ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಬಗ್ಗೆ ಪ್ರತಿಯೊಬ್ಬರು ಒತ್ತು ನೀಡುವುದು ಅಗತ್ಯ. ಏಕೆಂದರೆ ಈ ವೈರಸ್ ಮಾರಕವಾಗುತ್ತದೆಯೇ, ನಿಮಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆಯೇ ಅಥವಾ ಸೌಮ್ಯ ರೋಗಲಕ್ಷಣಗಳ ಮೂಲಕ ಹಾದುಹೋಗುತ್ತೆದೆ ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೀವು ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು ಎಂದು ಈಶಾ ಪ್ರತಿಷ್ಠಾನದ ಜಗ್ಗಿ ವಾಸುದೇವ್ (ಸದ್ಗುರು) ತಿಳಿಸಿದ್ದಾರೆ.

ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು- ಸದ್ಗುರು
ಕೃತಜ್ಞತೆ ತೋರಿಸಲು ಬಲವಾದ ಚಿಂತನೆ ನಿಮಗಿರಲಿ
ವೈದ್ಯಕೀಯ ವೃತ್ತಿಪರರು, ಭದ್ರತಾ ಸಿಬ್ಬಂದಿಗಳು, ಪೊಲೀಸರು, ಅಗತ್ಯ ಸೇವೆಗಳನ್ನು ನಿರ್ವಹಿಸುವ ಹಲವಾರು ಜನರು ತಮ್ಮ ಪ್ರಾಣವನ್ನು ಮತ್ತು ಅವರ ಕುಟುಂಬಗಳ ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಸೇವೆಯನ್ನು ನಿರ್ವಹಿಸುತ್ತಿರುವ ಅವರಿಗೆ,ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ ಈ ಎಲ್ಲಾ ಜನರಿಗೆ ನಿಜವಾಗಿಯೂ ನಾವು ಕೃತಜ್ಞರಾಗಿದ್ದೇವೆ.
ನಿಮ್ಮ ಉಸಿರಾಟದ ಕ್ರಿಯೆ ಪರೀಕ್ಷಿಸಲು ಮನೆಯಲ್ಲಿ ಸಿಂಹಾ ಕ್ರಿಯಾ ಮಾಡಿ
ಸಿಂಹ ಕ್ರಿಯಾ ಸರಳ ಅಭ್ಯಾಸವಾಗಿದೆ. ನಿಮ್ಮಲ್ಲಿ ಶಕ್ತಿ ಚಲನಾ ಕ್ರಿಯೆಯಂತಹ ಯಾವುದೇ ಪ್ರಬಲ ಪ್ರಕ್ರಿಯೆ ತಿಳಿದಿಲ್ಲದವರಿಗೆ ಇದು ಸಹಾಯ ಮಾಡುತ್ತದೆ. ಇದು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ , ಮುಂದಿನ ಐದು ದಿನಗಳವರೆಗೆ ನೀವು ಇದನ್ನು ಮಾಡಲು ಸಾಧ್ಯವಾದರೆ, ಮತ್ತು ಇದ್ದಕ್ಕಿಂದಂತೆ ಒಂದು ದಿನದವರೆಗೆ ನೀವು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಇದರರ್ಥ ನೀವು ಖಂಡಿತವಾಗಿಯೂ ಉಸಿರಾಟದ ಸಮಸ್ಯೆಯನ್ನು ಹೊಂದಿದ್ದೀರಿ ಎಂದರ್ಥ. ನಿಮಗೆ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೀವು ಇದ್ದಕ್ಕಿಂತಂದೆ ಕಂಡು ಕೊಂಡರೆ ನೀವೇ ಪರಿಶೀಲಿಸಬೇಕು. ವಿಶೇಷವಾಗಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಅಥವಾ ಸೋಂಕಿತ ಜನರ ಜತೆ ಸಂಪರ್ಕದಲ್ಲಿರುವವರು, ದಯವಿಟ್ಟು ನೀವು ಇದನ್ನು ಮಾಡಿದ್ದೀರಾ.. ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಿ.
ಸಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತವಾಗಿ ಬಳಸಿ
ಲಾಕ್ ಡೌನ್ ಅವಧಿಯಲ್ಲಿ ದ್ವೇಷ ಭಾವನೆ ಹೊಂದದೇ, ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿ ಬಳಸಲು ಕಲಿಯಬಹುದು. ಸಾಮಾಜಿಕ ಮಾಧ್ಯಮವನ್ನು ನಮ್ಮ ಸಹಾನೂಭೂತಿ, ಸೌಮ್ಯತೆ ಹಾಗೂ ಮಾನವೀಯತೆಯನ್ನು ವ್ಯಕ್ತಪಡಿಸಲು ಬಳಸೋಣ. ದೇಶದಲ್ಲಿ ವೈದ್ಯಕೀಯ ವ್ಯವಸ್ಥೆ , ಸರ್ಕಾರ ಮತ್ತು ಆಡಳಿತದಲ್ಲಿ ಲೋಪದೋಷಗಳನ್ನು ಹುಡುಕುವಲ್ಲಿ ಅನೇಕ ಜನರು ಇಂದು ನಿರತರಾಗಿದ್ದಾರೆ. ಈ ಎಲ್ಲಾ ವಿಷಯಗಳು ಮುಖ್ಯವಾದರೂ, ಈ ಸಂದರ್ಭದಲ್ಲಿ ಇದನ್ನು ಮಾಡುವುದು ಸರಿಯಲ್ಲ.
ಮನೆಯಲ್ಲಿ ಡಿಸ್ಟೆನ್ಸ್ ಇರಲಿ
ಮನುಷ್ಯರು ಜವಾಬ್ದಾರಿಯುತವಾಗಿ ವರ್ತಿಸುವ ಹಾಗೂ ವ್ಯಕ್ತಿಗಳ ನಡುವಿನ ಅಂತರವನ್ನು ಕಾಪಾಡಿಕೊಳ್ಳುವ ಸಮಯ ಇದು. ಇದರರ್ಥ ನಾವು ಹೊರಗಿನ ಪ್ರಪಂಚದೊಂದಿಗೆ ಸಾಮಾಜಿಕ ದೂರವನ್ನು ಹೊಂದಿದ್ದೇವೆ ಎಂದಲ್ಲ. ಆದರೆ ನಮ್ಮ ಮನೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 2 ಮೀಟರ್ ದೂರ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಕೊರೊನಾ ವೈರಸ್ ನ್ನು ಎದುರಿಸಬಹುದು ಎಂದು ಹೇಳಬಹುದು.

ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಪ್ರತಿರಕ್ಷಣಾ ವ್ಯವಸ್ಥೆಗೆ ಹೇಗಾದರೂ ಹೆಚ್ಚಿಸಿಕೊಳ್ಳಬೇಕು. ಯೋಗದ ಒಂದು ಅಂಗವೆಂದರೆ ಪ್ರತ್ಯಾಹಾರ. ನಿಮಗೆ ಈ ಸಂದರ್ಭದಲ್ಲಿ ಯಾವುದೇ ತರಬೇತಿಯ ಅಗತ್ಯವಿರುವುದಿಲ್ಲ. ಕಣ್ಣು ಮುಚ್ಚಿ ಕುಳಿತುಕೊಳ್ಳಿ. ನೀವು ಎಷ್ಟೇ ಗಂಟೆಗಳಾದರೂ ಹೊರಗಿನ ಪ್ರಪಂಚದ ಬಗ್ಗೆ ಗಮನವಿರಬಾರದು. ಇದನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ. ಯಾವುದನ್ನೂ ನೋಡದೇ ನಿಮ್ಮ ಕಣ್ಣುಗಳನ್ನು ಮುಚ್ಚಿಡಿ. ಒಂದು ಗಂಟೆಯವರೆಗೂ ಇದನ್ನು ಮಾಡಬಹುದು.
ಪ್ರತಿದಿನ ನಿಮ್ಮನ್ನು ನೀವೇ ಸುಧಾರಿಸಿಕೊಳ್ಳಿ
ದೈಹಿಕ ಚಟುವಟಿಕೆಗಳಿಗಾಗಿ ನೀವು ಕೆಲವು ಗುರಿಗಳನ್ನು ನಿರ್ಧರಿಸಿ. ಈ ಸಮಯದಲ್ಲಿ ನಮ್ಮನ್ನು ನಾವು ಹಿಂದೆ ನೋಡುವುದು ಮುಖ್ಯ. ನಿಮಗೆ ಅದ್ಭುತವಾದದ್ದನ್ನು ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಜೀವನದ ಆಹ್ಲಾದಕರ ಭಾಗವಾಗಿರಬೇಕು. ನಿಮ್ಮ ಸ್ವಂತಃ ಗುರಿಗಳನ್ನು ಹೊಂದಿರಬೇಕು. ಇದಕ್ಕೆ ಗಮನ ಕೊಡಬೇಕು.
ಖಿನ್ನತೆಗೆ ಒಳಗಾಗಬೇಡಿ
ಮಾನವ ಜೀವನ ಎಷ್ಟು ದುರ್ಬಲವಾಗಿದೆ ಎಂಬುದನ್ನು ಕೊರೊನಾ ನಿಮಗೆ ಸ್ಪಷ್ಟಪಡಿಸುತ್ತಿದೆ. ಅದೃಶ್ಯ ಸೂಕ್ಷ್ಮ ಜೀವಿ ನಮ್ಮ ಜೀವನವನ್ನು ಕೊನೆಗೊಳಿಸಬಹುದು. ಮತ್ತು ಎಲ್ಲದ್ದಕ್ಕೂ ತೊಂದರೆ ನೀಡಬಹುದು. ಹೊರಗಡೆ ಈಗಾಗ್ಲೇ ಸಾಕಷ್ಟು ತೊಂದರೆಗಳು ಎದುರಿಸುತ್ತಿದ್ದೇವೆ. ನಮ್ಮ ಜೀವನ ಶೋಚನಿಯವಾಗಬಾರದು. ನಾವು ತೊಂದರೆಗಳ ಮೂಲವಾಗಬಾರದು. ನಮ್ಮ ಸುತ್ತ ಮುತ್ತಲಿರುವ ಎಲ್ಲರಿಗೂ ಸಂತೋಷದಾಯಕ ಬೆಂಬಲ ನೀಡುವುದು ಈಗ ಅತ್ಯಂತ ಮುಖ್ಯವಾಗಿದೆ.