ತೆಂಗಿನ ಗಿಡವನ್ನು ಕಲ್ಪವೃಕ್ಷದಂತೆ ಭಾವಿಸಲಾಗುತ್ತದೆ. ಈ ಹಾಲು ಬಣ್ಣದಲ್ಲಿ ಮಾತ್ರವಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಮತ್ತು ಸಕ್ಕರೆ ಅಂಶಗಳಿಂದ ಕೂಡಿರುತ್ತದೆ. ತೆಂಗಿನ ಕಾಯಿ ತುರಿದು ಹಾಲನ್ನು ತೆಗೆದರೆ ತೆಂಗಿನ ಹಾಲು ಪಡೆದುಕೊಳ್ಳಬಹುದು.ತೆಂಗಿನ ಹಾಲು ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ.

ತೆಂಗಿನ ಹಾಲಿನಲ್ಲಿ ಪೋಟ್ಯಾಶಿಯಂ ಅಂಶ ಅಧಿಕವಾಗಿದ್ದು, ಹಾಲಿನ ಸೇವನೆಯಿಂದ ಮೂಳೆ ಬಲಗೊಳ್ಳುತ್ತದೆ. ತೂಕ ಕಾಪಾಡಿಕೊಳ್ಳಲು ಸಮತೂಕ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಸ್ನಾಯು ನೋವಿಗೆ ತೆಂಗಿನ ಹಾಲು ರಾಮಬಾಣದಂತೆ ಕೆಲಸ ಮಾಡುತ್ತದೆ. ತೆಂಗಿನ ಹಾಲಿನಲ್ಲಿ ಮೆಗ್ನೇಷಿಯಂ ಅಂಶ ಹೆಚ್ಚಿದ್ದು, ಇದು ನೋವು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ.
ರಕ್ತ ಹೀನತೆಗೆ ಕಬ್ಬಿಣದ ಕೊರತೆ ಮುಖ್ಯ ಕಾರಣವಾಗಿರುತ್ತದೆ. ೧ ಕಪ್ ತೆಂಗಿನ ಹಾಲಿನಲ್ಲಿ ದಿನಕ್ಕೆ ಬೇಕಾದ ಕಾಲು ಭಾಗದ ಕಬ್ಬಿಣದ ಅಂಶ ಸೀಗುತ್ತದೆ. ಸಂಧಿವಾತ ಸಮಸ್ಯೆ ಇರುವವರು ತೆಂಗಿನ ಹಾಲು ಪರಿಣಾಮಕಾರಿಯಾಗಿದೆಯ ದೇಹಕ್ಕೆ ಸೆಲೆನಿಯಂ ಅಂಶ ಅಗತ್ಯವಾಗಿರುತ್ತದೆ.
ಚರ್ಮದ ಆರೈಕೆಗೆ ತೆಂಗಿನ ಹಾಲು ಎಷ್ಟು ಸಹಕಾರಿ… ತೆಂಗಿನ ಹಾಲು ಇಂದು ಮಾರುಕಟ್ಟೆಯಲ್ಲಿ ಹೇರಳ ವಾಗಿ ದೊರೆಯುತ್ತದೆ. ಆದ್ರೆ ಇದರಲ್ಲಿರುವ ಸಂರಕ್ಷಕಗಳು ಇದರ ಗುಣವನ್ನು ಕೊಂಚ ಕಳಪೆಯಾಗಿಸುತ್ತವೆ. ಆದ್ದರಿಂದ ಮನೆಯಲ್ಲಿಯೇ ತಯಾರಿಸಿಕೊಳ್ಳುವುದು ಉತ್ತಮ.
ತೆಂಗಿನ ಹಾಲು ತಯಾರಿಸುವ ವಿಧಾನವೇನು.. ?
ಇದಕ್ಕಾಗಿ ತೆಂಗಿನ ತುರಿಯನ್ನು ಕೊಂಚ ನೀರಿನೊಂದಿಗೆ ೧ ಪಾತ್ರೆಯಲ್ಲಿ ಹಾಕಿ ಸುಮಾರು ೩೦ ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ನಂತರ ತೆಳುವಾದ ಬಟ್ಟೆಯಲ್ಲಿ ಇದನ್ನು ಹಾಕಿ ಬಟ್ಟೆಯನ್ನು ತಿರುಚುತ್ತಾ ಹಾಲನ್ನು ಹಿಂಡಿಕೊಳ್ಳಿ.
ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮ ಹೊಂದಿರುವ ಜನರಿಗೆ, ತೆಂಗಿನಕಾಯಿ ಹಾಲನ್ನು ಅದರ ಬ್ಯಾಕ್ಟೇರಿಯಾ ವಿರೋಧಿ ಗುಣಗಳಿಂದಾಗಿ ಕ್ಲೆನ್ಸರ್ ಆಗಿ ಬಳಸಬಹುದು. ತೆಂಗಿನ ಹಾಲಿನಲ್ಲಿರುವ ಕೊಬ್ಬುಗಳು ರಂಧ್ರಗಳನ್ನು ಮುಚ್ಚಿಕೊಳ್ಳುವುದಿಲ್ಲ. ಇದ್ರಿಂದ ಮೊಡವೆಗಳು ಬರುತ್ತವೆ.
ತೆಂಗಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದ್ದು, ಇದು ಸ್ಥಿತಿಸ್ಫಾಪಕತ್ವ ಮತ್ತು ಚರ್ಮದ ನಮ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ತಾಮ್ರದಿಂದ ಕೂಡಿದ್ದು, ಚರ್ಮದ ಸುಕ್ಕುಗಳು, ಚರ್ಮ ವಯಸ್ಸಾಗುವಿಕೆಯ ಕಲೆಗಳನ್ನು ತಡೆಯುತ್ತದೆ.
ಸನ್ ಬರ್ನ್ ಸಮಸ್ಯೆಗೆ!

ತೆಂಗಿನ ಹಾಲು ಸನ್ ಬರ್ನ್ ಸಮಸ್ಯೆಗೆ ಹೇಳಿ ಮಾಡಿಸಿದ್ದು, ಅರ್ಧದಷ್ಟು ಗುಲಾಬಿ ರಸವನ್ನು ಸೇರಿಸಿ. ೧ ಬಾಟಲ್ ನಲ್ಲಿ ಈ ಮಿಶ್ರಣವನ್ನು ಹಾಕಿ ಫ್ರಿಡ್ಜ್ ನಲ್ಲಿಡಿ. ಯಾವಾಗ ಉರಿ ಉರಿ ಬಿಸಿಲಿನಿಂದ ಬಳಲಿ ಬೆಂಡಾಗಿ ಬರ್ತಿರೋ ಆಗ ಈ ಮಿಶ್ರಣವನ್ನು ಸ್ರ್ರೇ ಮಾಡಬಹುದು. ಕೇವಲ ಮುಖಕ್ಕೆ ಮಾತ್ರವಲ್ಲ ಕೈಗಳಿಗೆ ಹಾಗೂ ಕುತ್ತಿಗೆಗೆ ಹಚ್ಚಬಹುದು.
ಚರ್ಮದ ಕಾಂತಿ ಹೆಚ್ಚಿಸಲು..!
ಮೂರು ದೊಡ್ಡ ಚಮಚ ತೆಂಗಿನ ಹಾಲು, ಒಂದು ಚಿಟಿಕೆ ಕಸ್ತೂರಿ. ೧ ದೊಡ್ಡ ಚಮಚ ಜೇನುತುಪ್ಪ ಮತ್ತು ೧ ಚಮಚ ಗಂಧದ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಹಚ್ಚಿಕೊಳ್ಳಬೇಕು. ನಂತರ ತಣ್ಣೀರಿನಿಂದ ಇದನ್ನು ೧೫ ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಂಡರೆ ತಕ್ಷಣವೇ ಚರ್ಮದ ಕಾಂತಿ ಹೆಚ್ಚುತ್ತದೆ. ನೆರಿಗೆಗಳನ್ನು ನಿವಾರಿಸಲು ವೃದ್ಧಾಪ್ಯದ ಚಿಹ್ನೆಗಳಾದ ನೆರಿಗೆ, ಸೂಕ್ಷ್ಮ ಗೆರೆಗಳು , ಚುಕ್ಕೆಗಳು ಮೊದಲಾದವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಇ ತ್ವಚೆಗೆ ಅಗತ್ಯವಾದ ಆದ್ರತೆಯನ್ನು ಒದಿಗಿಸಿ ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ. ಇದರಿಂದ ವೃದ್ಧಾಪ್ಯದ ಚಿಹ್ನೆಗಳು ಇಲ್ಲವಾಗುತ್ತದೆ.
ಕೇವಲ ತ್ವಚೆ, ಚರ್ಮಕ್ಕೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹೆಚ್ಚು ಉಪಯುಕ್ತ ತೆಂಗಿನ ಹಾಲು.
ತೂಕ ಇಳಿಸಲು ನೆರವಾಗುತ್ತದೆ..!
ತೆಂಗಿನ ಹಾಲು ಮಧ್ಯಮ ಸರಣಿಯ ಟ್ರೆಗ್ಲಿಸರೈಡ್ ಗಳನ್ನು ಒಳಗೊಂಡಿರುವುದರಿಂದ ಶರೀರದ ತೂಕವನ್ನು ಇಳಿಸಲು ನೆರವಾಗುತ್ತದೆ. ಇತರ ಕೊಬ್ಬುಗಳಿಗೆ ಹೋಲಿಸಿದರೆ ಈ ಗ್ಲಿಸರೈಡ್ ಗಳು ತೂಕವನ್ನು ಇಳಿಸಲು ಮತ್ತು ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಲು ಪೂರಕವಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಲು ನೆರವಾಗುತ್ತೆದೆ. ಉರಿಯೂತ ಗುಣಗಳಿಂದಾಗಿ ಬ್ಯಾಕ್ಟೇರಿಯಾಗಳು ವೃದ್ಧಿಗೊಳ್ಳುವುದನ್ನು ತಡೆಯುತ್ತದೆ. ಮತ್ತು ಶರೀರವನ್ನು ವಿವಿಧ ಬ್ಯಾಕ್ಟೇರಿಯಾ ಸೋಂಕುಗಳಿಂದ ರಕ್ಷಿಸುತ್ತದೆ.
ಹೃದಯದ ಆರೋಗ್ಯ ಹೆಚ್ಚಳ..!
ಹಾಲಿನಲ್ಲಿರುವ ಲಾರಿಕ್ ಆಮ್ಲವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ತೆಂಗಿನ ಗಂಡಿಯ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
ರಕ್ತದೋತ್ತಡವನ್ನು ಕಡಿಮೆ ಮಾಡುತ್ತದೆ. ತೆಂಗಿನ ಹಾಲು ಪೊಟ್ಯಾಶಿಯಂ , ಸೋಡಿಯಂ ಹಾಗೂ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಖನಿಜಾಗಳನ್ನು ಒಳಗೊಂಡಿರುವುದರಿಂದ ರಕ್ತದೋತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ತೆಂಗಿನ ಹಾಲಿನಲ್ಲಿ ಫ್ಯಾಟಿ ಆ್ಯಸಿಡ್ ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತವೆ. ತೆಂಗಿನ ಹಾಲು ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೇರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೀರ್ಣ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.