ಪ್ರತಿಯೊಬ್ಬ ಯುವತಿ ತನ್ನ ವೈವಾಹಿಕ ಜೀವನ ಸಂತೋಷಕರವಾಗಿ ಇರಬೇಕು ಎಂದು ಬಯಸುತ್ತಾಳೆ. ಇದಕ್ಕಾಗಿ ಆಕೆಯೂ ಕೂಡಾ ಪ್ರಯತ್ನಿಸುತ್ತಾಳೆ. ಆದರೆ ಅಜಾಗರೂಕತೆಯಿಂದ ನಮ್ಮ ಸಂಬಂಧವನ್ನು ಹಾಳುಮಾಡುವ ಇಂತಹ ಚಿಕ್ಕ ತಪ್ಪುಗಳನ್ನು ನಾವು ಕೆಲವೊಮ್ಮೆ ಮಾಡಿ ಬೀಡುತ್ತೇವೆ. ಸಣ್ಣ ತಪ್ಪುಗಳಿಂದಾಗಿ ನಿಮ್ಮ ಪತಿ ಹಾಗೂ ನಿಮ್ಮ ಮದುವೆ ಬಾಂಧವ್ಯ ಎರಡನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದಕಾರಣ, ಮದುವೆಯಾದ ಮೇಲೆ ನಿಮ್ಮ ಪತಿ ಮುಂದೆ ಈ ವಿಷಯಗಳನ್ನು ತಪ್ಪಿಯೂ ಹೇಳಲೇ ಬೇಡಿ. ಹುಡುಗಿಯರು ಮದುವೆಯ ನಂತರ ಇದನ್ನು ಮಾಡಲೇಬಾರದು.!

1. ಹಣ ಖರ್ಚು ಮಾಡುವ ವಿಷಯದಲ್ಲಿ..!
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತು ನಿಮಗೆ ಗೊತ್ತಿರಬಹುದು. ಪ್ರತಿ ಯೊಬ್ಬ ಹೆಂಡತಿ ತನ್ನ ಮನೆಯ ಆದಾಯವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಪ್ಲ್ಯಾನ್ ಮಾಡಬೇಕು. ಹಣದ ವಿಷಯದಲ್ಲಿ ನಿಮಗೆ ಕಾಳಜಿ ಇದ್ದರೆ, ಹೇಗೆ ಖರ್ಚು ಮಾಡಬೇಕು ಎಂದು ಗೊತ್ತಿಲ್ಲದಿದ್ದರೆ ತೊಂದರೆಗಳು ಸಾಧ್ಯತೆ ಹೆಚ್ಚು. ಐಷಾರಾಮಿ ವಸ್ತುಗಳ ಖರೀದಿ ಬಗ್ಗೆ ಸದಾ ದೂರು ನೀಡುವುದು ಒಳ್ಳೆಯದಲ್ಲ.
ಒಂದು ವೇಳೆ ನಿಮ್ಮ ಪತಿ ಸಾಲ ಮಾಡಿ ವಸ್ತುಗಳನ್ನು ಖರೀದಿಸುತ್ತಿದ್ದರೆ, ಇದು ಅವರ ಒತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ತಿಂಗಳವರೆಗೂ ಖರೀದಿ ಮಾಡಬೇಕೆಂದಿರುವ ವಸ್ತುಗಳು ಖರೀದಿಸಲು ಸಾಧ್ಯವಾಗದೇ ಇರಬಹುದು. ನಿಮ್ಮ ಪತಿ ಕಡಿಮೆ ಬಜೆಟ್ ನಲ್ಲೇ ವಸ್ತುಗಳನ್ನು ಖರೀದಿ ಮಾಡಿದಾಗ ನೀವು ಅವರನ್ನು ಗೌರವಿಸಬೇಕು. ಇದ್ರಿಂದ ನಿಮ್ಮ ಪತಿ ಪ್ರೀತಿಯ ಜತೆಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಇದು ಪರಸ್ಪರ ಗೌರವ ಹಾಗೂ ಪ್ರೀತಿ ಇವೆರಡನ್ನು ಹೆಚ್ಚಿಸುತ್ತದೆ.

ನಿರಂತರವಾಗಿ ನೆಗೆಟಿವ್ ಮಾತುಗಳನ್ನಾಡಬೇಡಿ..!
ನೆರೆ ಮನೆಹೊರಯವರ ವರ್ತನೆ, ಆಫೀಸ್ ನಲ್ಲಿ ಕೆಲಸ ಒತ್ತಡ, ಸಂಬಂಧಿಕರ ನಿಂದನೆ, ಹೀಗೆ ಯಾವುದಾದರೊಂದು ವಿಷಯದ ಬಗ್ಗ ಪದೇ ಪದೇ ನೆಗೆಟಿವ್ ಮಾತುಗಳನ್ನಾಡುವುದು ತಪ್ಪು. ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮಆಲೋಚನೆ ಸರಿ ಇರಬಹುದು. ಆದ್ರೂ ನಿಮ್ಮ ಪತಿ ಮುಂದೆ ಬೇರೆಯವರ ಕುರಿತಾದ ನಿಂದನೆ ಮಾಡಬಾರದು. ಇದ್ರಿಂದ ನಿಮ್ಮ ಗಂಡನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆ ಮೂಡಬಹುದು.
ಪತಿ ಮನೆಗೆ ಬಂದ ತಕ್ಷಣ, ನಕಾರಾತ್ಮಕ ವಿಷಯಗಳನ್ನು ತೆಗೆದು ಹಾಕಿ..!
ನಿಮ್ಮ ಪತಿ ಮನೆಗೆ ಬಂದ ತಕ್ಷಣ ನಿಮ್ಮ ಮನಸ್ಸಿರುವ ಎಲ್ಲಾ ನಕಾರಾತ್ಮಕ ಯೋಚನೆಗಳು ತೆಗೆದುಹಾಕಬೇಕು. ನೀವು ಪದೇ ಪದೇ ದೂರಗಳ ರಾಶಿಯೇ ಅವರ ಮುಂದೆ ಪ್ರಸ್ತಾಪಿಸಿದರೆ, ನಿಮ್ಮ ಸಂಗಾತಿ ನಿಮ್ಮಿಂದ ದೂರವಾಗಬಹುದು. ಪ್ರತಿಯೊಬ್ಬ ಪುರುಷ ತನ್ನ ಗಂಡನನ್ನು ಸಂತೋಷವಾಗಿಡಲು ಬಯಸುತ್ತಾನೆ. ಆದ್ರೆ ನಾನು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ತಿಳಿದಾಗ, ಬೇರಸಗೊಳ್ಳುತ್ತಾರೆ. ಕೆಲವೊಮ್ಮ ಬೇರೆಯವರ ವರ್ತನೆ ಖಂಡಿಸುವುದು ಸರಿ. ಆದ್ರೆ ಅದೇ ನಿಮ್ಮ ದಿನಚರಿಯಾಗಬಾರದು.
ಇತರ ವಿಷಯಗಳ ಬಗ್ಗೆ ಆದ್ಯತೆ ಇರಲಿ.!
ಯಾವಾಗಲೂ ಇತರ ವಿಷಯಗಳ ಬಗ್ಗೆ ಆದ್ಯತೆ ನೀಡಿ. ನಿಮ್ಮ ಮಗು, ತಾಯಿ , ಹಾಗೂ ಸ್ನೇಹಿತರು ಮತ್ತು ನಿಮ್ಮ ವೃತ್ತಿ ಮುಂದೆ ಬಂದಾಗ, ತುಂಬಾ ಜನರು ತಮ್ಮ ಸಂಗಾತಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಮತ್ತು ಜೀವನದಲ್ಲಿ ಅವರಿಗೆ ಯಾವುದೇ ವಿಶೇಷ ಪ್ರಾಮುಖ್ಯತೆ ಇಲ್ಲ ಎಂಬುದರ ಬಗ್ಗೆ ಅರಿವಾಗುತ್ತದೆ. ನೀವೇ ಯೋಚಿಸಿ, ಪ್ರತಿ ವರ್ಷವು ಇದೇ ಮುಂದುವರೆದರೇ ನಿಮಗೆ ಏನನ್ನಿಸುತ್ತದೆ. ಇದರಿಂದ ಆತ್ಮವಿಶ್ವಾಸ ಕುಗ್ಗುತ್ತದೆ. ಇವತ್ತಿನ ದಿನಗಳಲ್ಲಿ ಹೆಚ್ಚು ಜನರು ವಿಚ್ಛೇದನೆ ಪಡೆದುಕೊಳ್ಳಲು ಇದೇ ಕಾರಣವಿರಬಹುದು. ಪತಿಯನ್ನು ನಿರ್ಲಕ್ಷಿಸುವುದು, ಒಬ್ಬರನೊಬ್ಬರು ಕಾಳಜಿ ವಹಿಸದೇ ಇರುವುದೇ ಕಾರಣವಾಗಿರಬಹುದು. ಈ ತಪ್ಪು ಎಂದಿಗೂ ಮಾಡಬೇಡಿ.

ಪ್ರೀತಿ ವ್ಯಕ್ತಪಡಿಸುವ ಬಗ್ಗೆ ಹಿಂಜರಿಕೆ ಬೇಡ!
ಪ್ರತಿಯೊಬ್ಬ ಗಂಡ ತನ್ನ ಹೆಂಡತಿಯಿಂದ ಫಿಸಿಕಲ್ ಅಫೆಕ್ಷನ್ ಹೇಗೆ ಬಯುಸುತ್ತಾನೆಯೋ, ಹಾಗೇ ಮಾನಸಿಕವಾಗಿ ಅಫೆಕ್ಷನ್ ಹೊಂದಿರುತ್ತಾನೆ. ನೀವು ನಿರಂತರವಾಗಿ ನಿಮ್ಮ ಗಂಡನ ಮುಂದೆ ಪ್ರೀತಿ ವ್ಯಕ್ತಪಡಿಸದೇ, ಸುಮ್ಮನಿದ್ದರೆ ಸಂಬಂಧದಲ್ಲಿ ಬಿರುಕು ಕಾಣಿಸಬಹುದು. ಅನ್ಯೋನ್ಯತೆ ಸಮಸ್ಯೆ ಕಾಡಬಹುದು. ನಿಮ್ಮ ಗಂಡನನ್ನು ಯಾವುದೇ ವಿಷಯವಿರಲಿ, ನಿಯಂತ್ರಿಸಲು ಹೋಗಬೇಡಿ. ನಿಮ್ಮ ಸಂಬಂಧವನ್ನು ಬಲಪಡಿಸಲು ನೀವು ಎಷ್ಟು ಪ್ರೀತಿಸುತ್ತೀರಿ ಎಂಬ ಮಾತುಗಳನ್ನು ಅವರ ಮುಂದೆ ಹೇಳಿ. ಸಂಬಂಧದಲ್ಲಿ ಪ್ರೀತಿ, ಪ್ರಣಯ ಅಗತ್ಯವಾದದ್ದು ಎಂಬುದು ನೆನಪಿರಲಿ.
ಎಲ್ಲವನ್ನೂ ಸನ್ನೆಯಲ್ಲೇ ಮಾಡಬೇಡಿ!
ನಿಮ್ಮ ಸಂಗಾತಿ ಮುಂದೆ ನೀವು ಯಾವುದಾದರೂ ವಿಷಯ ಹೇಳಲು ಬಯಸಿದರೆ, ಅವರಿಗೆ ಅರ್ಥವಾಗುವ ರೀತಿ, ಸ್ಪಷ್ಟ ಭಾಷೆಯಲ್ಲಿ ಹೇಳಿ. ಅದಕ್ಕಾಗಿ ಅರ್ಥವಾಗದ ಸನ್ನೆಯಲ್ಲಿ ಮಾತನಾಡಬಾರದು. ನಿಮ್ಮ ಭಾವನೆಗಳನ್ನು ಪ್ರಾಮಾಣಿಕವಾಗಿ ಅವರ ಮುಂದೆ ಹೇಳಿ. ಏನಾಯಿತು..? ಎಂದು ಅವರು ನಿಮ್ಮನ್ನು ಕೇಳಿದರೆ, ‘ಏನು ಇಲ್ಲ’ ಎಂದು ಉತ್ತರಿಸಬೇಡಿ. ಅವರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸಬೇಡಿ. ಪ್ರತಿ ಬಾರಿಯೂ ನೀವು ಅರ್ಥವಾಗದ ರೀತಿಯಲ್ಲಿ ನಿಮ್ಮ ಸಂಗಾತಿ ಜತೆಗೆ ಮಾತನಾಡಿದರೆ, ಅದು ನಿಮ್ಮಿಬ್ಬರ ಸಂಬಂಧವನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ.