ಅಂಡರ್ ಆರ್ಮ ಸಮಸ್ಯೆ ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರೂ ಈ ಸಮಸ್ಯೆ ಎದುರಿಸುತ್ತಾರೆ. ಅಂಡರ್ಮ ಆರ್ಮ ಕಪ್ಪಗಾಗಿರುವುದರಿಂದ, ಡ್ರೆಸ್ ಗಳನ್ನು ಧರಿಸಲು ಆಗುವುದಿಲ್ಲ, ಕಾಸ್ಮೆಟಿಕ್ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಅವುಗಳು ಹೆಚ್ಚು ರಾಸಾಯನಿಕಯುಕ್ತವಾಗಿರುತ್ತವೆ. ಹಾಗಾಗಿ ಅಡುಗೆ ಮನೆಯಲ್ಲೇ ಸೀಗುವ ಮನೆ ಮದ್ದು ಗಳನ್ನ ಉಪಯೋಗಿಸಿ, ಕಂಕುಳ ಭಾಗದಲ್ಲಾಗಿರುವ ಕಪ್ಪುನ್ನು ನಿವಾರಿಸಬಹುದಾಗಿದೆ. ನ್ಯಾಚುರಲ್ ಆಗಿ ಬಿಳುಪಾಗಿಸಬಹುದು. ಮನೆ ಮದ್ದುಗಳ ಬಗ್ಗೆ ತಿಳಿಯಿರಿ.

ಸ್ನಾನ ಮಾಡುವ ಮೊದಲು, ಪ್ರತಿ ದಿನ!
ಪ್ರತಿ ದಿನ ಸ್ನಾನಕ್ಕೆ ಹೋಗುವ ಮೊದಲು, ಅಂದರೆ ಅರ್ಧ ಗಂಟೆ ನಿಂಬೆ ತೆಗೆದುಕೊಂಡು 5 ನಿಮಿಷಗಳ ಕಾಲ ಎರಡೂ ಕೈಗಳ ಅಂಡರ್ ಆರ್ಮ ಗಳಲ್ಲಿ ಉಜ್ಜಿಕೊಳ್ಳಿ. ಇದರ ನಂತರ ಬ್ರಷ್ ಮಾಡಿ. ನಿಂಬೆ ರಸ ನಿಮ್ಮ ಚರ್ಮದ ಮೇಲೆ ಸ್ವಲ್ಪ ಸಮಯದವರೆಗೂ ಇಟ್ಟಿಕೊಳ್ಳಿ. ಇದರ ನಂತರ ಸ್ನಾನ ಮಾಡುವಾಗ, ಅಂಡರ್ ಆರ್ಮನ್ನು ಶುದ್ಧ ನೀರಿನಿಂದ ತೊಳೆಯಿರಿ. ಇಲ್ಲಿ ನೀವು ಸೋಪ್ ಅಥವಾ ಶವರ್ ಜೆಲ್ ಗಳನ್ನು ಹಚ್ಚಿಕೊಳ್ಳುವ ಅಗತ್ಯವಿಲ್ಲ.
ಚರ್ಮದ ಮೇಲೆ ನಿಂಬೆ ಹೇಗೆ ಕಾರ್ಯ ನಿರ್ವಹಿಸುತ್ತದೆ…?
ನಿಂಬೆಯಲ್ಲಿ ಸಿಟ್ರಿಕ್ ಆಮ್ಲ ಹೆಚ್ಚಾಗಿದೆ. ಇದು ಮೆಲನಿನ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಈ ಕಾರಣಕ್ಕಾಗಿ ನಿಂಬೆ ಹಚ್ಚುವುದರಿಂದ ಚರ್ಮ ಸುಂದರವಾಗುವುದಲ್ಲದೇ, 1 ಅಥವಾ 2 ದಿನದ ಬಳಿಕ ಇದರ ರಿಸಲ್ಟ್ ನಿಮಗೆ ತಿಳಿಯುತ್ತದೆ. ಸುಮಾರು 2 ವಾರಗಳವರೆಗೆ ನಿರಂತರವಾಗಿ ಮಾಡಿ. ವ್ಯತ್ಯಾಸ ನೀವೇ ನೋಡಿ.
ಕಚ್ಚಾ ಆಲುಗಡ್ಡೆ ಸಹಾಯಕ..!
ಕಚ್ಚಾ ಆಲುಗಡ್ಡೆ ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಯಾ ಮಾಡುತ್ತದೆ. ಕಚ್ಚಾ ಆಲುಗಡ್ಡೆಯನ್ನು ನಿಮ್ಮ ಕೈ ಕಾಲುಗಳು ಕಪ್ಪಾಗಿದ್ದರೆ 20 ನಿಮಿಷಗಳ ಕಾಲ ಮಸಾಜ್ ಮಾಿ. ಕೇವಲ 7 ದಿನದಲ್ಲೇ ಫಲಿತಾಂಶವನ್ನು ಕಾಣಬಹುದು.
ಹಸಿ ಆಲುಗಡ್ಡೆ ಉಪಯೋಗಿಸುವುದು ಹೇಗೆ..?
ಹಸಿ ಆಲುಗಡ್ಡೆಯನ್ನು ತೊಳೆದು ಸಿಪ್ಪೆ ಮಾಡಿ, ನುಣ್ಣಗೆ ತುರಿ ಮಾಡಿ. ಈ ಸಮಯದಲ್ಲಿ ಆಲುಗಡ್ಡೆ ರಸ ಹೊರ ಬರುತ್ತದೆ. ಈ ರಸವನ್ನು ಎಸೆಯಬೇಡಿ. ಮೊದಲು ತುರಿದ ಆಲುಗಡ್ಡೆ ತಿರುಳನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಎರಡೂ ಅಂಡರ್ ಆರ್ಮಗಳಿಗೆ ಮಸಾಜ್ ಮಾಡಿ. ನಂತರ ಉಳಿದ ಆಲುಗಡ್ಡೆ ರಸವನ್ನು ಹತ್ತಿಯ ಸಹಾಯದಿಂದ ಅಂಡರ್ ಆರ್ಮಗಳಿಗೆ ಹಚ್ಚಿ. 10 ನಿಮಿಷ ಬಿಟ್ಟು, ನಂತರ ಸ್ನಾನ ಮಾಡಿ.

ಅಲೋವೆರಾ !
ನಿಮ್ಮ ಮನೆಯಲ್ಲಿ ಅಲೋವೆರಾ ಸಸ್ಯ ಇದ್ದರೆ, ನಿಮ್ಮ ಅಂಡರ್ ಆರ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಉತ್ತಮವಾದ ಆಯ್ಕೆ ಎಂದು ಹೇಳಬಹುದು. ಅಲೋವೆರಾ ಎಲೆಯ ಒಂದು ಸಣ್ಣ ಭಾಗವನ್ನು ಕತ್ತರಿಸಿ, ಅದರ ಮೇಲಿರುವ ಹಸಿರು ಮುಳ್ಳಿನ ಚರ್ಮವನ್ನು ತೆಗೆದು ಹಾಕಿ. ಉಳಿದ ತಿರುಳಿನ ರಸವನ್ನು ನಿಮ್ಮ ಕೈ ಕಾಲುಗಳ ಮೇಲೆ ಹಚ್ಚಿ. ತಿರುಳಿನ ಸಹಾಯದಿಂದ ತೋಳುಗಳ ಭಾಗದಲ್ಲಿ ಮಸಾಜ್ ಮಾಡಿ.
ಅಲೋವೆರಾ ಹೇಗೆ ಅನುಕೂಲ..?
ಅಲೋವೆರಾದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳಿವೆ. ಇದು ಚರ್ಮದ ಮಂದತೆ ಡಲ್ ಸ್ಕಿನ್ ನ್ನು ನಿವಾರಿಸಲು ನೆರವಾಗುತ್ತದೆ. ಅಲೋವೆರಾವನ್ನು ವಾರಕ್ಕೆ ಲ2 ಬಾರಿ ಮಸಾಜ್ ಮಾಡಿದರೆ, ನೀವು ಉತ್ತಮ ಫಲಿತಾಂಶವನ್ನು ಕಾಣಬಹುದು. ಅಲೋವೆರಾ ಜೆಲ್ ಅಥವಾ ಸಸ್ಯದ ತಿರುಳನ್ನು ಅಂಡರ್ ಆರ್ಮಗೆ ಕನಿಷ್ಟ 10 ನಿಮಿಷಗಳ ಕಾಲ ಮಸಾಜ್ ಮಾಡಿ. 5 ರಿಂದ 7 ನಿಮಿಷ ಬಿಟ್ಟು ಸ್ನಾನ ಮಾಡಿ.