ಅಡುಗೆ ಮನೆಯಲ್ಲಿ ಕಂಡು ಬರುವ ಮಸಾಲಾ ಪದಾರ್ಥಗಳಲ್ಲಿ ಜೀರಿಗೆ ಕೂಡಾ ಒಂದು. ನಿಮ್ಮ ದೇಹದ ತೂಕ ಇಳಿಸುವುದರಿಂದ ಹಿಡಿದು, ಹಲವು ಆರೋಗ್ಯಕರ ಪ್ರಯೋಜನಗಳನ್ನು ಕಾಣಬಹುದು. ಅಡುಗೆಗೆ ಸ್ವಾದ ಹೆಚ್ಚಿಸುವ ಜೀರಿಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಜೀರ್ಣ ಸಮಸ್ಯೆ ಇರುವವವರು ಜೀರಿಗೆಯನ್ನು ಸೇವನೆ ಮಾಡಬೇಕು. ಥೈಮಾಲ್ ಎಂಬ ಸಂಯುಕ್ತ ಇದ್ದು, ಎಣ್ಣೆಯ ಅಂಶಗಳು ಸೇರಿವೆ. ಇವು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಅಜೀರ್ಣ ಸಮಸ್ಯೆ ಇರುವವರು ಇದನ್ನು ಒಮ್ಮೆ ಟ್ರೈ ಮಾಡಿ. ಉಪಯೋಗಗಳನ್ನು ಇಲ್ಲಿ ತಿಳಿಸಲಾಗಿದೆ.

ಜೀರಿಗೆ ಚಹಾ ತಯಾರಿಸುವುದು ಹೇಗೆ..?
1 ಕಪ್ ನೀರು ತೆಗೆದುಕೊಳ್ಳಬೇಕಪ. 1 ಟೇಬಲ್ ಸ್ಪೂನ್ ಜೀರಿಗೆಯಷ್ಟು ಕಾಳುಗಳನ್ನು ಹಾಕಿ ಎರಡನ್ನು ಚೆನ್ನಾಗಿ ಕುದಿಸಿ. ನಂತರ ಸೋಸಿ ಒಂದು ದಿನಕ್ಕೆ ಮೂರು ಬಾರಿ ಈ ನೀರನ್ನು ಸೇವಿಸಬೇಕು.
ಮಲಬದ್ಧತೆ ನಿವಾರಣೆಗೆ ಜೀರಿಗೆ ಕಾಳುಗಳನ್ನು ಬಳಸಲಾಗುತ್ತದೆ. ಇದು ಜೀರ್ಣಾಂಗ ವ್ಯೂಹದ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಪೈಲ್ಸ್ , ಮೂಳೆರೋಗ, ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಮಲಬದ್ಧತೆಯ ನಿವಾರಣೆಗಾಗಿ 1 ಟೇಬಲ್ ಸ್ಪೂನ್ ಜೀರಿಹೆ ಕಾಳನ್ನು ತೆಗೆದುಕೊಂಡು ಚೆನ್ನಾಗಿ ಹುರಿಯಿರಿ. ಬಳಿಕ ಮಿಕ್ಸರ್ ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಬೇಕು. ಅದಕ್ಕೆ ಹಸಿ ಜೇನುತುಪ್ಪ ಸೇರಿಸಿ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಅಸ್ತಮಾ ನಿವಾರಣೆಗೆ
ಜೀರಿಗೆಯಲ್ಲಿ ಆ್ಯಂಟಿ ಆಂಕ್ಸಿಡೆಂಟ್ ಗಳು ಹಾಗೂ ಬ್ಯಾಕ್ಟೇರಿಯಲ್ ಮತ್ತು ಆ್ಯಂಟಿ ಇಂಪ್ಲಾಮೇಟರಿ ಗುಣ ಲಕ್ಷಣಗಳಿಂದ ಯಾವುದೇ ಶೀತ ಹಾಗೂ ಕೆಮ್ಮಿದೆ ಮನೆ ಮದ್ದಾಗಿದೆ. ಮಾಂಸ ಖಂಡಗಳನ್ನು ಗುಣ ಪಡಿಸಿ, ಸೋಂಕುಗಳ ವಿರುದ್ಧ ಹೋರಾಡದಂತೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ತಯಾರಿಸುವುದು ಹೇಗೆ?
1 ಟೇಬಲ್ ಸ್ಪೂನ್ ಚಮಚದಷ್ಟು ಜೀರಿಗೆ ಕಾಳುಗಳನ್ನು 1 ಗ್ಲಾಸ್ ನೀರಿನಲ್ಲಿ ಹಾಕಿ. ಈ ಮಿಶ್ರಣವನ್ನು ಸ್ಟವ್ ಮೇಲೆ ಚೆನ್ನಾಗಿ ಕುದಿಸಿ. ಕುದಿಯುತ್ತಿರುವಾಗ ಸಣ್ಣಗೆ ಹೆಚ್ಚಿದ ಶುಂಠಿಯನ್ನು ಹಾಕಿ ಮತ್ತೊಮ್ಮೆ ಕುದಿಸಿ. ಇದನ್ನು ಸೋಸಿ1 ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿ.

ಗರ್ಭಿಣಿ ಮಹಿಳೆಯರಿಗೆ!
ಜೀರಿಗೆ ಕಾಳುಗಳಲ್ಲಿನ ಗುಣ ಲಕ್ಷಣಗಳು ಗರ್ಭಿಣಿ ಮಹಿಳೆಯರಲ್ಲಿ ಮಲಬದ್ಧತೆಯನ್ನು ನಿವಾರಿಸಿ ಜೀರ್ಣ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸುತ್ತದೆ. ಜೀರಿಗೆ ಕಾಳುಗಳು ಗರ್ಭಾವಸ್ಥೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ವಾಕರಿಕೆ, ವಾಂತಿ ಸಮಸ್ಯೆಗಳನ್ನು ನಿವಾರಿಸುತ್ತದೆ.
ನಿದ್ರಾಹೀನತೆ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ಎಲ್ಲರೂ ನಿದ್ರೆಯ ಗುಣಮಟ್ಟವನ್ನು ಎದುರಿಸುತ್ತಾರೆ. ಇದರಲ್ಲಿ ಮೆಲಟೋನಿನ್ ಎಂಬ ಸಂಯುಕ್ತ ಸೇರಿದ್ದು, ಇದನ್ನು ಚೆನ್ನಾಗಿ ಕಿವುಚಿದಬಾಳೆ ಹಣ್ಣುಗಳ ಜತೆಗೆ ಸೇವಿಸಿದರೆ ದೇಹದಲ್ಲಿ ನಿದ್ರೆಯನ್ನು ಹೆಚ್ಚಿಸುವ ರಾಸಾಯನಿಕಗಳನ್ನು ಹೆಚ್ಚಿಸುತ್ತವೆ.
ತ್ವಚೆ ಕಾಂತಿಗಾಗಿ!
ಜೀರಿಗೆ ಕಾಳುಗಳನ್ನು ಕೂದಲಿಗೂ ಹಾಗೂ ಚರ್ಮಕ್ಕೂ ಹೆಚ್ಚು ಉಪಯುಕ್ತವಾಗಿದೆ. 1 ಟೇಬಲ್ ಚಮಚಾದಷ್ಟು ಜೀರಿಗೆ ಪುಡಿಯನ್ನು ತೆಗೆದುಕೊಂಡು 1 ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿಕೊಳ್ಳಿ. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಯವಾದ ಪೇಸ್ಚ್ ತಯಾರಿಸಿ. ಕೂದಲಿನ ಮೇಲೆ ಹಚ್ಚಿ ಸ್ವಲ್ಪ ಹೊತ್ತು. ಒಣಗಲು ಬಿಡಿ.

ಅರ್ಧ ಚಮಚ ಜೀರಿಗೆಯನ್ನು 1 ಲೀಟರ್ ನೀರಿನಲ್ಲಿ ಹಾಕಿ ಕುದಿಸಿ ಆರಿಸಿ. ಪ್ರತಿ ನಿತ್ಯ ಕುಡಿಯುವುದರಿಂದ ರಕ್ತ ಶುದ್ಧೀಯಾಗುತ್ತದೆ. 15 ರಿಂದ 20 ದಿನಗಳವರೆಗೆ ಸೇವಿಸುವುದರಿಂದ ಚರ್ಮರೋಗ ಕಡಿಮೆಯಾಗುತ್ತದೆ. ಅರ್ಧಲೋಟ ನೀರಿಗೆ ಅರ್ಥ ಚಮಚ ಜೀರಿಗೆ ಹಾಕಿ. ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ತಯಾರಿಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ.
ಒಂದು ಬೊಗಸೆ , ಹುರಿದ ಮೆಂತ್ಯಾ ಹುರಿದ ಜೀರಿಗೆ ಒಂದು ಚಮಚ ಹುರಿದ ಕಾಳು ಮೆಣಸು ಸೇರಿಸಿ ಪುಡಿ ಮಾಡಿ. ಇದನ್ನು ನೀರಿನೊಂದಿಗೆ ನಿತ್ಯ ಸೇವಿಸಿದರೆ ಸಂಧಿವಾತ ಕಡಿಮೆಯಾಗುತ್ತದೆ.
1 ಚಮಚ ಜೀರಿಗೆ ಮತ್ತು ಮೆಂತ್ಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಒಂದು ಹಿಡಿ ಮೆಂತ್ಯದ ಸೊಪ್ಪು ಮತ್ತು ತೆಂಗಿನ ಕಾಯಿ ಹಾಲಿನ ಜತೆಗೆ ಇದನ್ನು ಸೇರಿಸಿ. ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನ ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರು ಸೇರಿಸಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ.
1 ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಜಜ್ಜಿದ ಜೀರಿಗೆ ಹಾಕಿ ಕುದಿಸಿ. ಸೋಸಿ , ಇದಕ್ಕೆ ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ಬೇಕಿದ್ದರೆ ಕಾಳು ಮೆಣಸಿನ ಪುಡಿ ಸೇರಿಸಿ.
ಮಜ್ಜಿಗೆಗೆ ಜೀರಿಗೆ ಪುಡಿ , ಜೇನುತುಪ್ಪ ಸೇರಿಸಿ ಪ್ರತಿ ದಿನ ಸೇವಿಸಿದರೆ ಎದೆ ಹಾಲು ಅಧಿಕವಾಗುತ್ತದೆ. ಜೀರಿಗೆಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತೆ.