ಅಮ್ಮ ಮಾಡಿದ ಅಡುಗೆ ರುಚಿ… ಬೇರೆಯವರು ಮಾಡಿದ ಅಡುಗೆಯಲ್ಲಿ ಇರಲಾರದು ಎಂಬ ಮಾತಿದೆ. ಇತ್ತೀಚಿನ ದಿನಗಳಲ್ಲಿ ಕೆಲಸದ ನಿಮಿತ್ಯ ಬೇರೆ ಕಡೆ ವಾಸಿಸುವ ಅನಿವಾರ್ಯತೆ ಹೆಚ್ಚಿದೆ, ಮನೆ ಊಟ. ಅಮ್ಮನ ಕೈ ರುಚಿ ಅದೆಷ್ಟು ಮಂದಿ ಮಿಸ್ ಮಾಡ್ಕೊತ್ತಾರೆ. ನಾವೇ ಅಡುಗೆ ಮಾಡಿದರೂ ಅಮ್ಮನ ಥರ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ ಅಡುಗೆ ಮನೆಯಲ್ಲಿ ಸಣ್ಣ ಸಣ್ಣ ವಿಷಯಗಳ ಕಡೆಗೆ ನೀಡಿದಾಗ, ನಿಮ್ಮ ಅಡುಗೆಯ ವೇಗವನ್ನು ಹೆಚ್ಚಿಸುವುದಲ್ಲದೇ, ರುಚಿಕರವಾಗಿ ಅಡುಗೆ ತಯಾರಿಸಬಹುದು. ಅಡುಗೆ ಮಾಡಲು ಬೇಕಾಗಿರುವ ಬೇಸಿಕ್ ಟಿಪ್ಸ್ ಇಲ್ಲಿದೆ.

ಅಡುಗೆ ಮಾಡುವ ಮೊದಲು ಎಲ್ಲಾ ಸಾಮಾನೂಗಳನ್ನು ಸಿದ್ಧವಾಗಿರಿಸಿಕೊಳ್ಳಿ. ಇದರಿಂದ ನಿಮಗೆ ಅಡುಗೆ ಸುಲಭವಾಗುತ್ತದೆ. ನೀವು ಏನ್ನನ್ನಾದರೂ ಕುದಿಸಲು ಹಾಕುತ್ತಿದ್ದರೆ, ಪ್ರೆಶರ್ ಕುಕ್ಕರ್, ಅಥವಾ ಪ್ಯಾನ್ ಮುಚ್ಚಳವನ್ನು ಮುಚ್ಚಲಾಗಿದೆಯೇ.. ಎಂಬುದನ್ನು ಗಮನಿಸಿ. ಇದು ಆಹಾರವನ್ನು ತ್ವರಿತವಾಗಿ ಕುದಿಸುವುದಲ್ಲದೇ, ಅನಿಲವನ್ನು ಉಳಿಸಲು ಸಹಕಾರಿ.
ತರಕಾರಿಯಗಳನ್ನು ಕುದಿಸಲು ಬಯಸಿದರೇ, ಬೇಯಿಸಲು ನೀರನ್ನು ಸಿದ್ಧವಾಗಿಡಿ. ನಿಮ್ಮ ಕೆಲಸ ಸುಲಭವಾಗುತ್ತದೆ. ಆಹಾರದ ಪರಿಮಳ, ಸ್ವಾದ ಹೆಚ್ಚಿಸಲು ಸರಿಯಾದ ಸಾಮಾಗ್ರಿಗಳ ಮೂಲಕ ಅಡುಗೆ ಮಾಡುವ ವಿಧಾನ ಅನುಸರಿಸಿ.
ಅಡುಗೆ ಮಾಡಿದ ನಂತರ ನಿಮ್ಮ ಸಿಂಕ್ ನ್ನು ಸ್ವಚ್ಛಗೊಳಿಸಿ.
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಮೊದಲೇ ಇವೆರಡನ್ನು ಕಟ್ ಮಾಡಬೇಡಿ. ಹೀಗೆ ಕತ್ತರಿಸಿ ಇಟ್ಟುಕೊಳ್ಳುವುದರಿಂದ ಇದರ ಸುಹಾಸನೆ ಕಡಿಮೆಯಾಗುತ್ತದೆ. ಅಡುಗೆ ಕೊನೆ ಗಳಿಗೆಯಲ್ಲಿ ಇವುಗಳನ್ನು ಕತ್ತರಿಸುವುದು ಉತ್ತಮ. ಈರುಳ್ಳಿ ಹಾಗೂ ಬೆಳುಳ್ಳಿಯನ್ನು ಬಳಸುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯಿರಿ,
ಪರಾಟ ಮಾಡುತ್ತಿದ್ದರೆ ಹಿಟ್ಟಿನಲ್ಲಿ ತುರಿದ ಅಥವಾ ಬೇಯಿಸಿದ ಆಲುಗಡ್ಡೆಯನ್ನು ಸೇರಿಸಿ. ಪರಾಟಗೆ ಎಣ್ಣೆ ಅಥವಾ ತುಪ್ಪ ಬಳಸುವ ಬದಲು, ಬೆಣ್ಣೆಯನ್ನು ಬಳಸಬಹುದು.

ನೂಡಲ್ಸ್ ಕುದಿಸುವಾಗ ಕುದಿಯುವ ನೀರಿಗೆ ಸ್ವಲ್ಪ ಉಪ್ಪು, ಮತ್ತು ಎಣ್ಣೆಯನ್ನು ಹಾಕಿ, ತೆಗೆದ ನಂತರ ತಣ್ಣೀರಿನಿಂದ ತೊಳೆಯಿರಿ, ನೂಡಲ್ಸ್ ಒಟ್ಟಿಗೆ ಅಂಟಿಕೊಳ್ಳುವುದಿಲ್ಲ.
ಪುರಿಯನ್ನು ಗರಿ ಗರಿಯಾಗಿಸಲು ಹಿಟ್ಟಿನಲ್ಲಿ ಸ್ವಲ್ಪ ರವೆ ಇಲ್ಲವೇ, ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿ ತಯಾರಿಸಿ, ಇದರಿಂದ ಪುರಿ ಗರಿ ಗರಿಯಾಗುತ್ತವೆ.
ತರಾಕಾರಿಗಳನ್ನು ಚೆನ್ನಾಗಿ ಹುರಿದು ಬೇಯಿಸಿದರೆ, ಬೇಗನೆ ಬೇಯುತ್ತವೆ. ಜತೆಗೆ ರುಚ್ಚಿಯೂ ಹೆಚ್ಚಾಗುತ್ತದೆ. ಅಡುಗೆಗೆ ನಾನ್ ಸ್ಟಿಕ್ ಪಾತ್ರೆಗಳನ್ನು ಉಪಯೋಗಿಸಿ. ನಾನ್ ಸ್ಟಿವ್ ತವೆ ಉಪಯೋಗಿಸಿದರೆ ಎಣ್ಣೆ ಬಳಕೆ ಕಡಿಮೆ ಮಾಡಬಹುದು.
ಅಡುಗೆಯಲ್ಲಿ ಉಪ್ಪು ಸಮ ಪ್ರಮಾಣದಲ್ಲಿರಲಿ, ಅಡುಗೆ ಮಾಡಿ ರುಚಿ ನೋಡಿದ ಮೇಲೆ ಬೇಕಾದಷ್ಟು ಉಪ್ಪು ಬೆರೆಸಿ. ಆಲಿವ್ ಆಯಿಲ್ ವಿನೆಗರ್, ಅಥವಾ ಲಿಂಬೆ ಹಣ್ಣಿನ ರಸವನ್ನು ಅಡುಗೆಯ ಕೊನೆಯಲ್ಲಿ ಹಾಕಿದರೆ ಅಡುಗೆಯ ರುಚಿ ಹೆಚ್ಚುತ್ತದೆ.
ಸಂಸ್ಕರಿಸಿದ ಸಾಸ್ ಬಳಕೆ ಕಡಿಮೆ ಮಾಡಿ. ಆರೋಗ್ಯಕ್ಕೆ ಇದು ಒಳ್ಳೆಯದು.ಟಮೋಟೋ ಸಾಸ್, ಸೋಯಾ ಸಾಸ್, ಮತ್ತು ಸಂಸ್ಕರಿಸಿದ ಸಾಸ್ ಗಳ ಬಳಕೆ ಕಡಿಮೆ ಮಾಡುವುದು ಉತ್ತಮ.ತರಕಾರಿಗಳ ಸಿಪ್ಪೆ ತೆಗೆಯುವ ಬದಲು, ಅವುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದ್ರಿಂದ ತರಕಾರಿಯಲ್ಲಿರುವ ವಿಟಮಿನ್ ಗಳು ಸಿಪ್ಪೆ ಹಾಗೇ ಉಳಿಯುತ್ತದೆ. ತರಕಾರಿಗಳ ಸಿಪ್ಪೆ ತೆಗೆಯುವ ಬದಲು, ಬೇಯಿಸಬಹುದು.