ಪ್ರತಿ ದಿನ ನಿಂಬೆ ಪಾನಕವನ್ನು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮವಾಗಿ ಇಡಬಹುದು. ನಿಂಬೆ ದೇಹಕ್ಕೆ ಶಕ್ತಿ ನೀಡುತ್ತದೆ. ಅಷ್ಟೇ ಅಲ್ಲ, ನಿಂಬೆ ಪಾನಕದಂತೆ ಸಾಮಾನ್ಯ ನೀರು ಸಹ ಪ್ರಯೋಜನಕಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ನಿಂಬೆ ಪಾನಕ ಹಾಗೂ ಅದರ ಪ್ರಯೋಜನಗಳು ಸಾಕಷ್ಟಿವೆ. ಇಲ್ಲಿದೆ ಮಾಹಿತಿ.

ನಿಂಬೆ ಪಾನಕದಿಂದಾದಗುವ ಆರೋಗ್ಯ ಪ್ರಯೋಜನಗಳು..!
ನಿಂಬೆ ದೇಹಕ್ಕೆ ತುಂಬಾ ಪ್ರಯೋಜನಾಕಾರಿಯಾಗಿದೆ ಎಂದು ಸಾಬೀತಾಗಿದೆ.ನೀವು ತೂಕ ಇಳಿಸಿಕೊಳ್ಳಲು ಬಯಸುವಿರಾದರೆ, ಬೆಳಿಗ್ಗೆ ನಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯರಿ. ನಿಮಗೆ ಹೊಟ್ಟೆ ಸಂಬಂಧಿತ ಸಮಸ್ಯೆ ಇದ್ದರೆ, ನಿಂಬೆ ಉಪ್ಪಿನಕಾಯಿ ತೆಗೆದುಕೊಳ್ಳಿ. ನಿಂಬೆ ಹಣ್ಣಿಗೆ ಸಾಕಷ್ಟು ಮನೆ ಮದ್ದುಗಳಿವೆ. ಪ್ರತಿ ದಿನ ನಿಂಬೆ ಪಾನಕವನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.
ನಿಂಬೆ ಹೆಚ್ಚಿನ ಮಟ್ಟದ್ಲಿ ಪೋಷಕಾಂಶಗಳನ್ನು ಹೊಂದಿದೆ. ನಿಂಬೆ ಪಾನಕ ದೇಹಕ್ಕೆ ತುಂಬಾ ಉಪಯುಕ್ತ ಎಂದು ಹೇಳಲಾಗುತ್ತದೆ. ಅನೇಕ ಪೋಷಕಾಂಶಗಳು ಇದರಲ್ಲಿ ಇರುವುದರಿಂದ ನಿಮ್ಮ ದೇಹವನ್ನು ಆರೋಗ್ಯ ವಾಗಿಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಕುಡಿಯುವುದು ಸಹ ದೇಹಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಈ ಮೂಲಕ ದೇಹದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ದೇಹ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚಳವಾಗುತ್ತದೆ.
ಚರ್ಮದ ಸಮಸ್ಯೆಗೆ ರಾಮಬಾಣ..!
ಪ್ರತಿ ದಿನ ಬೆಳಿಗ್ಗೆ ನಿಂಬೆ ಪಾನಕ ವನ್ನು ಸೇವಿಸಿದರೆ, ಚರ್ಮದ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲದ್ದು. ನಿಂಬೆ ಪಾನಕವನ್ನು ಪ್ರತಿ ದಿನ ಸೇವಿಸುವುದರಿಂದ ಕಲೆಗಳನ್ನು ನಿವಾರಿಸುತ್ತದೆ. ಅದೇ ಸಮಯದಲ್ಲಿ ಸುಕ್ಕುಗಳನ್ನು ಸಹ ತಡೆಗಟ್ಟುತ್ತದೆ. ಹೊಳೆಯುವ ಚರ್ಮಕ್ಕೆ ನಿಂಬೆ ಪಾನಕವು ತುಂಬಾ ಸಹಾಯಕಾರಿಯಾಗಿದೆ ಎಂದು ಸಾಬೀತಾಗಿದೆ.

ರೋಗ ನಿರೋಧಕ ಶಕ್ತಿ
ನಿಂಬೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಹೆಚ್ಚಾಗಿರುವುದರಿಂದ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಜೀರ್ಣಕ್ರಿಯೆ
ಜೀರ್ಣಕ್ರಿಯೆಯಲ್ಲಿ ನಿಂಬೆ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ನಿಂಬೆ ಪಾನಕ ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸರಿಯಾಗಿ ಇಡಬಹುದು. ಅಲ್ಲದೇ ನಿಂಬೆ ಪಾನಕವನ್ನು ಕುಡಿಯುವುದರಿಂದ ಎನರ್ಜಿ ಹೆಚ್ಚುತ್ತದೆ. ದೇಹಕ್ಕೆ ಇಡೀ ದಿನ ಶಕ್ತಿಯನ್ನು ಒದಗಿಸುತ್ತದೆ. ನಿಂಬೆ ನೀರು ಕುಡಿಯುವುದರಿಂದ ಒತ್ತಡ ವಿರುದ್ಧ ಹೋರಾಡಲು ನೆರವಾಗುತ್ತದೆ.
ದೇಹವನ್ನು ಹೈಡ್ರೀಕರಿಸುತ್ತದೆ
ನಿಂಬೆ ಹಣ್ಣು ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ದೇಹವನ್ನು ಹೈಡ್ರೀಕರಿಸುತ್ತದೆ. ಪಾನಕದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಇದು ದೇಹವನ್ನು ಹೆಚ್ಚಾಗಿ ಹೈಡ್ರೀಕರಿಸುತ್ತದೆ.
ಹಸಿವನ್ನು ನಿವಾರಿಸುತ್ತದೆ.
ನೀವು ಪ್ರತಿ ಬಾರಿ ಹೆಚ್ಚು ಆಹಾರ ಸೇವಿಸುತ್ತಿದ್ದರೆ, ಇದನ್ನು ತಡೆಗಟ್ಟಲು ನಿಂಬೆ ಪಾನಕವನ್ನು ಸೇವಿಸಬಹುದು. ನಿಂಬೆ ಪಾನಕ ಅಥವಾ ನೀರು ಉತ್ತಮ ಆಯ್ಕೆಯಾಗಿದೆ. 2008 ರಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ಉಪಹಾರಕ್ಕೆ ಮುಂಚಿತವಾಗಿ ಅರ್ಧ ಲೀಟರ್ ನೀರು ಕುಡಿಯುವುದರಿಂದ ಶೇ. 13 ರಷ್ಟು ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದು.
ನಿಂಬೆ ಹಣ್ಣು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಅದು ನಿಯಾಸಿಸ್, ವಿಟಮಿನ್ ಸಿ , ವಿಟಮಿನ್ ಇ ಮುಂತಾದ ಜೀವಸತ್ವಗಳನ್ನು ಹೊಂದಿರುತ್ತದೆ. ಗಂಟಲು ನೋವು, ಮಲಬದ್ಧತೆ, ಮೂತ್ರಪಿಂಡ ಕಾಯಿಲೆ, ಹಾಗೂ ಒಸಡುಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಿತ್ತಜನನಾಂಗವನ್ನು ಆರೋಗ್ಯ ವಾಗಿಡುವಲ್ಲಿ ನೆರವಾಗುತ್ತದೆ.

ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆ
ನಿಂಬೆ ಪಾನಕವು ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಮೂತ್ರಪಿಂಡದ ಸಮಸ್ಯೆ ಇದ್ದರೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುವುದಿಲ್ಲ. ಇದು ತೀವ್ರ ನೋವು ಉಂಟು ಮಾಡಬಲ್ಲದ್ದು. ಹೀಗಾಗಿ ನಿಂಬೆ ಪಾನಕವನ್ನು ಕುಡಿಯುವುದರಿಂದ ದೇಹವು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ನಿಂಬೆ ಮೂತ್ರಪಿಂಡದ ಅಪಾಯವನ್ನು ತಡೆಗಟ್ಟುತ್ತದೆ.
ಮಧುಮೇಹ ನಿಯಂತ್ರಣ
ನಿಂಬೆ ಪಾನಕವು ಆರೋಗ್ಯದ ಪ್ರಮುಖ ಪಾತ್ರವಾಗಿದೆ. ಇದು ಮೂತ್ರಪಿಂಡದ ಕಲ್ಲಿನಿಂದ ಪರಿಹಾರವಾಗಿದೆ. ವಿಶೇಷವಾಗಿ ಮಧುಮೇಹ ರೋಗಿಗಳು ಅಥವಾ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ನಿಂಬೆ ಪಾನಕ ಉತ್ತಮ ಎಂದು ಪರಿಗಣಿಸಲಾಗಿದೆ.