Alert! ಮೊಸರಿನ ಜತೆ ಈ ಆಹಾರಗಳನ್ನು ಸೇವಿಸಲೇಬಾರದು..!

  • by

ಹಾಲು ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಹಾಲಿನಿಂದ ಅನೇಕ ರೀತಿಯ ಪದಾರ್ಥಗಳನ್ನು ತಯಾರಿಸಬಹುದು. ಚೀಸ್, ಕೆನೆ, ತುಪ್ಪ ಮುಂತಾದವುಗಳನ್ನು ಹಾಲಿನಿಂದ ತಯಾರಿಸುತ್ತೇವೆ. ಹಾಲು ಕುಡಿಯುವುದರಿಂದ ಅನೇಕ ಆರೋಗ್ಯಪ್ರಯೋಜನಗಳನ್ನು ಕಾಣಬಹುದು. ಅದಕ್ಕಾಗಿಯೇ ಆಯುರ್ವೇದದಲ್ಲಿ ಮೊಸರನ್ನು ಮಕರಂದವನ್ನು ಹೋಲುತ್ತದೆ ಎಂದು ವರ್ಣಿಸಲಾಗಿದೆ. ಆದ್ರೆ ಮೊಸರಿನ ಜತೆ ಕೆಲ ಪದಾರ್ಥಗಳನ್ನು ಸೇವಿಸುವಾಗ ಎಚ್ಚರ ವಹಿಸಬೇಕಾಗುತ್ತದೆ. 8 ಪದಾರ್ಥಗಳನ್ನು ಮೊಸರಿನ ಜತೆ ಎಂದಿಗೂ ಸೇವಿಸಬೇಡಿ. ಇದರಿಂದ ನಿಮ್ಮ ಹೊಟ್ಟೆಯಲ್ಲಿ ವಿಷಕ್ಕೆ ಕಾರಣವಾಗಬಹುದು.

foods-curd-side-effect- ಮೊಸರು, ಆಹಾರ ಸೇವಿಸಬಾರದು

ಮೊಸರು ಹಾಗೂ ಚೀಸ್
ಆಯುರ್ವೇದದ ಪ್ರಕಾರ, ಮೊಸರಿನೊಂದಿಗೆ ಟೀಸ್ ನ್ನು ಎಂದಿಗೂ ಬಳಸಬಾರದು. ನೀವು ಇವೆರಡನ್ನು ಒಟ್ಟಿಗೆ ಸೇವಿಸಿದರೆ, ನಿಮ್ಮ ದೇಹ್ಕಕೆ ಹಾನಿಯಾಗಬಹುದು.

ಮೊಸರು ಮತ್ತು ಪರಾಟ
ಕರಿದ ಹಾಗೂ ಹುರಿದ ಪದಾರ್ಥಗಳ ಜತೆಗೆ ಮೊಸರನ್ನು ಸೇವಿಸಬಾರದು. ಏಕೆಂದರೆ ಮೊಸರಿನಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ತಡೆಯುತ್ತವೆ, ಇದರಿಂದಾಗಿ ನೀವು ತೊಂದರೆ ಗಳನ್ನು ಎದುರಿಸಬೇಕಾಗುತ್ತದೆ.

ಮೊಸರು ಮತ್ತು ಬಾಳೆಹಣ್ಣು
ನಾವು ಆಗಾಗ್ಗೆ ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸುತ್ತೇವೆ. ಇದು ದೇಹಕ್ಕೆ ಒಳ್ಳೆಯದು ಎಂದು ಹೇಳಬಹುದು. ಆದರೆ ಮೊಸರಿನೊಂದಿಗೆ ಬಾಳೆಹಣ್ಣು ಸೇವಿಸಿದರೆ ವಿಷವನ್ನುಂಟು ಮಾಡಬಹುದು. ಆದ್ದರಿಂದ ಮೊಸರಿನೊಂದಿಗೆ ಬಾಳೆಹಣ್ಣು ತಿನ್ನುವುದನ್ನು ಅವೈಡ್ ಮಾಡಿ.

ಮೊಸರು ಮತ್ತು ಉರಾದ್ ದಾಳ
ಉರಾದ್ ದಾಲ್ ಜತೆಗೆ ಮೊಸರನ್ನು ಸೇವಿಸಬೇಡಿ. ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ವಿಷವಾಗಬಹುದು. ಇವುಗಳನ್ನು ನೀವು ಒಟ್ಟಿಗೆ ಸೇವಿಸಿದರೆ, ಇದು ನಿಮಗೆ ಅನೇಕ ದೈಹಿಕವಾಗಿ ಹಾನಿಯನ್ನುಂಟು ಮಾಡಬಹುದು.

ಮೊಸರು ಮತ್ತು ಮಾವಿನ ಹಣ್ಣು
ಹಣ್ಣುಗಳ ರಾಜ ಮಾವಿನಹಣ್ಣನ್ನು ಹಾಲು ಹಾಗೂ ಮೊಸರಿನ ಜತೆ ಸೇವಿಸಬಾರದು. ಇದರ ಸೇವನೆಯು ದೇಹಕ್ಕೆ ವಿಷವಾಗಿ ಮಾರ್ಪಡುತ್ತದೆ.


foods-curd-side-effect- ಮೊಸರು, ಆಹಾರ ಸೇವಿಸಬಾರದು

ಮೊಸರು ಹಾಗೂ ಸಿಟ್ರಸ್ ಹಣ್ಣುಗಳು
ಮೊಸರಿನಲ್ಲಿ ಹುಳಿ ಅಂಶವಿರುವುದರಿಂದ ಇದನ್ನು ಎಂದಿಗೂ ಹುಳಿ ಇರುವ ಹಣ್ಣುಗಳ ಜತೆಗೆ ಸೇವಿಸಬೇಡಿ. ಏಕೆಂದರೆ ಅದರಲ್ಲಿ ವಿಭಿನ್ನ ಕಿಣ್ವಗಳು ಕಂಡು ಬರುತ್ತವೆ. ಈ ಕಾರಣದಿಂದಾಗಿ ಒಟ್ಟಿಗೆ ಜೀರ್ಣಿಸಿಕೊಳ್ಳಲು ತೊಂದರೆ ಇದೆ. ಜೀರ್ಣಕ್ರಿಯೆ ನಿಧಾನವಾಗುವುದರಿಂದ ಮಲಬದ್ಧತೆ, ಅತಿಸಾರ ಹಾಗೂ ಅಜೀರ್ಣ ಸಮಸ್ಯೆ ಉಂಟಾಗುತ್ತದೆ.

ಮೊಸರು ಮತ್ತು ಮೀನು
ಮೀನು ಮತ್ತು ಮೊಸರನ್ನು ಎಂದಿಗೂ ಒಟ್ಟಿಗೆ ಸೇವಿಸಬೇಡಿ. ಮೀನಿನ ರುಚಿ ಬಿಸಿಯಾಗಿರುವುದರಿಂದ ಮೊಸರು ತಣ್ಣಗಿರುತ್ತದೆ. ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಚರ್ಮದ ಕಾಯಿಲೆಗಳು, ಆಮ್ಲೀಯತೆ ಮತ್ತು ಅಲರ್ಜಿ ಇರುವ ವ್ಯಕ್ತಿಗೆ ಕಾರಣವಾಗಬಹುದು. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಅಂದಹಾಗೆ ಮೊಸರು ಸೇವನೆ ನಮ್ಮ ದೇಹಕ್ಕೆ ಪ್ರಯೋಜನಕಾರಿ ಎಂದು ಹೇಳಬಹುದು.ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿದ್ದರೆ ನಿಯಮಿತವಾಗಿ ಮೊಸರನ್ನು ಸೇವಿಸುವ ಮೂಲಕ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಹಾಗೂ ದೇಹದಲ್ಲಿ ನಿಶಕ್ತಿಯಾಗದಂತೆ ತಡೆಯುತ್ತದೆ. ಹಾಲು ಮೊಸರಾಗುವ ಸಮಯದಲ್ಲಿ ಹಾಲಿನಲ್ಲಿರುವ ಸಕ್ಕರೆಗಳು ಒಡೆದು ಒಂದು ಬಗೆಯ ಅದ್ಭುತವಾಗಿ ಪರಿವರ್ತಿತವಾಗುತ್ತದೆ. ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳು ಮೊಸರು ಅತ್ಯುತ್ತಮವಾದ ಆಹಾರವಾಗಿದೆ.ಬಾಯಿಯ ಹುಣ್ಣು ಸಮಸ್ಯೆ ಇರುವವರು ಒಂದು ವೇಳೆ ಸತತವಾಗಿ ಬಾಯಿಯ ಹುಣ್ಣು ಅಥವಾ ಮೌಥ್ ಅಲ್ಸರ್ ನಿಂದ ಬಳಲುತ್ತಿದ್ದರೆ, ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಂಡರೆ ಶೀರ್ಘವೇ ಗುಣವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ