ಗರ್ಭವಾಸ್ಥೆಯ ನಂತರ ಅನೇಕ ಮಹಿಳೆಯರಿಗೆ ಕೂದಲು ಉದುರಲು ಶುರುವಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹಾರ್ಮೋನಲ್ ಬದಲಾವಣೆಯನ್ನು ಕಾಣಬಹುದು. ಇದು ಮಹಿಳೆಯರ ದೈಹಿಕ ಮೇಲೆ ಪರಿಣಾಮ ಬೀರುತ್ತದೆ. ಇದೇ ವೇಳೆ ಮಹಿಳೆಯರಿಗೆ ಕೂದಲು ಉದುರುವುದು ಶುರುವಾಗುತ್ತದೆ. ಪ್ರೆಗ್ನೆನ್ಸಿ ಸಮಯದಲ್ಲಿ ಮಹಿಳೆಯರಿಗೆ ಎಸ್ಟ್ರೋಜನ್ ಪ್ರಮಾಣ ಕಡಿಮೆಯಾಗಲು ಶುರುವಾಗುತ್ತದೆ. ಹೀಗಾಗಿ ಕೂದಲು ಉದರುವಿಕೆಯ ಸಮಸ್ಯೆ ಕಾಡಬಹುದು. ಕೂದಲು ಉದುರುವುದನ್ನು ತಡೆಗಟ್ಟಲು ಮಹಿಳೆಯರೂ ಗಮನ ಹರಿಸಬೇಕು.

ಗರ್ಭಿಣಿ ಮಹಿಳೆಯರ ಆಹಾರ ಹೇಗಿರಬೇಕು..?
ಮಹಿಳೆಯರ ಆಹಾರ ಪೌಷ್ಟಿಕಾಂಶದಿಂದ ಕೂಡಿರಬೇಕು. ಊಟದ ಸಮಯದಲ್ಲಿ ಕಟ್ಟು ನಿಟ್ಟು ಅನುಸರಿಸಬೇಕು. ಇದ್ರಿಂದ ಪೋಷಕಾಂಶಗಳ ಕೊರತೆ ಎದುರಾಗುವುದಿಲ್ಲ. ಹಸಿರು ತರಕಾರಿ, ಕಾಳುಗಳು, ಹಣ್ಣುಗಳನ್ನು ಸೇವಿಸಬೇಕು.
ಅಗಲವಾದ ಬಾಚಣಿಕೆ ಬಳಸುವುದು
ಗರ್ಭಾವಸ್ಥೆಯಲ್ಲಿ ಕೂದಲಿನ ವಿಶೇಷ ಕಾಳಜಿ ವಹಿಸುವ ಅವಶ್ಯಕತೆ ಇದೆ.ಕೂದಲಿಗೆ ಅಗಲವಾದ ಹಲ್ಲುಗಳನ್ನು ಹೊಂದಿರುವ ಬಾಚಣಿಕೆ ಬಳಸಬೇಕು. ಒದ್ದೆಯಾದ ಕೂದಲನ್ನು ಬಾಚಿಕೊಳ್ಳಬಾರದು.
ಗರ್ಭಾವಸ್ಥೆಯಲ್ಲಿ ಹಾರ್ಮೋನಗಳ ಏರುಪೇರು..!
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳಿಂದ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಅಂತಹ ಪರಿಸ್ಥಿತಿಯಲ್ಲಿ, ಅವುಗಳ ಗುಣಮಟ್ಟ ಮತ್ತು ದಪ್ಪ ಕಡಿಮೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಕೂದಲು ಆರೈಕೆ ಮಾಡಬೇಕು. ವಾರಕ್ಕೆ 2 ಬಾರಿಯಾದರೂ ಕೂದಲು ತೊಳೆಯಲು ಪ್ರಯತ್ನಿಸಿ. ಇದಕ್ಕಾಗಿ ಗಿಡಮೂಲಿಕೆಗಳ ಶಾಂಪು ಮತ್ತು ಕಂಡೀಶರ್ ಬಳಕೆ ಹೆಚ್ಚು ಉತ್ತಮ ಎಂದು ಹೇಳಬಹುದು.

ನೈಸರ್ಗಿಕವಾಗಿ ಕೂದಲು ಒಣಗಿಸಿ!?
ಕೂದಲನ್ನು ನೈಸರ್ಗಿಕವಾಗಿ ಒಣಗಿಸಬೇಕು. ಫ್ಯಾನ್, ಹೇರ್ ಡ್ರೈ ರ್ ಗಳಿಂದ ಕೂದಲನ್ನು ಒಣಗಿಸಿದರೆ ಕೂದಲು ಉದರುವ ಸಾಧ್ಯತೆ ಹೆಚ್ಚು.
ಎಣ್ಣೆ ಹಚ್ಚಿದ ನಂತರ ಕೂದಲು ಬಾಚಿ ಕೊಳ್ಳಬೇಡಿ. ಕೂದಲು ಒದ್ದೆ ಇದ್ದಾಗ ಅಥವಾ ಕೂದಲಿಗೆ ಎಣ್ಣೆ ಹಚ್ಚಿದ ನಂತರ ತಕ್ಷಣಕ್ಕೆ ಬಾಚಿಕೊಳ್ಳಬಾರದು. ಕೂದಲಿಗೆ ಎಣ್ಣೆ ಹಚ್ಚಿ 1 ಗಂಟೆಗಳ ನಂತರ ಬಾಚಬೇಕು. ಯಾಕೆಂದರೆ ಕೂದಲಿನ ಬುಡ ಎಣ್ಣೆ ಹಚ್ಚಿದಾಗ, ಇಲ್ಲವೇ ಒದ್ದೆ ಇದ್ದಾಗ ಕೂದಲು ಉದುರುವ ಸಂಭವ ಹೆಚ್ಚಿರುತ್ತದೆ.
ಎರಡು ದಿನಕ್ಕೊಮ್ಮೆ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಬೇಕು. ಎಣ್ಣೆಯನ್ನು ನೇರವಾಗಿ ಒಲೆ ಮೇಲೆ ಕಾಯಿಸದೇ, ಬಿಸಿ ನೀರಿನಲ್ಲಿಟ್ಟು ಕಾಯಿಸಿ ಕೂದಲಿಗೆ ಹಚ್ಚಬೇಕು.
ನಿದ್ದೆ ಮಾಡದಿರುವುದು..!
ಪ್ರಸವದ ನಂತರ ಅನೇಕ ಮಹಿಳೆಯರಿಗೆ ಮಗು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿರುತ್ತದೆ. ಶಿಶುಗಳು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಎಚ್ಚರಿರುತ್ತವೆ. ಬೆಳಿಗ್ಗೆ ಹೊತ್ತು ಅಥವಾ ಮಧ್ಯಾಹ್ನದ ಹೊತ್ತು ನಿದ್ದೆ ಮಾಡುತ್ತದೆ. ಹೀಗಾಗಿ ತಾಯಿ ಮಗುವಿನ ಜತೆ ರಾತ್ರೀ ಇಡೀ ಎಚ್ಚರರಿಬೇಕಾದ ಸಂದರ್ಭ ಎದುರಾಗಬಹುದು. ನಿದ್ದೆ ಆಗಲಿ ಅಥವಾ ಆಗದಿರಲಿ ಮತ್ತೆ ಬೆಳಿಗ್ಗೆ ಎದ್ದು ಅನೇಕ ಮಹಿಳೆಯರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದು ಕೂದಲು ಉದುರಿವಿಕೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ನಿದ್ದೆ ಮಹಿಳೆಯರಿಗೆ ಅಗತ್ಯವಾಗಿ ಬೇಕಾಗಿರುತ್ತದೆ.

ಆಲ್ಕೋಹಾಲ್, ಸಿಗರೇಟ್ ಅವೈಡ್ ಮಾಡಿ..!
ಆಲ್ಕೋಹಾಲ್, ಸಿಗರೇಚ್ ಮಾದಕ ವಸ್ತುಗಳ ಸೇವನೆ ಗರ್ಭಾವಸ್ಥೆಯಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. ಈ ಅಭ್ಯಾಸಗಳು ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಇದ್ರಿಂದ ಕೂದಲಿನ ಬೇರು ದುರ್ಬಲವಾಗುತ್ತದೆ. ಬರು ಬರುತ್ತಾ ಕೂದಲು ಉದರಲು ಆರಂಭವಾಗುತ್ತದೆ. ಕೂದಲಿನ ಮೇಲೆ ಯಾವುದೇ ಒತ್ತಡ ಉಂಟಾಗದಂತೆ ತಪ್ಪಿಸಿ. ಟವೆಲ್ ನಿಂದ ಉಜ್ಜುವುದು,ಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಳುವುದನ್ನು ಮಾಡಬಾರದು.
ನಿಮ್ಗೆ ಕೋಪ, ಉದ್ವಿಗ್ನತೆ ಹೆಚ್ಚಾದಾಗ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಪುಸ್ತಕ ಓದುವುದು, ಸಂಗೀತ ಆಲಿಸುವುದು, ಚಲನಚಿತ್ರ ನೋಡುವುದು, ಹೀಗೆ ಮಾಡುವುದರಿಂದ ನಿಮಗೆ ವಿಶ್ರಾಂತಿ ದೊರೆಯುತ್ತದೆ.

ಕೂದಲಿನ ಪೋಷಣೆಗಾಗಿ ಮನೆಮದ್ದುಗಳು ಇಲ್ಲಿವೆ..!
ನಿಮ್ಮ ಕೂದಲು ಉದುರುತ್ತಿದ್ದರೆ, ಈ ಸಮಯದಲ್ಲಿ ನೀವು ಮೊಟ್ಟೆಯ ಬಿಳಿ ಭಾಗಕ್ಕೆ 3 ಚಮಚ ಆಲಿವ್ ಎಣ್ಣೆ ಸೇರಿಸಿ, ಹೇರ್ ಮಾಸ್ಕ್ ತಯಾರಿಸಬಹುದು. ಇದ್ರಿಂದ ನಿಮ್ಮ ಕೂದಲಿಗೆ ಹೆಚ್ಚು ಪೋಷಣೆ ದೊರೆಯುತ್ತದೆ. ಇನ್ನೂ ಕೂದಲು ಸಹ ಆರೋಗ್ಯಕರವಾಗಿರುತ್ತದೆ.
ಮೆಂತ್ಯಾ ಬೀಜದ ಹೇರ್ ಮಾಸ್ಕ್ !
ಕೂದಲು ಉದರುವಿಕೆಯನ್ನು ತಡೆಗಟ್ಟಲು ಮೆಂತ್ಯವು ಯಶಸ್ವಿ ಪರಿಹಾರಗಳಲ್ಲಿ ಒಂದು. ಇದಕ್ಕಾಗಿ ಸ್ವಲ್ಪ ಮೆಂತ್ಯವನ್ನು ನೀರಿನಲ್ಲಿ ನೆನೆಸಿ ರಾತ್ರಿಯಿಡಿ ಬಿಡಿ. ಮರು ದಿನ ಬೆಳಿಗ್ಗೆ ಮೆಂತ್ಯಾ ನೀರಿನಿಂದ ಕೂದಲನ್ನು ತೊಳೆಯಿರಿ. ಇದನ್ನು ಹೀಗೆ 2 ಗಂಟೆಗಳ ಕಾಲ ಇರಲು ಬಿಡಿ. ಇದ್ರಿಂದ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಬಿಳಿ ದಾಸವಾಳ ,ವೀಳ್ಯದೆಲೆ ಬಳಕೆ.!
ಬಿಳಿದಾಸವಾಳದ ಎಲೆ, ಮೆಹಂದಿ ಸೊಪ್ಪು ಹಾಗೂ ವೀಳ್ಯದೆಲೆ ಎಲ್ಲವನ್ನು ರುಬ್ಬಿ ತಲೆಗೆ ಹಚ್ಚಬೇಕು. ಅರ್ಧಗಂಟೆಯ ನಂತರ ಕೂದಲು ತೊಳೆಯುವುದರಿಂದ ಕೂದಲು ಉದುರುವ ಸಮಸ್ಯೆ ನಿಯಂತ್ರಣದಲ್ಲಿಡಬಹುದು. ಹಸಿ ನೆಲ್ಲಿಕಾಯಿ ಜಜ್ಜಿ ಪುಡಿ ಮಾಡಿ, ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ, ತಲೆಗೆ ಹಚ್ಚುವುದರಿಂದ ಕೂದಲು ಉದರುವ ಸಮಸ್ಯೆ ಕಡಿಮೆಯಾಗುತ್ತದೆ.