ಇಂದಿನ ಒತ್ತಡ ಜೀವನದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಪ್ರತಿ ಸಲ ನಿರ್ಲಕ್ಷ್ಯವಹಿಸುತ್ತೇವೆ. ಆರೋಗ್ಯಕರ ಜೀವನ ನಡೆಸಲು ಆರೋಗ್ಯಕರ ಊಟ ಕೂಡಾ ಮುಖ್ಯವಾಗುತ್ತದೆ. ಜಂಕ್ ಫುಡ್, ಎಣ್ಣೆಯುಕ್ತ ಆಹಾರಗಳು ತಿನ್ನಲು ತುಂಬಾ ಒಳ್ಳೆಯದು. ಆದ್ರೆ ಅವುಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ರಕ್ತದೋತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಇದಕ್ಕಾಗಿ ಆರೋಗ್ಯಕರ ಜೀವನ ಶೈಲಿ ತುಂಬಾ ಮುಖ್ಯವಾಗುತ್ತದೆ. ನಿಮ್ಮ ಲಂಚ್, ಡಿನ್ನರ್ ಗೆ ಯಾವೆಲ್ಲಾ ಆಹಾರ ಸೇವಿಸಬೇಕು… ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಓಟ್ ಮೀಲ್ ತಿನ್ನುವ ದೊಡ್ಡ ಅಭ್ಯಾಸವೆಂದರೆ, ಅದು ನಿಮ್ಮ ಜೀರ್ಣಾಂಗ ಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ನೆರವಾಗುತ್ತದೆ. ಓಟ್ ಮೀಲ್ ನಲ್ಲಿ ಫೈಬರ್ ಅಧಿಕವಾಗಿದೆ. ಹೊಟ್ಟೆಯ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ನೆರವಾಗುತ್ತದೆ.

ತಯಾರಿಸುವುದು ಹೇಗೆ…
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಈರುಳ್ಳಿ ಕಂದು ಬರುವವರೆಗೂ ಹುರಿಯಬೇಕು. ಇದಕ್ಕೆ ನೆಚ್ಚಿನ ತರಕಾರಿಗಳನ್ನು ಸೇರಿಸಿ. ಮತ್ತು ಸಣ್ಣ ಉರಿಯಲ್ಲಿ 2 ನಿಮಿ, ಬೇಯಿಸಬೇಕು. ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಮಚ್ತು ಮೆಣಸಿನ ಪುಡಿ ಸೇರಿಸಿ. ನಂತರ ಇದರ ಮಿಶ್ರಣಕ್ಕೆ ಓಟ್ ಮೀಲ್ ಸೇರಿಸಿ. ಸ್ವಲ್ಪ ನೀರು ಹಾಕಿ ಅದನ್ನು ಮುಚ್ಚಿ, 5 ನಿಮಿಷಗಳವರೆಗೂ ಬೇಯಿಸಿ.
ಓಟ್ ಮೀಲ್ ಎಲ್ಲಾ ಪೌಷ್ಟಿಕಾಂಶಗಳನ್ನು ಒದಿಗಸುವ ಆಹಾರವಾಗಿದೆ.
ಖಿಚಡಿ..
ಖಿಚಡಿ ಕೇವಲ ಕಾಯಿಲೆಯಿಂದ ಬಳಲುತ್ತಿರುವವರಿಗೆ ಒಳ್ಳೆಯದು ಎಂದು ಭಾವಿಸಿದರೆ ತಪ್ಪು. ವಿಭಿನ್ನ ಪದಾರ್ಥಗಳಿಂದ ತಯಾರಿಸಿದ ರುಚಿ ರುಚಿಕರವಾದ ಖಿಚಡಿ ಕೂಡಾ ನಿಮ್ಮ ಆರೋಗ್ಯಕ್ಕ ಉತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ.
ಅಕ್ಕಿ , ತರಕಾರಿಗಳಿಂದ ತಯಾರಿಸಿದ ಖಿಚಡಿ… ನಿಮ್ಮ ದೇಹಕ್ಕೆ ಶಕ್ತಿ ಮತ್ತು ಪೋಷಣೆ ಒದಿಗಸುತ್ತದೆ. ಇದರ ಮೂಲಕ ಏಕಕಾಲದಲ್ಲೇ ಪೋಷಕಾಂಶಗಳನ್ನು ಪಡೆಯಬಹುದು. ಈ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಜೀರ್ಣಕ್ರಿಯೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚಾಗಿ ನೀಡಲಾಗುತ್ತದೆ.
ಚನಾ.. ಜೀರ್ಣಾಂಗ ವ್ಯವಸ್ಥೆಗೆ ಅನೇಕ ಪ್ರಯೋಜನಗಳನ್ನು ಚನಾ ಹೊಂದಿದೆ. ಇದರಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಅನಿಲ, ಮಲಬದ್ಧತೆ, ಅತಿಸಾರ ಮುಂತಾದವುಗಳನ್ನು ತಡೆಗಟ್ಟುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಇದರಲ್ಲಿ ಫೈಬರ್ ಹೆಚ್ಚಾಗಿದ್ದು, ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ರವೆ ಉಪ್ಪಿಟ್ಟು..
ನೀವು ರಾತ್ರಿ ವೇಳೆ ಕಡಿಮೆ ಆಹಾರ ಸೇವಿಸಲು ಬಯಸುವಿರಾದರೆ, ಆಗ ರವೆ ಉಪ್ಪಿಟ್ಟು ಸೇವಿಸಬಹುದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ತಯಾರಿಸುವ ವಿಧಾನ
ಸಣ್ಣ ರವೆ ತೆಗೆದುಕೊಂಡು ಒಂದು ಬಾಣಲೆಯಲ್ಲಿ ತಿಳಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ಒಂದು ತಟ್ಟೆಯಲ್ಲಿ ಹುರಿದ ರವಾ ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಕಡಲೆ ಬೀಜ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ, ಬಾಣಲೆಯಲ್ಲಿ ಉಳಿದ ಎಣ್ಣೆಯಲ್ಲಿ ಸಾಸಿವೆ, ಮೆಣಸಿನಕಾಯಿ, ಕ್ಯಾರೆಟ್, ಬಟಾಣಿ ಸೇರಿಸಿ 2-3 ನಿಮಿಷ ಫ್ರೈ ಮಾಡಿ. ನಂತರ ರವೆ, ಅದರ ಮೂರು ಪಟ್ಟು ನೀರು ಮತ್ತು ಹಾಕಿ. ರವೆ ನೀರಿನಲ್ಲಿ ಕುದಿಯಲು ಆರಂಭಿಸಿದಾಗ, ನಂತರ ಅದರಲ್ಲಿ ಕಡಲೆ ಬೀಜ ಹಾಕಿ 3-4 ನಿಮಿಷ ಬೇಯಿಸಿ. ಮೇಲೆ ಬೆಣ್ಣೆ ಅಥವಾ ತುಪ್ಪ ಹಾಕಬಹುದು. ಬಳಿಕ ಹಸಿರು ಕೊತ್ತಂಬರಿ ಸೊಪ್ಪು ಮಿಶ್ರಣ ಮಾಡಿ. ರುಚಿ ರುಚಿಯಾದ ರವಾ ಉಪ್ಪಿಟ್ಟು ರೆಡಿ.
ಮಸಾಲಾ ಓಟ್ಸ್..
ಮಾರುಕಟ್ಟಲ್ಲಿ ಸೀಗುವ ಮಸಾಲಾ ಓಟ್ಸ್ ಸಹ ಭೋಜನಕ್ಕೆ ಅತ್ಯುತ್ತಮ ಆಹಾರ ಎನ್ನಬಹುದು. ಇದು ತಿನ್ನಲು ತುಂಬಾ ಯೋಗ್ಯಕರವಾಗಿರುತ್ತದೆ. ಮಸಾಲಾ ಓಟ್ಸ್ ಮನೆಯಲ್ಲೇ ತಯಾರಿಸಬಹುದು.
ತಯಾರಿಸುವ ವಿಧಾನ
ಕತ್ತರಿಸಿದ ತರಕಾರಿಗಳು ಕ್ಯಾರೆಟ್, ಬೀನ್ಸ್ , ಕ್ಯಾಪ್ಸಿಕಂ ಅನ್ನು ಫ್ರೆಶರ್ ಕುಕ್ಕರ್ ನಲ್ಲಿ ಹಾಕಿ 1 ಶಿಳ್ಳೆ ಆದ ಮೇಲೆ ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ.ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.. ಸಾಸಿವೆ, ಹಸಿಮೆಣಸಿನಕಾಯಿ ಸೇರಿಸಿ. ನಂತರ ನುಣ್ಣಗೆ ಕತ್ತರಿಸಿದ ಈರುಳ್ಳಿ, ಸೇರಿಸಿ ಮೂರು ನಿಮಿಷದವರೆಗೂ ಬೇಯಿಸಿ. ನಂತರ ಶುಂಠಿ ಬೆಳ್ಳೋಳ್ಳಿ ಪೇಸ್ಟ್ ಸೇರಿಸಿ. 3 ನಿಮಿಷದವರೆಗೂ ಬೇಯಿಸಿ. ನಂತರ ಕತ್ತರಿಸಿದ ಟೊಮ್ಯಾಟೋ ಉಪ್ಪು. ಅರಿಶಿಣ ಮತ್ತು ಗರಂ ಮಸಾಲ ಪುಡಿ ಸೇರಿಸಿ. ಬೇಯಿಸಿದ ತರಕಾರಿಗಳನ್ನು ಬಾಣಲೆಯಲ್ಲಿ ಹಾಕಿ. ತರಕಾರಿಗಳನ್ನು ಮಸಾಲೆಗಳೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಓಟ್ಸ್ ಸೇರಿಸಿ ನೀರನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಬೆರೆಸಿ 1 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ಇದಕ್ಕೆ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಬಹುದು.