ಯುವತಿಯರ ಅಂದ ಕಣ್ಣು ಹಾಗೂ ಮುಖದಲ್ಲಿ ಕಾಣುತ್ತದೆ. ಹಲವರು ಇಂದಿನ ದಿನಗಳಲ್ಲಿ ಕಣ್ಣಿನ ರೆಪ್ಪೆಗಳ ಸಮಸ್ಯೆ ಎದುರಿಸುತ್ತಾರೆ. ಬಹಳಷ್ಟು ಮಂದಿಯ ಕಣ್ಣಿನ ರೆಪ್ಪೆಗಳು ತೆಳ್ಳಗಾಗಿ ಆಕರ್ಷಣೆ ಕಳೆದುಕೊಳ್ಳುತ್ತವೆ. ಉದ್ದವಾಗಿ, ಅಂದವಾಗಿ , ಹಾಗೂ ದಪ್ಪವಾಗಿ ರಪ್ಪೆಗಳು ಆಕರ್ಷಕವಾಗಿ ಕಾಣಲು ಈ ಟಿಪ್ಸ್ ಫಾಲೋ ಮಾಡುವುದು ಒಳ್ಳೆಯದು.

ಕಣ್ಣಿನ ರೆಪ್ಪೆಗಳು ಧೂಳಿನಿಂದ ಕಣ್ಣಿನ ರಕ್ಷಣೆ ಮಾಡುವುದಲ್ಲದೇ, ಹೆಣ್ಣು ಮಕ್ಕಳ ಸೌಂದರ್ಯ ಹೆಚ್ಚಿಸುತ್ತವೆ. ಮಾರ್ಕೆಟ್ ನಲ್ಲಿ ಸೀಗುವ ಆರ್ಟಿಫಿಶಿಯಲ್ ರೆಪ್ಪೆಗಳು ಸೀಗುತ್ತವೆಯಾದರೂ, ಅವು ಕಣ್ಣಿಗೆ ಒಳ್ಳೆಯದಲ್ಲ. ಆರ್ಟಿಫಿಶಿಯಲ್ ರೆಪ್ಪೆಗಳ ಮೊರೆ ಹೋದ್ರೆ, ಕಣ್ಣಿಗೆ ಹಾನಿಯುಂಟಾಗುತ್ತದೆ. ನಕಲಿ ರೆಪ್ಪೆಗಳು ಆ ಕ್ಷಣಕ್ಕೆ ಚೆಂದವಾಗಿ ಕಂಡರೂ ರೆಪ್ಪೆಗಳ ಕೂದಲು ಬೆಳವಣಿಗೆಗೆ ಅಡ್ಡಪಡಿಸುತ್ತವೆ. ಪಾರ್ಟಿ ಅಥವಾ ಸಮಾರಂಭಗಳಿಗೆ ಹಿಂದಿರುಗಿದ ನಂತರ ಹಲವರು ಹಾಗೇ ಮಲಗುತ್ತಾರೆ. ಆದರೆ ಮಲಗುವುದಕ್ಕೂ ಮುನ್ನ ಕಣ್ಣಿನ ಮೇಕಪ್, ಸೇರಿದಂತೆ ರೆಪ್ಪೆ ತೆಗೆದು ಮಲಗಬೇಕು.
ಕಣ್ಣಿನ ರೆಪ್ಪೆ ಉದ್ದವಾಗಲು ಪ್ರತಿ ದಿನ ಮಸಾಜ್ ಮಾಡಬೇಕು. ಸರಿಯಾದ ಕಾಳಜಿ ವಹಿಸದಿದ್ದರೆ ರೆಪ್ಪೆ ಗೂದಲುಗಳು ತೆಳುವಾಗುತ್ತವೆ. ಆದ್ದರಿಂದ ಕಣ್ಣಿನ ರೆಪ್ಪೆಗಳನ್ನು ಮಸಾಜ್ ಮಾಡಿ. ಇದರಿಂದ ಕೂದಲು ದಪ್ಪಗೆ ಬೆಳವಣಿಗೆಯಾಗುತ್ತವೆ.
ರೆಪ್ಪೆ ಗೂದಲನ್ನು ಬ್ರಷ್ ಮಾಡುವುದರಿಂದ ಉದ್ದ ಹಾಗೂ ದಪ್ಪವಾದ ರೆಪ್ಪೆಗಳನ್ನು ಪಡೆದುಕೊಳ್ಳಬಹುದು. ಕಾಸ್ಮೆಟಿಕ್ಸ್ ಶಾಪ್ ಗಳಲ್ಲಿ ವಿಚಾರಿಸಿದರೆ ನಿಮಗೆ ಕಣ್ಣಿನ ಬ್ರಷ್ ಕೊಡು್ತತಾರೆ. ಪ್ರತಿ ಬಾರಿ ಮಸ್ಕರಾವನ್ನು ಹಚ್ಚುವ ಮೊದಲು ರೆಪ್ಪೆಗೂದಲುಗಳನ್ನು ಬ್ರಷ್ ಮಾಡುವುದನ್ನು ಮರೆಯಬೇಡಿ.
ಪೆಟ್ರೋಲಿಯಂ ಜೆಲ್ಲಿ ಹಚ್ಚುವುದರಿಂದ ರೆಪ್ಪೆಗೂದಲನ್ನು ದಟ್ಟವಾಗಿ ಬೆಳೆಸಬಹುದು. ವ್ಯಾಸಲೀನ್ ಅತ್ಯುತ್ತಮ ಮನೆ ಮದ್ದಾಗಿದೆ. ರಾತ್ರಿ ಮಲಗುವ ಮೊದಲು ಸ್ವಲ್ಪ ವ್ಯಾಸಲೀನ್ ಹಚ್ಚಿ.
ಪೌಷ್ಟಿಕ ಆಹಾರ ಪೌಷ್ಟಿಕ ಆಹಾರವು ಆರೋಗ್ಯಕರವಾದ ಕಣ್ಣಿನ ರೆಪ್ಪೆಗಳ ಬೆಳವಣಿಗೆ ಸರಿಯಾಗಿ ಆಗುತ್ತದೆ. ಪ್ರೋಟೀನ್ ಮತ್ತು ಱೈಬರ್ ಯುಕ್ತ ಆಹಾರಗಳನ್ನು ಸೇವಿಸಬೇಕು. ಹಸಿರು ತರಕಾರಿ, ಮೀನು, ಪೇರಲೆ, ಮಾಂಸ ಮೊಟ್ಟೆಯಂತಹ ಆಹಾರವನ್ನು ಸೇವಿಸುವುದರಿಂದ ರೆಪ್ಪೆಗಳ ಕೂದಲು ಹೆಚ್ಚಾಗುತ್ತದೆ.

ಕಣ್ಣಿನ ರೆಪ್ಪೆ ಬೆಳವಣಿಗೆಗೆ ಮನೆ ಮದ್ದು
ಸ್ವಲ್ಪ ಹರಳೆಣ್ಣೆ ಮತ್ತು ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಒಂದು ಹತ್ತಿ ಬಟ್ಟೆಯ ಸಹಾಯದಿಂದ ನಿಮ್ಮ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಬೇಕು. ಮಲಗುವ ಮುನ್ನ ಕಣ್ಣಿನ ರೆಪ್ಪೆಗಳ ಮೇಲೆ ಲೋಳೆರಸವನ್ನು ಹಚ್ಚಬೇಕು. ಬೆಳಿಗ್ಗೆ ತಳ್ಳನೇಯ ನೀರಿನಿಂದ ತೊಳೆದು ಕೊಳ್ಳಬೇಕು. ಇದ್ರಿಂದ ಕಣ್ಣಿನ ರೆಪ್ಪೆಗಳು ಬಲು ಬೇಗ ಬೆಳೆಯುತ್ತವೆ.
ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಪ್ರೋಟೀನ್ ಮತ್ತು ಫೈಬರ್ ಯುಕ್ತ ಆಹಾರಗಳು , ಸೇಬು , ಹಸಿರು , ತರಕಾರಿಗಳನ್ನು ಸೇವಿಸಬೇಕು.
ರೆಪ್ಪೆಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಪ್ರತಿ ಬಾರಿ ನೀವು ಕಣ್ಣಿನ ಮೇಕಪ್ ಮಾಡುವಾಗಲು ಕಣ್ಣುಗಳನ್ನು ಚೆನ್ನಾಗಿ ತೊಳೆಯಿರಿ. ಕಣ್ಣುಗಳು ಹಗಲಿನಲ್ಲಿ ಬಹಳಷ್ಟು ಧೂಳನ್ನು ಹೀರಿಕೊಳ್ಳುತ್ತವೆ. ಇದು ರಂಧ್ರಗಳನ್ನು ನಿರ್ಬಂಧಿಸಿರುತ್ತದೆ.
ಕಣ್ಣಿಗೆ ಮೇಕಪ್ ಮಾಡಿ ಅದನ್ನು ತೆಗೆಯುವಾಗ ಇದನ್ನು ಮೆದುವಾಗಿ ತೆಗೆಯಬೇಕು. ಕಣ್ಣುಗಳನ್ನು ಉಜ್ಜಬಾರದು. ಕಣ್ಣುಗಳಿಗೆ ಎಣ್ಣೆ ಹಚ್ಚಿದರೆ ಕಣ್ಣಿನ ಮೇಕಪ್ ಅನ್ನು ಸುಲಭವಾಗಿ ತೆಗೆಯಬಹುದು.
ಬಿಸಿಲು, ಧೂಳು, ಗಾಳಿಗೆ ಹೋಗುವಾಗ ಆದಷ್ಟು ಕಣ್ಣುಗಳನ್ನು ಹಾಗೂ ಕಣ್ಣಿನ ರೆಪ್ಪೆಯನ್ನು ರಕ್ಷಣೆ ಮಾಡಿಕೊಳ್ಳಬೇಕು. ವಯಸ್ಸಿಗೆ ಬೇಕಾದಷ್ಟು ನಿದ್ದೆ ಮಾಡಬೇಕು. ಹೀಗೆ ಮಾಡಿದರು ಕಣ್ಣಿನ ರೆಪ್ಪೆಗಳು ಉದುರುವುದಿಲ್ಲ. ಇವುಗಳನ್ನು ಪಾಲಿಸಿದರೆ ಸಾಕು,