ನಿದ್ರಾಹೀನತೆ ಸಮಸ್ಯೆ ಇದ್ಯಾ? ಮೊಸರು ಸೇವಿಸಿ

  • by

ಪ್ರತಿ ಮನೆಯಲ್ಲೂ ಮೊಸರಿಲ್ಲದೇ ಊಟ ಇಲ್ಲವೇ ಇಲ್ಲ. ಈರೋಗ್ಯ ದೃಷ್ಟಿಯಿಂದ ಮೊಸರು ಎಲ್ಲಾ ಮನೆಗಳಲ್ಲೂ ಉಪಯೋಗಿಸಲಾಗುತ್ತದೆ.  ನೂರಾರು ವರ್ಷಗಳಿಂದ ಮೊಸರಿನೊಂದಿಗೆ ಊಟ ಮುಗಿಸುವುದು ಪದ್ಧತಿ. ಮೊಸರನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋದಾದ್ರೆ… 

1 ಮೊಸರಿನಲ್ಲಿ ಕ್ಯಾಲ್ಸಿಯಂ ಹೆಚ್ಚು

ಮೊಸರಿನಲ್ಲಿ ಕ್ಯಾಲ್ಯಿಯಂ ಹೆಚ್ಚಾಗಿರುತ್ತದೆ. ವಿಟಮಿನ್ ಡಿ, ಪ್ರೋಟೀನ್ . ಗಟ್ , ಬ್ಯಾಕ್ಟೇರಿಯಾ ಇರುತ್ತವೆ. ಬೇರೆ ಆಹಾರಗಳಿಂದ ವಿಟಮಿನ್, ಬೇರೆ ಆಹಾರಗಳಿಂದ ವಿಟಮಿನ್ , ಮಿನಿರಲ್ಸ್ ಹೀರಿಕೊಳ್ಳಲು ಮೊಸರು ದೇಹಕ್ಕೆ ಸಹಾಯ ಮಾಡುತ್ತದೆ.

Curd  benefits, health, 
ಮೊಸರು, ಆರೋಗ್ಯ ಪ್ರಯೋಜನ,

2. ಮೂಳೆಗಳ ಆರೋಗ್ಯಕ್ಕೆ ಉತ್ತಮ

ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ  ಇದು ಸಹಾಯ ಮಾಡುತ್ತದೆ.  ಇನ್ಫೆಕ್ಷನ್ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಇದು ಉತ್ತಮವಾದದ್ದು. ವಿಟಮಿನ್ ಇ, ಜಿಂಕ್, ಫಾಸ್ಫರಸ್ ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಸಹ ಸಹಕಾರಿ. ಹಾಗೆಯೇ ಸ್ಟ್ರಾಸ್’ನಿಂದ ನೊಂದಿರುವವರು ಮೊಸರನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.

3. ಹಸಿವು ಹಾಗೂ ನಿಶಕ್ತಿಗೆ ರಾಮಬಾಣ 

ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿದ್ದರೆ ನಿಯಮಿತವಾಗಿ ಮೊಸರನ್ನು ಸೇವಿಸುವ ಮೂಲಕ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಹಾಗೂ ದೇಹದಲ್ಲಿ ನಿಶಕ್ತಿಯಾಗದಂತೆ ತಡೆಯುತ್ತದೆ. ಹಾಲು ಮೊಸರಾಗುವ ಸಮಯದಲ್ಲಿ ಹಾಲಿನಲ್ಲಿರುವ ಸಕ್ಕರೆಗಳು ಒಡೆದು ಒಂದು ಬಗೆಯ ಅದ್ಭುತವಾಗಿ ಪರಿವರ್ತಿತವಾಗುತ್ತದೆ.  ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳು ಮೊಸರು ಅತ್ಯುತ್ತಮವಾದ ಆಹಾರವಾಗಿದೆ. 

4. ಬಾಯಿಯ ಹುಣ್ಣು 

ಬಾಯಿಯ ಹುಣ್ಣು ಸಮಸ್ಯೆ ಇರುವವರು ಒಂದು ವೇಳೆ ಸತತವಾಗಿ ಬಾಯಿಯ ಹುಣ್ಣು ಅಥವಾ ಮೌಥ್ ಅಲ್ಸರ್ ನಿಂದ ಬಳಲುತ್ತಿದ್ದರೆ, ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಂಡರೆ ಶೀರ್ಘವೇ ಗುಣವಾಗುತ್ತದೆ.

5. ನಿದ್ರಾಹೀನತೆ ಸಮಸ್ಯೆಗೆ 

Curd  benefits, health, 
ಮೊಸರು, ಆರೋಗ್ಯ ಪ್ರಯೋಜನ,

ನಿದ್ರಾಹೀನತೆ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಮೊಸರನ್ನು ಸೇವಿಸಿ ಮಲಗಬೇಕು.  ವೈದ್ಯರು ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ಲೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನಯಲ್ಲಿ ಮೊಸರು ಇಲ್ಲವೆಂದರೆ ಊಟ ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. 

6. ಮೂಲವ್ಯಾಧಿ ಸಮಸ್ಯೆ 

ಅಲ್ಲದೇ ಮೂಲವ್ಯಾಧಿ ಸಮಸ್ಯೆ ಇರುವವರು ಮೊಸರನ್ನು ನೀರಾಗಿಸಿ ಇದರಲ್ಲಿ ಕೆಲ ಪಿಸ್ತಾ ಗಳನ್ನು ನೆನೆಯಿಟ್ಟು, ಪಿಸ್ತಾಗಳನ್ನು ಅರೆದು ಕುಡಿಯುವ ಮೂಲಕ ನೋವಿನಿಂದ ಮುಕ್ತಿ ಪಡೆಯಬಹುದಾಗಿದೆ.  

7. ಹುಳಿ ಮೊಸರಿನ ಉಪಯೋಗ

ಹುಳಿಯಾದ ಮೊಸರನ್ನು ಚೆಲ್ಲುವ ಬದಲು ಅದನ್ನು ಮುಖಕ್ಕೆ ಹ್ಚಚಿ ನಯವಾಗಿ ಮಸಾಜ್ ಮಾಡಿ ಒಣಗಿದ ನಂತರ ಮುಖ ತೊಳೆಯುವುದರಿಂದ ಮುಖದಲ್ಲಿರುವ ಕೊಳೆ ವಾಯವಾಗಿ ತ್ವಚೆ ನಯವಾಗುವುದಲ್ಲದೇ, ಕಾಂತಿ ಹೆಚ್ಚುತ್ತದೆ. 

ಮೊಸರು ಈ ರೀತಿ ಉಪಯೋಗಿಸಬೇಡಿ…

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಭಾರತೀಯರ ಊಟದಲ್ಲಿ ಮೊಸರು ಪ್ರಮುಖ ಪಾತ್ರವಹಿಸುತ್ತದೆ. ಯ ಮೊಸರಿನಲ್ಲಿ ಅನೇಕ ಪೋಷಕಾಂಶ ಮತ್ತು ಆರೋಗ್ಯಕ್ಕೆ ಅಗತ್ಯವಿರುವ ಅಂಶಗಳಿದ್ದ ಕೂಡಿದ್ದು. ಕೇವಲ ಮೊಸರನ್ನು ಸೇವನೆಗೂ ಮಾತ್ರವಲ್ಲ.  ಸೌಂದರ್ಯಕ್ಕೂ ಹೆಚ್ಚು ಬಳಸಲಾಗುತ್ತದೆ. ಮೊಸರು ಮುಪ್ಪನ್ನು ಮುಂದುಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

Curd  benefits, health, 
ಮೊಸರು, ಆರೋಗ್ಯ ಪ್ರಯೋಜನ,

ದಿನಕ್ಕೆ 250 ರಿಂದ 600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವನ ಪೂರ್ತಿ ಆರೋಗ್ಯಕರವಾಗಿರಬಹುದು. ಆದ್ರೆ ಮೊಸರನ್ನು ಹೇಗೆ ಉಪಯೋಗಿಸಿದ್ರೆ ಆರೋಗ್ಯಕ್ಕೆ ಉತ್ತಮವಾದದ್ದು. ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ ಇದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು.

ಮೊಸರನ್ನ ರಾತ್ರಿ ಹೊತ್ತು ಸೇವನೆ ಮಾಡಬಾರದು. ಈ ರೀತಿ ಸೇವನೆ ಮಾಡಿದ್ರಿಂದ ಮೊಸರಿನ ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಆಗುತ್ತದೆ. ಇದ್ರಿಂದ ಅನೇಕ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

ಮೊಸರಿಗೆ ಸ್ವಲ್ಪ ಮಣಸಿನ ಪುಡಿ ಬೆರೆಸಿಕೊಂಡು ಸೇವಿಸಿದರೆ ಉತ್ತಮ.  ಆದ್ರೆ ಹೆಚ್ಚು ಮೆಣಸನ್ನು ಉಪಯೋಗಿಸಬೇಡಿ. 

ಹಳೇ ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಿ ಸೇವಿಸಬಾರದು.. ಇದನ್ನು ರಾತ್ರಿ ಸಮಯದಲ್ಲಿ  ಬೇಸಿಗೆಯಲ್ಲಿ ಸೇವಿಸುವುದು ನಿಶಿದ್ಧಯ. ಮೊಸರನ್ನು ಸೇವಿಸದೇ ಆಹಾರ ಸ್ವೀಕರಿಸದೇ ಇಪುವವರು, ಮೊಸರಿಗೆ ಮಾರು ಹೋದವರು ಈ ರೀತಿ ಅನುಸರಿಸಬೇಕಾಗುತ್ತದೆ. 

ಮೊಸರಿಗೆ ಸ್ವಲ್ಪ ಮೆಂತೆ ಕಾಳಿನ ಪುಡಿಯನ್ನು ಬೆರೆಸಿಕೊಂಡು ಸೇವಿಸಬಹುದು. ಹೀಗೆ ಸೇವಿಸುವುಜರಿಂದ ಅಜೀರ್ಣದ ಸಮಸ್ಯೆಯನ್ನು ಮತ್ತು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಬಹುದು. ಇನ್ನು ಸಕ್ಕರೆ ಮಿಶ್ರಿತ ಮೊಸರನ್ನು ರಾತ್ರಿ ಹೊತ್ತು ಸೇವಿಸಲೇಬಾರದು. ರಾತ್ರಿ ಹೊತ್ತು ಮೊಸರು ಸೇವಿಸುವ ಬದಲು, ಮಜ್ಜಿಗೆ ಸೇವಿಸಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ