ಫಿಟೆನೆಸ್ ಮತ್ತು ಆರೋಗ್ಯದ ವಿಷಯಕ್ಕೆ ಬಂದರೆ, ಗ್ರೀನ್ ಟೀ ಪ್ರಯೋಜನಗಳು ನಿರಾಕರಿಸುವುದಿಲ್ಲ. ಹಸಿರು ಚಹಾದ ಆರೋಗ್ಯ ಪ್ರಯೋಜನಗಳಿಂದಾಗಿ ವಿಶ್ವದ್ಯಂತ ಹೆಚ್ಚುತ್ತಿದೆ. ಈ ಬಗ್ಗೆ ಅನೇಕ ಔಷಧೀಯ ಗುಣಲಕ್ಷಣಗಳಿಂದ ಔಷಧೀಯ ಗುಣಗಳಿಂದ ಹೈಲೈಟ್ ಆಗಿದೆ. ಹಸಿರು ಚಹಾದ ಬಳಕೆ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಗ್ರೀನ್ ಟೀ ಆರೋಗ್ಯ ಪ್ರಯೋಜನಗಳು ಅನೇಕವಾಗಿದ್ದರೂ, ಯಾವುದೇ ರೋಗದ ಚಿಕಿತ್ಸೆಯಾಗಿ ಇದನ್ನು ಬಳಸುವುದಿಲ್ಲ ಎಂಬುದನ್ನು ತಿಳಿಯಬೇಕು. ಆದ್ರೆ ಗ್ರೀನ್ ಟೀ ಅನೇಕ ದೈಹಿಕ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಗ್ರೀನ್ ಟೀ ಸೇವಿಸುವುದರಿಂದ ಇಮ್ಯೂನ್ ಸಿಸ್ಟಮ್ ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಗ್ರೀನ್ ಟೀ ಎಂದರೇನು.. ?
ಗ್ರೀನ್ ಟೀ ಯನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ತಯಾರಿಸಲಾಗುತ್ತದೆ. ಈ ಸಸ್ಯದ ಎಲೆಗಳನ್ನು ಹಸಿರು ಚಹಾ ತಯಾರಿಸಲು ಮಾತ್ರವಲ್ಲದೇ, ಕಪ್ಪು ಚಹಾದಂತಹ ಇತರ ಬಗೆಯ ಚಹಾಗಳಲ್ಲಿಯೂ ಬಳಸಲಾಗುತ್ತದೆ. ಹಸಿರು ಚಹಾದಲ್ಲಿ ಔಷಧೀಯ ಗುಣಗಳನ್ನು ಮತ್ತು ಅದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.
ಗ್ರೀನ್ ಟೀ ವಿಧಗಳು..!
ಮಾರುಕಟ್ಟೆಯಲ್ಲಿ ಗ್ರೀನ್ ಟೀ ಹಲವು ಬಗೆಯಲ್ಲಿ ಲಭ್ಯವಿದೆ. ಜಾಸ್ಮೀನ್ ಗ್ರೀನ್ ಟೀ, ಮೊರಾಕೊ ಮಿಂಟ್ ಗ್ರೀನ್ ಟೀ ಹಾಗೂ ಡ್ರ್ಯಾಗನ್ ವೆಲ್ ಗ್ರೀನ್ ಟೀ, ಹೀಗೆ ಮುಂತಾದ ಗ್ರೀನ್ ಟೀ ಗಳನ್ನು ಕಾಣಬಹುದು.
ತೂಕ ಇಳಿಸಿಕೊಳ್ಳಲು ಗ್ರೀನ್ ಟೀ..!
ಗ್ರೀನ್ ಟೀ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಕೊಬ್ಬನ್ನು ಬರ್ನ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ಬೊಜ್ಜು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿರು ಚಹಾ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಇನ್ನೂ ಸ್ಥೂಲ ಕಾಯ ಹೆಚ್ಚಾಗಿರುವ ಜನರಲ್ಲಿ ಗ್ರೀನ್ ಟೀ ಗಮನಾರ್ಹವಾದ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಸಹಾಯ ಮಾಡಬಲ್ಲದ್ದು. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಯೋಗಾ ಕೂಡಾ ಮುಖ್ಯ ಆಗುತ್ತದೆ.

ಮೆದುಳಿಗೆ ಗ್ರೀನ್ ಟೀ ಕುಡಿಯುವುದರಿಂದ ಆಗುವ ಲಾಭಗಳು!
ಗ್ರೀನ್ ಟೀ ಸೇವನೆಯಿಂದ ಮಿದುಳಿಗೆ ಪ್ರಯೋಜನಕಾರಿಯಾಗಿದೆ. ಸಂಶೋಧನೆ ಪ್ರಕಾರ, ಗ್ರೀನ್ ಟೀ ಆತಂಕವನ್ನು ಕಡಿಮೆ ಮಾಡುವುದಲ್ಲದೇ, ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೇ ಏಕಾಗ್ರತೆ ಹೆಚ್ಚಿಸುವಲ್ಲಿ ಇದು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ಬಾಯಿಯ ಆರೋಗ್ಯ ಕಾಪಾಡುತ್ತದೆ.
ಗ್ರೀನ್ ಟೀ ಬಾಯಿಯ ಆರೋಗ್ಯ ಕಾಪಾಡುತ್ತದೆ. ಇದರ ಬಳಕೆಯಿಂದ ಬಾಯಿ ಸೋಂಕನ್ನು ತಡೆಯಬಹುದಾಗಿದೆ. ಅಧ್ಯಯನದ ಪ್ರಕಾರ, ಗ್ರೀನ್ ಟೀ ಬ್ಯಾಕ್ಟೇರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.
ಮಧುಮೇಹ ನಿಯಂತ್ರಣ
ಗ್ರೀನ್ ಟೀ ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಬಹುದಾಗಿದೆ. ವಾಸ್ತವವಾಗಿ, ಶೇ 33 ರಷ್ಟು ಟೈಪ್ 2 ಮಧುಮೇಹದ ಅಪಾಯವನ್ನು ತಡೆಗಟ್ಟುತ್ತದೆ. ಇದಲ್ಲದೇ, ಹಸಿರು ಚಹಾ ಸೇವನೆಯು ಇನ್ಸುಲಿನ್ ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹಸಿರು ಚಹಾ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ಗ್ರೀನ್ ಟೀ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ತಡೆಗಟ್ಟುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹವನ್ನು ಸ್ವತಂತ್ರ ರಾಡಿಕಲ್ ಗಳಿಂದ ರಕ್ಷಿಸುತ್ತದೆ. ಗ್ರೀನ್ ಟೀ ಅನೇಕ ಮಾನಸಿಕ ರೋಗಗಳಿಂದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲಝೈಮರ್ ಕಾಯಿಲೆ ನಿವಾರಿಸುತ್ತದೆ. ಈ ರೋಗಗದಲ್ಲಿ ವ್ಯಕ್ತಿಯ ಸ್ಮರಣೆಯು ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತದೆ.
ಅಧಿಕ ತೂಕ ಹಾಗೂ ಬೊಜ್ಜು ಹೊಂದಿರುವವರು ಗ್ರೀನ್ ಟೀ ಆದರೆ ಗಮನಾರ್ಹವಾದ ಇಳಿಕೆಗೆ ಕಾರಣವಾಗಿದೆ ಎಂದು ಕಂಡು ಬಂದಿದೆ.
ಜಠರ ಕರುಳಿನ ಕಾಯಿಲೆಗಳಿಗೆ ಹಸಿರು ಚಹಾ..!
ಗ್ರೀನ್ ಟೀ ಸೇವನೆಯು ಜಠರ ಕರುಳಿನ ಕಾಯಿಲೆಗಳ ವಿರುದ್ಧ ಹೋರಾಟಕ್ಕೆ ಸಹಾಯ ಮಾಡುತ್ತದೆ. ಜಠರ ಕರುಳಿನ ಕಾಯಿಲೆಗಳನ್ನು ತಡೆಗಟ್ಟಲು ಗ್ರೀನ್ ಟೀ ಸಹಾಯ ಮಾಡುತ್ತದೆ.
ಚರ್ಮಕ್ಕೆ ಹಸಿರು ಚಹಾ
ಆರೋಗ್ಯ ಪ್ರಯೋಜನಗಳ ಜತೆಗೆ, ಚರ್ಮದ ಅನೇಕ ಪ್ರಯೋಜನಗಳನ್ನು ಇದು ಪಡೆದುಕೊಂಡಿದೆ. ಹಾನಿಕಾರಕ ನೇರಳಾತೀತ ಕಿರಣಗಳಿಂದ ಚರ್ಮದ ಕಾಂತಿ ಕಳೆಯುವುದನ್ನು ತಡೆಗಟ್ಟುತ್ತದೆ. ಒತ್ತಡವು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೇ ಇದು ಕೂದಲಿಗೂ ಹೆಚ್ಚು ಪ್ರಯೋಜನಕಾರಿಯಾಗಿದೆ.
ಗ್ರೀನ್ ಟೀಯಲ್ಲಿರುವ ಪೋಷಕಾಂಶ ಎಷ್ಟು…?
ನೀರು – 99.93 ಗ್ರಾಂ
ಎನರ್ಜಿ- 1 ಕೆಸಿಎಲ್
ಪ್ರೋಟೀನ್ – 0.22 ಗ್ರಾಂ
ಕಬ್ಬಿಣ – 0.02 ಮಿ.ಗ್ರಾಂ
ಮೆಗ್ನೇಶಿಯಂ – 1 ಮಿ.ಗ್ರಾಂ
ಸೋಡಿಯಂ – 1 ಮಿ.ಗ್ರಾಂ
ಸೋಡಿಯಂ – 1 ಮಿ.ಗ್ರಾಂ
ಮ್ಯಾಂಗನೀಸ್ – 0.184 ಮಿ.ಗ್ರಾಂ
ನಿಯಾಸಿಸ್ ಬಿ -6 – 0.005 ಮಿ,ಗ್ರಾಂ
ಕೆಫೀನ್ – 12 ಮಿ.ಗ್ರಾಂ