ಹಾಲು ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ದೇಹಕ್ಕೆ ಅಗತ್ಯವಿರುವ ‘ಸಂಪೂರ್ಣ ಮಿಲ್’ ಎಂದು ಪರಿಗಣಿಸಲಾಗಿದೆ. ಇದು ಕ್ಯಾಲೋರಿಗಳನ್ನು ಸುಡಲು ಮತ್ತು ತೂಕವನ್ನು ಕಾಪಾಡಿಕೊಳ್ಳಲು ಹೆಚ್ಚು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಜನರು ಹೆಚ್ಚಾಗಿ ಹಸು ಹಾಗೂ ಎಮ್ಮೆಯ ಹಾಲನ್ನು ಉಪಯೋಗಿಸುತ್ತಾರೆ. ಎಮ್ಮೆಯ ಹಾಲು ಹೆಚ್ಚು ಪ್ರಯೋಜನಕಾರಿ ಎಂದು ಕೆಲವರು ಹೇಳಿದರೆ. ಹಸುವಿನ ಹಾಲಿನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಎಂದು ಕೆಲವರು ನಂಬುತ್ತಾರೆ. ಪ್ರತಿಯೊಂದು ವಿಧದ ಹಾಲು ಪೋಷಕಾಂಶಗಳಿಂದ ಕೂಡಿದೆ. ಇದರ ಬಗ್ಗೆ ಹೆಚ್ಚುವ ಹೇಳುವ ಮೊದಲು, ಹಸು ಮತ್ತು ಎಮ್ಮೆಯ ಹಾಲಿನಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ತಿಳಿಯೋಣ.

ಹಸು ಹಾಲಿನಲ್ಲಿ ಪೋಷಕಾಂಶಗಳೆಷ್ಟು?
ಕ್ಯಾಲೋರಿಗಳು – 61 ಪ್ರತಿಶತ, ಪ್ರೋಟೀನ್ – 3.2 ಗ್ರಾಂ , ಕೊಬ್ಬು – 3.4 ಗ್ರಾಂ ನೀರು- 90 ಪ್ರತಿಶತ, ಲ್ಯಾಕ್ಟೋಸ್ -4.7 ಗ್ರಾಂ , ಖನಿಜ ಲವಣಗಳು – 0.72 ಗ್ರಾಂನಷ್ಟಿರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಹಸುವಿನ ಹಾಲು ಹೆಚ್ಚು ಪ್ರಯೋಜನಕಾರಿಯಾಗಿದೆ. 100 ಮಿಲಿ ಹಾಲಿನಲ್ಲಿ ಕೇವಲ 61 ಕ್ಯಾಲೋರಿಗಳಿವೆ. ಎಮ್ಮೆಯ 100 ಮಿಲಿ ಹಾಲಿನಲ್ಲಿ 97 ಕ್ಯಾಲೋರಿಗಳಿರುತ್ತವೆ. ಎಮ್ಮೆ ಹಾಲಿಗಿಂತ ಹಸುವಿನ ಹಾಲಿನಲ್ಲಿ ಕಡಿಮೆ ಕೊಬ್ಬು ಇರುತ್ತದೆ.
ನೀವು ತೂಕ ಹೆಚ್ಚಿಸಲು ಬಯಸಿದರೆ ಎಮ್ಮೆ ಹಾಲು ನಿಮಗೆ ಒಳ್ಳೆಯದು. ಎಮ್ಮೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚಿನ ಪ್ರೋಟೀನ್ ಇದೆ. ಇದು ಸ್ನಾಯುಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು. ನಿಮಗೆ ಜೀರ್ಣ ಕ್ರಿಯೆ ಸಮಸ್ಯೆಗಳಿದ್ದರೆ, ಹಸುವಿನ ಹಾಲನ್ನು ಸೇವಿಸಿ. ಇನ್ನು ಮಕ್ಕಳಿಗೆ ಹಸುವಿನ ಹಾಲು ಸುಲಭವಾಗಿ ಜೀರ್ಣವಾಗುವುದರಿಂದ ನೀಡಲಾಗುತ್ತದೆ. ಎಮ್ಮೆ ಹಾಲು ಹಸುವಿನ ಹಾಲಿಗಿಂತ ಜೀರ್ಣಿಸಿಕೊಳ್ಳಲು ಉತ್ತಮವಲ್ಲ. ಏಕೆಂದರೆ ಅದು ಕಡಿಮೆ ನೀರಿನಂಶ ಹೊಂದಿರುತ್ತದೆ.

ಎಮ್ಮೆ ಹಾಲಿನಲಿರುವ ಪೋಶಕಾಂಶಗಳು!
ಎಮ್ಮೆ ಹಾಲಿನಲ್ಲಿ ಕ್ಯಾಲೋರಿ 97, ಪ್ರೋಟೀನ್ 3.7 ಗ್ರಾಂ , ಫ್ಯಾಟ್, 6.9 ಗ್ರಾಂ, ನೀರಿನಂಶ- 84 ಪ್ರತಿಶತದಷ್ಟು, ಲ್ಯಾಕ್ಟೋಸ್ 5.2 ಗ್ರಾಂ, ಖನಿಜ 0.79 ಗ್ರಾಂ ಗಳಿರುತ್ತವೆ.
ಎಮ್ಮೆ, ಹಸು ಹಾಲಿನ ಪ್ರಯೋಜನಗಳು..!
ಹಸುವಿನ ಹಾಲಿಗಿಂತ ಹೆಚ್ಚು ಎಮ್ಮೆ ಹಾಲಿನಲ್ಲಿ ಕೆನೆ ಬರುತ್ತದೆ. ಹಾಗಾಗಿ ಮೊಸರು, ಪನ್ನೀರ್ , ಕುಲ್ಫಿ ಹಾಗೂ ತುಪ್ಪ ತಯಾರಿಸಲು ಎಮ್ಮೆ ಹಾಲನ್ನು ಬಳಸುತ್ತಾರೆ. ಹಸುವಿನ ಹಾಲನ್ನು ಒಂದು ದಿನದೊಳಗೆ ಉಪಯೋಗಿಸಬೇಕು. ಆದರೆ ಎಮ್ಮೆ ಹಾಲನ್ನು 2-3 ದಿನ ಶೇಖರಿಸಿಡಬಹುದಾಗಿದೆ.
ಬಲವಾದ ಸ್ನಾಯುಗಳನ್ನು ಹೊಂದಲು ಎಮ್ಮೆ ಹಾಲು ಪ್ರಯೋಜನಕಾರಿಯಾಗಿದೆ. ಹೃದಯ ಸಂಬಂಧಿ ತೊಂದರೆಗಳನ್ನು ನಿಯಂತ್ರಿಸಲು ಮತ್ತು ತೂಕ ಹೆಚ್ಚಾಗಲು ಎಮ್ಮೆ ಹಾಲು ಉತ್ತಮವೆಂದು ಪರಿಗಣಿಸಲಾಗುಕ್ಕದೆ. ಇದರಲ್ಲಿ ಉತ್ತಮ ಪ್ರೋಟೀನ್ ಅಂಶವಿದ್ದು, ಕೊಬ್ಬಿನಂಶ ಹೆಚ್ಚಿರುವುದರಿಂದ ಎಮ್ಮೆ ಹಾಲು ಹೆಚ್ಚು ಕ್ಯಾಲೋರಿಗಳನ್ನು ಒಳಗೊಂಡಿರುತ್ತದೆ. ಎಮ್ಮೆ ಹಾಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನೇಶಿಯಂ ಮತ್ತು ಪೋಟ್ಯಾಶಿಯಂ ನಂತಹ ಹೆಚ್ಚಿನ ಪ್ರಮಾಣದ ಖನಿಜಾಂಶಗಳಿವೆ.

ಅದೇ ರೀತಿ ಹಸುವಿನ ಹಾಲು ಮೂಳೆ ಹಾಗೂ ಹಲ್ಲುಗಳ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ನಿವಾರಿಸಲು, ಥೈರಾಯ್ಡ್ ಸಮಸ್ಯೆಗಳು ಹಾಗೂ ಹೃದಯ ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ಇದು ಉತ್ತಮ. ಅಲ್ಲದೇ ಹಸುವಿನ ಹಾಲು ಪಿತ್ತರಸಕ್ಕೆ ಪ್ರಯೋಜನಕಾರಿಯಾಗಿದೆ. ಹಸುವಿನ ಹಾಲಿನಲ್ಲಿ ತಯಾರಿಸಿದ ತುಪ್ಪ ಪಿತ್ತವನ್ನು ನಿವಾರಿಸುತ್ತದೆ. ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ಎಮ್ಮೆ ಹಾಲಿನಿಂದ ತಯಾರಿಸಿದ ತುಪ್ಪ ಕಫವನ್ನು ಹೆಚ್ಚಿಸುತ್ತದೆ.
ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೊದಲಾದ ಅವಶ್ಯಕ ಪೋಷಕಾಂಶಗಳಿದ್ದು, ಆರೋಗ್ಯಕರ ಆಹಾರ ಎಂದು ಇದನ್ನು ಪರಿಗಣಿಸಲಾಗುತ್ತದೆ. ಇನ್ನು ಮಲಗುವ ಮುನ್ನ ಹಾಲು ಸೇವಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಮಲಗುವ ಮುನ್ನ 1 ಬಿಸಿ ಲೋಟ ಹಾಲು ಕುಡಿಯುವುದರಿಂದ ಗಾಢ ನಿದ್ದೆ ಬರುತ್ತದೆ.
ಮಕ್ಕಳ ಬೆಳವಣಿಗೆಗೆ ಹಾಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಪರಿಪೂರ್ಣ ಹಾಲು ಅಥವಾ ಕೊಬ್ಬುಯುಕ್ತ ಹಾಲು ಸೂಕ್ತ. ಆದರೆ ಸುಮಾರು ಮೂವತ್ತೈದು ವರ್ಷಗಳ ಬಳಿಕ ಈ ಕೊಬ್ಬು ಯುಕ್ತ ಹಾಲಿನ ಸೇವನೆಯಿಂದ ದೇಹದ ತೂಕ ಅಗತ್ಯವಾಗಿ ಏರತೊಡಗುತ್ತದೆ. ಹಾಲಿನಲ್ಲಿರುವ ವಿಟಮಿನ್ ಬಿ 12 ಮೆದುಳಿನಲ್ಲಿರುವ ಪಿನಿಯಲ್ ಗ್ರಂಥಿ ಮೆಲಟೋನಿನ್ ಅನ್ನು ಉತ್ಪಾದಿಸಲು ಈ ವಿಟಮಿನ್ ಅವಶ್ಯಕವಾಗಿದೆ.

ಕುದಿಸಿದ ಹಾಲು ಕುಡಿಯಬೇಕೇ..?
ಕೆಲವು ತಜ್ಞರ ಪ್ರಕಾರ, ರಾತ್ರಿ ಹೊತ್ತು ಉಗುರು ಬೆಚ್ಚಗಿನ ಹಾಲನ್ನು ಸೇವಿಸುವ ಮೂಲಕ ಹೊಟ್ಟೆಗೆ ಬೆಚ್ಚನೆಯ ಅನುಭಯವಾಗುತ್ತದೆ. ಸ್ನಾಯುಗಳು ನಿರಾಳಗೊಳಿಸಲು ಒಟ್ಟಾರೆ ಹಿತವಾದ ಭಾವನೆಯನ್ನು ಪಡೆಯಲು ಸಾಧ್ಯವಾಗುತ್ತದೆ.