ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ನಿಂದಾಗಿ ಮದುವೆ ಸಮಾರಂಭಗಳು, ಪರೀಕ್ಷೆಗಳು, ಪ್ರಮುಖ ಕಾರ್ಯಕ್ರಮಗಳು ಮುಂದೂಡಲಾಗಿದೆ. ಮತ್ತೊಂದೆಡೆ ಲಾಕ್ ಡೌನ್ ಮಧ್ಯೆಯೂ, ವಧು- ವರರಿಬ್ಬರು ಆನ್ ಲೈನ್ ನಲ್ಲೇ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಶೇಷ ವಿವಾಹ ಹೇಗೆ ನಡೆಯಿತು. ಇಲ್ಲಿದೆ ಡಿಟೇಲ್ಸ್.

ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ವರ ದಾನಿಷ್ ರಝಾ ಹಾಗೂ ವಧು ಬಿಹಾರದ ಪಟನಾದವಳು… ಇಬ್ಬರು ನಿಶ್ಚಯಿಸಿದ ದಿನಾಂಕದಂದೇ ವಿವಾಹವಾಗಬೇಕಿತ್ತು. ಆದ್ರೆ ದೇಶದಾಂದ್ಯತ ಲಾಕ್ ಡೌನ್ ಬಿಕ್ಕಟ್ಟಿನಿಂದಾಗಿ ಇಬ್ಬರಿಬ್ಬರ ಮದಮೆಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಆನ್ ಲೈನ್ ಮದುವೆಯಾಗಲು ಈ ಜೋಡಿ ನಿರ್ಧರಿಸಿದ್ದಾರೆ. ನಂತರ ಇವರಿಬ್ಬರು ಆನ್ ಲೈನ್ ನಲ್ಲೇ ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದಾರೆ.. ಈ ವಿಶೇಷ ವಿವಾಹ ಕಾರ್ಯವನ್ನು ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆನ್ ಲೈನ್ ಮದುವೆ ಹೇಗೆ ನಡೆಯಿತು..?
ವಧು ಸಾದಿಯಾ ಹಾಗೂ ವರ ದಾನಿಷ್ ಅವರ ವಿವಾಹ ಮಾರ್ಚ್ 23ರಂದು ನಡೆಸಲು ನಿರ್ಧರಿಸಿದರು. ಆದ್ರೆ ಸರ್ಕಾರ ಧಿಡೀರ್ ಆಗಿ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿತ್ತು. ವಧುವಿನ ಊರು ಪಾಟ್ನಾದ ಸಮುದಾಯ ಭವನದಲ್ಲಿ ಮದುವೆಗೆ ಸಿದ್ಥತೆಗಳು ಪೂರ್ಣಗೊಂಡಿದ್ದವು. ಎಲ್ಲೆಡೆ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗಿತ್ತು. ಇದರ ಮಧ್ಯೆ ಸಂಚಾರ ನಿರ್ಭಂಧ ಇದ್ದ ಕಾರಣ, ಮದುವೆ ಕಾರ್ಯ ನಡೆಸಲು ವರ ರಝಾ ಕುಟುಂಬಸ್ಥರು ಪಟನಾಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಬ್ಬರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ, ವಧು ವರ ಇಬ್ಬರು ಲ್ಯಾಪ್ ಟಾಪ್ ಮುಂದೆ ಕುಳಿತರು. ಇಡೀ ಮನೆಯ್ನನು ಚೆನ್ನಾಗಿ ಅಲಂಕಾರ ಮಾಡಲಾಗಿತ್ತು. ಪಾಟ್ನಾದ ವಧುವಿನ ಮನೆಯಲ್ಲಿ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು, ನಂತರ ಧಾರ್ಮಿಕ ಮುಖಂಡರು ವಿಡಿಯೋ ಕಾಲ್ ಮೂಲಕ ಮದುವೆ ನೆರವೇರಿಸಿದ್ದಾರೆ.
ಈ ವಿಡಿಯೋದಲ್ಲಿ ಈ ಜೋಡಿ ‘ಕಬೂಲ್ ಹೇ’ ಎಂದು ಹೇಳುವ ದೃಶ್ಯವಿದೆ. ಅದೇ ರೀತಿ ಇಬ್ಬರ ಕುಟುಂಬಸ್ಥರು, ಸಂಬಂಧಿಕರು ಪರಸ್ಪರ ಆಲಂಗಿಸಿಕೊಂಡು ಮುಬಾರಕ್ ಹೋ ಎಂದು ಹೇಳವುದನ್ನು ಇಲ್ಲಿ ಕಾಣಬಹುದು. ದೇಶಾದ್ಯಂತ ಲಾಕ್ ಡೌನ್ ಇದ್ದ ಕಾರಣ ವರ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿದ್ದರೆ, ವಧು ಪಟ್ನಾದಲ್ಲಿದ್ದರು. ಅಲ್ಲಿಂದಲೇ ಅವರಿಬ್ಬರೂ ಮದುವೆ ಸಿದ್ಧರಾದರು.