ಗರ್ಭಧಾರಣೆ ಸಂತೋಷದ ಜತೆಗೆ ದೇಹ ಹಾಗೂ ಮನಸ್ಸಿನಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ಈ ಸಮಯದಲ್ಲಿ ಮಹಿಳೆಯರ ಭಾವನೆ ವಿವರಿಸಲಾಗದು.. ನಿಮ್ಮ ಜೀವನದ ಆನಂದವನ್ನು ಸವಿಯಲು ಸೂಕ್ತ ಸಮಯವಿದು. ಪುಟ್ಟ ಮಗುವನ್ನು ಪ್ರಪಂಚಕ್ಕೆ ಬರಮಾಡಿಕೊಳ್ಳಲು ಹಲವು ಮಹಿಳೆಯರು ಉತ್ಸುಕರಾಗಿರುತ್ತಾರೆ. ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಈ ವೇಳೆ ಮಹಿಳೆಯರು ಯಾವೆಲ್ಲಾ ಆಹಾರ ಸೇವಿಸಬೇಕು. ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿದು ಕೊಳ್ಳುವುದು ಉತ್ತಮ.

ಮೊದಲ 3 ತಿಂಗಳು!
ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರಿಗೆ ವಾಂತಿ, ವಾಕರಿಕೆ ಆಲಸ್ಯ ಹಾಗೂ ಮಲಬದ್ಧತೆ. ತಲೆ ಸುತ್ತು ಸಮಸ್ಯೆಗಳನ್ನು ಎದುರಿಸಬಹುದು. ಈ ವೇಳೆ ಧ್ಯಾನ ಮಾಡುವುದು ಉತ್ತಮವಾದದ್ದು ಎಂದು ಹೇಳಲಾಗುತ್ತದೆ. ಮೆಡಿಟೇಷನ್ ಮಾಡುವುದರಿಂದ ಚೈತನ್ಯ ಕಾಯ್ದುಕೊಳ್ಳಬಹುದು. ವಿಶೇಷವಾಗಿ ಮಗುವಿನ ಬೆಳವಣಿಗೆಗೂ ಇದು ಉತ್ತಮ ಎಂದು ಹೇಳಬಹುದು. ಸರಿಯಾದ ಆಹಾರ ಮತ್ತು ಪದ್ಧತಿ ಅಳವಡಿಸಿಕೊಳ್ಳಬೇಕು. ಇದು ಬೆಳೆಯುತ್ತಿರುವ ಮಗವಿನ ಯೋಗಕ್ಷೇಮಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.
ಗರ್ಭಿಣಿಯರು ಡ್ರೈ ಫ್ರೂಟ್ ಸೇವನೆ ಮಾಡಿ!
ಅಂಜೂರ, ಕಪ್ಪು ಖರ್ಜೂರ್, ಬಾದಾಮಿ ಹಾಗೂ ಪಿಸ್ತಾ, ಸೌತೆಕಾಯಿ, ಕುಂಬಳಕಾಯಿ, ಕಲ್ಲಂಗಡಿ ಬೀಜ… ಸೂರ್ಯಕಾಂತಿ ಹೂವಿನ ಬೀಜ, ಕಲ್ಲಂಗಡಿ ಹಣ್ಣಿನ ಬೀಜ , ಏಲಕ್ಕಿ, ಕೇಸರಿ ಮುಂತಾದವುಗಳನ್ನು ಸೇವನೆ ಮಾಡಬೇಕು.
ಗರ್ಭಿಣಿಯರು ಮೊದಲು ಆಹಾರ ಸೇವನೆ ಸಾಮಾನ್ಯವಾಗಿ ಸೇವಿಸುವ ಪ್ರಮಾಣದಲ್ಲಿರಬೇಕು. ಮೊದಲ ತ್ರೈಮಾಸಿಕ ೧೫೦ ಕ್ಯಾಲೋರಿ, ಎರಡನೇ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ ಪ್ರತಿ ದಿನ ೩೫೦ ಕ್ಯಾಲೋರಿ, ಇರುವಂತೆ ನೋಡಿಕೊಳ್ಳಬೇಕು. ಈ ಅವಧಿ ಗರ್ಭಕೋಶ ಮತ್ತು ಗರ್ಭದಲ್ಲಿರುವ ಮಗು ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಅಲ್ಲದೇ ಯಾವ ಆಹಾರಗಳನ್ನು ಸೇವಿಸಬೇಕು ಎಂದು ಪಟ್ಟಿ ಮಾಡಿಕೊಳ್ಳಿ. ಹಾಲು, ಮೊಟ್ಟೆ, ಮಾಂಸ , ಕಾಳು ಹಾಗೂ ಬೇಳೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಗರ್ಭಿಣಿ ಮಹಿಳೆಯರಲ್ಲಿ ಸಾಮಾನ್ಯ ಮಹಿಳೆಗಿಂತ ಶೇ . ೫೦ ರಷ್ಟು ಅಧಿಕ ಪ್ರೋಟೀನ್ ಹೆಚ್ಚಾಗಿರಬೇಕು. ಇದು ಗರ್ಭಕೋಶದಲ್ಲಿ ಮಗು ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ.
ಅಲ್ಲದೇ ಗರ್ಭಿಣಿಯರು ಆಹಾರ ಪದಾರ್ಥಗಳಲ್ಲಿ ಕೊಬ್ಬಿನಾಂಶದ ಒಟ್ಟು ಪ್ರಮಾಣ ವು ಕ್ಯಾಲೋರಿಯ ಶೇಕಡಾ ೨೦ ಭಾಗವಾಗಿರಬೇಕು. ಅಲ್ಲದೇ, ಆಹಾರದಲ್ಲಿ ಕೊಬ್ಬಿನ ಪ್ರಮಾಣ ೩೦ ಗ್ರಾಂನಲ್ಲಿರಬೇಕು. ತುಪ್ಪ, ಬೆಣ್ಣೆ, ಅಡುಗೆ ಎಣ್ಣೆಯನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಮಗುವಿನ ಮೂಳೆ ಹಾಗೂ ಹಲ್ಲುಗಳು ಸಧೃಡವಾಗಿ ಬೆಳೆಯಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಸೇವಿಸಬೇಕು. ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಲು ಒಣಹಣ್ಣುಗಳು , ಹಸಿರು ತರಕಾರಿಗಳು ಹಾಗೂ ಕಾಳುಗಳು, ಮಾಂಸ , ಮೊಟ್ಟೆ ದೋಸೆ , ಕಿತ್ತಳೆ ಹಣ್ಣುಗಳನ್ನು ತಪ್ಪದೇ ಸೇವಿಸಬೇಕು.
ದಿನಚರಿ ಹೀಗಿರಲಿ…!
ಒಳ್ಳೆಯ ಪುಸ್ತಕಗಳು ಓದುವುದು ಹಾಗೂ ಸಂಗೀತ ಆಲಿಸಬೇಕು. ಹೆಚ್ಚು ಶ್ರಮ ಮಾಡದ ಕೆಲಸವನ್ನು ಹೆಚ್ಚು ತಿಂಗಳ ಕಾಲ ಮಾಡಬಹುದು. 8 ಕೆ.ಜಿ ಗಿಂತ ಹೆಚ್ಚು ಭಾರವಾದ ತೂಕ ಎತ್ತಬಾರದು. ಗರ್ಭಿಣಿ ದಿನಕ್ಕೆ 8 ಗಂಟೆ ನಿದ್ದೆ ಮಾಡಬೇಕು.
ಗರ್ಭಿಣಿಯರಲ್ಲಿ ಕೆಲವು ಸಮಸ್ಯೆಗಳು ಕಂಡು ಬರುತ್ತವೆ. ಉದ್ಯೋಗಸ್ಥ ಮಹಿಳೆಯರು 9 ತಿಂಗಳ ಕಾಲ ಕೆಲಸಕ್ಕೆ ಹೋಗಬಹುದು. ಆದ್ರೆ ರಾತ್ರಿ ಪಾಳಿಯ ಕೆಲಸ ಒಳ್ಳೆಯದಲ್ಲ. ಗರ್ಭಿಣಿಗೆ ದಿನಕ್ಕೆ ಎಂಟು ಗಂಟೆ ನಿದ್ದೆ ಅವಶ್ಯಕವಾದದ್ದು.