ಇತ್ತೀಚಿನ ದಿನಗಳಲ್ಲಿ ಮಾರಣಾಂತಿಕ ಕಾಯಿಲೆಗಳ ಹಾವಳಿ ಹೆಚ್ಚಾಗ ತೊಡಗಿದೆ. ಹವಾಮಾನ ಬದಲಾದಾಗ, ಶೀತ , ಡೆಂಗ್ಯೂ ಜ್ವರ, ಚಿಕನ್ ಗುನ್ಯಾ ಹರಡುವಿಕೆಯು ಹೆಚ್ಚು ಹೆಚ್ಚು ಆಗುತ್ತದೆ. ವಿಶೇಷವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆಗಳನ್ನು ತಡೆಗಟ್ಟಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಲ್ಲಿ ಅಮೃತ ಬಳ್ಳಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳಬಹುದು. ಆಯುರ್ವೇದದಲ್ಲಿ ಅಮೃತ ಬಳ್ಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅಲ್ಲದೇ ಔಷಧಿಯಾಗಿ ಬಳಸಲಾಗುತ್ತದೆ. ಆಯುರ್ವೇದ ಪ್ರಕಾರ, ಜ್ವರ ಬಂದಾಗ ಅಮೃತಬಳ್ಳಿ ಉತ್ತಮ ಔಷಧಿ ಎಂದು ಪರಿಗಣಿಸಲಾಗಿದೆ. ಚಿಕನ್ ಗುನ್ಯಾ, ಡೆಂಗ್ಯೂ ಅಥವಾ ಸಾಮಾನ್ಯ ರೀತಿಯ ಎಲ್ಲಾ ಜ್ವರಗಳಿಗೆ ರಾಮಬಾಣವಾಗಿದೆ ಎಂದು ಹೇಳಲಾಗುತ್ತದೆ. ಅಮೃತ ಬಳ್ಳಿ ಒಂದು ರೀತಿಯ ಬಳ್ಳಿಯಾಗಿದೆ.

ಜ್ವರಕ್ಕೆ ಮದ್ದು!
ಅಮೃತ ಬಳ್ಳಿ ಆಯುರ್ದೇದ ಮೆಡಿಸಿನ್ ನಲ್ಲಿ ಅತ್ಯಂತ ಪರಿಣಾಮಕಾರಿ ಮದ್ದಾಗಿದೆ. ಇದು ಎಷ್ಟು ಪರಿಣಾಮಕಾರಿ ಎಂದರೆ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಇದನ್ನು ಅಮೃತ ಎಂದು ಕರೆಯಲಾಗುತ್ತದೆ. ಈ ದೀರ್ಘಕಾಲಿಕ ಅಮೃತ ಬಳ್ಳಿ ಸಸ್ಯವನ್ನು ಬಳಸುವುದು ತುಂಬಾ ಸುಲಭ.ದೀರ್ಘಕಾಲಿನ ಜ್ವರವನ್ನು ನಿವಾರಿಸುತ್ತದೆ. ಡೆಂಗ್ಯೂ, ಹಂದಿ ಜ್ವರ, ಮಲೇರಿಯಾದಂತಹ ಅನೇಕ ಮಾರಣಾಂತಿಕ ರೋಗ ಗಳನ್ನು ನಿವಾರಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ..!
ಅಮೃತ ಬಳ್ಳಿ ಸಾರ್ವತ್ರಿಕ ಮೂಲಿಕೆಯಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಆಂಟಿ ಆಕ್ಸಿಡೆಂಟ್ ಗಳಿಂದ ಕೂಡಿದೆ, ನಿಮ್ಮ ಜೀವ ಕೋಶಗಳನ್ನು ಆರೋಗ್ಯವಾಗಿರುಸುತ್ತದೆ. ಮತ್ತು ರೋಗಗಳನ್ನು ತೊಡೆದು ಹಾಕಲು ನೆರವಾಗುತ್ತದೆ. ಅಮೃತ ಬಳ್ಳಿ ರಕ್ತವನ್ನು ಶುದ್ಧಿಕರಿಸುತ್ತದೆ. ರೋಗವನ್ನು ಉಂಟು ಮಾಡುವ ಬ್ಯಾಕ್ಟೇರಿಯಾ ವಿರುದ್ದ ಹೋರಾಡುತ್ತದೆ. ಯಕೃತ್ತಿನ ಕಾಯಿಲೆಗಳು ಮತ್ತು ಮೂತ್ರದ ಸೋಂಕುಗಳನ್ನು ನಿವಾರಿಸುತ್ತದೆ. ಬಂಜೆತನಕ್ಕೆ ಚಿಕಿತ್ಸೆ ನೀಡಲು ಸಹ ಇದು ಉಪಯುಕ್ತ ಎಂದು ಹೇಳಲಾಗಿದೆ.

ಅಮೃತ ಬಳ್ಳಿಯಲ್ಲಿರುವ ಪೋಷಕಾಂಶಗಳು..!
ಆಹಾರ ತಜ್ಞರ ಪ್ರಕಾರ, ಅಮೃತ ಬಳ್ಳಿ ಅನೇಕ ಗುಣಗಳನ್ನು ಹೊಂದಿದೆ. ಅಮೃತ ಬಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿದ್ದು, ಅದು ನಮ್ಮನ್ನು ರಕ್ಷಿಸುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಮೃತ ಬಳ್ಳಿ ಸೇವಿಸುವುದರಿಂದ ಬಳಿ ರಕ್ತ ಕಣಗಳನ್ನು ಹೆಚ್ಚಿಸಬಹುದು. ಉರಿಯೂತದ ಹಾಗೂ ಕ್ಷಾರೀಯ ಗುಣಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ದೇಹವನ್ನು ತಂಪಾಗಿರುಸುತ್ತದೆ. ಇದು ಜ್ವರವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ದೀರ್ಘಕಾಲದ ಜ್ವರಗಳಾದ ಡೆಂಗ್ಯು , ಚಿಕನ್ ಗುನ್ಯಾ ಕ್ಕೂ ಅಮೃತ ಬಳ್ಳಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಲ್ಲದೇ, ಸಂಧಿವಾತ , ಅಸ್ತಮಾ, ಟೈಪ್ -2 ಮಧು ಮೇಹ ಚಿಕಿತ್ಸೆಗಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಅಮೃತ ಬಳ್ಳಿಯನ್ನು ಸುಲಭವಾಗಿ ಮನೆಯಲ್ಲೇ ಬೆಳೆಯಬಹುದು. ಅಮೃತ ಬಳ್ಳಿಯನ್ನು ನೀವು ದಿನಕ್ಕೆ ಎರಡು ಬಾರಿ ಬಳಸಬಹುದು. ಶಿಶುಗಳಿಗೆ ಇದು ಸೂಕ್ತವಲ್ಲ. 5 ವರ್ಷಕ್ಕಿಂತ ಮೆಲ್ಪಟ್ಟ ಮಕ್ಕಳಿಗೆ ಮಾತ್ರ ಇದು ಸುರಕ್ಷಿತವಾಗಿದೆ.

ಮಲೇರಿಯಾ, ಚಿಕನ್ ಗ್ಯುನಾ ನಿವಾರಣೆ..!
ಅಮೃತ ಬಳ್ಳಿ ಸೇವಿಸುವುದರಿಂದ ಡೆಂಗ್ಯೂ, ಮಲೇರಿಯಾ, ಹಾಗೂ ಹಂದಿ ಜ್ವರ. ಚಿಕನ್ ಗುನ್ಯಾ ಓಡಿಸಬಹುದು. ರಕ್ತದ ಪ್ರೇಟ್ ಲೆಟ್ ಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾದಾಗ, ಅಮೃತ ಬಳ್ಳಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಅದರ ಸಂಖ್ಯೆಯನ್ನು ಹೆಚ್ಚಿಸಬಹುದು. ಅಮೃತಬಳ್ಳಿಯ ಸೇವನೆಯಿಂದ ಕೊಬ್ಬನ್ನು ಕಡಿಮೆ ಮಾಡಬಹುದು. ಬೆಳಿಗ್ಗೆ ಮತ್ತು ಸಂಜೆ ಜೇನುತುಪ್ಪದೊಂದಿಗೆ ತ್ರಿಫುಲ ಪುಡಿ ನೊಂದಿಗೆ ಬೆರೆಸಿ ,ಸೇವಿಸಬಹುದು. ಇದು ವೇಗವಾಗಿ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಉಸಿರಾಟದ ತೊಂದರೆ ನಿವಾರಿಸುತ್ತದೆ!
ಆಯಯುರ್ವೇದ ತಜ್ಞರ ಪ್ರಕಾರ, ಉರಿಯೂತ ನಿವಾರಿಸಲು ಅಮೃತ ಬಳ್ಳಿ ನೆರವಾಗುತ್ತದೆ. ಆಗಾಗ್ಗೆ ಕೆಮ್ಮು, ಶೀತ , ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಂಧಿವಾತ ನಿವಾರಣೆ..!
ಸಂಧಿವಾತ ನಿವಾರಿಸುವಲ್ಲಿ ಅಮೃತ ಬಳ್ಳಿ ನೆರವಾಗುತ್ತದೆ. ಅಮೃತ ಬಳ್ಳಿಯ ಕಾಂಡದ ಪುಡಿಯನ್ನು ಹಾಲಿನಲ್ಲಿ ಕುದಿಸಿ ಸೇವಿಸಬಹುದು. ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಶುಂಠಿಯೊಂದಿಗೆ ಇದನ್ನು ಸೇವಿಸಬಹುದು.

ಅಮೃತ ಬಳ್ಳಿಯ ಜ್ಸೂಸ್ ಸೇವಿಸುವುದರಿಂದ ಹಲವು ಪ್ರಯೋಜನಗಳು..!
ಹಿಮೋಗ್ಲೋಬಿನ್ ಕೊರತೆ..!
ಅಮೃತ ಬಳ್ಳಿಯ ಜ್ಯೂಸ್ ದೇಹದಲ್ಲಿನ ರಕ್ತದ ಕೊರತೆ ಯನ್ನು ನಿವಾರಿಸುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ ನೀವು ಅಮೃತ ಬಳ್ಳಿ ಜ್ಯೂಸ್ ಅಥವಾ ರಸ ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಅಮೃತ ಬಳ್ಳಿಯ ರಸವನ್ನು ಜೇನುತುಪ್ಪ ಅಥವಾ ತುಪ್ಪದಲ್ಲಿ ಬೆರೆಸಿ ಸೇವಿಸಬಹುದು,
ಕಾಮಾಲೆ ನಿವಾರಿಸುತ್ತದೆ
ಅಮೃತ ಬಳ್ಳಿಯ ರಸ ಕಾಮಾಲೆ ರೋಗದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ 1 ಚಮಚ ಅಮೃತ ಬಳ್ಳಿ ಪುಡಿ, ಕರಿಮೆಣಸು ಮತ್ತು ತ್ರಿಫಲವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು. ಇದು ಕಾಮಾಲೆಗೆ ಪ್ರಯೋಜನಕಾರಿಯಾಗಿದೆ. ಹಸಿ ಎಲೆಗಳನ್ನು ಅರೆದು, ರಸವನ್ನು ಹೊರ ತೆಗೆಯಬೇಕು . ನಂತರ ಬೆಳಿಗ್ಗೆ ಹಾಲೊಡಕು ಬೆರೆಸಿ ಬೆಳಿಗ್ಗೆ ಸೇವಿಸಬೇಕು.
ಪಾದಗಳಲ್ಲಿ ಊರಿಯೂತ ನಿವಾರಣೆ!
ಅಮೃತ ಬಳ್ಳಿಯ ಪಾದಗಳನ್ನು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಮೃತಬಳ್ಳಿಯ ರಸವನ್ನು ಬೇವಿನ ಎಲೆಗಳ ಜತೆಗೆ ಹಾಗೂ ಆಮ್ಲಾ ತಡೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. ಪ್ರತಿ ದಿನ ಕನಿಷ್ಠ 2 ಅಥವಾ 3 ಬಾರಿ ಇದನ್ನು ಸೇವಿಸಬೇಕು. ನಿಮ್ಮ ಕೈ ಕಾಲುಗಳ ಉರಿ ಯೂತ ನಿವಾರಣೆಯಾಗುತ್ತದೆ.