ಎಲ್ಲಾ ರೋಗಗಳಿಗೆ ‘ದಿವ್ಯಾಷಧಿ’ ಮೂಲಂಗಿ

  • by

ಮೂಲಂಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಮೂಲಂಗಿ ದಿವ್ಯಾಷಧಿ ಗುಣಗಳ ತರಕಾರಿ. ಇದು ಫೈಟೋ ಕೆಮಿಕಲ್ಸ್ ಮತ್ತು ಆಂಥೋಸಯಾನಿನ್ ಎಂದು ಕರೆಯಲ್ಪಡುವ ಅಂಶಗಳನ್ನು ಒಳಗೊಂಡಿದೆ. ಮೂಲಂಗಿ ವಿಶೇಷವಾಗಿ ಮಧುಮೇಹ ಸೇರಿದಂತೆ ಕ್ಯಾನ್ಸರ್ ಮಾರಕ ರೋಗಗಳಿಗಳನ್ನು ದೂರವಿರಿಸುತ್ತದೆ. ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಮೂಲಂಗಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರೆ ಮೂಲಂಗಿ ಬಳಸಬಹುದು. ಚಳಿಗಾಲದಲ್ಲಿ ಮೂಲಂಗಿ ತಿನ್ನುವುದಪಿಂದ ಪ್ರಯೋಜನಗಳನ್ನು ತಿಳಿಯೋಣ. 

ಮೂಲಂಗಿಯಲ್ಲಿ ಅಧಿಕ ಮಟ್ಟದಲ್ಲಿ ಪೋಟ್ಯಾಶಿಯಂ ಅಂಶವಿರುತ್ತದೆ. ನಿಮ್ಮ ಡಯೆಟ್ ನಲ್ಲಿ ಮೂಲಂಗಿ ಬಳಸುವುದರಿಂದ ದೇಹದಲ್ಲಿ ಸೋಡಿಯಂ ಹಾಗೂ ಪೋಟ್ಯಾಶಿಯಂ ನಿಯಂತ್ರಣದಲ್ಲಿರುತ್ತದೆ. ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ತಪ್ಪದೇ ಸೇವಿಸಿ.  

radishes, health benefits

ಮೂಲಂಗಿ ಬಳಸುವುದರಿಂದ ಜೀರ್ಣಕ್ರಿಯೆ ಹೆಚ್ಚಿನ ಸಹಕಾರಿಯಾಗಿದೆ. ಇದರಲ್ಲಿ ಅತ್ಯಧಿಕ ಫೈಬರ್ ಇರುವುದರಿಂದ ಸುಲಭವಾಗಿ ಪಚನ ಕ್ರಿಯೆ ಯಾಗುತ್ತದೆ. ಮೂಲಂಗಿಯಲ್ಲಿ ಮೂತ್ರಪಿಂಡದ ಡಿಟಾಕ್ಸ್ ಗೆ ಕಾರಣವಾಗುವ ಮೂತ್ರವರ್ಧಕ ಗುಣಗಳಿವೆ. ಮೂಲಂಗಿ ನಿಮ್ಮ ಮೂತ್ರಪಿಂಡಕ್ಕೂ ಸಹ ಪ್ರಯೋಜನಕಾರಿಯಾಗಿದ್ದು, ಇದನ್ನು ಸೇವಿಸುವುದರಿಂದ ದೇಹದಲ್ಲಿ ವಿಷವನ್ನು ಸಂಗ್ರಹಿಸಲು ಸಾಧ್ಯಾವಾಗುವುದಿಲ್ಲ. ಮೂಲಂಗಿ ರಂಜಕ ಹಾಗೂ ಸತು ಅಂಶ ಹೊಂದಿರುವುದರಿಂದ ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಮೂಲಂಗಿ ತಿನ್ನುವುದರಿಂದ ಶುಷ್ಕತೆ ಮತ್ತು ಮೊಡವೆಗಳನ್ನು ಸಹ ಗುಣಪಡಿಸುತ್ತದೆ.  ಮೂಲಂಗಿಯ ಪ್ರಯೋಜನಗಳು ಇಲ್ಲಿವೆ. 

radishes, health benefits
  1. ಮೂಲಂಗಿ ಸೇವನೆಯಿಂದ ವಿಟಮಿನ್ ಸಿ ನಮ್ಮ ದೇಹದ ರಕ್ತಕಣಗಳನ್ನು ಹೆಚ್ಚಿಸುತ್ತದೆ. ರೋಗ ಪ್ರತಿರೋಧ ಶಕ್ತಿಯನ್ನು ಹೆತ್ತಿಸುತ್ತದೆ.ಅಷ್ಟೇ ಅಲ್ಲ. ಇದು ಕ್ಯಾನ್ಸರ್ ಬರುವುದನ್ನು ತ್ಡೆಗಟ್ಟುತ್ತದೆ.

2. ಕೆಂಪು ರಕ್ತಕಣಗಳ ಬೆಳವಣಿಗೆಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ, ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ. ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ. 

3. ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಅಂದರೆ ದೇಹದ ತೂಕವನ್ನು ನಿಯಂತ್ರಿಸುತ್ತದೆ. 

4. ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡ್ತಾರೆ. 

5. ಮೂತ್ರಕೋಶ , ಮೂತ್ರಪಿಂಡವನ್ನು ಶುಚೀಕರಿಸಲು ಮೂಲಂಗಿ ಸಹಕಾರಿ, ಇದರ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ. 

6. ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿವಪುಡಿ ಮತ್ತು ಉಪ್ಪು ಬೆರಸಿ ತಿನ್ನುವುದರಿಂದ ಕಾಮಾಲೆ ರೋಗ. ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ. 

7. ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ, ನೆಗಡಿ ನಿವಾರಣೆಯಾಗುತ್ತದೆ. 

8.  ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ. ಮತ್ತು ಉರಿ ಕಮ್ಮಿಯಾಗುತ್ತದೆ. 

9. ಊಟದಲ್ಲಿ ಹಸಿ ಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿ ದಿನ ಹಸಿ ಮೂಲಂಗಿಯನ್ನು ಬಳಸಿ, ಒಳ್ಳೆಯದು.

10. ಮೂಲಂಗಿ ಕಫವನ್ನು ನಿವಾರಿಸುತ್ತದೆ. ಗಂಟಲು ಮತ್ತು ಶ್ವಾಸನಾಳಗಳಲ್ಲಿ ಕಫ ಕಟ್ಟಿಕೊಂಡು ಕಟ್ಟಿಯಾಗಿ ಉಸಿರಾಟದ ತೊಂದರೆ ಎದುರಾದರೆ ಅಸ್ತವಾ ಅಥವಾ ಬ್ರಾಂಕೈಟಿಸ್ ಮೊದಲಾದ ತೊಂದರೆಗಳನ್ನು ಕಾಣಿಸಿಕೊಳ್ಳಬಹುದು. ಮೂಲಂಗಿ ರಸ ಈ ಕಫವನ್ನು ಸಡಿಲಿಸಿ ನಿವಾರಿಸುವ ಮೂಲಕ ತೊಂದರೆಗಳನ್ನು ನಿವಾರಿಸುತ್ತದೆ.

11. ಇನ್ನು ಮೂಲಂಗಿಯಿಂದ ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದನ್ನು ನಾನಾ ರೀತಿಯಲ್ಲಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ ತಯಾರಿಸಬಹುದು.ಚಟ್ನಿ ತಯಾರಿಸಬಹುದು. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ತಯಾರಿಸಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಯಾರಿಗೆ ಹಸಿಯಾಗಿ ಮುಲಂಗಿ ತಿನ್ನಲು ಇಷ್ಟವಿಲ್ಲವೋ. ಅಂಥವರು ಮುಲಂಗಿ ಜ್ಯೂಸ್ ನೊಂದಿಗೆ ಅಥವಾ ಕೆಲವು ಹನಿ ನಿಂಬೆರಸವನ್ನ ಹಿಂಡಿ ಕುಡಿಯುವ ಮೂಲಕ ಇದನ್ನು ರುಚಿಕರವಾಗಿಸಬಹುದು. 

radishes, health benefits

ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಲಾಭ..!

ಜ್ಯೂಸ್ ಕುಡಿಯುವುದರಿಂದ ದೇಹದ ಅಂಗಗಳು ಶುದ್ಧಿಯಾಗುತ್ತವೆ. ವಿಶೇಷವಾಗಿ ಮೂತ್ರಕೋಶ , ಮೂತ್ರ ಪಿಂಡಗಳು, ಪ್ರಾಸ್ಟೇಟ್ ಗ್ರಂಥಿ ಹಾಗೂ ಜೀರ್ಣಾಂಗಳು ಒಳಗಿನಿಂದ ಸ್ವಚ್ಛಗೊಂಡು ಕಲ್ಮಶ ಹಾಗೂ ವಿಷಕಾರಿ ವಸ್ತುಗಳು ಮತ್ತು ಮುಖ್ಯವಾಗಿ ಹೊಟ್ಟೆಯಲ್ಲಿರುವ ಸೂಕ್ಷ್ಮ ಜೀವಿಗಳು ಹೊರಹಾಕಲ್ಪಡುತ್ತವೆ. ವಿಶೇಷವಾಗಿ ಯಕೃತ ಮತ್ತು ಪಿತ್ತಕೋಶವನ್ನು ಶುದ್ಧೀಕರಿಸಲು ಮೂಲಂಗಿ ರಸದ ಸೇವನೆ ಉತ್ತಮ ಎಂದು ಹೇಳಬಹುದು. 

ಇನ್ನು ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಮೈರೋಸಿನೇಸ್, ಈಸ್ಟರೇಸ್, ಆಮೈಲೇನ್, ಡೈಯಾಸ್ಟೇಸ್ ಎಂಬ ಕಿಣ್ವಗಳು ಹಲವಾರು ಶಿಲೀಂದ್ರದ ಮೂಲಕ ಆವರಿಸುವ ಸೋಂಕುಗಳನ್ನು ಗುಣಪಡಿಸುತ್ತದೆ. 

radishes, health benefits

ಮೂಲಂಗಿ ರಸ ಕುಡಿಯುವುದರಿಂದ ಚರ್ಮದ ತೊಂದರೆಗಳನ್ನು ನಿವಾರಿಸು್ತದೆ. ಇದರಲ್ಲಿರುವ ಗಂಧಕ, ವಿಟಮಿನ್ ಎ ಮತ್ತು ಸಿ ಚರ್ಮದ ಆರೋಗ್ಯಕ್ಕೂ ಪೂರಕವಾಗಿದೆ. ನಿಯಮಿತ ಸೇವನೆಯಿಂದ ಮೊಡವೆ, ತುರಿಕೆ ಚರ್ಮ ಕೆಂಪಗಾಗುವುದು ಮೊದಲಾದ ಚರ್ಮದ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುತ್ತದೆ.

ಮೂಲಂಗಿ ರಸ ಮತ್ತು ನಿಂಬೆರಸ ಮಿಶ್ರಣವು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸಿ ಮೂಳೆಗಳ ಆರೋಗ್ಯವನ್ನು ಕಾಪಾಡುವುದು. ಇದು ಅಸ್ಥಿರಂಧ್ರತೆಯಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಮೂಲಂಗಿ ರಸ ಮತ್ತು ನಿಂಬೆರಸ ಸೂಕ್ತ. ಹೃದಯ ಆರೋಗ್ಯ ಕಾಪಾಡಿ ಯಾವುದೇ ರೋಗಗಳು ಬರದಂತೆ ತಡೆಯುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ