ಕರ್ಪೂರ ಇಲ್ಲದೇ ದೇವರ ಪೂಜೆ ಸಂಪೂರ್ಣವಾಗುವುದಿಲ್ಲ. ಕರ್ಪೂರವನ್ನು ಪೂಜೆಯಲ್ಲಿ ದೇವಾಲಯಗಳಲ್ಲಿ ಹಚ್ಚಿ ಮಂಗಳಾರತಿ ಮಾಡುತ್ತಾರೆ. ದೇವರ ಪೂಜೆಯಲ್ಲಿ ಕರ್ಪೂರವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ಕೂಡ ನಿತ್ಯ ಕರ್ಪೂರ ಹಚ್ಚುತ್ತಾರೆ. ಪ್ರತಿ ದಿನ ಕರ್ಪೂರವನ್ನು ಹಚ್ಚು ವುದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ತಿಳಿಯೋಣ.

ಕರ್ಪೂರ ದ್ವೀಪ ಹಚ್ಚುವುದರಿಂದ ಹೆಚ್ಚು ಸಾತ್ವಿಕತೆ ಸಿಗಲು ಆರಂಭವಾಗುತ್ತದೆ. ಇದೇ ಕಾರಣಕ್ಕೆ ನೈವೀದ್ಯ ಅರ್ಪಿಸಿದ ಕಾರಣ, ನಂತರ ಕರ್ಪೂರದ ದ್ವೀಪ ಹಚ್ಚುತ್ತಾರೆ.
ದೇವರ ಮುಂದೆ ಕರ್ಪುರ ಹಚ್ಚುವುದರಿಂದ ಕೋಪ, ಕೆಟ್ಟತನ ಎಂಬುವುದು ಉಳಿಯುವುದಿಲ್ಲ. ನಿತ್ಯ ಮನೆಯಲ್ಲಿ ಕರ್ಪೂರದ ದ್ವೀಪ ಹಚ್ಚುವುದರಿಂದ ಅಶ್ವಮೇಧ ಯಾಗದ ಪುಣ್ಯವು ಸೀಗುತ್ತದೆ.
ದೇವರಿಗೆ ಕರ್ಪೂರವನ್ನು ಹಚ್ಚಿದಾಗ ಅದರಿಂದ ಬರುವ ಹೊಗೆಯಿಂದ ಅಸ್ತಮಾ. ಮನಸ್ಸಿನ ದುಗುಡ, ಬೆಚ್ಚಿ ಬೀಳುವಿಕೆ , ಕೀಲುಗಳ ನೋವು ಮೊದಲಾದ ಕಾಯಿಲೆಗಳನು ದೂರ ಆಗುತ್ತವೆ.

ದೇವರಿಗೆ ಕರ್ಪುರವನ್ನು ಹಚ್ಚಿದಾಗ ಅದರಿಂದ ಬರುವ ಹೊಗೆಯ ವಾಸನೆಯಿಂದ ಅಪಸ್ಮಾರ, ಉನ್ಮಾದ ಮತ್ತು ಸಂಧಿವಾತದ ಸಮಸ್ಯೆಗಳು ದೂರ ಆಗುತ್ತವೆ.
ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ಏನೆಲ್ಲ ಲಾಭ?
ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ಅದರ ಜ್ವಾಲೆಯಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿಯು ದೂರ ಆಗುತ್ತದೆ. ಕರ್ಪುರವನ್ನು ಹಚ್ಚಿದಾಗ ಆದರಿಂದ ಬರುವ ಸುವಾಸನೆ ಹಾಗೂ ಹೊಗೆಯಿಂದ ಮನೆಯಲ್ಲಿ ಇರುವ ಕೀಟಾನುಗಳು ಹೊರ ಹೋಗುತ್ತವೆ. ಹಾಗಾಗಿ ಪ್ರತಿ ದಿನ ಮನೆಯಲ್ಲಿ ಕರ್ಪೂರವನ್ನು ಹಚ್ಚಬೇಕು.

ಕರ್ಪೂರ ಕೇವಲ ಪೂಜೆಗೆ ಮಾತ್ರ ಅಲ್ಲದೇ ನಮ್ಮ ಆರೋಗ್ಯವನ್ನು ಕೂಡಾ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರ್ಪುರವನ್ನು ನೀರಿನಲ್ಲಿ ಹಾಕಿ ಕರಗಿಸಿ ಆ ನೀರನ್ನು ಸುಟ್ಟು ಗಾಯಗಳಿಗೆ, ತುರಿಕೆ , ಅಲರ್ಜಿ ಗಳಿಗೆ ಹಾಕಿದರೆ ಬೇಗ ಗುಣ ಮಾಗುತ್ತದೆ.
ಕರ್ಪೂರ ದಲ್ಲಿ ಆಂಟಿ ಸೆಪ್ಟಿಕ್ , ಆಂಟಿ ಫಂಗಲ್ ಗುಣಗಳು ಹೆಚ್ಚಾಗಿದ್ದು, ಮುಖದ ಮೊಡವೆಗಳನ್ನು ನಿವಾರಿಸುತ್ತದೆ. ಕರ್ಪುರದ ಎಣ್ಣೆಯನ್ನು ಕೀಲುಗಳಿಗೆ ಹಚ್ಚುವುದರಿಂದ ಕೀಲುಗಳ ಸ್ನಾಯುಗಳ ಸೆಳೆತ ಕಡಿಮೆಯಾಗುತ್ತದೆ. ಹೀಗಾಗಿ ಮನೆಯಲ್ಲಿ ನಿತ್ಯ ದೇವರಿಗೆ ಕರ್ಪುರವನ್ನು ಹಚ್ಚಿ ಅದರ ಹೊಗೆ ಆರೋಗ್ಯಕ್ಕೆ ಒಳ್ಳೆಯದು.
ಸುಟ್ಟ ಗಾಯಗಳಿಗೆ ಚಿಕಿತ್ಸೆ
ಕರ್ಪೂರವನ್ನು ಸುಟ್ಟ ಗಾಯಗಳಿಗೆ ಹಚ್ಚಲಾಗುತ್ತದೆ. ಗಾಯಗಳನ್ನು ಬೇಗ ಗುಣಪಡಿಸಲು ಕರ್ಪೂರ ಸಹಾಯ ಮಾಡುತ್ತದೆ. ಗಾಯಗಳಿಂದಾಗಿ ನೋವು ಕಿರಿ ಕಿರಿಯನ್ನು ನಿವಾರಿಸುತ್ತದೆ.
ಜ್ಞಾನಪ ಶಕ್ತಿ ಹೆಚ್ಚಿಸುತ್ತದೆ
ಕರ್ಪೂರವನ್ನು ಹಚ್ಚಿದಾಗ ಅದರಲ್ಲಿ ಬರುವ ಹೊಗೆ ವಾತಾವರಣದಲ್ಲಿರುವ ಬ್ಯಾಕ್ಟೇರಿಯಾ ಸಣ್ಣ ಕ್ರಿಮಿಗಳು ವೈರಸ್ ಗಳು ಎಲ್ಲವೂ ಕೂಡಾ ನಾಶವಾಗುತ್ತವೆ. ದೇವರಿಗೆ ಕರ್ಪುರವನ್ನು ಹಚ್ಚುವುದರಿಂದ ಅದರಲ್ಲಿ ಬರುವ ಹೊಗೆ ನಮ್ಮ ಜ್ಞಾಪಕಶಕ್ತಿ ಹೆಚ್ಚಿಸುತ್ತದೆ.
ಚರ್ಮದ ಕಾಯಿಲೆ ನಿವಾರಣೆ
ಕರ್ಪೂರವನ್ನು ದೇವರಿಗೆ ಹಚ್ಚಿ ಪೂಜಿಸುವುದರಿಂದ ಚರ್ಮದ ಕಾಯಿಲೆಗಳು ಗುಣವಾಗುತ್ತದೆ. ಅಪಸ್ಮಾರ , ಅತಿಸಾರ ಹಾಗೂ ಸಂಧಿವಾತದಂತಹ ಸಮಸ್ಯೆ ದೂರ ಆಗುತ್ತವೆ.
ಸೊಳ್ಳೆಗಳ ನಿವಾರಣೆ
ಮನೆ ಕಚೇರಿಯ ಬಾಗಿಲು ತೆರೆದಿದ್ದರೆ ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ, ಅಂಥ ಸಂದರ್ಭದಲ್ಲಿ ಅದನ್ನು ಓಡಿಸಲು ರಾಸಾಯನಿಕ ಔಷಧಿಗಳ ಮೊರೆ ಹೋಗಬೇಕಾಗುತ್ತದೆ. ಆದ್ರೆ ಕರ್ಪೂರ ಹಚ್ಚಿದರೆ ಸೊಳ್ಳೆ ನಿವಾರಣೆಯಾಗುತ್ತದೆ.
ಅಲರ್ಜಿ ನಿವಾರಣೆ..
ಅಲರ್ಜಿಯಿಂದ ಉಂಟಾಗುವ ಕೆಲವು ವಿಧವಾದ ಆಯಾಸಗಳಿಗೆ ಕರ್ಪುರ ಉತ್ತಮ ಔಷಧಿ. ಕರ್ಪೂರ ಚೈಲ, ಲವಣ. ಬೆರೆಸಿದ ಎಳ್ಳೆಣ್ಣೆಯನ್ನು ಎದೆಯ ಮೇಲೆ , ಬೆನ್ನಿನ ಮೇಲೆ ಮಸಾಜ್ ಮಾಡಿ, ನಂತರ ಬಿಸಿ ನೀರಿನ ಶಾಖ ಕೊಡುವುದರಿಂದ ಆಯಾಸ ದೂರವಾಗುತ್ತದೆ.
ಹಲ್ಲು ನೋವು, ಬಾವು ಕಡಿಮೆ
ವೀಳ್ಯದೆಲೆಯಲ್ಲಿ ಗೋಡಂಬಿ , ಲಂವಂಗ , ಪಚ್ಚ ಕರ್ಪೂರ ಬೆರೆಸಿ ಜಗಿದು ಸೇವಿಸಿದರೆ ಹಲ್ಲು ನೋವು , ಬಾವು ಕಡಿಮೆಯಾಗುತ್ತದೆ. ನಿಮ್ಮ ಪಾದಗಳು ಬಿರುಕು ಉಂಟಾದರೆ ಪ್ರತಿ ದಿನ ಕರ್ಪೂರ ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ ೫ ನಿಮಿಷ ಪಾದಗಳನ್ನು ನೆನೆಸಿ, ನಂತರ ಸ್ಕ್ರಬ್ ಮಾಡಿ
ಹಂದಿ ಜ್ವರದ ವೈರಾಣು ನಾಶ
ಪಚ್ಚ ಕರ್ಪೂರವನ್ನು ಮತ್ತು ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ, ಕರವಸ್ತ್ರದಲ್ಲಿಟ್ಟು ೨ ರಿಂದ ಮೂರು ಗಂಟೆಗೊಮ್ಮೆ ಅದರ ಪರಿಮಳ ತೆಗೆದುಕೊಳ್ಳುತ್ತಿದ್ದರೆ ಹಂದಿ ಜ್ವರದ ವೈರಾಣುಗಳು ನಾಶವಾಗುವ ಸಾಧ್ಯತೆ ಇದೆ.
ತುರಿಕೆ ಸಮಸ್ಯೆಗೆ
ನಿಮಗೆ ತುರಿಕೆ ಸಮಸ್ಯೆಯಾಗುತ್ತಿದ್ದರೆ ಮತ್ತು ಚರ್ಮದ ಮೇಲೆ ಚಿಕ್ಕ ಗುಳ್ಳೆ ಗಳನ್ನು ವಾಸಿ ಮಾಡಲು ಕರ್ಪುರ ಪ್ರಮುಖ ಪಾತ್ರ ವಹಿಸುತ್ತದೆ. ಕರ್ಪುರದ ಪೇಸ್ಟ್ ತಯಾರಿಸಿ, ಅದನ್ನು ತುರಿಕೆ ಇರುವ ಕಡೆ ಹಚ್ಚಬೇಕು.
ತಲೆ ನೋವು ಪರಿಹಾರ
ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆ ನೋವು ಪರಿಹಾರವಾಗುತ್ತದೆ.
ಗರ್ಭದಾರಣೆಯ ಸಮಯದಲ್ಲಿ
ಮನೆಯಲ್ಲಿ ಮಾಡಿದ ಕರ್ಪೂರವನ್ನು ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಸೆಳೆತದ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ. ಸಾಸಿವೆ ಎಣ್ಣೆ , ಕೊಬ್ಬರಿ ಎಣ್ಣೆ, ತೆಗೆದುಕೊಂಡು ಕರ್ಪುರವನ್ನು ಸೇರಿಸಿ ಬಿಸಿ ಮಾಡಿ ತಣ್ಣಗಾದ ಮೇಲೆ ಕಾಲುಗಳ ಮೇಲೆ ಮಸಾಜ್ ಮಾಡುವುದರಿಂದ ತ್ವರಿತ ಸುಲಭವಾಗಿ ನಿವಾರಿಸಬಹುದು.
ಕೂದಲು ಉದುರುವ ಸಮಸ್ಯೆಗೆ ಪರಿಹಾರ
ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರ ಸೇರಿಸಿ, ಬಿಸಿ ಮಾಡಿ ತಣ್ಣಗಾದ ಮೇಲೆ ಹಚ್ಚಿಕೊಂಡರೆ ತಲೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.