ಅನೇಕ ಜನರು ತರಕಾರಿಗಳಲ್ಲಿ ಬೆಂಡೆಕಾಯಿಯನ್ನು ಬಳಸುವುದುಂಟು. ಇದು ಹೆಚ್ಚಿನ ಮನೆಗಳಲ್ಲಿ ತಯಾರಿಸುವ ತರಕಾರಿ. ಇದು ಕಡಿಮೆ ಸಮಯ ತೆಗೆದುಕೊಳ್ಳುವುದಷ್ಟೇ ಅಲ್ಲ. ರುಚಿಯ ವಿಷಯದಲ್ಲೂ ಎತ್ತಿದ ಕೈ. ಆಯುರ್ವೇದದ ಪ್ರಕಾರ, ಬೆಂಡೆಕಾಯಿ ನೈಸರ್ಕಿಗವಾಗಿ ತಂಪಾಗಿಸುವ ಗುಣ ಹೊಂದಿದೆ. ಚರ್ಮದ ಮೇಟೋಗ್ರಂಥಿಗಳ ಸ್ರಾವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನೇಕ ಸೋಂಕನ್ನು ತಡೆಗಟ್ಟುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ.

ಬೆಂಡೆಕಾಯಿ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿಗೆ ಇಲ್ಲಿದೆ ಮಾಹಿತಿ.
ಪೋಷಕಾಂಶಗಳು ಅಧಿಕವಾಗಿವೆ!
ಬೆಂಡೆಕಾಯಿಯಲ್ಲಿ ಪೋಷಕಾಂಶಗಳು ಸಮೃದ್ದವಾಗಿದೆ. ಇದರಲ್ಲಿ ಕ್ಯಾಲ್ಸಿಯಂ , ಕಬ್ಬಿಣ, ಪೊಟ್ಯಾಶಿಯಂ , ಆಂಟಿ ಆಕ್ಸಿಡೆಂಟ್ ಗಳಿದ್ದು, ಇದು ದೇಹದ ಸಂಪೂರ್ಣ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ನಿಮ್ಮನ್ನು ಶಕ್ತಿಯುತಗೊಳಿಸುತ್ತದೆ..!
ಬೆಂಡೆಕಾಯಿ ಪ್ರತಿದಿನ ದೊರಕಿದರೂ, ಇದರ ನಿಜವಾದ ಸ್ವಾದ ಬೇಸಿಗೆಯಲ್ಲಿ ಮಾತ್ರವಿರುತ್ತದೆ. ಅಂದರೆ ಬೇಸಿಗೆಯಲ್ಲಿ ಜನರು ಹೆಚ್ಚು ದಣಿದಿರುತ್ತಾರೆ. ಆಯಾಸಗೊಂಡಿರುತ್ತಾರೆ. ಅಂತಹ ಸಮಯದಲ್ಲಿ ಬೆಂಡೆಕಾಯಿಯಲ್ಲಿ ಪೋಷಕಾಂಶಗಳು ಹೆಚ್ಚಾಗಿರುವುದರಿಂದ ಆಯಾಸವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.
ಡಯಾಬಿಟಿಸ್ ಇರುವವರಿಗೆ ಬೆಂಡೆಕಾಯಿ ಅತ್ಯುತ್ತಮ ಮದ್ದಾಗಿದೆ. ಬೆಂಡೆಕಾಯಿಯನ್ನು ಕ್ರಮವಾಗಿ ಆಹಾರದಲ್ಲಿ ಬಳಸಿದರೆ, ದೇಹಕ್ಕೆ ತಂಪು, ಹೊಟ್ಟೆಯ ಉರಿ ನಿವಾರಣೆಯಾಗುತ್ತದೆ. ಕಿಡ್ನಿ ಆರೋಗ್ಯಕ್ಕೂ ಬೆಂಡಂಕಾಯಿ ಅತ್ಯತ್ತಮ ಎಂದು ಹೇಳಲಾಗುತ್ತದೆ. ಮಲಬದ್ಧತೆ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ತಲೆ ಚರ್ಮದಲ್ಲಿ ತುರಿಕೆ ಇದ್ದರೆ ನಿಮ್ಮ, ಕೂದಲು ಡ್ರೈ ಆಗಿದ್ದರೆ, ಬೆಂಡೆಕಾಯಿ ಬೆಯಿಸಿದ ನೀರಿನಿಂದ ನಿಮ್ಮ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ. ಇದ್ರಿಂದ ತಲೆಯ ತೇವಾಂಶ ಹೆಚ್ಚುವುದಲ್ಲದೇ, ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.
ದೃಷ್ಟಿದೋಷ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಂಡೆಕಾಯಿ ದೇಹದಲ್ಲಿ ಇಮ್ಯೂನಿಟಿ ಸಿಸ್ಟಮ್ ಹೆಚ್ಚಿಸುವಲ್ಲಿ ನೆರವಾಗುತ್ತದೆ.
ತೂಕವನ್ನು ನಿಯಂತ್ರಿಸುತ್ತದೆ.
ಜನರು ತೂಕವನ್ನು ಹೆಚ್ಚಿಸಿ ತೊಂದರೆಗೆ ಒಳಗೊಗುತ್ತಾರೆ. ಈ ಸಂದರ್ಭದಲ್ಲಿ ಬೆಂಡೆಕಾಯಿ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಹೆಚ್ಚುವರಿ ಕ್ಯಾಲೋರಿಯನ್ನು ಸುಡುವಲ್ಲಿ ನೆರವಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ!
ಬೆಂಡೆಕಾಯಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಪ್ರತಿ ದಿನ ಸೇವಿಸುವುದರಿಂದ ಯಾವುದೇ ಕೊಬ್ಬು ಶೇಖರಣೆಯಾಗುವುದಿಲ್ಲ. ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಂಡೆಕಾಯಿ ಕೇವಲ ಪಲ್ಯ, ಭರ್ತಾ, ವಿವಿಧ ಖಾದ್ಯಗಳನ್ನು ತಯಾರಿಸಲು ಮಾತ್ರ ಸೀಮಿತವಾಗಿಲ್ಲ. ಬೆಂಡೆಕಾಯಿ ನೀರು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಒಂದು ಗ್ಲಾಸ್ ಬೆಂಡೆಕಾಯಿ ಜ್ಯೂಸ್ ನಲ್ಲಿ 6 ಗ್ರಾಂ ಕಾರ್ಬೋಹೈಡ್ರೇಟ್ ಗಳು, 80 ಗ್ರಾಂ ಫೋಲೇಟ್, 3 ಗ್ರಾಂ ಫೈಬರ್ ಮತ್ತು 2 ಗ್ರಾಂ ಪ್ರೋಟೀನ್ ಇದೆ,
ಬೆಂಡೆಕಾಯಿ ಜ್ಯೂಸ್ ತಯಾರಿಸುವುದು ಹೇಗೆ..?
5-6 ಮಧ್ಯಮ ಗಾತ್ರದ ಬೆಂಡೆಕಾಯಿ ತೆಗೆದುಕೊಂಡು. ಕತ್ತರಿಸಿರಿ. ನಂತರ ಇದನ್ನು ಬಟ್ಟಲಿನಲ್ಲಿ ನೆನೆಯಿಸಿ. ರಾತ್ರಿಯಿಡೀ ಅಥವಾ 4 ರಿದಂ 5 ಗಂಟೆಗಳ ಕಾಲ ನೆನೆಯಬಹುದು. ನಂತರ ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ.
ಯಾವಾಗ ಸೇವಿಸಬೇಕು?
ತಜ್ಞರ ಪ್ರಕಾರ, ಬೆಳಿಗಿನ ಉಪಾಹಾರ ಸೇವಿಸುದಕ್ಕಿಂತಲೂ ಮುನ್ನ ಸೇವಿಸಬೇಕು.

ಚರ್ಮಕ್ಕಾಗಿ ಬೆಂಡೆಕಾಯಿಯ ಆರೋಗ್ಯ ಪ್ರಯೋಜನಗಳು..!
ಯಂಗ್ ಆಗಿ ಕಾಣಲು ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಬೆಂಡೆಕಾಯಿ ಚರ್ಮಕ್ಕೂ ಹೆಚ್ಚು ಪ್ರಯೋಜನಗಳನ್ನು ಒದಗಿಸುತ್ತದೆ. ವಾಸ್ತವವಾಗಿ ಸೌಂದರ್ಯ ವರ್ಧಕವಾಗಿ ಬೆಂಡೆಕಾಯಿ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ಸಿ , ಕ್ಯಾಲ್ಸಿಯಂ, ಫೋಲೇಟ್ ನಂತಹ ಪೋಷಕಾಂಶಗಳು ಅಧಿಕವಾಗಿವೆ. ಸುಂದರ ಹಾಗೂ ಆರೋಗ್ಯಕರ ಚರ್ಮಕ್ಕೆ ಬೆಂಡಕಾಯಿ ಸಹಾಯ ಮಾಡುತ್ತದೆ. ಅಲ್ಲದೇ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಇದರ ಫೇಸ್ ಪ್ಯಾಕ್ ನ್ನು ನೀವು ಟ್ರೈ ಮಾಡಬಹುದು.
ಫೇಸ್ ಮಾಸ್ಕ್ ಹೇಗೆ ತಯಾರಿಸುವುದು..?
ಸ್ವಲ್ಪ ಆರ್ಗನಿಕ್ ಬೆಂಡೆಕಾಯಿ ಪುಡಿ ತೆಗೆದುಕೊಂಡು ಇದನ್ನು ಒಂದು ಪಾತ್ರೆಯಲ್ಲಿ ನೀರಿನ ಜತೆ ಬೆರೆಸಿ. ಈ ಮಿಶ್ರಣ ಮೃದುವಾಗುವರೆಗೂ ಕಲಸಿ. ಈ ಪೇಸ್ಟ್ ನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು, ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೊಮ್ಮೆ ಅಥವಾ 2 ಬಾರಿ ಈ ರೀತಿ ಮಾಡಿ. ಇದ್ರಿಂದ ನಿಮ್ಮ ಮುಖದ ವ್ಯತ್ಯಾಸವನ್ನು ನೀವು ಕಾಣಬಹುದು.

ಆಂಟಿ ಏಜಿಂಗ್ ಫೇಸ್ ಪ್ಯಾಕ್ !
6 ಬೆಂಡೆಕಾಯಿಗಳನ್ನು ತೆಗೆದುಕೊಂಡು. ಮೃದುವಾಗುವರೆಗೂ 10 ನಿಮಿಷಗಳ ಕಾಲ ಒಂದು ಕಪ್ ನೀರಿನಲ್ಲಿ ಕುದಿಸಿ. ನಂತರ ನಾಲ್ಕು ಚಮಚ ಮೊಸರು, 1 ಚಮಚ ಶುದ್ಧವಾದ ಆಲಿವ್ ಎಣ್ಣೆಯನ್ನು ಸೇರಿಸಿ. ಮಿಶ್ರಣ ಮಾಡಿ. ನಂತರ ನಿಮ್ಮ ಮುಖಕ್ಕೆ ಈ ಪ್ಯಾಕ್ ನ್ನು ಹಚ್ಚಿಕೊಳ್ಳಬಹುದು.ಬಳಿಕ 15 ನಿಮಿಷಗಳ ನಂತರ ತೊಳೆಯಿರಿ. ಇದ್ರಿಂದ ನಿಮ್ಮ ಚರ್ಮ ನಯವಾಗುವುದಲ್ಲದೇ, ಹೊಳೆಯುತ್ತದೆ.
ಮೊಡವೆಗಳನ್ನು ತಡೆಗಟ್ಟುತ್ತದೆ
ಬೆಂಡೆಕಾಯಿಯಲ್ಲಿ ರುವ ಲೋಳೆ ಚರ್ಮದಲ್ಲಿ ಉಂಟಾಗುವ ಮೊಡವೆಗಳನ್ನು ತಡೆಗಟ್ಟುತ್ತದೆ. ಈ ಜೆಲ್ ಅತ್ಯಂತ ಶಕ್ತಿಯುತ ಎಂದು ಪರಿಗಣಿಸಲಾಗಿದೆ. ಇದು ಬ್ಯಾಕ್ಟೇರಿಯಾ ವಿರೋಧಿ, ಆಂಟಿ ಫಂಗಲ್ , ಉರಿಯೂತ, ನೋವು ನಿವಾರಕ ಗುಣಗಳನ್ನು ಹೊಂದಿದೆ, ಇದು ಮೊಡವೆಗಳಿಗೆ ಚಿಕಿತ್ಸೆ ನೀಡಲು ಅತ್ಯಂತ ಪ್ರಯೋಜನಕಾರಿ.