ನೀವು ಕೂಡಾ ಮಗುವಿನ ತಾಯಿಯಾಗಿದ್ದೀರಾ? ನಿಮ್ಮ ಮಗು ಆರೋಗ್ಯಕರ ಆಹಾರವನ್ನು ತಿನ್ನಲು ಆಗಾಗ್ಗೆ ನಿರಾಕರಿಸುತ್ತಿದೆಯಾ..| ಹೌದು ಎಂದಾದರೆ, ಈ ಬಗ್ಗೆ ನೀವು ಚಿಂತೆ ಮಾಡುವುದು ಸಾಮಾನ್ಯ, ಏಕೆಂದರೆ ಒಬ್ಬ ತಾಯಿ ತನ್ನ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಉತ್ತಮ ಆಹಾರ ನೀಡಲು ಪ್ರಯತ್ನಿಸುತ್ತಾಳೆ. ಆಗ ಮಗು ಅವುಗಳನ್ನು ತಿನ್ನಲು ನಿರಾಕರಿಸುತ್ತದೆ. ಹೀಗೆ ಅನೇಕ ಹೆಣ್ಣು ಮಕ್ಕಳು ತಮ್ಮ ಮಗುವಿಗೆ ಊಟ ಮಾಡಿಸಲು ಹರಸಾಹಸ ಪಡುತ್ತಾರೆ, ವಿಭಿನ್ನ ತಂತ್ರಗಳನ್ನು ಉಪಯೋಗಿಸುತ್ತಾರೆ. ಆದ್ರೆ ಯಾವುದೂ ವರ್ಕೌಟ್ ಆಗಲ್ಲ. ಆದರೆ ಮಗು ಊಟ ತಿನ್ನಲು ನಿರಾಕರಿಸುವುದಕ್ಕೂ ಕಾರಣಗಳಿವೆ. ಕೆಲವು ಸರಳ ಉಪಾಯಗಳನ್ನು ಅನುಸರಿಸಿದರೆ, ನಿಮ್ಮ ಮಗು ಹಠ ಮಾಡದೇ, ಊಟ ಮಾಡಲು ಪ್ರಾರಂಭಿಸುತ್ತದೆ. ಸರಳ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಮಗು ಊಟ ನಿರಾಕರಿಸಲು ಕಾರಣ ಏನು?
ಮಕ್ಕಳು ಊಟ ತಿನ್ನದಿರಲು ಹಲವು ಕಾರಣಗಳಿವೆ. ಈ ಕಾರಣಗಳ ಬಗ್ಗೆ ಮಾಹಿತಿ ಇಲ್ಲಿ ಹಂಚಿಕೊಳ್ಳಲಾಗಿದೆ. ಈ ಮಾಹಿತಿ ನಿಮ್ಗೆ ಉಪಯುಕ್ತವಾಗಲಿದೆ.
1. ಅಲರ್ಜಿ
ನಿಮ್ಮ ಮಗು ಊಟ ಮಾಡಲು ನಿರಾಕರಿಸಲು ಅಲರ್ಜಿಯೂ ಕಾರಣವಿರಬಹುದು. ನಿಮ್ಮ ಮಗುವಿಗೆ ಹಾರ ನೀಡಿದಾಗ ಅದು ತಿನ್ನಲು ನಿರಾಕರಿಸಬಹುದು. ಏಕೆಂದರೆ ಅಲರ್ಜಿಗೆ ಒಳಗಾಗಿರಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿ. ನಿಮ್ಮ ಮಗುವಿಗೆ ಯಾವು ಸೋಂಕು ಬರದಂತೆ ನೋಡಿಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ಮಗುವನ್ನು ಹೈಡ್ರೇಡ್ ಮಾಡಿ. ಮಗುವಿಗೆ ಹಸಿವಾಗಲು ತ್ವರಿತವಾಗಿ ಜೀರ್ಣವಾಗುವ ಆಹಾರ ನೀಡಿ.
2. ನೀವು ನೀಡುವ ಆಹಾರ ಹೆಚ್ಚಾಗಿರಬಹುದು!
ಕೆಲ ಮಕ್ಕಳು ಊಟ ಅಂದಾಕ್ಷಣ ದೂರ ಓಡಿ ಹೋಗುತ್ತಾರೆ. ನೀವು ನಿಮ್ಮ ಮಗುವಿಗೆ ನೀಡುವ ಆಹಾರ ಹೆಚ್ಚಾಗಿರಬಹುದು. ಬಹಳ ಜನರು ತಮ್ಮ ಮಕ್ಕಳಿಗೆ ಪ್ಲೇಟ್ ಅಲ್ಲಿ ಹೆಚ್ಚು ಆಹಾರ ಪದಾರ್ಥ ಸೇರಿಸಿ, ತಿನ್ನಿಸಲು ಮುಂದಾಗುತ್ತಾರೆ. ಇದ್ರಿಂದ ನಿಮ್ಮ ಮಗು ಊಟ ಮಾಡಲು ನಿರಾಕರಿಸುತ್ತದೆ. ಹೀಗಾಗಿ ಸಣ್ಣ ಭಾಗಗಳಾಗಿ ಆಹಾರ ನೀಡಿದರೆ, ಮಗುಗೆ ಹೆಚ್ಚು ಭಾರ ಅನ್ನಿಸುವುದಿಲ್ಲ. ನಿಧಾನವಾಗಿ ಸಂಪೂರ್ಣ ಆಹಾರ ಸೇವಿಸುತ್ತಾರೆ.
3. ಒಂದೇ ಆಹಾರದಿಂದ ಬೇಸರಗೊಳ್ಳುವುದು..!
ಒಂದೇ ಆಹಾರವನ್ನು ಮತ್ತೇ ಮತ್ತೇ ತಿನ್ನಲು ನೀಡಿದಾಗ ಮಗು ಊಟ ತಿನ್ನಲು ನಿರಾಕರಿಸಬಹುದು. ಒಂದೇ ರೀತಿಯ ಆಹಾರ ನೀಡಿದಾಗ, ಮಕ್ಕಳು ಬೇಸರ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಲೂ ಮಕ್ಕಳು ಊಟ ನಿರಾಕರಿಸುತ್ತಾರೆ.

4. ಹಸಿವಿಲ್ಲದಿರುವುದು,..!
ಮಗುಗೆ ಯಾವಾಗ ಹಸಿವಾಗುತ್ತದೆ ಎಂದು ನಿರ್ದಿಷ್ಟವಾಗಿ ಸಮಯ ಹೇಳಲು ಆಗುವುದಿಲ್ಲ. ನಿಮ್ಮ ಮಗು ಒಂದು ರಾತ್ರಿ ಊಟ ಹೆಚ್ಚಾಗಿ ತಿಂದರೆ. ಮತ್ತೊಂದು ದಿನ ತಿನ್ನದೇ ಇರಬಹುದು. ಹೀಗಾಗಿ ಕೆಲವು ಆಹಾರದ ಮಿತಿಗಳ ಬಗ್ಗೆ ಸ್ಥಿರತೆ ಕಾಪಾಡಬೇಕು. ನಿಮ್ಮ ಮಗು ಎಷ್ಟು ತಿನ್ನುತ್ತದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಮಗು ಹಸಿವಿಲ್ಲದಿರುವುದು ಇದರಿಂದ ತಿಳಿಯುತ್ತದೆ.
5. ಮಗು ಆಯಾಸಗೊಂಡಿದ್ದರೆ
ಮಕ್ಕಳು ಆಯಾಸಗೊಂಡಿದ್ದಾಗ ಆಹಾರ ಸೇವಿಸಲು ನಿರಾಕರಿಸಬಹುದು. ಇದು ಕೂಡಾ ಮಕ್ಕಳು ಊಟ ಮಾಡದೇ ಇರಲು ಕಾರಣವಾಗಬಹುದು. ದೀರ್ಘಕಾಲದವರೆಗೂ ಮಗು ಶಾಲೆಯಲ್ಲಿ ಅಥವಾ ಬೇಬಿ ಕೇರ್ ನಲ್ಲಿ ಆಟದಲ್ಲಿ ತೊಡಗಿಕೊಳ್ಳವುದರಿಂದ ಮಗು ಆಯಾಸಗೊಂಡಿರುತ್ತದೆ. ಮಗುವಿಗೆ ತಿನ್ನಲು ಶಕ್ತಿ ಇರುವುದಿಲ್ಲ.
ಆದ್ದರಿಂದ ಮಗು ಶಾಲೆಯಿಂದ ಬಂದಾಗ ಅಥವಾ ಇಡೀ ದಿನ ಆಟವಾಡಿ ದಣಿದಿದ್ದಾಗ ಸ್ವಲ್ಪ ಸಮಯದವರೆಗೆ ಊಟ ಮಾಡುವಂತೆ ನಿಮ್ಮ ಮಗುವನ್ನು ಒತ್ತಾಯಿಸಬೇಡಿ.
ಸಮಸ್ಯೆಗೆ ಪರಿಹಾರಗಳೇನು..?
ಮಗು ಆಹಾರ ಸೇವಿಸಲು ಪ್ರೋತ್ಸಾಹಿಸಲು ಈ ಟಿಪ್ಸ್ ಗಳನ್ನು ಅನುಸರಿಸಿ.ವಿಭಿನ್ನ ರುಚಿ, ವೈರೆಟಿ ಫುಡ್ ಗಳನ್ನು ಮಗುವಿಗೆ ನೀಡಿ. ಇದ್ರಿಂದ ಮಗು ತಿನ್ನುವುದನ್ನು ಆನಂದಿಸಬಹುದು.
1.ಊಟ ಮಾಡಿಸುವ ಬದಲು, ಮಗುವಿಗೆ ಊಟ ಮಾಡಲು ಬಿಡಿ
ಮಗುವಿಗೆ ತನ್ನ ಕೈಯಿಂದಲೇ ತಿನ್ನವುದಕ್ಕೆ ಬಿಡುವುದು ಉತ್ತಮ. ಏಕೆಂದರೆ ಮಗು ತನ್ನ ಕೈಯಿಂದಲೇ ಆಹಾರ ಸೇವಿಸುವುದರಿಂದ ಸಂತೋಷದಿಂದ ಆಹಾರ ಸೇವಿಸುತ್ತದೆ. ಉದಾಹರಣೆ ಊಟದ ಜತೆ ಆಡುವಾಡುತ್ತಾ ಸೇವಿಸುವುದು,ಊಟವನ್ನು ಸ್ಪರ್ಶ ಮಾಡುತ್ತಾ ಊಟ ಮಾಡುತ್ತದೆ.
ಊಟಕ್ಕೂ ಮೊದಲು ನಿಮ್ಮ ಮಗುವಿಗೆ ಕುಡಿಯಲು ಹಾಲು ನೀಡಬೇಡಿ. ಇದ್ರಿಂದ ಮಗುವಿಗೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಅಲ್ಲದೇ ಹಸಿವಾಗುವುದಿಲ್ಲ.
2. ಕ್ರಿಯೇಟಿವಿಟಿ ಐಡಿಯಾ ಇರಲಿ!
ನಿಮ್ಮ ಮಗುವಿಗೆ ಊಟ ನೀಡುವುದರಲ್ಲೂ ಕ್ರಿಯೇಟಿವಿಟಿ ಐಡಿಯಾಗಳು ನೆರವಾಗುತ್ತವೆ. ಇದರಿಂದ ನಿಮ್ಮ ಮಗು ಊಟ ಮಾಡಲು ಮುಂದಾಗಬಹುದು. ಇನ್ನು ನಿಮ್ಮ ಮಗುವ ಊಟ ಮಾಡಲು ನಿರಾಕರಿಸಿದಾಗ, ಸ್ವಲ್ಪ ಸಮಯದ ನಂತರ ಊಟ ಮಾಡಿಸಿ, ಕಿರುಚುತ್ತಾ ಊಟ ಮಾಡು ಎಂದು ಒತ್ತಾಯಿಸಬೇಡಿ.
3 ಆಹಾರದಲ್ಲಿ ಪುದೀನಾ ಸೇರಿಸಿ..!
ಮಕ್ಕಳ ಹಸಿವನ್ನು ಹೆಚ್ಚಿಸುವ ಕೆಲ ಆಹಾರಗಳಿವೆ… ಪುದೀನಾ , ತುಳಸಿ, ಶುಂಠಿ ಎಲ್ಲವೂ ಹಸಿವನ್ನು ಹೆಚ್ಚಿಸುತ್ತವೆ. ಆಹಾರದಲ್ಲಿ ಇವುಗಳನ್ನು ಬಳಸುವುದರಿಂದ ನಿಮ್ಮ ಮಗುವಿನ ಹಸಿವು ಹೆಚ್ಚಸಲು ಸಹಾಯ ವಾಗುತ್ತದೆ.
ಮೊದಲು ನಿಮ್ಮ ಮಗು ತಿನ್ನಲು ಕಲಿಯುತ್ತದೆ. ತನ್ನಗೆ ಇಷ್ಟವಾಗುವ ಹಾಗೇ, ಸ್ವತಂತ್ರವಾಗಿ ತಿನ್ನಲು ಬಯಸುತ್ತದೆ. ಹಾಗಾಗಿ ನಿಮ್ಮ ಮಗು ಆಹಾರವನ್ನು ಆಯ್ಕೆ ಮಾಡಲು ಸ್ವಾತಂತ್ರ ನೀಡಿ, ಈ ರೀತಿಯಾಗಿ ಮಾಡಬಹುದು,
ಸ್ನ್ಯಾಕ್ ಐಟಂ ಜತೆಗೆ ಪೌಷ್ಠಿಕ ಆಹಾರಗಳನ್ನು ನೀಡಿ. ಆಗ ಮಗು ಹಸಿವಾದಾಗ ಇವುಗಳನ್ನು ಸಹ ಆಯ್ಕೆ ಮಾಡುತ್ತದೆ.
4. ನಿಮ್ಮ ಮಗುವಿನ ಬೇಡಿಕೆಗಳನ್ನು ಅರ್ಥ ಮಾಡಿಕೊಳ್ಳಿ.
ದೊಡ್ಡವರು ಬೇಗನೆ ಕೆಲವೊಮ್ಮೆ ಆ ಆಹಾರಗಳಿಗೆ ಒಗ್ಗಿಕೊಂಡಿರುತ್ತಾರೆ. ಆದ್ರೆ ಅಭಿರುಚಿಗಳು ತುಂಬಾ ಹೊಸದು. ಅವರು ಕಹಿ ಹಾಗೂ ಮಸಾಲೆಯುಕ್ತ ಆಹಾರಗಳನ್ನು ಇಷ್ಟಪಡದ ಕಾರಣ, ಸಿಹಿ ಆಹಾರಗಳಿಗೆ ಆದ್ಯತೆ ನೀಡಬಹುದು. ಆದ್ದರಿಂದ ಅಡುಗೆ ಮಾಡುವಾಗ ಅವರ ರೆಸಿಪಿ ರೆಡಿ ಮಾಡುವಾಗ ಗಮನ ವಿರಲಿ.
5. ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇರಿಸಿ.
ನಿಮ್ಮ ಅಡುಗೆಯಲ್ಲಿ ಮಸಾಲೆ ಕಡಿಮೆ ಮಾಡಿ. ಇದ್ರಿಂದ ಮಗು ನಿಧಾನವಾಗಿ ತಿನ್ನಲು ಆರಂಭಿಸುತ್ತದೆ. ಹಣ್ಣು, ಡ್ರೈ ಫ್ರೂಟ್ಸ್ ಗಳನ್ನು ನಿಮ್ಮ ಆಹಾರದ ಜೆತೆ ಬೇಯಿಸಿದರೆ, ನೈಸರ್ಗಿಕವಾಗಿ ಅಡುಗೆಯ ರುಚಿ ಹೆಚ್ಚಿಸಬಹುದು.

ಹಾಲು ಹಾಗೂ ಹಣ್ಣಿನಿಂದ ತಯಾರಿಸಿದ ಆಹಾರಗಳನ್ನು ನಿಮ್ಮ ಮಗುವಿಗಾಗಿ ತಯಾರಿಸಬಹುದು. ಇದ್ರಿಂದ ಮಗು ಹಠ ನಿಯಂತ್ರಣ ಮಾಡುವುದಲ್ಲದೇ, ನಿಮ್ಮ ಮಗುವಿಗೆ ಪೌಷ್ಟಿಕಾಂಶ ದೊರೆಯುತ್ತದೆ.
6. ಒಟ್ಟಿಗೆ ಕುಳಿತು ಊಟ ಮಾಡುವುದು
ನಿಮ್ಮ ಮಗುವಿಗಾಗಿ ಏನನ್ನಾದರೂ ವಿಭಿನ್ನವಾಗಿ ತಯಾರಿಸಲು ಎಲ್ಲಾ ಹೆಣ್ಣು ಮಕ್ಕಳು ಪ್ರಯತ್ನಿಸುತ್ತಾರೆ. ಸ್ವಲ್ಪ ಸಮಯದವರೆಗೆ ಇದು ಸಹಾಯಕ್ಕೆ ಬರಬಹುದು. ಆದರೆ ಇದರ ಬದಲಾಗಿ, ಇಡೀ ಕುಟುಂಬ, ಪರಿವಾರದ ಜತೆಗೆ ಊಟ ಮಾಡಿದಾಗ, ಮಕ್ಕಳು ತಿನ್ನುವ ಸಾಧ್ಯತೆ ಹೆಚ್ಚು. ಒಟ್ಟಿಗೆ ತಿನ್ನುವುದರಿಂದ ಮಗುವನ್ನು ತಿನ್ನಲು ಪ್ರೋತ್ಸಾಹಿಸಬಹುದು. ನಿಮ್ಮ ಆಹಾರದಲ್ಲಿ ಧಾನ್ಯಗಳನ್ನು ಸೇರಿಸಿ, ಇದು ಕೂಡಾ ಮಗುವಿನ ಆರೋಗ್ಯಕರ ಪೌಷ್ಟಿಕಾಂಶವಾಗಿದೆ.
ಗಮನಿಸಿ: ಈ ಎಲ್ಲಾ ಪ್ರಯತ್ನಗಳ ಹೊರತಾಗಿ ನಿಮ್ಮ ಮಗು ಆಹಾರ ತಿನ್ನಲು ತಿರಸ್ಕರಿಸುತ್ತಿದ್ದರೆ, ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸಿ. ಇದ್ರಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಬಹುದು.