ಕಾಫಿ ಹಾಗೂ ಟೀ ನಮ್ಮ ದಿನನಿತ್ಯದ ಅಗತ್ಯಗಳಲ್ಲಿ ಒಂದು. ಅನೇಕ ಜನರಿಗೆ ಕಾಫಿ ಕೂಡಿದಿಲ್ಲ ಅಂದ್ರೆ ದಿನವೇ ಪ್ರಾರಂಭವಾಗುವುದಿಲ್ಲ. ಕಾಫಿ ಕುಡಿಯದೇ ಇದ್ದರೆ, ತಲೆನೋವು ಸಮಸ್ಯೆ ಎದುರಿಸುತ್ತೇವೆ ಎಂದು ಹಲವು ಜನರು ಹೇಳುತ್ತಾರೆ. ಆದ್ರೆ ನೀವು ಸರಿಯಾದ ಸಮಯದಲ್ಲಿ ಕಾಫಿ ಕುಡಿದರೆ, ಅದು ಹಾನಿಕಾರಕವಲ್ಲ ಎಂದು ನಿಮಗೆ ತಿಳಿದಿದ್ದೇಯಾ? ಯೆಸ್, ಕಾಫಿ ಕುಡಿಯುವುದಕ್ಕೆ ಒಂದು ಸಮಯವಿದೆ. ಆ ಸಮಯಕ್ಕೆ ತಕ್ಕಂತೆ ಕಾಫಿ ಸೇವನೆ ಮಾಡಬೇಕಾಗುತ್ತದೆ. ಇದ್ರಿಂದ ಆರೋಗ್ಯ ಕೂಡ ಹೆಚ್ಚುವುದಲ್ಲದೇ, ಯಾವುದೇ ಸಮಸ್ಯೆ ಕಾಡುವುದಿಲ್ಲ. ಅಂದ ಹಾಗೇ , ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು?

ಬೆಳಿಗ್ಗೆ ಕಾಫಿ ಕುಡಿಯಬೇಡಿ.!
ಈ ಬಗ್ಗೆ ಗಮನಹರಿಸುವ ಅವಶ್ಯಕತೆ ಇದೆ. ಬೆಳಿಗ್ಗೆ ಹೊತ್ತಿನಲ್ಲಿ ಹೆಚ್ಚಿನವರು ಕಾಫಿ ಸೇವನೆ ಮಾಡುತ್ತಾರೆ. ನಿಮ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ಇದ್ದರೆ, ಇದನ್ನು ಬದಲಾಯಿಸಿ. ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಸೇವಿಸುವುದರಿಂದ ದೇಹದಲ್ಲಿ ಇರುವ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗುತ್ತದೆ. ನಿಮ್ಮ ರೋಗನಿರೋಧಕ ಶಕ್ತಿ, ಚಯಾಪಚಯ ಕ್ರಿಯೆ ಹಾಗೂ ಒತ್ತಡವನ್ನು ನಿರ್ವಹಿಸುವಲ್ಲಿ ಕಾರ್ಟಿಸೋಲ್ ಕಾರಣವಾಗುತ್ತದೆ. ನೀವು ಬೆಳಿಗ್ಗೆ ಕಾಫಿ ಸೇವಿಸಿದ್ರೆ , ಒತ್ತಡದ ಜತೆಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಬೇಡ
ಖಾಲಿ ಹೊಟ್ಟೆಯಲ್ಲಿ ಎಂದಿಗೂ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು.

ಯೋಗಾ, ಎಕ್ಸಸೈಜ್, ತಾಲೀಮಿಗೂ ಮುನ್ನ ಕಾಫಿ ಕುಡಿಯುವುದು ಒಳ್ಳೆಯದು
ತಾಲೀಮಿಗೂ ಮುನ್ನ ಕಾಫಿ ಕುಡಿಯುವುದು ಉತ್ತಮ ಎಂದು ಹೇಳಲಾಗುತ್ತದೆ. ತಾಲೀಮು ಮಾಡುವುದಕ್ಕೆ ಅರ್ಧ ಗಂಟೆ ಮೊದಲು. ಕಾಫಿ ಕುಡಿಯುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ಕೇಫಿನ್ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಬ್ರೇಕ್ ಫಾಸ್ಟ್ ಆದ ಮೇಲೆ ಹಾಗೂ ಊಟಕ್ಕೂ ಮುನ್ನ ಎಲ್ಲರಿಗೂ ಹೊಟ್ಟೆ ಹಸಿವು ಸ್ವಲ್ಪ ಮಟ್ಟಿಗೆ ಆಗೇ ಇರುತ್ತದೆ. ಆ ವೇಳೆಯಲ್ಲಿ ಇಡೀ ದಿನ ಕೆಲಸ ಮಾಡಲು ದೇಹಕ್ಕೆ ಎನರ್ಜಿ ಬೇಕಾಗುತ್ತದೆ. ಈ ವೇಳೆಯಲ್ಲಿ ಕಾಫಿ ಕುಡಿಯುವುದು ಉತ್ತಮ ಎಂದು ಹೇಳಲಾಗುತ್ತದೆ. ಇದ್ರಿಂದ ಸಾಕಷ್ಚು ಎನರ್ಜಿಯಿಂದ ದಿನವಿಡಿ ಕೆಲಸ ಮಾಡಬಹುದಾಗಿದೆ.
ಸಂಜೆ ತಡವಾಗಿ ಕಾಫಿ ಸೇವನೆ ಮಾಡಬಾರದು
ಸಂಜೆ ತಡವಾಗಿ ಕಾಫಿ ಕುಡಿಯುವುದನ್ನು ತಪ್ಪಿಸಬೇಕಾಗುತ್ತದೆ. ಸಂಜೆ ತಡವಾಗಿ ಕಾಫಿ ಕುಡಿಯುವುದರಿಂದ ನಿಮಗೆ ಹಸಿವಾಗುತ್ತದೆ. ಇದ್ರಿಂದ ರಾತ್ರಿ ಊಟದ ಸಮಯದಲ್ಲಿ ಸಮಸ್ಯೆಗಳು ಆಗಬಹುದು. ಅಲ್ಲದೇ, ಸಂಜೆ ತಡವಾಗಿ ಕಾಫಿ ಕುಡಿಯುವುದರಿಂದ ರಾತ್ರಿ ಮಲಗಲು ತೊಂದರೆಯಾಗುತ್ತದೆ.
ರಾತ್ರಿ ಕಾಫಿ ಕುಡಿದ್ರೆ ಏನಾಗುತ್ತೆ?
ರಾತ್ರಿ ಸರಿಯಾಗಿ ಮಲಗಲು ಕಾಫಿ ಅಡ್ಡಿಯಾಗಬಹುದು. ವಾಸ್ತವಾಗಿ ಕಾಫಿಯಲ್ಲಿ ಕೆಫೀನ್ ಕಂಡು ಬರುತ್ತದೆ. ಇದು ನಿಮ್ಮ ನಿದ್ರೆಯ ಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ನೀವು ಏನನ್ನಾದರೂ ಕುಡಿಯಲು ಬಯಸಿದರೆ, ಕಾಫಿಯ ಬದಲು ಬಿಸಿ ಹಾಲನ್ನು ಸೇವನೆ ಮಾಡಿ. ಇದು ನರಮಂಡಲಕ್ಕೂ ಉತ್ತಮವಾದದ್ದು. ಹಾಗೂ ನಿದ್ರೆ ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಆ್ಯಸಿಡಿಟಿ ಸಮಸ್ಯೆ ಕಾಡಬಹುದು. ಇದು ಆ್ಯಸಿಡಿಟಿ ಸಮಸ್ಯೆಯಿಂದ ಎದೆಯ ಉರಿ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಮಲಬದ್ಧತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳು ಕಾಡಬಹುದು.

ಕಾಫಿ, ಟೀ ಸೇವನೆ ಅತಿಯಾದರೆ ಅಪಾಯ
ಕಾಫಿ ಎಷ್ಟು ಕಪ್ ಕುಡಿಯಬೇಕು ಎಂಬುದು ಗೊತ್ತಿರಬೇಕು. ಆದ್ರೆ ಇದಕ್ಕೆ ವ್ಯಸನವಾಗಬಾರದು. ಾಕಫಿ ಸೇವನೆಗೆ ಮಿತಿ ಇದ್ದರೆ ಒಳ್ಳೆಯದು. ಕಾಫಿ ಸೇವನೆ ಹೆಚ್ಚಾದರೆ ದಕ್ಷತೆ, ಮಾನಸಿಕ ಏಕಾಗ್ರತೆ, ಸಡಿಲಗೊಳ್ಳುವ ಸ್ನಾಯುಗಳ ಸಮಸ್ಯೆ ಹೆಚ್ಚಾಗಲು ಕಾಫಿ ಅತಿಯಾದ ಸೇವನೆಯೇ ಕಾರಣ. ಹಾಗಾಗಿ ಕಾಫಿ ಸೇವನೆ ಎಷ್ಟು ಪ್ರಮಾಣದಲ್ಲಿ… ಎಷ್ಟು ಕಪ್ ಸೇವನೆ ಮಾಡಬೇಕು ಎಂಬ ಬಗ್ಗೆ ಗಮನವಿರಲಿ.
ಗರ್ಭಾವಸ್ಥೆಯಲ್ಲಿ 1 ಕಪ್ ಗಿಂತ ಹೆಚ್ಚು ಕಾಫಿ ಸೇವಿಸಬಾರದು.
ಗರ್ಭಿಣಿಯರು ಗರ್ಭಾವಸ್ಥೆಯ ಸಮಯದಲ್ಲಿ ಏನೇ ಆಹಾರ ಸೇವಿಸಿದ್ರೂ ಅದು ಹೊಟ್ಟೆಯಲ್ಲಿರುವ ಮಗುವಿಗೆ ತಲುಪುತ್ತದೆ. ಆದ್ದರಿಂದ ಕಾಫಿಯಲ್ಲಿ ಕೇಫಿನ್ ಅಂಶದಿಂದಾಗಿ ಗರ್ಭದಲ್ಲಿರುವ ಮಗು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡುತ್ತದೆ. ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಹೆಚ್ಚಿರುತ್ತದೆ. ಗರ್ಭಿಣಿಯರು ಅತಿಯಾಗಿ ಕಾಫಿ ಸೇವನೆ ಮಾಡಬಾರದು.