ಕಾರ್ನ್ , ಸ್ವೀಟ್ ಕಾರ್ನ್ ಚಾಟ್. ಕಾರ್ನ್ ಸೂಪ್ , ಪಾಸ್ತಾ ವಿತ್ ಕಾರ್ನ್ಸ್ ಹೀಗೆ ಹಲವು ಕಾರ್ನ್ ನಿಂದ ತಯಾರಿಸಿದ ಆಹಾರಗಳನ್ನು ಪ್ರತಿನಿತ್ಯ ಸೇವಿಸುವುದು ಸಾಮಾನ್ಯ. ದೇಶದೆಲ್ಲೆಡೆ ಮೆಕ್ಕೆ ಜೋಳ ಎಂದು ಹೆಸರಿನಿಂದ ಕರೆಯಲಾಗುತ್ತದೆ. ಕಾರ್ನ್ ವನ್ನು ಪ್ರತಿಯೊಬ್ಬರು ತಮ್ಮ ಡಯಟ್ ನಲ್ಲಿ ಸೇರಿಸುತ್ತಾರೆ. ಮೆಕ್ಕೆ ಜೋಳ ದಿಂದ ರೊಟ್ಟಿ ಹಾಗೂ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು. ಇನ್ನು ಕಾರ್ನ್ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದು. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಕಾರ್ನ್ ನ್ನು ಹಲವು ಕಡೆ ಬೆಳೆಯಲಾಗುತ್ತದೆ. ಈ ರುಚಿಕರವಾದ ಕಾರ್ನ್ ಹೇಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಯೋಣ
ವಿಟಮಿನ್ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಬಹುತೇಕ ಎಲ್ಲಾ ವಿಧದ ಜೋಳಗಳಲ್ಲಿ ವಿಟಮಿನ್ ಎ, ಬಿ, ಇ ಹಾಗೂ ಕೆ ಸಮೃದ್ದವಾಗಿದೆ. ಇದರಲ್ಲಿ ಕಂಡು ಬರುವ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
ಹೊಟ್ಟೆ ಉಬ್ಬರ ಸಮಸ್ಯೆಗೆ ರಾಮಬಾಣ
ಕಾರ್ನ್ ನಲ್ಲಿರುವ ಫೈಬರ್ ಮಲಬದ್ಧತೆ ಮತ್ತು ಆಸಿಡಿಟಿಯನ್ನು ತಡೆಯಲು ಸಹಾಯ ಮಾಡುತ್ತದೆ. ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಲ್ಲಿ ಹೇರಳವಾಗಿ ಕಾರ್ಬೋಹೈಡ್ರೇಟ್ ಗಳು ಇರುವುದರಿಂದ ಇದು ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.
ಮೂಳೆಗಳನ್ನು ಬಲವಾಗಿರಿಸುತ್ತದೆ
ಮೂಳೆಗಳ ಆರೋಗ್ಯವನ್ನು ಕಾರ್ನ್ ಕಾಪಾಡುತ್ತದೆ. ಮೂಳೆಗಳನ್ನು ಬಲಪಡಿಸಲು ನೀವು ಹಾಲು ಹಾಗೂ ವಿಟಮಿನ್ ಡಿ ಸೇವಿಸಬಹುದು. ಆದರೆ ಮೆಕ್ಕೆ ಜೋಳದಲ್ಲಿರುವ ಸತು, ರಂಜಕ ಮತ್ತು ಮೆಗ್ನೇಶಿಯಂ ಮತ್ತು ಕಬ್ಬಿಣವು ಮೂಳೆಗಳನ್ನು ಬಲಪಡಿಸುವಲ್ಲಿ ನೆರವಾಗುತ್ತದೆ.ಚರ್ಮದ ಸಮಸ್ಯೆಗಳನ್ನು ನೀವು ಹೊಂದಿದ್ದರೆ, ಮೆಕ್ಕೆ ಜೋಳ ಸೇವಿಸಿ. ವಿಟಮಿನ್ ಸಿ ಹಾಗೂ ಸಿ ಜೋಳದಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಜೊತೆಗೆ ಆಂಟಿ ಆಕ್ಸಿಡೆಂಟ್ ಫ್ರೀ ರಾಡಿಕಲ್ ಗಳಿಂದ ರಕ್ಷಿಸುತ್ತದೆ. ಮುಖವನ್ನು ಸುಕ್ಕುಗಳಿಂದ ಮುಕ್ತವಾಗಿರಿಸುತ್ತದೆ.
ಕಣ್ಣುಗಳಿಗೆ ಪ್ರಯೋಜನಕಾರಿ
ಕಣ್ಣುಗಳು ದೇಹಕ್ಕೆ ಅಮೂಲ್ಯವಾದದ್ದು, ಅವುಗಳನ್ನು ಆರೋಗ್ಯವಾಗಿಡುವುದು ಮುಖ್ಯ, ಕಾರ್ನ್ ಬೀಟಾ ಕ್ಯಾರೋಟಿನ್ , ವಿಟಮಿನ್ ಎ ಅನ್ನು ಹೊಂದಿರುವುದರಿಂದ, ಇದು ಕಣ್ಣಿಗೆ ತುಂಬಾ ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಇದು ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ರಾತ್ರಿ ಕುರುಡುತನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಕಾರ್ನ್ ಸೇವಿಸುವ ವಿಧಾನ..!
ಕಾರ್ನ್ ನ್ನು ಅರ್ಧ ಮಡಕೆ ನೀರಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಗ್ಯಾಸ್ ಮೇಲೆ ಬೇಯಿಸಬೇಕು. ಕುದಿಸಿದ ಕಾರ್ನ್ ನ್ನು ಸುಮಾರು 5 ರಿಂದ 7 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಬೇಯಿಸಬೇಕಾಗುತ್ತದೆ. ನಂತರ ಉಪ್ಪು ಹಾಗೂ ಬೆಣ್ಣೆಯನ್ನು ಮಿಕ್ಸ್ ಮಾಡಿ ಸೇವಿಸಬಹುದು. ಇದು ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಪೌಷ್ಠಿಕದಿಂದ ಸಮೃದ್ಧವಾಗಿದೆ.

ಎಚ್ಚರಿಕೆ ಅಗತ್ಯ..
ಯಾವುದೇ ಸಂದರ್ಭದಲ್ಲೂ ಹಸಿ ಕಾರ್ನ್ ತಿನ್ನುವುದನ್ನು ಅವೈಡ್ ಮಾಡಿ. ಏಕೆಂದರೆ ಇದು ಹೊಟ್ಟೆ ನೋವು ಉಂಟು ಮಾಡಬಹುದು.
ಕಾರ್ನ್ ನ್ನು ಸುಡುವಾಗ, ಅಥವಾ ಬೇಯಿಸುವಾಗ ಅದರ ಮೇಲೆ ನಾರಿನ ಪದರುಗಳನ್ನು ಚೆನ್ನಾಗಿ ಕ್ಲಿನ್ ಮಾಡಿ. ನಂತರ ಸರಿಯಾದ ಪ್ರಮಾಣದ ಶಾಖದಲ್ಲಿ ಬೇಯಿಸಿ. ಕಾರ್ನ್ ನ್ನು ಸಣ್ಣ ತುಂಡುಗಳನ್ನಾಗಿ ಮಾಡಬೇಕಾದರೆ, ಬೇಯಿಸುವುದಕ್ಕೂ ಮೊದಲು ಸಣ್ಣ ತುಂಡುಗಳನ್ನಾಗಿ ಮಾಡಿ. ಬೇಯಿಸಿದ ಕಾರ್ನ್ ತಿನ್ನಲು ಇಷ್ಟಪಡದೇ ಇರುವವರು, ಇವುಗಳಿಂದ ಭಕ್ಷ್ಯಗಳನ್ನು ತಯಾರಿಸಿ ಸೇವಿಸಬಹುದು.
ಗಮನಿಸಬೇಕಾದ ಅಂಶಗಳು!
ಸ್ವೀಟ್ ಕಾರ್ನ್ ಹೆಚ್ಚು ಪೌಷ್ಟಿಕಾಂಶವಿರುವ ಪೂರ್ಣ ಧಾನ್ಯವಾಗಿದ್ದು, ಇದನ್ನು ತಿಂದ ಬಳಿಕ ಜಂಕ್ ಫುಡ್ ಗಳಂತೆ ವಿಷಾದಿಸುವ ಪ್ರಶ್ನೆಯೇ ಇಲ್ಲ.
ತೂಕವನ್ನು ಸಹ ಕಾರ್ನ್ ನಿಯಂತ್ರಿಸುತ್ತದೆ. ಯಾವುದೇ ಜಂಕ್ ಫುಡ್, ಫಾಸ್ಟ್ ಫುಡ್ ಬದಲು ಕಾರ್ನ್ ಗೆ ಆದ್ಯತೆ ನೀಡುವುದು ಉತ್ತಮ ಆಯ್ಕೆಯಾಗಿದೆ. ಪಿಷ್ಠದ ಉತ್ತಮ ಮೂಲವಾಗಿದೆ.