Realtionship Tips: ಸಂಬಂಧದಲ್ಲಿ ಪ್ರೀತಿಗಿಂತ, ಬದ್ಧತೆ ಮುಖ್ಯ!

  • by

ಸಂಬಂಧ ವೆಂದರೆ ಹಗ್ಗದ ಮೇಲಿನ ನಡಿಗೆ ಎಂದು ಹೇಳಬಹುದು. ಪ್ರೀತಿ ಅಥವಾ ಸ್ನೇಹ ಸಂಬಂಧವಿರಲಿ  ಬದ್ಧತೆ( ಕಮಿಟ್ ಮೆಂಟ್ ) ಮುಖ್ಯವಾಗುತ್ತದೆ. ಬದ್ಥತೆ ಪ್ರೀತಿಯ ಜತೆಗೆ ಸುರಕ್ಷತೆಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ. ನೀವು ಇನ್ನೊಬ್ಬರ ಜತೆ ಅಥವಾ ನಿಮ್ಮ ಸಂಗಾತಿ ಜತೆಗೆ ಬದ್ಧರಾಗಿದ್ದಾಗ, ಸಾಕಷ್ಟು ಪ್ರಯೋಜನಗಳಿವೆ, ಸಂಬಂಧದಲ್ಲಿ ಕಮಿಟ್ ಮೆಂಟ್ ದೊಡ್ಡ ಪ್ರಯೋಜನವೆಂದರೆ ಇದು ನಿಮ್ಮ ಜೀವನಕ್ಕೆ ಸ್ಥಿರತೆ ಹಾಗೂ ವಿಶ್ವಾಸವನ್ನು ನೀಡುತ್ತದೆ. ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿಸುತ್ತದೆ ಹಾಗೂ ಸುಂದರವಾಗಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಆರಂಭದಲ್ಲಿ ತುಂಬಾ ಪ್ರೀತಿಯಿಂದ ಹಾಗೂ ಅನ್ಯೋನ್ಯತೆ ಯಿಂದ ಇದ್ದ ದಂಪತಿ, ಕ್ರಮೇಣ ಇಬ್ಬರ ಮಧ್ಯೆ ಪ್ರೀತಿ ಕಡಿಮೆಯಾಗುತ್ತದೆ. ಇದಕ್ಕೆ ಕಾರಣವೆಂದರೆ ವಾಸ್ತವವಾಗಿ, ನಿಮ್ಮ ಸಂಬಂಧ ಗಟ್ಟಿಯಾಗಬೇಕಾದರೆ, ನಿಮ್ಮ ಸಂಗಾತಿಯ ನಿರೀಕ್ಷೆಗಳು, ಆಸೆಗಳ ಬಗ್ಗೆ ಗಮನ ವಹಿಸದೇ ಇರುವುದು, ಕಾಳಜಿ ಇಲ್ಲದೇ ಇರುವುದು ಕಂಡು ಬರುತ್ತದೆ. ಇದು ಕ್ರಮೇಣ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧದಲ್ಲಿ ನೀವು ಬದ್ಧರಾಗಿರಬೇಕಾದದ್ದು ತುಂಬಾ ಮುಖ್ಯ. ಬದ್ಧತೆ ಜತೆಗೆ ಪ್ರೀತಿ ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ. ಸಂಬಂಧದಲ್ಲಿ ಕಮಿಟ್ ಮೆಂಟ್ ಹೇಗಿರಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

committment, relationship, 
ಸಂಬಂಧ , ಬದ್ಧತೆ , ಟಿಪ್ಸ್

ವ್ಯಾಲ್ಯೂ ಟೈಮ್ ಸ್ಪೆಂಡ್ ಮಾಡಿ!

ನಿಮ್ಮ ಕೆಲಸದಲ್ಲಿ ಎಷ್ಟೇ ಬ್ಯೂಸಿಯಾಗಿದ್ದರೂ, ಸಂಗಾತಿ ಜತೆ ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಬೇಕು. ಇದು ನಿಮ್ಮಿಬ್ಬರ  ಪ್ರೀತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ. ನಂತರದಲ್ಲಿ ಹಲವು ಜನರ ಸ್ವಭಾವದಲ್ಲಿ ಹಾಗೂ ಮನೋಭಾವದಲ್ಲಿ ಬದಲಾವಣೆ ಕಂಡು ಬರುತ್ತದೆ. ಆಗಾಗ್ಗೆ ಜನರು ತಮ್ಮ ಸಂಗಾತಿ ಬಗ್ಗೆ ಸಮಯ ಕಳೆಯುವುದಿಲ್ಲ . ಸಂಗಾತಿ ಜತೆಗೆ ಗುಣಮಟ್ಟದ ಸಮಯ ಕಳೆದರೆ, ಜೀವನದಲ್ಲಿ ನಡೆಯುತ್ತಿರುವ ಚಟುವಟಿಕೆ ಬಗ್ಗೆ ಅರಿವು ಮೂಡಿಸುತ್ತದೆ. ಅಲ್ಲದೇ, ಸಂತೋಷ ಹಾಗೂ ತೊಂದರೆಯನ್ನು ಸಮಾನವಾಗಿ ಸ್ವೀಕರಿಸಲು ನೆರವಾಗುತ್ತದೆ. ಇಬ್ಬರ ಮಧ್ಯೆ ಪರಸ್ಪರ ಪ್ರೀತಿಯನ್ನು ಹೆಚ್ಚಿಸಲು ಇದು ಉತ್ತಮ ಮಾರ್ಗ ಎಂದೇ ಹೇಳಬಹುದು. 

ಸಣ್ಣ ಸಣ್ಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು

ಸಂಬಂಧದಲ್ಲಿ ಪ್ರೀತಿಯನ್ನು ಕಾಪಾಡಲು, ಮತ್ತು ಹೆಚ್ಚಿಸಲು ಅನೇಕ ವಿಷಯಗಳಿವೆ. ನಿಮ್ಮ ಸಂಗಾತಿಗೆ ಮುದ್ದಾದ ಪ್ರೇಮ ಪತ್ರವನ್ನು ಬರೆಯುವುದು, ಐ ಲವ್ ಯೂ ಹೇಳುವುದು, ನಿಮ್ಮ ಸಂಗಾತಿಗಾಗಿ ಸರ್ ಪ್ರೈಜ್ ಪ್ಲ್ಯಾನ್ ಮಾಡುವುದು ಇಂತಹ ಚಟುವಟಿಕೆಗಳು ಯಾವಾಗಲೂ ಸಂಬಂಧದಲ್ಲಿ ಹೊಸತನವನ್ನು ಕಾಪಾಡುತ್ತವೆ. 

committment, relationship, 
ಸಂಬಂಧ , ಬದ್ಧತೆ , ಟಿಪ್ಸ್

ಸಮಾನ ಗೌರವ ನೀಡುವುದು!

ಪರಸ್ಪರ ಇಬ್ಬರು ಸಮಾನವಾಗಿ ಗೌರವಿಸಬೇಕು. ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಒಬ್ಬರನೊಬ್ಬರು ಪ್ರಶಂಸಿಸಬೇಕು. ನೀವಿಬ್ಬರಲ್ಲೂ ಕಮಿಟ್ ಮೆಂಟ್ ಇದ್ದರೂ ಸಹ, ನೀವಿಬ್ಬರೂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಲೋಚಿಸಿ. ಕೊನೆಗೆ ನಿಮ್ಮ ಸಂಗಾತಿಯ ಸಂತೋಷವೇ ಮುಖ್ಯ ಎಂಬುದನ್ನು ಮರೆಯದಿರಿ. 

ಜವಬ್ದಾರಿ ಹೊರೆಯಾಗದಿರಲಿ..!

ನಿಮ್ಮ ಸಂಗಾತಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸುವುದರ ಜತೆಗೆ , ಗೌರವ ಮುಖ್ಯವಾಗುತ್ತದೆ. ಇದಲ್ಲದೇ, ನೀವು ಪರಸ್ಪರ ಜವಾಬ್ದಾರಿಗಳನ್ನು ಸಹ ಹಂಚಿಕೊಳ್ಳಬೇಕು. ಸಂಬಂಧದಲ್ಲಿ ಬದ್ಧತೆ ಹಾಗೂ ಪ್ರೀತಿ ಹೆಚ್ಚಿಸಲು ಇದು ಉತ್ತಮ ಮಾರ್ಗವೆಂದೇ ಹೇಳಬಹುದು.  ಒಂದು ವೇಳೆ ಎಲ್ಲಾ ಜವಾಬ್ದಾರಿ ಒಬ್ಬರೇ ನಿರ್ವಹಿಸಿದಾಗ, ಇದು ಸಂಗಾತಿ ಪ್ರೀತಿ ಕಡಿಮೆಯಾಗುವುದಲಲ್ಲದೇ, ಹೆಚ್ಚು ಹೊರೆಯನ್ನಾಗಿ ಮಾಡುತ್ತದೆ. 

committment, relationship, 
ಸಂಬಂಧ , ಬದ್ಧತೆ , ಟಿಪ್ಸ್

ತ್ಯಾಗವಿಲ್ಲದೇ ಸಂಬಂಧ ಗಟ್ಟಿಗೊಳ್ಳುವುದಿಲ್ಲ…! 

ನಿಮ್ಮ ಪ್ರೀತಿ ಪಾತ್ರರಿಗೆ ಸಂತೋಷವನ್ನು ನೀಡುತ್ತಿದ್ದರೆ, ಇದಕ್ಕಿಂತ ಉತ್ತಮವಾದ ಕೆಲಸ ಬೇರೆ ಇಲ್ಲ. ನಮ್ಮ ಸಂತೋಷಕ್ಕಿಂತ ಹೆಚ್ಚಾಗಿ, ಸಂಗಾತಿಯ ಸಂತೋಷವೇ ಮುಖ್ಯ ಎಂಬ ತ್ಯಾಗ ಮನೋಭಾವ ಸಂಬಂಧ ಗಟ್ಟಿಗೊಳ್ಳಲು ಕಾರಣವಾಗುತ್ತದೆ. ಅನೇಕ ಬಾರಿ ತಮ್ಮ ಸಂಗಾತಿ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರನ್ನು ಸಂತೋಷಗೊಳಿಸಲು ಪ್ರಯತ್ನಿಸುತ್ತಾರೆ. 

ಸಮರ್ಪಣೆ ಮನೋಭಾವ ಇರಲಿ

ನಿಮ್ಮ ಪ್ರೀತಿಪಾತ್ರರ ಬಗ್ಗೆ ಸಮರ್ಪಣೆ ಮನೋಭಾವ ಹೊಂದಿಲ್ಲದಿದ್ದರೆ, ಅದು ನಿಮ್ಮ ಸಂಗಾತಿ ಪ್ರೀತಿ , ವಿಶ್ವಾಸ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಜೀವನದುದ್ದಕ್ಕೂ ನಿಮ್ಮ ಸಂಬಂಧವನ್ನು ಮುಂದುವರೆಸಲು ಸಮರ್ಪಮೆ ಮನೋಭಾವ ಮುಖ್ಯವಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ