
ಅನೇಕ ಜನರು ಚಹಾ ಹಾಗೂ ಕಾಫಿಯನ್ನು ಹೆಚ್ಚಾಗಿ ಸೇವಿಸಲು ಪ್ರಾರಂಭಿಸಿದ್ದಾರೆ. ಅದರಲ್ಲಿ ಹೆಚ್ಚಿನ ಪ್ರಮಾಣವು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಚಹಾ, ಕಾಫಿ ಹಾಗೂ ತಂಪು ಪಾನೀಯಗಳಂತಪ ವಸ್ತುಗಳನ್ನು ಮಿತಿ ಪ್ರಮಾಣದಲ್ಲಿ ಬಳಸಬೇಕು. ಈ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಅತಿಯಾಗಿ ಆಹಾರ ಸೇವಿಸುವುದರಿಂದ ರಕ್ಷಿಸುತ್ತದೆ.
ಉಪಹಾರ ಸೇವಿಸಿ
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇದ್ದರೂ , ಈ ದಿನಗಳಲ್ಲಿ ವಿಶೇಷವಾಗಿ ನೀವು ಬೆಳಿಗ್ಗೆ ಉಪಹಾರವನ್ನು ಚೆನ್ನಾಗಿ ಸೇವಿಸಬೇಕು. ಉಪಹಾರದಲ್ಲಿ ಪೋಹಾ, ಆಮ್ಲೇಟ್ , ಬ್ರೆಡ್, ಬೆಣ್ಣೆ ದೋಸೆ, ಇಡ್ಲಿ, ಅಪ್ಪಮ್, ಜ್ಯೂಸ್ , ಮೊಳಕೆ ಕಾಳುಗಳು ಸೇವಿಸಿ.
ದಿನಚರಿ ಬಗ್ಗೆ ಗಮನವಿರಲಿ
ನಿಮಗೆ ಫಿಟ್ನೆಸ್ ಹಾಗೂ ತೂಕ ಹೆಚ್ಚಾಗುವ ಬಗ್ಗೆ ಕಾಳಜಿ ಇದ್ದರೆ ದಿನಚರಿಯನ್ನು ಫಾಲೋ ಮಾಡಿ. ಇದರಿದಂ ಆಹಾರ ಎಷ್ಟು,ಯಾವಾಗ ಸೇವಿಸಬೇಕು ಎಂಬುದರ ಬಗ್ಗೆ ಐಡಿಯಾ ದೊರೆಯುತ್ತದೆ.
ಲಘು ತಿಂಡಿಯನ್ನು ಸೇವಿಸಿ
ನಿಮಗೆ ಹಸಿವಿನ ನಿಯಂತ್ರಣವಿಲ್ಲ ಎಂದಾದರೆ, ನೀವು ಏನನ್ನಾದರೂ ತಿನ್ನಲು ತಿನ್ನುತ್ತಿದ್ದರೆ, ಕನಿಷ್ಠ ನೀವು ಆರೋಗ್ಯಕರ ವಸ್ತುಗಳನ್ನು ತಿನ್ನುವುದರತ್ತ ಗಮನ ಹರಿಸುವುದು ಉತ್ತಮ. ಅನಾರೋಗ್ಯಕರ ಆಹಾರಗಳು ನಿಮ್ಮ ತೂಕ ಹೆಚ್ಚಿಸುತ್ತವೆ.
ಸಕ್ಕರೆ ಉಪ್ಪು ಮತ್ತು ಮೈದಾ ಬಗ್ಗೆ ಎಚ್ಚರವಿರಲಿ
ಸಾಮಾನ್ಯವಾಗಿ ಆರೋಗ್ಯಕ್ಕೆ ಮೂರು ಪದಾರ್ಥಗಳು ಪರಿಣಾಮ ಬೀರಬಹುದು. ಅವು ಸಕ್ಕರೆ , ಉಪ್ಪು ಹಾಗೂ ಮೈದಾ ದೇಹಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ಮಿತ ಪ್ರಮಾಣದಲ್ಲಿ ಇವುಗಳನ್ನು ಸೇವಿಸಿದರೆ ಉತ್ತಮ. ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ.

ನೈಸರ್ಗಿಕ ಸೌಂದರ್ಯ ಹೆಚ್ಚಲು
ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದಾಗಿ ಮುಖದ ಸೌಂದರ್ಯ ಹಾಳಾಗುವುದು ಸಹಜ. ಅಂತಹ ಸಂದರ್ಭದಲ್ಲಿ ಅನೇಕ ಮಹಿಳೆಯರು ಮಾರುಕಟ್ಟೆಯಲ್ಲಿ ಸೀಗುವ ಉತ್ಪನ್ನಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ದುಬಾರಿ ಖರ್ಚು ಮಾಡುತ್ತಾರೆ. ಕೈಗೆ ಸಿಕ್ಕ ಪ್ರೊಡೆಕ್ಟ್ ಗಳನ್ನು ತಂದು ಬಳಸುತ್ತಾರೆ. ಈ ಪ್ರೊಡೆಕ್ಟ್ ಗಳಿಂದ ಅಡ್ಡಪರಿಣಾಮಗಳೇ ಹೆಚ್ಚು. ಹಾಗಾಗಿ ತ್ವಚೆಯ ಸೌಂದರ್ಯ ಮತ್ತಷ್ಟು ಹಾಳಾಗುವ ಸಾಧ್ಯತೆ ಇರುತ್ತದೆ. ಮನೆಯಲ್ಲೇ ಸೀಗುನ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.
ಪ್ರತಿ ಖುತುವಿನಲ್ಲೂ ಮುಖದ ಮೇಲೆ ಉಂಟಾಗುವ ಮೊಡವೆ, ಟ್ಯಾನಿಂಗ್ , ಶುಷ್ಕ ಚರ್ಮಕ್ಕೆ ಹಣ್ಣುಗಳಿಂದ ಬ್ಯೂಟಿ ಹೆಚ್ಚಿಸಿಕೊಳ್ಳಬಹುದು. ಪ್ರತಿ ದಿನ ಹಣ್ಣುಗಳನ್ನು ಸೇವಿಸಿ ಮುಖದ ಸೌಂದರ್ಯ ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು.
ತಡೆಗಟ್ಟುವ ಕ್ರಮಗಳೇನು?
ನೀವು ಹಸಿದಿರುವಾಗ ಮಾತ್ರ ತಿನ್ನಿರಿ.
ಆದ್ರೆ ಯಾವುದೇ ಕಾರಣಕ್ಕೂ ಊಟ ಮಾಡದೇ ಇರುವುದು ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ತಿನ್ನವಾಗ ಗಮನ ಹರಿಸಿ, ಮಾತನಾಡುವುದು, ಟಿವಿ ನೋಡುವುದು ಬೇಡ
ಆರೋಗ್ಯಕರ ವೇಳಾಪಟ್ಟಿಯನ್ನು ರಚಿಸಿ
ಸ್ಥಿರ ಆಹಾರದ ಬಗ್ಗೆ ಚಾರ್ಟ್ ಮಾಡಿ,ಆಹಾರ ತಜ್ಞರಿಂದ ಸಲಹೆ ಪಡೆಯಿರಿ.
ಹಸಿದಿರುವಾಗ, ದೀರ್ಘಕಾದ ಆಳವಾದ ಉಸಿರನ್ನು ತೆಗೆದುಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚಿ. ಇದರಿಂದ ವ್ಯತ್ಯಾಸ ಕಾಣಬಹುದು.