ಒಮೆಗಾ 3 ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ದೇಹದ ಅಂಗಗಳ ಸರಿಯಾಗಿ ಕಾರ್ಯನಿರ್ವಹಿಸಲು
ಕೊಲೆಸ್ಟ್ರಾಲ್ ಬೇಕು. ಒಳ್ಳೆಯ ಕೊಲೆಸ್ಟ್ರಾಲ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ಗಳ ಹೆಚ್ಚಾಗುವುದನ್ನು
ತಡೆಯುತ್ತದೆ. ಇದು ಹೃದಯಾಘಾತ, ಅನಿಯಮಿತ ಹೃದಯದ ಲಯ, ಸ್ಟ್ರೋಕ್ ಮತ್ತು ನಿಮ್ಮ
ಕೀಲುಗಳಲ್ಲಾಗುವ ಹಾನಿ ತಡೆಯುತ್ತದೆ ಸಂಧಿವಾತ ತಡೆಗಟ್ಟುವಲ್ಲಿ ಸಹಕಾರಿ. ಒಮೆಗಾ -3 ಫ್ಯಾಟಿ
ಆಸಿಡ್ಗಳು ನಿಮ್ಮ ಮೆದುಳಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದುಆಲ್ಝೈಮರ್, ಡಿಮೆನ್ಶಿಯಾ
ತಡೆಯಲು ಸಹಾಯಕಾರಿ. ಫ್ಯಾಟಿ ಲಿವರ್ ಸಮಸ್ಯೆ ಇರುವವರು ಒಮೆಗಾ 3 ತೆಗೆದುಕೊಳ್ಳುವುದರಿಂದ
ಲಿವರ್ ಗಾತ್ರ ಕಡಿಮೆಯಾಗುವುದು. ಒಮೆಗಾ -3 ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರವು ನಿಮಗೆ
ಆರೋಗ್ಯಕರ ಚರ್ಮ ಮತ್ತು ಕೂದಲನ್ನು ನೀಡುತ್ತದೆ. ಈ ಒಮೆಗಾ 3 ಕೊಬ್ಬನ್ನು ನಮ್ಮ ದೇಹ ಉತ್ಪತ್ತಿ
ಮಾಡುವುದಿಲ್ಲ. ಈ ಕೊಬ್ಬು ಏನಿದ್ದರೂ ಆಹಾರ ಮುಖಾಂತರವೇ ನಮ್ಮ ದೇಹವನ್ನು ಸೇರಬೇಕು.
ಕೆಲವು ಆಹಾರಗಳು ಒಮೆಗಾ 3 ಯಿಂದ ಸಮೃದ್ಧವಾಗಿರುತ್ತವೆ.
ಇಷ್ಟೇ ಅಲ್ಲದೆ ಕೂದಲು ಉದುರುವುದು ತಡೆಗಟ್ಟಲು, ತ್ವಚೆ ಆರೋಗ್ಯ ವೃದ್ಧಿಸಲು ಸಂಧಿ ನೋವು
ಕಡಿಮೆ ಮಾಡಲು ಒಮೆಗಾ 3 ಅವಶ್ಯಕವಾಗಿದೆ. ನಮ್ಮ ದೇಹದಕ್ಕೆ ಈ ಕೊಬ್ಬು ನಾವು ಸೇವಿಸುವ
ಆಹಾರದಿಂದ ಲಭ್ಯವಾಗಬೇಕು. ಒಮೆಗಾ 3 ಕೊಬ್ಬಿನಂಶ ನಮ್ಮ ದೇಹದಲ್ಲಿ ಕಡಿಮೆಯಾದರೆ ಒಬಿಸಿಟಿ,
ಮಧುಮೇಹ, ಹೃದಯ ಸಮಸ್ಯೆಯಂತಹ ತೊಂದರೆಗಳು ಕಾಣಿಸಿಕೊಳ್ಳುವುದು.
ಮೀನು: ಸಾಲ್ಮನ್ ಸಾರ್ಡೀನ್, ಬಂಗುಡೆ, ಟ್ಯೂನ್ ಮೀನುಗಳಲ್ಲಿ ಒಮೆಗಾ 3 ಹೇರಳವಾಗಿರುತ್ತದೆ.
ಬೀಜ: ಒಣಗಿದ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳು ಉತ್ತಮವಾಗಿರುತ್ತವೆ. ಕುಂಬಳಕಾಯಿ
ಬೀಜಗಳಲ್ಲಿ ಒಮೆಗಾ ಹೇರಳವಾಗಿರುತ್ತದೆ.
ವಾಲ್ನಟ್: ಮುಷ್ಟಿಯಷ್ಟು ವಾಲ್ನಟ್ಲ್ಲಿ ಭರಪೂರ ಒಮೆಗಾ- 3ಇರುತ್ತದೆ . ಗೋಡಂಬಿ, ಆಲೀವ್
ಆಯಿಲ್, ಕಡಲೆಗಳಲ್ಲಿ ಸಹ ಈ ಆಮ್ಲವಿರುತ್ತದೆ
ಆಲೀವ್ ಎಣ್ಣೆ: ಸಂಸ್ಕರಿಸಿದ ಆಲೀವ್ ಎಣ್ಣೆ ಮತ್ತು ಸಾಧಾರಣ ಆಲೀವ್ ಎಣ್ಣೆಯಲ್ಲಿ ಒಮೆಗಾ
ಕೊಬ್ಬಿನಂಶವಿದೆ.
ಕ್ಯಾನೊಲಾ ಎಣ್ಣೆ: ಈ ಎಣ್ಣೆಯಲ್ಲಿ ಕೂಡ ಕೊಲೆಸ್ಟ್ರಾಲ್ ಅಂಶವಿರುತ್ತದೆ
ಬೆಣ್ಣೆ ಹಣ್ಣು: ಇದರಲ್ಲಿ ಆರೋಗ್ಯವರ್ಧಕ ಗುಣವಿದೆ ಒಂದು ಬೆಣ್ಣೆ ಹಣ್ಣಿನಲ್ಲಿ 250 ಎಮ್ಜಿ
ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ.
ಕುಂಬಳ ಕಾಯಿ ಬೀಜ: ಒಮೆಗಾ 3 ಕೊಬ್ಬಿನಂಶ ಇದರಲ್ಲಿರುವುದರಿಂದ ಸಸ್ಯಾಹಾರಿಗಳಿಗೆ ಇದು
ಅತ್ಯುತ್ತಮವಾಗಿದೆ.
ಅಗಸೆಬೀಜ : ಇದರಲ್ಲಿ ಒಮೆಗಾ 3 ಪೋಷಕಾಂಶವಿದ್ದು ಸಸ್ಯಾಹಾರಿಗಳು ಆರೋಗ್ಯ ವೃದ್ಧಿಸಬಹುದು
ಮೊಟ್ಟೆ: ಮೊಟ್ಟೆಯ ಹಳದಿಯಲ್ಲಿ ಒಮೆಗಾ 3 ಅಂಶವಿದ್ದು ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಸಮುದ್ರಾಹಾರ: ಏಡಿ ಮೃದ್ವಂಗಿಗಳಲ್ಲಿ ಕೂಡ ಒಮೆಗಾ 3 ಅಂಶವಿದೆ. ಇನ್ನು ಸಸ್ಯಾಹಾರಿ ಪ್ರಾಣಿಗಳ
ಮಾಂಸದಲ್ಲಿ ಕೂಡ ಈ ಪೋಷಕ ಅಂಶವಿದೆ.
ಸೋಯಾಬೀನ್, ಮಯೋನೈಸ್, ಗೋಡಂಬಿ, ವಾಲ್ನಟ್ಸ್ ಇವುಗಳಲ್ಲಿ ಕೂಡ ಒಮೆಗಾ 3 ಫ್ಯಾಟಿ
ಅಂಶವಿದೆ. ಒಮೆಗಾ 3 ಕೊರತೆ ಉಂಟಾದರೆ ಸಪ್ಲಿಮೆಂಟ್ ತೆಗೆದುಕೊಳ್ಳಬಹುದು. ಮೀನು
ತಿನ್ನುವವರಾದರೆ ಸಪ್ಲಿಮೆಂಟ್ ಬದಲು ಮೀನು ತಿಂದು ದೇಹದಲ್ಲಿ ಒಮೆಗಾ 3 ಕೊರತೆ ಉಂಟಾಗದಂತೆ
ಕಾಪಾಡಬಹುದು.