ಹಿಮ್ಮಡಿ ಬಿರುಕು ಅಥವಾ ಒಡೆದ ಹಿಮ್ಮಡಿ ಕಾಲುಗಳ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಾಮಾನ್ಯವಾಗಿ ಶುಷ್ಕ ಚರ್ಮದಿಂದ ಹಿಮ್ಮಡಿ ಒಡೆಯುತ್ತದೆ. ಕಾಲುಗಳ ಬಿರುಕು ಸಾಮಾನ್ಯವಾಗಿ ಆಗಾಗ್ಗೆ ಉಂಟಾಗುತ್ತದೆ. ಒಮ್ಮೊಮ್ಮೆ ನೋವು ತುಂಬಾ ತೀವ್ರವಾಗಿದ್ದು,. ಬಿರುಕು ಬಿಟ್ಟ ಪಾದಗಳಿಗೆ ಎಷ್ಟೇ ಉಪಚಾರ ಮಾಡಿದ್ರು, ಸಮಸ್ಯೆ ಮಾತ್ರ ನಿವಾರಣೆಯಾಗುವುದಿಲ್ಲ. ಹಾಗಾದ್ರೆ ಪಾದಗಳ ಬಿರುಕು ನಿವಾರಣೆಗೆ ಚಿಕಿತ್ಸೆಗಳೇನು.. ಕೆಲ ಮನೆ ಮದ್ದುಗಳನ್ನು ಉಪಯೋಗಿಸಿ ಪಾದಗಳ ಬಿರುಕು ತಡೆಗಟ್ಟಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.

ಅಲೋವೆರಾ- ನಿಂಬೆ…!
2 ಟೀ ಸ್ಪೂನ್ ನಿಂಬೆ
ಅಲೋವೆರಾ ಜೆಲ್ 1/2 ,
ನಿಂಬೆ – 1 ಟೀ ಸ್ಪೂನ್,
ಟ್ರೀ ಎಣ್ಣೆ, 1 ಟೀ ಸ್ಪೂನ್
ಉಪ್ಪು 1 ಟೀ ಸ್ಪೂನ್
ನೀರು – 1 ಟೀ ಸ್ಪೂನ್
ಆಪಲ್ ವಿನೆಗರ್
ಎಲ್ಲವನ್ನು ತೆಗೆದುಕೊಂದು ಒಂದು ಬಕೆಟ್ ನಲ್ಲಿ ಮಿಶ್ರಣ ಮಾಡಿ. ನಿಮ್ಮ ಪಾದಗಳನ್ನು ಈ ನೀರಿನಲ್ಲಿ ಇರಿಸಿ. ಸ್ವಲ್ಪ ಹೊತ್ತು 10 ರಿ್ದಂ 15 ನಿಮಿಷ ಕಾಲುಗಳನ್ನು ಇರಿಸಿ. ನಂತರ ಡೆಡ್ ಕೋಶಗಳನ್ನು ತೆಗೆದು ಹಾಕಲು ಇದು ನೆರವಾಗುತ್ತದೆ. ಅಲ್ಲದೇ ನಿಮ್ಮ ಪಾದಗಳನ್ನು ಮೃದುಗೊಳಿಸುತ್ತದೆ.
ನಂತರ ನಿಮ್ಮ ಪಾದಗಳನ್ನು ನೀರಿನಿಂದ ತೆಗೆಯಿರಿ. ಆಗ ಪಾದಗಳನ್ನು ಸ್ಕ್ರಬ್ ಮಾಡಬಹುದು. ಸುಮಾರು 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ನಂತರ ಪಾದಗಳನ್ನು ಸ್ವಚ್ಛವಾದ ಟಾವೆಲ್ ನಿಂದ ಒರೆಸಿ, ಬಳಿಕ ನೀರು ತುಂಬಿದ ಮತ್ತೊಂದು ಬಕೆಟ್ ತೆಗೆದುಕೊಳ್ಳಿ. ಪಾದಗಳನ್ನು ನೀರಿನಲ್ಲಿ ನೆನೆಯಿಸಿ. ಹೆಚ್ಚು ನೀರನ್ನು ತೆಗೆದುಕೊಳ್ಳಬೇಡಿ. ಇದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಮತ್ತು ನಿಂಬೆ ರಸ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಆಮೇಲೆ ಆಪಲ್ ಸೈಡರ್ ವಿನೆಗರ್ , ಟ್ರೀ ಎಣ್ಣೆಯನ್ನು ನೀರಿನಲ್ಲಿ ಸೇರಿಸಿ. ಇದನ್ನು ಮಿಶ್ರಣ ಮಾಡಿ. ನಿಮ್ಮ ಪಾದಗಳನ್ನು ಅಲೋವೆರಾದಲ್ಲಿ ನೆನೆಸಿ.
ನಿಂಬೆ ತುಂಬಿದ ನೀರಿನಲ್ಲಿ 20 ರಿಂದ 25 ನಿಮಿಷ ನಿಮ್ಮ ಪಾದಗಳನ್ನು ನೆನೆಸಿ, ವಿಶ್ರಾಂತಿ ನೀಡಿ. ಬಳಿಕ ನಿಮ್ಮ ಪಾದಗಳನ್ನು ಸ್ವಚ್ಛವಾದ ಟಾವೆಲ್ ನಿಂದ ಒರೆಸಿ. ಕೊನೆಯದಾಗಿ ನಿಮ್ಮ ಪಾದಗಳಿಗೆ ಮಾಯಿಶ್ಚರೈಸರ್ ಹಚ್ಚಿ.

ಹಿಮ್ಮಡಿ ಬಿರುಕು ಕಾಣಿಸಿಕೊಳ್ಳಲು ಕಾರಣ!
ಬೊಜ್ಜು ಇದ್ದಾಗ
ಶುಷ್ಕ ಹವಾಮಾನದಲ್ಲಿ ವಾಸಿಸುತ್ತಿದ್ದಾಗ
ಸದಾ ಬರಿಗಾಲಲ್ಲಿ ನಡೆಯುತ್ತಿದ್ದರೆ, ಅಥವಾ ಹಿಮ್ಮಡಿ ಬಳಿ ತೆರೆದಿರುವ ಚಪ್ಪಲಿ ಉಪಯೋಗಿಸಿದಾಗ,
ಮನೆಯಲ್ಲೂ ಈ ಮನೆಮದ್ದುಗಳನ್ನು ಸಹ ಉಪಯೋಗಿಸಬಹುದು,,,
ವೆಜಿಟೇಬಲ್ ಆಯಿಲ್…!
ವೆಜಿಟೆಬಲ್ ಆಯಿಲ್ ನಲ್ಲಿರುವ ಕೊಬ್ಬುಗಳು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ ಜತೆಗೆ ಬಿರುಕು ಗೊಂಡಿರುವ ಮೊಣಕಾಲುಗಳನ್ನು ಮೃದುವಾಗಿರಿಸುತ್ತದೆ. ಮೊದಲು ರಾತ್ರಿಯಲ್ಲಿ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯಿರಿ. ನಂತರ ಟವೆಲ್ ಸಹಾಯದಿಂದ ಒಣಗಿಸಿ. ಅದು ಒಣಗಿದಾಗ, ನೀವು ಅದರ ಮೇಲೆ ವೆಜಿಟೇಬಲ್ ಆಯಿಲ್ ಹಚ್ಚಿ, ಸಾಕ್ಸ್ ಧರಿಸಿ. ನಂತರ ಮಲಗಿಕೊಳ್ಳಬೇಕು. ಪ್ರತಿ ದಿನ ಹೀಗೆ ಮಾಡಿದರೆ ಪರಿಹಾರ ದೊರಯುತ್ತದೆ.

ಬಾಳೆಹಣ್ಣು ಮಾಸ್ಕ್
ಬಾಳೆಹಣ್ಣು ಪೌಷ್ಟಿಕಾಂಶವುಳ್ಳದ್ದು. ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ. ಉತ್ತಮ ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ. ಈ ಮಾಸ್ಕ್ ನ್ನು ತಯಾರಿಸಲು, ಮೊದಲು ಹಣ್ಣಾದ ಬಾಳೆಹಣ್ಣು ತೆಗೆದುಕೊಂಡು ಅವಕಾಡದೊಂದಿಗೆ ಪೇಸ್ಟ್ ತಯಾರಿಸಿ. ಈ ಪ್ಯಾಕ್ ನ್ನು ನಿಮ್ಮ ಒಡೆದ ಕಾಲುಗಳಿಗೆ ಹಚ್ಚಿ. 15 ನಿಮಿಷ ಬಿಟ್ಟು ನಂತರ ನೀರಿನಿಂದ ಪಾದ ತೊಳೆಯಿರಿ.

ವ್ಯಾಸಲೀನ್ ಬಳಕೆ
ಪಾದಗಳನ್ನು ಮೃದುವಾಗಿಸಲು ವ್ಯಾಸಲೀನ್ ದೀರ್ಘಕಾಲದವರೆಗೆ ಬಳಸಲಾಗುತ್ತದೆ. ನೀವು ಸುಮಾರು 20 ನಿಮಿಷಗಳ ಕಾಲ, ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ, ನಂತರ ಪಾದಗಳನ್ನು ಒರೆಸಿಕೊಳ್ಳಿ. ನಂತರ 1 ಚಮಚ ವ್ಯಾಸಲೀನ್ ನಲ್ಲಿ ನಾಲ್ಕರಿಂದ ಐದು ಹನಿ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಕಾಲುಗಳಿಗೆ ಹಚ್ಚಿ, ಮರುದಿನ ನಿಮ್ಮ ಪಾದಗಳನ್ನು ತೊಳೆಯರಿ. ಪ್ರತಿ ದಿನ ಬಳಸುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಪಾದಗಳು ಮೃದುವಾಗುತ್ತವೆ.
ಜೇನುತುಪ್ಪ
ನಿಮಗೆ ತಿಳಿದಿರಬಹುು ಜೇನುತುಪ್ಪವು ನಿಮ್ಮ ಪಾದಗಳನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಒಡೆದ ಕಾಲುಗಳನ್ನು ತಡೆಗಟ್ಟಲು ನೆರವಾಗುತ್ತದೆ. 1 ಬಕೆಟ್ ಬಿಸಿ ನೀರಿನಲ್ಲಿ 1 ಕಪ್ ಜೇನುತುಪ್ಪವನ್ನು ಬೆರೆಸಿ. ನಿಮ್ಮ ಪಾದಗಳನ್ನು ಇದರಲ್ಲಿ ಮುಳುಗಿಸಿ. ಸುಮಾರು 20 ನಿಮಿಷಗಳ ಕಾಲ ಪಾದಗಳನ್ನು ಸ್ಕ್ರಬ್ ಮಾಡಿ.