ಪುಷ್ಠಿದಾಯಕ ಸಿಹಿ ಗೆಣಸಿನ ಆರೋಗ್ಯ ಲಾಭಗಳ ಬಗ್ಗೆ ತಿಳಿದಿದೇಯಾ!?

  • by

ಸಿಹಿ ಗೆಣಸು ಪುಷ್ಠಿದಾಯಕ ಆಹಾರ. ಗೆಣಸು ಒಂದು ಜಾತಿಯ ಗೆಡ್ಡೆ . ಇದು ದಕ್ಷಿಣ ಅಮೇರಿಕಾದ ಮೂಲದಿಂದ ಬಂದು ಪ್ರಪಂಚದಾಂದ್ಯಕ ಬಳಕೆಯಲ್ಲಿದೆ. ಸಾಮಾನ್ಯವಾಗಿ ಗೆಣಸು ಎಂದರೆ ಮೂಗು ಮುರಿಯುವವರೇ ಹೆಚ್ಚು. ಯಾಕಂದ್ರೆ ಸಿಹಿ ಗೆಣಸು ತಿಂದರೆ ಗ್ಯಾಸ್ರ್ಟಿಕ್ ಸಮಸ್ಯೆ ಹೆಚ್ಚುತ್ತದೆ. ಎಂದು ಹೇಳುವರಿದ್ದಾರೆ. ಆದ್ರೆ ಗೆಣಸು ತಿನ್ನುವುದರಿಂದ ಜೀರ್ಣ ಕ್ರಿಯೆ ಸಮಸ್ಯೆ ಇಲ್ಲದಂತಾಗುತ್ತದೆ. 

ವಾತರೋಗವನ್ನು ಸಿಹಿ ಗೆಣಸು ನಿವಾರಿಸುತ್ತದೆ. ಸಿಹಿ ಗೆಣಸಿನಲ್ಲಿ ಕೆರೊಟಿನಾಯ್ಡುಗಳು ಹೆಚ್ಚಾಗಿ ಇರುತ್ತವೆ. ಇವು ವಿಟಮಿನ್ ಎ ಅನ್ನು ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಒದಗಿಸುತ್ತವೆ. ಮತ್ತು ಶ್ವಾಸಕೋಶದ ವ್ಯವಸ್ಥೆಯನ್ನು ಮರು ನವೀಕರಿಸುತ್ತವೆ. 

ಆರೋಗ್ಯಕರ ಮೂಳೆಗಳಿಗೂ ಸಿಹಿ ಗೆಣಸು ಹೆಚ್ಚು ಲಾಭ ನೀಡುತ್ತದೆ. ಸ್ನಾಯು ಸೆಳೆತದ ಮೇಲೆ ಹೋರಾಡುತ್ತದೆ. ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದು ಸ್ನಾಯುಗಳು ವಿಶ್ರಾಂತಿಯನ್ನು ಪಡೆಯಲು ಸಹ ನೆರವು ನೀಡುತ್ತದೆ.  ಸಿಹಿ ಗೆಣಸು ಗಳು ನರಗಳಿಂದ ಹೊರಾಡುವ ಸಂಕೇತಗಳನ್ನು ಮತ್ತು  ಹೃದಯದ ಬಡಿತವನ್ನು ಸಹ ಸರಾಗಗೊಳಿಸುತ್ತದೆ. 

ತ್ವಚೆ ಹೊಳೆಯಲು ಸಿಹಿ ಗೆಣಸನ್ನು ಬಳಸಲಾಗುತ್ತದೆ. ನಿಮ್ಮ ಮುಖದಲ್ಲಿರುವ ಕಲೆ, ರಂಧ್ರಗಳು ಮತ್ತು ಧೂಳು ಎಲ್ಲವು ನಿವಾರಣೆಯಾಗುತ್ತದೆ. ಇದರಲ್ಲಿರುವ ಅಂಥೋಸಿಯಾನಿನ್ ಗಳು ಸುಕ್ಕು ಗಳನ್ನು ಕಪ್ಪು ವೃತ್ತಗಳನ್ನು ಸಹ ನಿವಾರಿಸಿ. ಕಣ್ಣುಗಳ ಕಾಂತಿಯಿಂದ ಕಂಗೊಳಿಸಲು ಇದು ಸಹಾಯ ಮಾಡುತ್ತದೆ.

ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.

  1. ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.

 2. ಗರ್ಭಿಣಿಯರಿಗೆ  ಬಹಳ ಆವಶ್ಯಕವಾದ ಬಿ-ವಿಟಾಮಿನ್ ಸೇರಿದಂತೆ ಪೋಲಿಕ್ ಆಸಿಡ್ ಮರಗೆಣಸಿನಲ್ಲಿ ಹೇರಳವಾಗಿದೆ.

3. ಇದರಲ್ಲಿ ಅಧಿಕ ವಿಟಮಿನ್ ಎ, ಲೈಕೊಪೆನೆ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

4. ಇದು ಅಸ್ಥಮಾ ಸಮಸ್ಯೆ ನಿವಾರಣೆಯಾಗುತ್ತದೆ.5. . ಸಿಹಿ ಗೆಣಸಿನಲ್ಲಿ ವಿಟಾಮಿನ್‌, ಮಿನರಲ್ಸ್‌, ಪ್ರೊಟೀನ್‌ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆರೋಗ್ಯಕರವಾಗಿ ತೂಕ ಹೆಚ್ಚುತ್ತದೆ.

6. ಇದರ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. 

7. ಸಿಹಿ ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಮ್ಮನ್ನು ಕಾಪಾಡುತ್ತವೆ. 

9. ವಿಟಮಿನ್ ಸಿ ಜೀವಸತ್ವವು ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

10. ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ.

8 ಇದರಲ್ಲಿ ಫೊಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿರುವುದರಿಂದ ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.

9. ಸಿಹಿ ಗೆಣಸಿನಲ್ಲಿ ನಮ್ಮ ದೇಹಕ್ಕೆ ಅತ್ಯಗತ್ಯವಾದ ಖನಿಜಾಂಶಗಳು ಇವೆ. ನಮ್ಮ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಜೀವಕೋಶದ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.

10. ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್‌ ಉನ್ನತ ಮಟ್ಟದಲ್ಲಿರುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ದೇಹದ ಸ್ನಾಯುಗಳು ಮತ್ತು ನರ ಕಾರ್ಯಗಳನ್ನು ಸುಲಭಗೊಳಿಸುತ್ತದೆ.

11. ಮಧುಮೇಹಕ್ಕೆ ಸಿಹಿ ಗೆಣಸು ಹೇಗೆ ಸಹಕಾರಿ

Health benefits , sweet potatoes, ಸಿಹಿ ಗೆಣಸು, ಆರೋಗ್ಯ ಪ್ರಯೋಜನಗಳು.

12. ಮಧುಮೇಹ ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರ ವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿ  ಮಧು ಮೇಹ ಸಂಬಂಧಿ ಪ್ರಯೋಜನಗಳು ತಿಳಿದುಕೊಳ್ಳುವುದು ಉತ್ತಮ. ಮಧುಮೇಹದ ವಿರುದ್ಧ ಹೋರಾಡುವ ಪ್ರಯೋಜನಗಳನ್ನು ಇದು ಹೊಂದಿದೆ. 

13. ಸಿಹಿ ಗೆಣಸು ಸೇವಿಸುವ ಮೊದಲು ಯಾವುದಕ್ಕೂ ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ  ಸಲಹೆ ಪಡೆದು ಕೊಳ್ಳಿ. ಮಧುಮೇಹದಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಇದು ಮಧುಮೇಹ ಕಡಿಮೆ ಮಾಡಿ , ಇನ್ಸುಲಿನ್ ಪ್ರಮಾಣವನ್ನು ಸ್ಥಿರಗೊಳಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. 

ತೂಕ ಇಳಿಕೆಗೆ ಹೇಗೆ ಸಹಕಾರಿ?

ಸಿಹಿ ಗೆಣಸಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಿಹಿ ಗೆಣಸಿನಲ್ಲಿ ಹೆಚ್ಚಿನ ನೀರಿನ ಅಂಶವು ಹೆಚ್ಚಾಗಿದ್ದು, ತೂಕ ನಷ್ಟಕ್ಕೆ ಉತ್ತಮವಾದದ್ದು. 

ಇಮ್ಯೂನ್ ಸಿಸ್ಟಮ್ ಗೂ ಸಿಹಿ ಗೆಣಸು ಹೆಚ್ಚು ಸಹಕಾರಿಯಾಗಿದೆ. ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಹೆಚ್ಚಾಗಿದ್ದು, ಇಮ್ಯೂನ್ ಸಿಸ್ಟಮ್ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.  ಅಲ್ಲದೇ, ಸಿಹಿ ಗೆಣಸು ತಿನ್ನುವುದರಿಂದ ಕಣ್ಣಿಗೂ ಒಳ್ಳೆಯದು. ಆತಂಕ, ಖಿನ್ನತೆ ನಿವಾರಿಸುವಲ್ಲಿ ಸಿಹಿ ಗೆಣಸು ಮಹತ್ವದ ಪಾತ್ರ ವಹಿಸುತ್ತದೆ. 

ಶೀತ, ಜ್ವರ, ಹಾಗೂ ಇತರ ವೈರಲ್ ಸೋಂಕುಗಳನ್ನು ತಡೆಯಲು ಸಿಹಿ ಗೆಣಸು ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ, ಮೂಳೆ, ಹಲ್ಲುಗಳು ಮತ್ತು ರಕ್ತದ ಕೋಶಗಳ ನಿರ್ಮಾಣಕ್ಕೆ ಅತಿ ಅಗತ್ಯ. ಗೆಣಸಿನ ಜ್ಯೂಸ್ ನಿಂದ ಸಿಗುವ ಆರೋಗ್ಯ ಲಾಭಗಳಲ್ಲಿ ಇದು ಒಂದಾಗಿದೆ. ಇದರಲ್ಲಿ ಕಬ್ಬಿನಾಂಶ ಹೆಚ್ಚಾಗಿದೆ. ದೇಹಕ್ಕೆ ಒಳ್ಳೆಯ ಮಟ್ಟದ ಕಬ್ಬಿನಾಂಶವು ಲಭ್ಯವಾಗುವುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ