ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯ, ವಾಯುಮಾಲಿನ್ಯದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದೆಂದರೆ ಸವಾಲಿನ ಸಂಗತಿ.. ಕೆಲಸ ಮಾಡಿ ಎಲ್ಲವನ್ನು ಸಂಪಾದಿಸಬಹುದು. ಆದ್ರೆ ನೆಮ್ಮದಿ ಹಾಗೂ ಆರೋಗ್ಯವನ್ನು ಸಂಪಾದಿಸಲು ಮಾಡಲು ಸಾಧ್ಯವಿಲ್ಲ. ಕೆಲಸದ ಜತೆ ಜತೆಗೆ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಪುರುಷರಲ್ಲಿ ಕೆಲಸ ಒತ್ತಡ ಜಾಸ್ತಿಯಾಗುವ ಸಂಭವ ಹೆಚ್ಚಿರುತ್ತದೆ. ದೇಹ ರಿಲ್ಯಾಕ್ಸ್ ಆಗಲು, ಮಾನಸಿಕ ಹಾಗೂ ದೈಹಿಕ ನೆಮ್ಮದಿಗೆ ಪುರುಷರು ಪ್ರತಿ ದಿನ ರಾತ್ರಿ ಹಾಲು ಸೇವನೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

ಪುರುಷರು ಹಾಲು ಸೇವನೆ ಏಕೆ ಮಾಡಬೇಕು?
ಹಾಲಿನಿಂದ ದೇಹದಲ್ಲಿ ಅನೇಕ ರೀತಿಯ ಪೋಷಕಾಂಶಗಳನ್ನು ಪಡೆಯಬಹುದು. ಹಾಲು ಕುಡಿಯುವುದು ಎಲ್ಲಾ ವಯಸ್ಸಿನ ಜನರಿಗೂ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಹಾಲು ಕುಡಿಯುವುದರಿಂದ ಪುರಷರಲ್ಲಿ ಅಗತ್ಯವಾದ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು ದೊರೆಯುತ್ತವೆ. ಇದು ಮೂಳೆಗಳು, ಕೂದಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.ಆದ್ದರಿಂದ ರಾತ್ರಿ ಮಲಗುವ ಸ್ವಲ್ಪ ಸಮಯದ ಮೊದಲು, ಹಾಲು ಸೇವಿಸುವುದು ತುಂಬಾ ಒಳ್ಳೆಯದು. ಇದು ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ.
ಉತ್ತಮ ನಿದ್ರೆಗಾಗಿ ಹಾಲು ಸೇವಿಸಬೇಕು. ರಾತ್ರಿ ವೇಳೆ ಹಾಲು ಕುಡಿಯುವ ಮೂಲಕ, ಅದರಲ್ಲಿರುವ ಕೊಬ್ಬು ಮತ್ತು ಪ್ರೋಟೀನ್ ಗಳು ಹಾರ್ಮೋನುಗಳನ್ನು ಸಕ್ರೀಯಗೊಳಿಸುತ್ತವೆ.
ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕಂಡು ಬರುತ್ತದೆ. ಕೊಬ್ಬನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಹಾಲು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ. ಊಟದಲ್ಲಿ ಸೇವಿಸುವ ಮಸಾಲೆಯುಕ್ತ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೇ, ಹಾಲಿನಲ್ಲಿರುವ ಪೋಟ್ಯಾಷಿಯಂ, ಮೆಗ್ನೇಶಿಯಂ ಹಾಗೂ ಕ್ಯಾಲ್ಸಿಯಂ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಅಧಿಕ ರಕ್ತದ ಒತ್ತಡವನ್ನು ನಿವಾರಿಸುತ್ತದೆ.
ಬಾಡಿ ಬಿಲ್ಡಿಂಗ್ ಮಾಡುವ ಪರುಷರಿಗೆ ಹಾಲು ಸೇವನೆ ಮಾಡುವುದು ಒಳ್ಳೆಯದು. ಹಾಲಿನಲ್ಲಿ ಸೆಸಿನ್ ಹಾಗೂ ಪ್ರೋಟೀನ್ ಇದ್ದು, ಇದರಿಂದ ಸ್ನಾಯುಗಳನ್ನು ಬಲಪಡಿಸಬಹುದು. ನಿಮ್ಮ ದೇಹಕ್ಕೆ ಎನರ್ಜಿ ನೀಡುತ್ತದೆ.

ಹಾಲಿನಲ್ಲಿರುವ ಪೋಷಕಾಂಶಗಳು..!
ಟ್ರ್ಪಿಫ್ಟೋಫ್ಯಾನ್ !
ಇದೊಂದು ಪ್ರಮುಖ ಅಮೈನೋ ಆಮ್ಲ.. ದೇಹದ ಹಲವು ರಸದೂತಗಳನ್ನು ನಿಯಂತ್ರಿಸುತ್ತದೆ. ರಕ್ತದ ಮೂಕ ಮಿದುಳಿಗೆ ಆಗಮಿಸುವ ಟ್ರ್ಪಿಫ್ಟೋಫ್ಯಾನ್ ಸೆರೋಟೋನರ್ಜಿಕ್ ನ್ಯೂರಾನ್ ಎಂಬ ಭಾಗದಲ್ಲಿ ಸೆರೋಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುತ್ತದೆ. ಈ ಮೂಲಕ ಮೆಲಟೋನಿನ್ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ
ಕ್ಯಾಲ್ಸಿಯಂ..!
ಹಾಲಿನಲ್ಲಿರುವ ಕ್ಯಾಲ್ಸಿಯಂ ಹಾಗೂ ಮೆದುಳಿನ ನ್ಯೂರಾನ್ ಗಳ ಚಟುವಟಿಕೆಗಳ ಜತೆಗೆ ನಿಕಟ ಸಂಬಂಧ ಹೊಂದಿದೆ. ಈ ಚಟುವಟಿಕೆಯೆ ನಿದ್ದೆಯೇ ಸಮಯದಲ್ಲಿ ಗಾಢನಿದ್ದೆ ಹಾಗೂ ಕಣ್ಣುಗುಡ್ಡೆಯ ಕ್ಷಿಪ್ರವಾಗಿ ಚಲಿಸುವ ಹಾಗೂ ಗಾಢವಲ್ಲದ ನಿದ್ದೆ ಈ ಅವಧಿಯನ್ನು ಇದು ನಿರ್ಧರಿಸುತ್ತದೆ. ದೇಹದ ಬೆಳವಣಿಗೆಗೆ ಹಾಲು ಕುಡಿಯುವುದು ಉತ್ತಮ.
ದೈಹಿಕ ಕಾರ್ಯಕ್ಷಮತೆ ಹೆಚ್ಚಿಸುವ ಹಾಲು!
ತೂಕ ಇಳಿಸಿಕೊಳ್ಳಲು ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ಸಂದರ್ಭದಲ್ಲಿ ಹಾಲಿನ ಸೇವನೆ ಅತ್ಯಂತ ಉಪಯುಕ್ತವಾಗಿದೆ. ವ್ಯಾಯಾಮವು ಮುಗಿದ ತಕ್ಷಣ ಯಾವುದೋ ಎನರ್ಜಿ ಡ್ರಿಂಕ್ಸ್ ಮೊರೆ ಹೋಗುವುದಕ್ಕಿಂತ ಹಾಲಿನ ಸೇವನೆ ಶ್ರೇಷ್ಠವಾದದ್ದು. ಇದ್ರಿಂದ ಫ್ಯಾಟ್ ಅಂಶ ಕಡಿಮೆಯಾಗಿ ದೇಹದ ಸ್ನಾಯುಗಳ ಬಲವರ್ಧನೆಗೆ ಅವಶ್ಯಕವಾದ ಪೌಷ್ಟಿಕಾಂಶಗಳು ದೊರೆಯುತ್ತವೆ.
ಕೆನೆ ತೆಗೆಯಲಾದ ಹಾಲಿನಲ್ಲಿ ಕಡಿಮೆ ಕ್ಯಾಲೋರಿಗಳಿದ್ದು, ಸೋಡಾ, ಚಹಾ, ಇತರ ಎನರ್ಜಿ ಡ್ರಿಂಕ್ ಗಳಿಗಿಂತಲೂ ಇದರ ಸೇವನೆಯಿಂದ ಹೆಚ್ಚು ತೃಪ್ತಿ ಲಭಿಸುತ್ತದೆ ಎನ್ನುತ್ತದೆ.

ದೇಹದ ತೂಕ ಇಳಿಸಿಕೊಳ್ಳಲು ಯಾವುದೇ ಬಗೆಯ ಹಾಲು ಸೇವಿಸಿದರೂ ಅದನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಯಾವುದೇ ಕಾರಣಕ್ಕೂ ಅತಿಯಾದ ಹಾಲು ಸೇವನೆ ಒಳ್ಳೆಯದಲ್ಲ. ಆದ್ರೆ ಹಾಲು ಕುಡಿಯುತ್ತೇನೆ ಎಂದು , ಯಾವುದೇ ಕಾರಣಕ್ಕೂ ನೀರು ಸೇವನೆ ಕಡಿಮೆ ಮಾಡಕೂಡದು. ತೂಕ ಇಳಿಕೆಗೆ ನೀರು ಕುಡಿಯುವುದು ಅತಿ ಅವಶ್ಯವಾಗಿದ್ದು, ಇದರಿಂದ ನಿರ್ಜಲೀಕರಣವಾಗದಂತೆ ತಡೆಗಟ್ಚಲು ಸಹ ಸಹಾಯವಾಗುತ್ತದೆ.
ನಿಶ್ಯಕ್ತಿಯಿಂದ ಬಳಲುತ್ತಿರುವವರಿಗೆ ಹಾಗೂ ಗರ್ಭಿಣಿಯರಿಗೆ ವೈದ್ಯರು ಹಾಲು ಸೇವಿಸಲು ಸಲಹೆ ನೀಡುತ್ತಾರೆ. ಅದರಲ್ಲೂ ಕೊಬ್ಬು ರಹಿತ ಹಾಲು ಸೇವನೆಯನ್ನು ಇಷ್ಟಪಡುತ್ತಾರೆ. ಇದರಲ್ಲೂ ಕ್ಯಾಲ್ಸಿಯಂ ಯಥೇಚ್ಚ ಪ್ರಮಾಣದಲ್ಲಿದೆ. ಶರೀರದ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿ.