ಕೊಬ್ಬರಿ ಎಣ್ಣೆ ಅತ್ಯದ್ಭುತವಾಗಿ ದೊರೆಯುವ ಉತ್ಪನ್ನ. ಇದು ಹಲವು ಆರೋಗ್ಯಕರ ಸಮಸ್ಯೆಗಳಿಗ ಚಿಕಿತ್ಸೆ ನೀಡುವ ಶಕ್ತಿ ಹೊಂದಿದೆ. ಚರ್ಮದ ಆರೈಕೆ, ಗಾಯ, ಕೂದಲು ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಲವು ಬಗೆಯ ಸಮಸ್ಯೆಗಳಿಗ ಇದನ್ನು ಬಳಸಲಾಗುತ್ತದೆ. ಈ ಹಿಂದೆ ಕೊಬ್ಬರಿಎಣ್ಣೆಯ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನೋಡಿದ್ದೇವೆ. ಆದ್ರೆ.. ಅದ್ರಿಂದಾಗುವ ಹಾನಿಗಳನ್ನು ಬಗ್ಗೆ ಹಲವರಿಗೆ ಗೊತ್ತಿರಲ್ಲ. ಕೊಬ್ಬರಿ ಎಣ್ಣೆ ಉಪಯೋಗಿಸಿದ್ರೆ ಹಾನಿಯಾಗುತ್ತೆ… ಆರೋಗ್ಯಕ್ಕೆ ಒಳ್ಳೆಯದಾ ಹೀಗೆ ಹಲವು ಸಂದೇಹಗಳು ಅನೇಕರಲ್ಲಿವೆ. ನಿಜಕ್ಕೂ ಕೊಬ್ಬರಿ ಎಣ್ಣೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳಿವೆ?

ತೆಗಿನ ಎಣ್ಣೆ ಮಾರುಕಟ್ಟೆಯಲ್ಲಿ 2 ರೂಪದಲ್ಲಿ ಲಭ್ಯವಿದೆ. ಓರಿಜಿನಲ್ ಎಣ್ಣೆ , ಕಮರ್ಷಿಯಲ್ ಎಣ್ಣೆ. ಓರಿಜಿನಲ್ ಎಣ್ಣೆಯಲ್ಲಿ ಯಾವುದೇ ಸೈಡ್ ಎಪೆಕ್ಟ್ ಇರುವುದಿಲ್ಲ. ಇದ್ರಿಂದ ಹಲವು ಆರೋಗ್ಯಕಾರಿ ಪ್ರಯೋಜನಘಲನ್ನು ಕಾಣಬಹುದು. ಇನ್ನು ಕಮರ್ಷಿಯಲ್ ಎಣ್ಣೆಯಲ್ಲಿ ಸ್ವಲ್ಪ ಮಟ್ಟಿಗೆ ಸೈಡ್ ಎಫೆಕ್ಟ್ ಕಾಣಬಹುದು. ಇದ್ರಿಂದ ಕೆಟ್ಟ ಕೊಬ್ಬಿನಾಂಶ ಹಾಗೂ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.
ಸ್ಯಾಚುರೇಟೆಡ್ ಕೊಬ್ಬು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಧ್ಯನದಿಂದ ತಿಳಿದು ಬಂದಿದೆ. ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರಗಳಲ್ಲಿ ತೆಂಗಿನ ಎಣ್ಣೆ ಕೂಡಾ ಒಂದು.

ಅಲರ್ಜಿ ಉಂಟು ಮಾಡಬಹುದು
ಕೊಬ್ಬರಿ ಎಣ್ಣೆ ಸೇವನೆ ಮಾಡುವುದರಿಂದ ಅಲರ್ಜಿ ಉಂಟು ಮಾಡಬಹುದು. ತೆಂಗಿನಎಣ್ಣೆ ತ್ವರಿತ ಹೃದಯದ ಬಡಿತ ಸೇರಿದಂತೆ ಲಘು ತಲೆನೋವಿಗೆ ಕಾರಣವಾಗಬಹುದು. ಇವುಗಳಲ್ಲಿ ಯಾವುದಾದದರೂ ನಿಮಗೆ ಕಂಡು ಬಂದರೆ ವೈದ್ಯರ ನ್ನು ಭೇಟಿ ಮಾಡಿ.
ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು
ಆಹಾರದಲ್ಲಿ ಕೊಬ್ಬರಿ ಎಣ್ಣೆ ಸೇವಿಸುವುದರಿಂದ ಹೃದ್ರೋಗ ಹೆಚ್ಚಿಸಬಹುದು. ತಜ್ಞರ ಪ್ರಕಾರ. ಇದರಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಇರುವುದರಿಂದ ಬೆಣ್ಣೆಯಷ್ಟೇ ಅಪಾಯಕಾರಿ ಎಂದು ಹೇಳಬಹುದು.

ಯಕೃತ್ತಿ ಸಮಸ್ಯೆಗಳ ಮೇಲೆ ಪರಿಣಾಮ
ಕೊಬ್ಬರಿ ಎಣ್ಣೆ ಯಕೃತ್ತಿಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಕೊಬ್ಬರಿ ಎಣ್ಣೆ ಯಕೃತ್ತಿಯ ಮೇಲೆ ಒತ್ತಡ ಉಂಟು ಮಾಡುತ್ತದೆ. ಹೀಗಾಗಿ ದೇಹದ ಅಂಗಾಗಳಿಗೆ ಹಾನಿಯಾಗಬಹುದು. ನೀವು ಯಾವುದೇ ಪಿತ್ತಜನಕಾಂಗದ ಕಾಯಿಲೆ ಮತ್ತು ಮಧುಮೇಹ ಹೊಂದಿದ್ದರೆ, ಕೊಬ್ಬರಿ ಎಣ್ಣೆಯನ್ನು ಆಹಾರದಲ್ಲಿ ಬಳಸಬಾರದು.
ಮೊಡವೆಗೆ ಕಾರಣವಾಗಬಹುದು
ಎಣ್ಣೆಯುಕ್ತ ಚರ್ಮ ಹೊಂದಿರುವವರು ಮತ್ತಷ್ಟು ಕೊಬ್ಬರಿ ಎಣ್ಣೆ ಬಳಸುವುದರಿಂದ ಮೊಡವೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಹಾಗೂ ಕರುಳಿನ ತೊಂದರೆಗಳಿಗೆ ಇದು ಕಾರಣವಾಗಬಹುದು. ಕೊಬ್ಬರಿ ಎಣ್ಣೆ ಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಕರುಳಿನ ತೊಂದರೆ. ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗಬಹುದು.
ಕೊಬ್ಬರಿ ಎಣ್ಣೆ ಆಹಾರದಲ್ಲಿ ಬಳಸುವ ಕೆಲವು ವ್ಯಕ್ತಿಗಳು ಅತಿಸಾರದಂತಹ ಸಮಸ್ಯೆಗಳನ್ನು ಎದುರಿಸಬಹುದಾಗಿದೆ. ಹೊಟ್ಟೆ ನೋವು , ವಾಂತಿಗಳನ್ನು ಸಂಬಂಧಿತ ಸಮಸ್ಯೆ ಗಳನ್ನು ಎದುರಿಸಬಹುದು.