ಲವಂಗ ಖಾರದಿಂದ ಕೂಡಿದ ಪರಿಮಳಯುಕ್ತವಾದ ಸಾಂಬಾರ ಪದಾರ್ಥ. ಏಲಕ್ಕಿ, ಮೆಣಸು, ದಾಲ್ಚಿನಿ, ಚಕ್ಕೆ ಜಾಯಿಕಾಯಿ ಮುಂತಾದ ಸಾಂಬಾರ ಪದಾರ್ಥಗಳ ಗುಂಪಿಗೆ ಲವಂಗವೂ ಸೇರುತ್ತದೆ. ಅನೇಕ ವಿಧದಲ್ಲಿ ಇದು ಆರೋಗ್ಯಕ್ಕೆ ಉಪಯುಕ್ತವಾದದ್ದು. ಲವಂಗ ವನ್ನು ಮುಖ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಹಲ್ಲು ನೋವಿದ್ದರೆ ಆ ಭಾಗಕ್ಕೆ ಲವಂಗ ಇಬ್ಬರೆ ಸಾಕು ನೋವು ಕಡಿಮೆಯಾಗುತ್ತದೆ. ಮಿಟ್ರೀಸಿ ಕುಟುಂಬಕ್ಕೆ ಲವಂಗ ಸೇರಿದ್ದು, ಹಲ್ಲು ನೋವಿಗೆ ಉತ್ತಮ ಔಷಧಿ ಎಂದು ಹೇಳಲಾಗುತ್ತದೆ. ಸಾಂಬಾರ್ ಪದಾರ್ಥಗಳಲ್ಲಿ ಲವಂಗ ಹೆ್ಚಚು ಬೇಡಿಕೆ ಪಡೆದುಕೊಂಡಿದೆ. ಲವಂಗವನ್ನು ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ.

ಲವಂಗದಲ್ಲಿ ಪೋಷಕಾಂಶಗಳೆಷ್ಟು..?
ಲವಂಗದಲ್ಲಿ ಸೋಡಿಯಂ, ಕ್ಯಾಲ್ಸಿಯಂ, ಪೊಟಾಶಿಯಂ , ಕಬ್ಬಿಣದಂತದ ಲವಣಗಳು , ಹೈಡ್ರೋಕ್ಲೋರಿಕ್ ಆಮ್ಲ, ವಿಟಮಿನ್ ಎ ಮತ್ತು ಸಿ ಗಳು ಹೇರಳವಾಗಿ ಇರುತ್ತವೆ. ಹಾಗಾಗಿ ಲವಂಗವನ್ನು ಔಷಧೀಯ ಗುಣಗಳನ್ನಾಗಿ ಬಳಕೆ ಮಾಡಲಾಗುತ್ತದೆ. ಲವಂಗದೆಣ್ಣೆ ಹಲ್ಲು ನೋವಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಹತ್ತಿಗೆ ಒಂದೆರೆಡು ಹನಿಗಳ ಎಣ್ಣೆಯನ್ನು ಹಾಕಿ ಹಲ್ಲು ನೋವಿರುವ ಜಾಗಕ್ಕೆ ಇಟ್ಟುಕೊಳ್ಳುವುದರಿಂದ ಕೆಲವೇ ನಿಮಿಷಗಳಲ್ಲಿ ನೋವು ಇಲ್ಲವಾಗುತ್ತದೆ.
ನೀರಿಗೆ 2-3 ಹನಿ ಲವಂಗ ಎಣ್ಣೆ ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.

ಗಾಯದ ನೋವನ್ನು ಕಡಿಮೆ ಮಾಡಲು, ಆ ಜಾಗಕ್ಕೆ ಸೋಂಕು ರೋಗಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ಉಸಿಪಾಟಕ್ಕೆ ಸಂಬಂಧಿಸಿದಿ ತೊಂದರೆಗಳ ನಿವಾರಣೆ ಮಾಡಲು,. ಅಸ್ತಮಾ, ಬ್ರಾಹ್ಮೆಟಿನ್, ಸೈನೋಸೈಟಿಸ್ , ಹೊಟ್ಟೆಯ ಅವ್ಯವಸ್ಥೆಗಳಾದ ಅಜೀರ್ಣ , ಮಲಬದ್ಧತೆ ವಾಯು ನಿವಾರಿಸುವಲ್ಲಿ ಲವಂಗದೆಣ್ಣೆ ಬಳಕೆ ಮಾಡಲಾಗುತ್ತದೆ.
ಅಲ್ಲದೇ ಹರಳು ಉಪ್ಪು ಹಾಗೂ ಲವಂಗದ ಎಣ್ಣೆಯನ್ನು ಸೇರಿಸಿ ಹಣೆಯ ಮೇಲೆ ಲೇಪಿಸುವುದರಿಂದ ಹಲ್ಲುನೋವು ಇಲ್ಲದಂತಾಗುತ್ತದೆ. ಎಳ್ಳೆಣ್ಣೆ ಮತ್ತು ಲವಂಗದೆಣ್ಣೆಯ ಮಿಶ್ರಣವನ್ನು ಕಿವಿಯೊಳಗೆ ಹಾಕುವುದರಿಂದ ಕಿವಿನೋವು ಗುಣವಾಗುತ್ತದೆ.
ಹೊಟ್ಟೆ ಸಮಸ್ಯೆಯನ್ನು ಪರಿಹರಿಸುತ್ತದೆ
ಬೇಧಿ ಉಂಟಾಗುತ್ತಿದ್ದರೆ ಲವಂಗ ತಿಂದರೆ ಸಾಕು ತಕ್ಷಣ ಕಡಿಮೆಯಾಗುತ್ತದೆ. ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ತಲೆಸುತ್ತು ಈ ರೀತಿ ಕಂಡು ಬಂದರೆ ಲವಂಗ ತಿಂದರೆ ಸಾಕು ಕಡಿಮೆಯಾಗುತ್ತದೆ. ಅಜೀರ್ಣ ಸಮಸ್ಯೆ ಇರುವವರು ಊಟದ ನಂತರ ಒಂದು ಲವಂಗ ತಿಂದರೆ ಸಾಕು ಆ ಸಮಸ್ಯೆಯಿಂದ ಪರಿಹಾರ ಹೊಂದಬಹುದು.
ಸಂಧಿ ನೋವಿಗೆ ಪರಿಹಾರ!
ಲವಂಗ ತಿಂದರೆ ಸಂಧಿನೋವು ನಿವಾರಣೆಯಾಗುತ್ತದೆ. ಇದನ್ನು ಪೇಸ್ಟ್ ಮಾಡಿ ಭಾಗಕ್ಕೆ ಹಚ್ಚುವುದರಿಂದ ಸಂಧಿ ನೋವು ಕಡಿಮೆಯಾಗುತ್ತದೆ.
ಗಾಯವನ್ನು ಗುಣಪಡಿಸಲು ಲವಂಗ ಪ್ರಮುಖ ಪಾತ್ರವಹಿಸುತ್ತದೆ. ತ್ವಚೆ ಗಾಯದಿಂದ ಊದಿಕೊಂಡಿದ್ದರೆ ಆ ಭಾಗಕ್ಕೆ ಇದರ ಪೇಸ್ಟ್ ನ್ನು ಹಚ್ಚಿದರೆ ಸಾಕು ಊತ ಕಡಿಮೆಯಾಗುತ್ತದೆ. ಗಾಯ ಕೂಡಾ ಗುಣಮುಖವಾಗುತ್ತದೆ. ಅಲ್ಲದೇ ಹುಳುಕು ಹಲ್ಲಿನ ತೊಂದರೆ ಇರುವವರು ಲವಂಗವನ್ನು ಪುಡಿ ಮಾಡಿ, ಹುಳುಕಾಗಿರುವ ಜಾಗದಲ್ಲಿ ಇರಿಸಿಕೊಳ್ಳಬೇಕು. ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರೆ ಲವಂಗದ ಸೇವನೆಯಿಂದ ಕಫ ದೂರವಾಗುತ್ತದೆ. ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಹೆಚ್ಚು ಉಪಯುಕ್ತವಾಗಿದೆ.
ಬ್ಯಾಕ್ಟೇರಿಯಾ ಕೊಲ್ಲುವುದು..
ಲವಂಗದಲ್ಲಿ ಸೂಕ್ಷ್ಮಾಣು ಜೀವಿ ವಿರೋಧಿ ಗುಣಗಳು ಇರುವುದರಿಂದ ಇದು ಸೆಳೆತ, ನಿಶ್ಯಕ್ತಿ ಹಾಗೂ ಭೇದಿ ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಲವಂಗದಿಂದ ಬಾಯಿಯ ಆರೋಗ್ಯವನ್ನು ಕಾಪಾಡಬಹುದು. ಲವಂಗದಲ್ಲಿ ಬ್ಯಾಕ್ಟೇರಿಯಾ ಬೆಳವಣಿಗೆ ತಡೆಗಟ್ಟುತ್ತದೆ. ಇದರಿಂದ ಹಲ್ಲು ಮತ್ತು ವಸಡಿನ ಸಮಸ್ಯೆ ಕಡಿಮೆಯಾಗುತ್ತದೆ. ಚಹಾ ಮರದ ಎಮ್ಣೆ ಸಹಿತ ಇತರ ಕೆಲವೊಂದು ಗಿಡಮಬಲಿಕೆಗಳೊಂದಿಗೆ ಲವಂಗ ಬಳಸದಂತೆ ಆಯುರ್ವೇದವು ಹೇಳುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಲವಂಗ!
ಮಧುಮೇಹ ನಿಯಂತ್ರಣಕ್ಕೆ ಲವಂಗ ಪ್ರಮುಖ ಪಾತ್ರ ವಹಿಸುತ್ತದೆ. ಲವಂಗವನ್ನು ಬೆರೆಸಿ ಸೇವಿಸುವ ಮೂಲಕ ಟೈಪ್ ೧ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿರುವ ಕೆಂಪು ಪೋಷಕಾಂಶಗಳು ಇನ್ಸೂಲಿನ್ ನಂತೆ ಕಾರ್ಯ ನಿರ್ವಹಿಸುತ್ತವೆ. ರಕ್ತದಲ್ಲಿ ನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.
ಮೂಳೆಗಳನ್ನು ಬಲಿಷ್ಠಗೊಳಿಸಲು!
ಮೂಳೆಗಳನ್ನು ಬಲಿಷ್ಠಗೊಳಿಸಲು ಲವಂಗ ಸಹಾಯ ಮಾಡುತ್ತದೆ. ಲವಂಗದಲ್ಲಿ ಯುಜೆನೋ ಎಂಬ ಅಂಶವಿದೆ. ಇದು ಮೂಳೆಯ ಸಾಂದ್ರತೆ ಮತ್ತು ಬಲ ಹೆಚ್ಚಿಸುವಲ್ಲಿ ಸಹಾಯಕಾರಿ. ಇದರಿಂದ ಮೊಳೆಗಳು ಬೇಗನೆ ಮುರಿಯುವುದು ಹಾಗೂ ಬಿರುಕು ಬಿಡುವುದನ್ನು ತಪ್ಪಿಸಬಹುದು. ಮೂಳೆಗಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಬೇಕಾಗಿರುವ ಮ್ಯಾಂಗನೀಸ್ ಕೂಡಾ ಇದರಲ್ಲಿದೆ.

ಸೋಂಕಿನಿಂದ ರಕ್ಷಿಸುತ್ತದೆ..!
ಹಣೆಯ ಮೇಲಿರುವ ಟೊಳ್ಳು ಭಾಗದಲ್ಲಿ ಸೋಂಕು ಉಂಟಾಗಿ ಮೂಗು ಕಟ್ಟಿಕೊಂಡತೆ ಅನುಭವವಾಗಬಹುದು. ಆಗ ತಲೆನೋವು ವಿಪರೀತ ವಾಗಿರುತ್ತದೆ. ಆ ಸಮಯದಲ್ಲಿ ೧ ಕಪ್ ಬಿಸಿಯಾದ ಲವಂಗದ ಪುಡಿ ಬೆರೆಸಿ, ಟೀ ಕುಡಿಯಿರಿ. ಬೆಳಗಿನ ಉಪಹಾರದ ಬಳಿಕ ಇನ್ನೊಂದು ಲೋಟ ಕುಡಿಯುವ ಮೂಲಕ ಸೈನಸ್ ಸೋಂಕು ನಿವಾರಣೆ ಮಾಡಬಹುದು.