ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್ ಗಳು, ಪೊಲೀಸರು ಹಾಗೂ ಆಫೀಸರ್ಸ್ ಹಗಲು ಇರುಳೆನ್ನದೇ ಈ ಸೋಂಕಿನ ವಿರುದ್ಧ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಸೇವೆಯ ಮೂಲಕ ಜನರ ರಕ್ಷಣೆಗೆ ಮುಂದಾಗಿರುವ ಹಲವರಲ್ಲಿ, ವಿಶಾಖಪಟ್ಟಣಂ ಮಹಾನಗರ ಪಾಲಿಕೆಯ ಆಯುಕ್ತೆ (ಕಮೀಷನರ್) ಶ್ರೀಜನಾ ಕೂಡಾ ಒಬ್ಬರು. 22 ದಿನಗಳ ಹಿಂದೆ ತಮ್ಮ ಮಗುವಿಗೆ ಜನ್ಮ ನೀಡಿದ್ದ ಐಎಎಸ್ ಅಧಿಕಾರಿ ಶ್ರೀಜನಾ ಮತ್ತೆ ತಮ್ಮ 1 ತಿಂಗಳ ಮಗುವಿನ ಜತೆ ಕೆಲಸಕ್ಕೆ ಹಾಜರಾಗಿದ್ದಾರೆ. ಅವರು ತಮ್ಮ ಹೆರಿಗೆ ರಜೆ ರದ್ದುಪಡಿಸಿ, ಮತ್ತೆ ಕೆಲಸಕ್ಕೆ ಮರಳಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.

ನಾನು ನನ್ನ ಮಗುವಿಗೆ ಜನ್ಮ ನೀಡಿದಾಗ, ಕೆಲವು ದಿನಗಳ ನಂತರ ಲಾಕ್ ಡೌನ್ ಘೋಷಿಸಲಾಗಿತ್ತು. ಮನೆಯಲ್ಲೇ ಕುಳಿತುಕೊಳ್ಳುವುದಕ್ಕಿಂತಲೂ, ಇಂತಹ ಸಮಯದಲ್ಲಿ ದೇಶಕ್ಕಾಗಿ ಏನನ್ನಾದರೂ ಮಾಡಲು ಸಮಯವಿದೆ ಎಂದು ಭಾವಿಸದೆ. ಹಾಗಾಗಿ ಹೆಚ್ಚಿನ ರಜೆ ತೆಗೆದುಕೊಳ್ಳಲಿಲ್ಲ. ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಪತಿ ಹಾಗೂ ಶ್ರೀಜನಾ ಅತ್ತೆ ಕೂಡಾ ಇವರ ನಿರ್ಧಾರವನ್ನು ಬೆಂಬಲಿಸಿದರು. ಶ್ರೀಜನಾ ಮನೆಯಲ್ಲಿ ಇಲ್ಲದಿದ್ದಾಗ, ಪತಿ ಹಾಗೂ ಅತ್ತೆ ಮಾತ್ರ ಮಗುವನ್ನು ನೋಡಿಕೊಳ್ಳುತ್ತಾರಂತೆ.
ನನ್ನ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಬಯಸುತ್ತೇನೆ. ಬಿಕ್ಕಟ್ಟಿನ ಸಮಯದಲ್ಲಿ ನಮ್ಮಂತಹ ಅಧಿಕಾರಿಗಳು ಕರ್ತವ್ಯದಲ್ಲಿ ಉಳಿಯುವುದು ಅಗತ್ಯವಾಗುತ್ತದೆ. ಅಗತ್ಯವಿರುವವರಿಗೆ ಅಗತ್ಯ ವಸ್ತುಗಳು, ಕುಡಿಯುವ ನೀರು ಮತ್ತು ಪ್ರತಿಯೊಂದು ಸೌಲಭ್ಯವನ್ನು ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀಜನಾ ಹೇಳಿದ್ದಾರೆ.