ಪ್ರತಿ ಮನೆಯಲ್ಲಿ ಬೆಳಗಿನ ಉಪಹಾರವಾಗಿ ಅವಲಕ್ಕಿಯನ್ನು ಸೇವಿಸಲಾಗುತ್ತದೆ. ಅವಲಕ್ಕಿ ಕೇವಲ ರುಚಿ ಹೆಚ್ಚಿಸುವುದಷ್ಟೇ ಅಲ್ಲ. ಆರೋಗ್ಯಕ್ಕೂ ಹೆಚ್ಚು ಪ್ರಯೋಜನ ಎಂದು ಹೇಳಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಜೀವಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ. ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಉಪಹಾರದಲ್ಲಿ ಇದನ್ನು ಸೇವಿಸುವುದರಿಂದ ಮನಸ್ಸು ಹಗುರವಾಗುತ್ತದೆ. ಮತ್ತು ಜೀರ್ಣಿಸಿಕೊಳ್ಳಲು ಸಹ ಸುಲಭವಾಗುತ್ತದೆ. ದೇಹವನ್ನು ಸಧೃಢವಾಗಿರಲು ಮತ್ತು ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅವಲಕ್ಕಿ ತಿನ್ನುವುದರಿಂದ ಏಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ. ತಿಳಿಯೋಣ.

ಕಬ್ಬಿಣ ಕೊರತೆ ನಿವಾರಿಸುತ್ತದೆ..!
ದೇಹಕ್ಕೆ ಕಬ್ಬಿಣದ ಅಂಶ ಅಗತ್ಯವಿರುತ್ತದೆ. ಪ್ರತಿ ದಿನ ಬೆಳಿಗ್ಗೆ ವಿವಿಧ ತರಕಾರಿಗಳ ಜತೆಗೆ ಅವಲಕ್ಕಿ ಯನ್ನು ಬೆರೆಸಿ ಸೇವಿಸಬಹುದು. ಇದು ದೇಹದಲ್ಲಿ ಕಬ್ಬಿಣವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತಹೀನತೆ ಕೊರತೆ ನಿವಾರಿಸುತ್ತದೆ. ಇದಲ್ಲದೇ, ಅವಲಕ್ಕಿ ತಿನ್ನುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ಜೀವಕೋಶಗಳು ಆಮ್ಲಜನಕವನ್ನು ಪಡೆಯಲು ನೆರವಾಗುತ್ತದೆ.
ಮಧುಮೇಹ ರೋಗಿಗಳಿಗೆ ಒಳ್ಳೆಯದು
ಅವಲಕ್ಕಿ ತಿನ್ನುವುದರಿಂದ ಮಧುಮೇಹಿಗಳ ರಕ್ತದೋತ್ತಡವನ್ನು ನಿಯಂತ್ರಣದಲ್ಲಿಟ್ಟು, ಸಮತೋಲನದಲ್ಲಿಡುತ್ತದೆ. ಹಸಿವಾಗದಂತೆ ನೋಡಿಕೊಳ್ಳುತ್ತದೆ. 1 ಪ್ಲೇಟ್ ಅವಲಕ್ಕಿ ತಿನ್ನುವುದರಿಂದ 244 ಕ್ಯಾಲೋರಿ ದೊರೆಯುತ್ತದೆ.
ಪೋಶಕಾಂಶಗಳಿಂದ ಸಮೃದ್ದವಾಗಿದೆ..
ಅವಲಕ್ಕಿಯನ್ನು ಅನೇಕ ತರಕಾರಿಗಳ ಜತೆ ಬೆರೆಸಿ ಸೇವಿಸಬಹುದು. ಏಕೆಂದರೆ ಇದರಲ್ಲಿ ಸಾಕಷ್ಟು ಜೀವಸತ್ವಗಳಿವೆ. ಖನಿಜಗಳಿವೆ. ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಅನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೊಟ್ಟೆ ನೋವಿಗೆ ಪ್ರಯೋಜನಕಾರಿ..
ಜೀರ್ಣಿಸಿಕೊಳ್ಳಲು ಸುಲಭವಾದ ಕಾರಣ, ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಗ್ಲುಟೋನ್ ಕಡಿಮೆ ಪ್ರಮಾಣದಲ್ಲಿರುವುದರಿಂದ ಹೊಟ್ಟೆಯ ನೋವಿನಿಂದ ಬಳಲುತ್ತಿರುವವರಿಗೆ ವೈದ್ಯರು ಅವಲಕ್ಕಿ ತಿನ್ನಲು ಸಲಹೆ ನೀಡುತ್ತಾರೆ.
ಶಕ್ತಿಯ ಸಮೃದ್ಧಿ
ಬೆಳಿಗ್ಗೆ ಉಪಹಾರದಲ್ಲಿ ಪೋಹಾ ತಿನ್ನುವುದರಿಂದ ಎನರ್ಜಿ ದೊರೆಯುತ್ತದೆ. ಇದರ ಸೇವನೆ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ಸೋಯಾಬೀನ್ , ಒಣ ಹಣ್ಣುಗಳು ಮತ್ತು ಮೊಟ್ಟೆಗಳನ್ನು ಬೆರೆಸಿ, ಸೇವಿಸಿದರೆ ದೇಹಕ್ಕೆ ಜೀವಸತ್ವದ ಜತೆಗೆ ಪ್ರೋಟೀನ್ ದೊರೆಯುತ್ತದೆ.
ಲಘು ಆಹಾರ
ಆರೋಗ್ಯ ದ ಪ್ರಜ್ಞೆ ಹೊಂದಿರುವ ಹಲವರು, ಅವಲಕ್ಕಿಯನ್ನು ಸ್ವಲ್ಪ ಸಮಯದವರೆಗೆ ತೂಕ ಇಳಿಸಿಕೊಳ್ಳಲು ಸೇವಿಸುತ್ತಾರೆ.ಈ ಉಪಹಾರ ಹೊಟ್ಟೆಗೆ ಹಗುರವಾಗಿರುವುದರಿಂದ ಕಡಿಮೆ ಪ್ರಮಾಣದಲ್ಲಿ ತಿನ್ನಲು ನೀಡಲಾಗುತ್ತದೆ. ಇದನ್ನು ನಿಂಬೆ ಹಣ್ಣಿನ ಜತೆಗೆ ಉಪಹಾರವಾಗಿ ಸೇವಿಸಲಾಗುತ್ತದೆ. ಅವಲಕ್ಕಿ ಜತೆ ನಿಂಬೆ ಕಾಯಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.

ಆಹಾರ ತಜ್ಞರ ಪ್ರಕಾರ, ಅವಲಕ್ಕಿ ಹೆಚ್ಚು ಆರೋಗ್ಯಕಾರಿ ಉಪಹಾರ ಎಂದು ಪರಿಗಣಿಸಿದ್ದಾರೆ. ಅವಲಕ್ಕಿಯಲ್ಲಿ ಪ್ರತಿಶತ ಕಾರ್ಬೋಹೈಡ್ರೇಟ್ 76.9 ಹಾಗೂ ಪ್ರತಿಶತ 23.1 ಪ್ರೋಟೀನ್ ಒಳಗೊಂಡಿದೆಯಂತೆ. ಇದನ್ನು ಆರೋಗ್ಯಯುಕ್ತ ಉಪಹಾರ ಅಂತಲೇ ಕರೆಯಲಾಗುತ್ತದೆ.
ಅವಲಕ್ಕಿ ಉಪ್ಪಿಟ್ಟು ಮಾಡುವ ವಿಧಾನ..?
ಬೇಕಾದಷ್ಟು ಅವಲಕ್ಕಿಯನ್ನು ತೊಳೆದು 5 ನಿಮಿಷ ನೆನಯಿಡಿ.
ನಂತರ ನೀರನ್ನು ಬಸಿದಿಡಿ. ಒಂದು ಬಾಣಲೆ ಒಲೆ ಮೇಲೆ ಇಟ್ಟು, ಬೇಕಾದಷ್ಟು ಎಣ್ಣೆ ಹಾಕಿ, ಸಾಸಿವೆ , ಜೀರಿಗೆ ಸಿಡಿಸಿ. ಹೆಚ್ಚಿದ ಈರುಳ್ಳಿ , ಹಸಿ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಹಾಕಿ ಹುರಿದು, ನಂತರ ನೆನಸಿದ ಅವಲಕ್ಕಿ ಹಾಕಿ ಕೆದಕಿ, ಒಂದರ್ಥ ಹೋಳು ನಿಂಬೆ ರಸ ಹಿಂಡಿ ಕೆದಕಿದರೆ, ಅವಲಕ್ಕಿ ಉಪ್ಪಿಟ್ಟು ಸವಿಯಲು ಸಿದ್ಧ.ಇದಕ್ಕೆ ಈರುಳ್ಳಿ ಉಪಯೋಗಿಸಲು ಇಷ್ಟವಿಲ್ಲದವರು, ಬೇರೆ ತರಕಾರಿಗಳನ್ನು ಉಪಯೋಗಿಸಬಹುದು,