ಆರ್ಯುವೇದ ಪ್ರಕಾರ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಯಾವುದೇ ರೋಗವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಸುಲಭ ಮಾರ್ಗಗಳು ಇಲ್ಲಿವೆ. ತುಳಸಿ ಕೊಲೆಸ್ಟ್ರಾಲ್ ನ್ನು ನಿವಾರಣೆ ಮಾಡುತ್ತದೆ. ರಕ್ತದಲ್ಲಿನ ಕೊಬ್ಬಿನಂಶವನ್ನು ನಿಯಂತ್ರಿಸುತ್ತದೆ. ಜ್ವರ, ಕೆಮ್ಮು, ಟಿಬಿ ರೋಗಗಳು ನಿವಾರಣೆಯಾಗುತ್ತವೆ. 3 ಗ್ರಾಂ ತುಳಸಿ ಪ್ರತಿ ದಿನ ಸೇವಿಸಿದರೆ ಉಪಯೋಗ ಹೆಚ್ಚು. ಇನ್ನು ಹೊಳೆಯುವ ತ್ವಚೆಗೆ ತುಳಸಿ ಅತ್ಯುತ್ತಮ ಅಂತಲೇ ಹೇಳಬಹುದು. ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚಾಗುತ್ತದೆ.

ತುಳಸಿಯ 20 ಎಲೆಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ. ಗಾಜಿನ ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ. ಈ ನೀರಿನಲ್ಲಿ 1 ಚಮಚ ಶುಂಠಿ ಪುಡಿ, ನಾಲ್ಕ ದಾಲ್ಚಿನ್ನಿ ಪುಡಿಯನ್ನು ಹಾಕಿ ನೀರು ಅರ್ಧದಷ್ಟು ಉಳಿಯುವರೆಗೂ ಕುದಿಸಿ. ಇದಕ್ಕೆ ಜೇನುತುಪ್ಪದ ಜತೆ ಸೇರಿಸಿದ ನಂತರ, ದಿನಕ್ಕೆ 2 ಅಥವಾ 3 ಬಾರಿ ಚಹಾದಂತೆ ತೆಗೆದುಕೊಳ್ಳಿ. ನಿಮಗೆ ಬೇಕಾದಾಗ, ಅದನ್ನು ತಾಜಾ ವಾಗಿ ತಯಾರಿಸಬಹುದು.
ಚಹಾದಲ್ಲಿ 20 ತುಳಸಿ ಎಲೆಗಳು ಒಂದು ಸಣ್ಣ ತುಂಡು ಶುಂಠಿ ಮತ್ತು 5 ಕರಿಮೆಣಸನ್ನು ಕುದಿಸಿ, ಆ ಚಹಾವನ್ನು ಸೇವಿಸಿ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಸೇವಿಸಬಹುದು. ಎರಡು ಚಹಾಗಳ ನಡುವೆ 10 ರಿಂದ 12 ಗಂಟೆಗಳ ಅಂತರ ವನ್ನು ನೀಡಿ.
ಪ್ರತಿ ದಿನ ಸ್ನಾನ ಮಾಡಿದ ನಂತರ ಮೂಗಿನಲ್ಲಿ ಒಂದು ಹನಿ ಸಾಸಿವೆ ಅಥವಾ ಎಳ್ಳು ಎಣ್ಣೆಯನ್ನು ಸುರಿಯಿರಿ. ನೀವು ಸಾರ್ವಜನಿಕ ಸ್ಥಳಕ್ಕೆ ಹೋಗುತ್ತಿದ್ದರೆ, ಮನೆಯಿಂದ ಹೊರಡುವ ಮೊದಲು ಇದೇ ರೀತಿ ಮಾಡಿ.

ತುಳಸಿ ಜ್ಞಾನಪಶಕ್ತಿ ಹೆಚ್ಚಿಸುತ್ತದೆ. ಪ್ರತಿ ದಿನ ಇದನ್ನು ತಿಂದರೆ, ರೋಗ ದೂರವಿರಿಸಬಹುದು. ಇದರ ಸೇವನೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗಿ ಬುದ್ಧಿವಂತಿಕೆಯೂ ಚುರುಕುಗೊಳ್ಳುತ್ತದೆ. ಇದನ್ನು ವಯಸ್ಸಾದವರು ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ.
ಒತ್ತಡವನ್ನು ನಿವಾರಣೆ ಮಾಡುತ್ತದೆ.
ತುಳಸಿ ಇಡೀ ದಿನದ ಆಯಾಸವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಒತ್ತಡದಿಂದ ತೊಂದರಗೀಡಾಗಿದ್ದರೆ, ನಂತರ ಪ್ರತಿ ರಾತ್ರಿ ತುಳಸಿಯ ಕೆಲವು ಎಲೆಗಳನ್ನು ಹಾಲಿನಲ್ಲಿ ಕುದಿಸಿ ನಂತರ ಈ ಹಾಲನ್ನು ಕುಡಿಯಿರಿ. ಇದು ನರಮಂಡಲವನ್ನು ಸಡಿಲಗೊಳಿಸುತ್ತದೆ. ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ತುಳಸಿ ಎಲೆಯ ಕಷಾಯ
ಕೃಷ್ಣ ತುಳಸಿ ಗಿಡದ ಎಲೆಗಳನ್ನು (೫-೮) ಎಲೆಗಳನ್ನು ಚೆನ್ನಾಗಿ ತೊಳೆದು ಕುಡಿಯುವುದರಿಂದ ವಿಷಯ ಜ್ವರ ಕಡಿಮೆಯಾಗುತ್ತದೆ.

ಕಫ ನಿವಾರಿಸುವ ಗುಣಗಳು ತುಳಸಿಯಲ್ಲಿವೆ. ತುಳಸಿ ಗಿಡದ ಎಲೆಗಳನ್ನು 5 ರಿಂದ 16 ಎಲೆಗಳನ್ನು ತೊಳೆದು, ಅದರ ರಸಕ್ಕೆ 1 ಲವಂಗ, 1ಯ2 ಇಂಚು ಶುಂಠಿ, 1 ಚಿಟಿಕೆ ಅರಶಿಣ ಹಾಕಿ ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಸಿ ಕಷಾಯ ತಯಾರಿಸಿ.
5-8 ತುಳಸಿ ಗಿಡದ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದ್ರಿಂದ ಒತ್ತಡ ನಿವಾರಣೆಯಾಗುತ್ತದೆ.
ತುಳಸಿ ರಸ, ಶುಂಠಿ ರಸ, ವೀಳ್ಯದೆಲೆ ರಸ ಮತ್ತು ಪೂದೀನ ಸೊಪ್ಪಿನ ರಸವನ್ನು ಸಮ ಪ್ರಮಾಣದಲ್ಲಿ 1 ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ಮೂರು ಚಮಚ ತುಳಸಿ ರಸವನ್ನು ಕಾಲು ಕಪ್ ಹಾಲಿನಲ್ಲಿ ಬೆರೆಸಿ 15 ದಿನಗಳ ಕಾಲ ಬರಿಹೊಟ್ಟೆಯಲ್ಲಿ ಕುಡಿದರೆ ಚರ್ಮರೋಗ ಶಮನವಾಗುತ್ತದೆ.
ತುಳಸಿ ರಸ , ಬೆಳ್ಳುಳ್ಳಿ ರಸ, ಜೇನುತುಪ್ಪವನ್ನ ಸಮಭಾಗ ತೆಗೆದುಕೊಂಡು ಮಿಶ್ರಣ ಮಾಡಿ ತಯಾರಿಸಿ, ಮೂರು ದಿನಗಳಿಗೊಮ್ಮೆ 1 ಚಮಚ ಸೇವಿಸಿದರೆ ಅಜೀರ್ಣದ ಹೊಟ್ಟೆ ನೋವು ಭಾದಿಸುವುದಿಲ್ಲ.ತುಳಸಿ ಎಲೆಯನ್ನು ಬಾಯಲ್ಲಿ ಹಾಕಿ ಅಗಿಯುವುದರಿಂದ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ.
ತುಳಸಿ ಎಲೆ, ಕರ್ಪೂರ,. ಲವಂಗ ಸೇರಿಸಿ ಕುಟ್ಟಿ ಗುಳಿಗೆ ಮಾಡಿ ಹಲ್ಲು ನೋವಿದ್ದ ಜಾಗಕ್ಕೆ ಇಟ್ಟರೆ ಹಲ್ಲು ನೋವು ನಿವಾರಣೆಯಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 1 ಚಮಚ ತುಳಸಿ ಎಲೆಯ ಚೂರ್ಣವನನ್ನು ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. ಜ್ವರದ ತಾಪ ಕಡಿಮೆಯಾಗಲು 1 ಚಮಚ ತುಳಸಿ ರಸ ದೊಂದಿಗೆ ನಾಲ್ಕಾರು ಕಾಳು ಮೆಣಸಿನ ಕಾಳು ಹಾಕಿ ಪುಡಿ ಮಾಡಿ, ಜೇನುತುಪ್ಪದೊಂದಿಗೆ ದಿನಕ್ಕೆ 2 ಬಾರಿ ಸೇವಿಸಿದರೆ ಉಪಯುಕ್ತವಾಗಲಿದೆ.

ಕರ್ಪೂರ, ಏಲಕ್ಕಿ ಮಿಶ್ರಣವನ್ನು ತಯಾರಿಸಿ, ಅದನ್ನು ಕರವಸ್ತ್ರದಲ್ಲಿ ಇರಿಸಿ ಮತ್ತು ಕಾಲಕಾಲಕ್ಕೆ ತೆಗೆದುಕೊಳ್ಳಿ.
ಏನು ಮಾಡಬೇಕು, ಏನು ಮಾಡಬಾರದು…
ಯಾವಾಗಲೂ ಬಿಸಿ ಹಾಗೂ ತಾಜಾ ಆಹಾರವನ್ನೇ ಸೇವಿಸಿ.
ಮೂಂಗ್, ಮಸೂರ್ ದಾಲ್ ದ್ವಿದಳ ಧಾನ್ಯಗಳನ್ನು ಆಹಾರದಲ್ಲಿ ಬಳಸಿ.
ತಾಜಾ ಹಣ್ಣು ತರಕಾರಿಗಳನ್ನು ಬಳಸಿ.
ನಿಮ್ಮ ಆಹಾರದಲ್ಲಿ ಶುಂಠಿ, ಕರಿಮೆಣಸು, ತುಳಸಿ , ಏಲಕ್ಕಿ, ಜೇನುತುಪ್ಪವನ್ನ ನಿಯಮಿತವಾಗಿ ಬಳಸಬಹುದು.
ಶೀತವನ್ನು ತಪ್ಪಿಸಿ, ಹವಾಮಾನ ಅಗತ್ಯಗಳಿಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿ.
ಐಸ್ ಕ್ರೀಮ್, ತಂಪಲು ಪಾನೀಯಾಗಳನ, ತಣ್ಣೀರು, ತಣ್ಣನೇಯ ಪಾನೀಯ, ಸೇವಿಸಬೇಡಿ.
ಕಡಿಮೆ ಜಿಡ್ಡಿನಂಶವಿರುವ ಅಥವಾ ಕಡಿಮೆ ಎಣ್ಣೆಯಿರುವ ಆಹಾರಗಳನ್ನು ಬಳಸಿ. ಯಾವಾಗಲೂ ಬೇಯಿಸಿದ ಆಹಾರವನ್ನೇ ಬಳಸಿ. ಮೌಂಸಹಾರವನ್ನು ಸೇವಿಸಬೇಡಿ.