‘ಜೀವನವನ್ನು ಖುಷಿಯಿಂದ ಜೀವಿಸಿ,’ – ಸದ್ಗುರು- how to be happy in Life..? 5 tips from sadhguru

  • by

ನಾವು ಜೀವನದಲ್ಲಿ ಏನೇ ಮಾಡಿದರೂ, ಸಂತೋಷವನ್ನು ಪಡೆಯಲು ಮಾಡುತ್ತೇವೆ. ಆದರೆ ದುರಾದೃಷ್ಟವಶಾತ್ ಸಂತೋಷವಾಗಿರಲುವುದು ಕೆಲವೊಮ್ಮೆ ಕಷ್ಟಕರವಾಗುತ್ತದೆ. ಕೆಲವು ವಿಶೇಷ ಸಂದರ್ಭಗಳು ಇದ್ದಾಗ ಮಾತ್ರ ನಮಗೆ ಸಂತೋಷವಾಗುತ್ತದೆ ಎಂದು ಭಾವಿಸುತ್ತೇವೆ. ಆಗ ಮಾತ್ರ ನಾವು ಸಂತೋಷವಾಗಿರಲು ಸಾಧ್ಯ, ಆದರೆ ಅದು ಹಾಗಲ್ಲ. ಸದ್ಗುರು ಕೆಲವು ಮಾರ್ಗಗಳನ್ನು ಹೇಳಿದ್ದಾರೆ. ಈ ಮಾರ್ಗಗಳನ್ನು ಅಳವಡಿಸಿಕೊಂಡರೆ ಸಂತೋಷವಾಗಿರಬಹುದು.


happy Life, sadhguru, ಸದ್ಗುರು, ಹ್ಯಾಪಿ ಲೈಫ್

ಸಂತೋಷವಾಗಿರುವುದು ನಿಮ್ಮ ಮೂಲ ಜವಾಬ್ದಾರಿ ಎಂದು ನೆನಪಿನಲ್ಲಿಡಿ

ಮನುಷ್ಯನ ಮೊದಲ ಹಾಗೂ ಪ್ರಮುಖ ಜವಾಬ್ದಾರಿ ಎಂದರೆ ಸಂತೋಷವಾಗಿರುವುದು. ಇದು ಜೀವನದ ಮೂಲ ಅಂಶ . ನಿಮಗೆ ಸಂತೋಷ ಇಲ್ಲದೇ ಇದ್ದರೆ, ನಿಮ್ಮ ಜೀವನದಲ್ಲಿ ನೀವು ಏನು ಮಾಡಬಹುದು… ಒಮ್ಮೆ ನೀವು ಸಂತೋಷವಾಗಿದ್ದರೆ, ಇದರಿಂದ ಉತ್ತಮ ಸಾಧ್ಯತೆಗಳ ಬಾಗಿಲು ತೆರೆದುಕೊಳ್ಳುತ್ತವೆ.

ನೀವು ಏನು ಮಾಡುತ್ತೀರಿ. ನಿಮ್ಮ ಆತಂರಿಕ ಗುಣಗಳನ್ನು ಹೇಗೆ ವಿಸ್ತರಿಸುತ್ತೀರಿ ಮತ್ತು ಜಾಗೃತಗೊಳಿಸುತ್ತೀರಿ. ನೀವು ಇದನ್ನು ಇಷ್ಟಪಡುತ್ತೀರೋ, ಇಲ್ಲವೋ , ಇದು ವಾಸ್ತವ. ನಿಮಗೆ ಸಂತೋಷ ಮುಖ್ಯವಾದದ್ದು ಹೊರತು, ಪ್ರಪಂಚಕ್ಕೆ ಅಲ್ಲ. ಆದ್ದರಿಂದ ಪ್ರಪಂಚದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನೀವು ಮಾಡಬೇಕಾದ ಮೊದಲನೇಯ ಕೆಲಸವೆಂದರೆ ನಿಮ್ಮನ್ನು ನೀವೇ ಸಂತೋಷ ಜೀವಿಗಳಾಗಿ ಪರಿವರ್ತಿಸಿಕೊಳ್ಳಿ.

ಸಂತೋಷ ನಿಮ್ಮ ಮೂಲ ಸ್ವಭಾವ ಎಂದು ಭಾವಿಸಿ

ನಿಮ್ಮ ಜೀವನದಲ್ಲಿ ನೀವು ಏನು ಮಾಡುತ್ತಿದ್ದೀರಿ. ಅದು ವ್ಯವಹಾರ , ಶಕ್ತಿ ಮತ್ತು ಶಿಕ್ಷಣ ಅಥವಾ ಸೇವೆಯಾಗಲಿ ಎಲ್ಲವನ್ನು ಮಾಡುತ್ತೀರಿ. ಏಕೆಂದರೆ ಇದರಿಂದ ನಿಮಗೆ ಸಂತೋಷ ದೊರೆಯುತ್ತದೆ. ಹಾಗೇ ಭೂಮಿಯಲ್ಲಿ ನಾವು ಏನೇ ಮಾಡಿದರೂ, ಸಂತೋಷವಾಗಿರಬೇಕೆಂದ ಬಯಕೆಯಿಂದ ನಾವು ಅದನ್ನು ಮಾಡುತ್ತೇವೆ. ಏಕೆಂದರೆ ಅದು ನಮ್ಮ ಮೂಲ ಸ್ವರೂಪ. ನೀವು ಮಗುವಾಗಿದ್ದಾಗ, ಸಂತೋಷವಾಗಿರುತ್ತೀರಿ. ಅದು ನಿಮ್ಮ ಸ್ವಭಾವ. ಸಂತೋಷ ಎನ್ನುವುದು ನಿಮ್ಮೊಳಗೆ ಇದೆ.

ವಸ್ತುಗಳ ಮಹತ್ವವನ್ನು ಗುರುತಿಸಿ

ಬೆಳಿಗ್ಗೆ ಸೂರ್ಯ ತುಂಬಾ ಅದ್ಭುತವಾಗಿ ಉದಯಿಸಿರುವುದನ್ನು ಗಮನಿಸುತ್ತೀರಾ.. ಹೂವುಗಳು ಅರಳುತ್ತವೆ. ಯಾವುದೇ ನಕ್ಷತ್ರಗಳು ಕೆಳಗೆ ಬೀಳುವುದಿಲ್ಲ. ನಕ್ಷತ್ರ ಪುಂಜಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತವೆ. ಇಂದು ಇಡೀ ಬ್ರಹ್ಮಾಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ನಿಮ್ಮ ಮನಸ್ಸಿಗೆ ಬಂದ ಕೆಲವು ಆಲೋಚನೆಯ ಹುಳು ಇದು ಕೆಟ್ಟ ದಿನ ಎಂದು ನಂಬುವಂತೆ ಮಾಡುತ್ತದೆ.ಹೆಚ್ಚಿನ ಜನರು ಜೀವನದ ಬಗ್ಗೆ ಸರಿಯಾದ ಮನೋಭಾವವನ್ನು ಕಳೆದುಕೊಂಡಿದ್ದಾರೆ. ಅವರ ಮಾನಸಿಕ ಪ್ರಕ್ರಿಯೆಯು ಅಸ್ತಿತ್ವದ ಪ್ರಕ್ರಿಯೆಗಿಂತ ದೊಡ್ಡದಾಗಿದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಸೃಷ್ಠಿಯನ್ನು ಸೃಷ್ಠಿಕರ್ತನ ಸೃಷ್ಠಿಗಿಂತ ಹೆಚ್ಚು ಮುಖ್ಯವಾಗಿಸಿದ್ದೀರಿ. ಎಲ್ಲಾ ದುಃಖಗಳ ಮೂಲ.

ಮನಸ್ಸನ್ನು ಅದರ ನಿಜವಾದ ರೂಪದಲ್ಲಿ ನೋಡಿ

ನನ್ನ ಮನಸ್ಸು ಎಂದು ಕರೆಯುವುದು ಕೇವಲ ಡಸ್ಟ್ ಬಿನ್ ಇದ್ದಂತೆ. ಪ್ರತಿಯೊಬ್ಬರು ನಮ್ಮಿಂದ ಹಾದು ಹೋಗುವಾಗ ಏನನ್ನಾದರೂ ಭಾವನೆ ಮೂಡಿಸುತ್ತಾರೆ. ನೀವು ಯಾರಿಂದ ವಸ್ತುಗಳನ್ನು ಸ್ವೀಕರಿಸಬೇಕು. ಯಾರಿಂದ ಆರಿಸಬೇಕು ಎಂದು ನಿಜವಾಗಿಯೂ ತಿಳಿದಿರುವುದಿಲ್ಲ. ನಾನು ಆ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ ಎಂದಾದರೆ, ಅದೇ ವ್ಯಕ್ತಿಯನ್ನು ಎಲ್ಲರಿಗಿಂತ ಹೆಚ್ಚಾಗಿ ಸ್ವೀಕರಿಸುತ್ತೇವೆ. ಆದರೆ ಇದನ್ನು ಸರಿಯಾಗಿ ಬಳಸುವುದನ್ನು ನಿಮ್ಗೆ ಗೊತ್ತಿದ್ದರೆ, ಈ ಡಸ್ಟ್ ಬಿನ್ ಉಪಯುಕ್ತವಾಗಬಹುದು.

ನಮ್ಮ ಅನಿಸಿಕೆ ಹಾಗೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ. ಇದು ಜೀವನದಲ್ಲಿ ಮಹತ್ವ ಹೊಂದಿಲ್ಲ. ನೀವು ಬೇರೆಡೆಯಿಂದ ಸಂಗ್ರಹಿಸಿರುವ ನಿಷ್ಪ್ರಯೋಜಕ ವಿಷಯಗಳಲ್ಲಿ ಮನಸ್ಸು ಸಿಕ್ಕಿಹಾಕಿಕೊಂಡಿದೆ. ನೀವು ಅದನ್ನು ಮುಖ್ಯವೆಂದು ತಿಳಿದರೆ, ಉಪಯೋಗವಿಲ್ಲ.

ಮುಖದಲ್ಲಿ ನಗು, ಪ್ರಶಾಂತತೆ ಇರಲಿ

ನೀವು ಬೆಳಿಗ್ಗೆ ಎದ್ದಾಗ, ನೀವು ಮೊದಲು ಮಾಡಬೇಕಾಗಿರುವುದು ನಗು. ಯಾರ ಬಳಿ ಹೋಗಿ ನಗಬೇಕು ಎಂದು ಪ್ರಶ್ನೆ ನಿಮಗೆ ಕಾಡುತ್ತಿದ್ದರೆ, ಯೆಸ್ ಯಾರ ಬಳಿಯೂ ಇಲ್ಲ. ಮುಖದ ಮೇಲೆ ಕಿರುನಗೆ ಇರಲಿ. ನಮ್ಮ ಜೀವನದ ಜೀವನದ ಗುಣಮಟ್ಟ ಧರಿಸುವ ಬಟ್ಟೆಗಳಿಂದ ಹಾಗೂ ಶೈಕ್ಷಣಿಕ ಅರ್ಹತೆಗಳಿಂದ , ನಿಮ್ಮ ಕುಟುಂಬಸ್ಥರ ಹಿನ್ನೆಲೆ ಅಥವಾ ನೀವು ಹೊಂದಿರುವ ಬ್ಯಾಂಕ್ ಬ್ಯಾಲೆನ್ಸ್ ನಿಂದ ನಿರ್ಧರಿಸಲಾಗುವುದಿಲ್ಲ. ಬದಲಾಗಿ. ನಿಮ್ಮ ಜೀವನ ನಿಮ್ಮೊಳಗೆ ಎಷ್ಟು ಶಾಂತವಾಗಿದೆ ಹಾಗೂ ಸಂತೋಷದಾಯಕವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಇತರರ ಜತೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ

ಹೆಚ್ಚಿನ ಜನರು ತಮ್ಮನ್ನು ಇನ್ನೊಬ್ಬರ ಜತೆ ಹೋಲಿಸಿಕೊಳ್ಳುತ್ತಿರುತ್ತಾರೆ. ಸಂತೋಷವಾಗಿರುವುದೆಂದರೆ ಬಾಹ್ಯ ಸಂದರ್ಭಗಳನ್ನು ನೋಡುವುದಲ್ಲ. ನಾವು ಒಳಮುಖವಾಗಿ ನೋಡುವುದು ಹಾಗೂ ನಮ್ಮ ಯೋಗಕ್ಷೇಮವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ನೋಡುವ ಸಮಯ ಇದು. ನಿಮ್ಮ ಆತಂರಿಕ ಅನುಭವ ಬದಲಾದರೆ ಮಾತ್ರ ನಿಜವಾದ ಯೋಗಕ್ಷೇಮ ನಿಮಗೆ ಬರುತ್ತದೆ.ಸಂತೋಷವಾಗಿರಲು ಕಾರಣಗಳು ಬೇಕಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ