ಕೊರೊನಾ ವೈರಸ್ ತಡೆಗಟ್ಟಲು ರಾಷ್ಟ್ರ ವ್ಯಾಪಿ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಅದರಂತೆ ಹೆಚ್ಚಿನ ಜನರು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಈ ಸಮಯದಲ್ಲಿ ಪ್ರಧಾನಿ ಮೋದಿ ತಮ್ಮ ಫಿಟ್ನೆಸ್ ದಿನಚರಿಯನ್ನು ಹಂಚಿಕೊಂಡಿದ್ದು, ಯೋಗಾದ 3 ಡಿ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
ಇಡೀ ದೇಶವನ್ನು ಲಾಕ್ ಡೌನ್ ಮಾಡಿರುವ ಬೆನ್ನಲ್ಲೇ, ಫಿಟ್ನೆಸ್ ಕಾಪಾಡಿಕೊಳ್ಳಲು ಕೆಲವರಿಗೆ ಸಾಧ್ಯವಾಗ್ತಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಿನ್ನೆ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯಾರೋ ಒಬ್ಬರು ನನ್ನ ಫಿಟ್ ನೆಸ್ ದಿನಚರಿಯ ಬಗ್ಗೆ ಕೇಳಿದ್ರು. ಹಾಗಾಗಿ ನಾನು ಇಲ್ಲಿ ಯೋಗ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನೀವು ಕೂಡಾ ಯೋಗ ಮಾಡುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಪಿಎಂ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಮೋದಿ ಹೀಗೆ ಬರೆದುಕೊಂಡಿದ್ದಾರೆ, ನಾನು ಫಿಟ್ನೆಸ್ ಎಕ್ಸ್ ಪರ್ಟ್ ಅಲ್ಲ ಹಾಗೂ ವೈದ್ಯಕೀಯ ತಜ್ಞನೂ ಅಲ್ಲ. ಯೋಗಾಭ್ಯಾಸ ಮಾಡುವುದು ನನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಇದರಿಂದ ನನಗೆ ತುಂಬಾ ಉಪಯೋಗವಾಗಿದೆ. ನಿಮ್ಮಲ್ಲಿ ಹಲವರಿಗೆ ಫಿಟ್ ನೆಸ್ ಕಾಪಾಡಿಕೊಳ್ಳಲು ಬೇರೆ ಮಾರ್ಗಗಳು ಇರಬಹುದು. ಅದನ್ನು ಇತರರ ಜತೆ ಹಂಚಿಕೊಳ್ಳಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ., ಅಲ್ಲದೇ ಟ್ವಿಟರ್ ನಲ್ಲಿ ಯೋಗಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಯೋಗ ವಿಡಿಯೋಗಳು ಅನೇಕ ಭಾಷೆಗಳಲ್ಲಿ ಲಭ್ಯವಿದೆ ಎಂದು ಬರೆದಿದ್ದಾರೆ.
ಜಾಗತಿಕ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಬಗ್ಗೆ ಭಾನುವಾರ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಲಾಕ್ ಡೌನ್ ಮಧ್ಯೆಯೂ ಜನರು ರಸ್ತೆಗಿಳಿಯುತ್ತಿದ್ದಾರೆ. ಕೊರೊನಾ ಮಾಹಾಮಾರಿಯ ಗಂಭೀರತೆಯ ಬಗ್ಗೆ ಜನರು ಅರ್ಥಮಾಡಿಕೊಳ್ಳುತ್ತಿಲ್ಲ. ಲಾಕ್ ಡೌನ್ ಮಾಡುವುದು ಅನಿವಾರ್ಯ. ಹಾಗಾಗಿ ಎಲ್ಲಾ ದೇಶವಾಸಿಗಳಿಗೆ ನಾನು ಮೊದಲು ಕ್ಷಮೆಯಾಚಿಸುತ್ತೇನೆ. ನೀವು ಖಂಡಿತವಾಗಿಯೂ ನನ್ನನ್ನು ಕ್ಷಮೀಸುತ್ತಿರಿ ಎಂದು ಭಾವಿಸುತ್ತೇನೆ. ಎಲ್ಲರನ್ನೂ ಮನೆಯಲ್ಲೇ ಲಾಕ್ ಮಾಡಲಾಗಿದೆ ಎಂದು ಜನರು ನನ್ನ ಮೇಲೆ ಕೋಪಗೊಂಡಿದ್ದಾರೆ. ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ. ಆದ್ರೆ ಕೊರೊನಾ ದಂತಹ ಮಹಾಮಾರಿ ವಿರುದ್ಧ ಹೋರಾಡಲು 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶಕ್ಕೆ ಈ ಕ್ರಮ ತೆಗೆದುಕೊಳ್ಳದೇ ಬೇರೆ ಮಾರ್ಗವಿಲ್ಲ ಎಂದು ಪ್ರಧಾನಿ ದೇಶದ ಜನರನ್ನು ಉದ್ದೇಶಿಸಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದ್ದರು.

ಪ್ರಧಾನಿ ಮೋದಿ ಯೋಗಾಭ್ಯಾಸದ ವೀಡಿಯೋಗಳು..!
ವೃಕ್ಷಾಸನ (ಮರದ ಭಂಗಿ)..
ನರ ಸ್ನಾಯುಗಳಿಗೆ ಆ ಯೋಗ ಉಪಯುಕ್ತವಾಗಿದೆ ಎಂದ ಹೇಳಬಹುದು.ಅಲ್ಲದೇ ಈ ಯೋಗಾಸನ ಕಾಲಿನ ಸ್ನಾಯುಗಳನ್ನು ಬಲಗೊಳಿಸುತ್ತದೆ. ಹಾಗೇ ಸಂಧಿವಾತ, ತಲೆಸುತ್ತು ಹಾಗೂ ಬೊಜ್ಜನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ಶಲಭಾಸನ (ಮಿಡತೆಯ ಭಂಗಿ)
ಈ ಆಸನ ಹೃದಯದ ರೋಗ ಹಾಗೂ ಶಿಯಾಟಿಕಾ ಗಳನ್ನೂ ದೂರವಿಡುವಲ್ಲಿ ನೆರವಾಗುತ್ತದೆ. ಮೌಂಸಖಂಡದ ಆಕಾರಗಳಿಗೆ ಹಾಗೂ ತೊಡೆಯ ಕೊಬ್ಬು ಕಡಿಮೆ ಮಾಡುತ್ತದೆ. ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಹೊಟ್ಟೆಯ ಊತ ಕಡಿಮೆ ಮಾಡುವುದಲ್ಲದೇ, ಜೀರ್ಣಕ್ರಿಯೆಗೆ ಸಹಕಾರಿ. ಗರ್ಭಿಣಿಯರ ಆರೋಗ್ಯ ಕಾಪಾಡಲು ಹಾಗೂ ಪೆಪ್ಟಿಕ್ ಅಲ್ಸರ್ ಹಾಗೂ ಹೈಪರ್ಟೆಕ್ಷನ್ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಉಷ್ಟ್ರಾಷನ (ಒಂಟೆಯ ಭಂಗಿ)
ತಲೆಸುತ್ತು, ಹರ್ನಿಯಾ ಹಾಗೂ ಅರ್ಥೈಟಿಸ್ ಹಾಗೂ ಹೃದಯ ರೋಗ , ಹೈಪರ್ ಟೆಕ್ಷನ್ , ಜಠರ ಗಾಯ , ಗರ್ಭಿಣಿಯರಿಗೆ ಒಳ್ಳೆಯದು.

ಸೇತು ಬಂಧಾಸನ (ಸೇತುವೆ ಭಂಗಿ)
ಈ ಆಸನ ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹಾಗೂ ಮಲಬದ್ಧತೆ ನಿವಾರಣೆಗೆ ಸಹಕಾರಿಯಾಗಿದೆ. ಅಲ್ಸರ್ ಹುಣ್ಣು ತಡೆಗಟ್ಟಲು ಪ್ರಮುಖ ಪಾತ್ರವಹಿಸುತ್ತದೆ.

ತ್ರಿಕೋನಾಸನ (ತ್ರಿಕೋನ ಭಂಗಿ)
ಬೆನ್ನು , ತೊಡೆ , ಭುಜ ಹಾಗೂ ಎದೆ ಬೆನ್ನು ಮೂಳೆ ಸೇರಿದಂತೆ ಮುಂತಾದ ಸ್ನಾಯುಗಳನ್ನು ಬಲಗೊಳಿಸುತ್ತದೆ.

ತಾಂಡಾಸನ ( ತಾಳೆ ಮರದ ಭಂಗಿ)
ಈ ಯೋಗಾಸಾನ ಮಾಡುವುದರಿಂದ ಬೆನ್ನು ಮೂಳೆಯ ನರಗಳ ಸಂಕೋಚನಗೊಳ್ಳುವಿಕೆ ತಡೆಗಟ್ಟುವುದಲ್ಲದೇ, ನಿಮ್ಮ ದೇಹದ ಭಂಗಿಯನ್ನು ನೇಕವಾಗಿಸುತ್ತದೆ. ತೊಡೆ, ಮಂಡಿ ಹಾಗೂ ಹಿಮ್ಮಡಿಗೆ ಉಪಯುಕ್ತವಾದದ್ದು. ಹಾಗೂ ತಲೆಸುತ್ತು, ಹೃದಯ ಸಂಬಂಧಿ ಕಾಯಿಲೆ ಹಾಗೂ ಉಬ್ಬಿರುವ ದೇಹದ ಭಾಗಗಳನ್ನು ನಿವಾರಿಸುತ್ತದೆ.