ತ್ವಚೆಯ ಸೌಂದರ್ಯ ಇಮ್ಮುಡಿಗೊಳಿಸಲು ತುಟಿಗಳು ಸುಂದರವಾಗಿ ಕಾಣಿಸುವುದು ಅಷ್ಟೇ ಮುಖ್ಯ. ತುಟಿಗಳನ್ನು ಸುಂದರವಾಗಿಸಲು ಹೊಕ್ಕಳದಲ್ಲಿ ಎಣ್ಣೆ ಹಚ್ಚುವುದರಿಂದ ಹಲವು ಪ್ರಯೋಜನಗಳನ್ನು ಕಾಣಬಹುದು. ತುಟಿಗಳ ಶುಷ್ಕತೆ ಹಾಗೂ ಬಿರುಕು ಬಿಟ್ಟ ತುಟಿಗಳನ್ನು ಸರಿಪಡಿಸಲು ಪ್ರಯೋಜನಕಾರಿಯಾಗಿದೆ. ಈ ಎಣ್ಣೆಗಳು ತುಟಿಗಳ ಸೌಂದರ್ಯ ಹೆಚ್ಚಿಸುವುದಲ್ಲದೇ, ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಹೊಕ್ಕುಳದಲ್ಲಿ ಯಾವ ಎಣ್ಣೆಯನ್ನು ಹಚ್ಚುವುದರಿಂದ ತುಟಿಗಳ ಸೌಂದರ್ಯ ಹಾಗೂ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಇಲ್ಲಿದೆ ಮಾಹಿತಿ.
ಮೃದು ಮತ್ತು ಹೊಳಪು ತುಟಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ತುಟಿಗಳ ನೈಸರ್ಗಿಕ ಬಣ್ಣ ಹೆಚ್ಚಿಸಲು ಡೆಡ್ ಕೋಶಗಳ ನಿವಾರಣೆಗೆ ಮನೆಯಲ್ಲಿಯೇ ಸೀಗುವ ಮನೆಮದ್ದುಗಳನ್ನು ಉಪಯೋಗಿಸಬಹುದು. ಸೌತೆಕಾಯಿ ಅದರ ಹೈಡ್ರೇಟಿಂಗ್ ಗುಣ ಲಕ್ಷಣಗಳನ್ನು ಹೊಂದಿದೆ. ಇದು ನಿಮ್ಮ ತುಟಿಗಳಿಂದ ಎಲ್ಲಾ ಶುಷ್ಕತೆಯನ್ನು ನಿವಾರಿಸುತ್ತದೆ. ಸೌತೆಕಾಯಿ ಜೀವಸತ್ವ ಹಾಗೂ ಖನಿಜಗಳನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಒಣ ತುಟಿಗಳ ಆರೈಕೆಗೆ ಸೌತೆಕಾಯಿ ಉಪಯೋಗಿಸಬೇಕು.

ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಇ ಇರುತ್ತದೆ. ಸ್ವಲ್ಪ ಬಿಸಿ ಮಾಡಿದ ನಂತರ ನೀವು ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚಿದರೆ, ಅದು ಬಿರುಕು ಬಿಟ್ಟ ತುಟಿಗಳನ್ನು ಸುಂದರವಾಗಿ ಮತ್ತು ಮೃದುವಾಗಿ ಮಾಡುತ್ತದೆ. ಚರ್ಮವನ್ನು ರಕ್ಷಿಸುತ್ತದೆ.
ಸಾಸಿವೆ ಎಣ್ಣೆ
ಬಿರುಕು ಬಿಟ್ಟ ತುಟಿಗಳ ರಕ್ಷಣೆಗಾಗಿ ಸಾಸಿವೆ ಎಣ್ಣೆ ಹೆಚ್ಚು ಪರಿಣಾಮಕಾರಿಯಾಗಿದೆ. ಸಾಸಿವೆ ಎಣ್ಣೆಯನ್ನು ಹೊಕ್ಕುಳದಲ್ಲಿ ಹಚ್ಚುವುದರಿಂದ ಬಿರುಕು ಬಿಟ್ಟ ತುಟಿಗಳು ಮೃದುವಾಗುತ್ತವೆ. ಅವುಗಳ ಚರ್ಮ ಮೃದುವಾಗುವುದಲ್ಲದೇ, ಚರ್ಮ ಕೂಡಾ ಸುಂದರವಾಗಿ ಕಾಣುತ್ತದೆ. ಇದಲ್ಲದೇ ಕೂದಲು ಉದರುವಿಕೆಯ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.

ತುಪ್ಪ ಬಳಕೆ
ಹೊಕ್ಕುಳದಲ್ಲಿ ತುಪ್ಪ ಹಚ್ಚುವುದರಿಂದ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಜನರು ಹಿಂದಿನ ಕಾಲದಿಂದಲೂ ಹೊಕ್ಕುಳಕ್ಕೆ ತುಪ್ಪವನ್ನು ಹಚ್ಚುತ್ತಿದ್ದರು. ತ್ವಚೆ ಸುಂದರವಾಗಿರುತ್ತದೆ ಹಾಗೂ ತುಟಿಗಳು ಮೃದುವಾಗುತ್ತವೆ ಎಂದು ಇದನ್ನು ಬಳಸುತ್ತಿದ್ದರು. ರಾತ್ರಿ ಮಲಗುವ ಮೊದಲು ಹೊಕ್ಕುಳಕ್ಕೆ ತುಪ್ಪ ಹಚ್ಚಿ ಮಲಗಬೇಕು.
ಬೇವಿನ ಎಣ್ಣೆ
ಬೇವಿನ ಎಣ್ಣೆ ಸೌಂದರ್ಯದ ದೃಷ್ಟಿಯಿಂದ ಹಲವು ಪ್ರಯೋಜನಗಳುನ್ನು ಒಳಗೊಂಡಿದೆ. ಅನೇಕ ಆ್ಯಂಟಿ ಆಕ್ಸಿಡೆಂಟ್ ಗಳು ಇದರಲ್ಲಿ ಹೆಚ್ಚಾಗಿದ್ದು, ರಾತ್ರಿ ಮಲಗುವ ಮೊದಲು ಅಥವಾ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಹೊಕ್ಕುಳಕ್ಕೆ ಬೇವಿನ ಎಣ್ಣೆಯನ್ನು ಹಚ್ಚುವುದರಿಂದ ತುಟಿಗಳು ಮೃದುವಾಗುತ್ತವೆ. ಹಾಗೂ ಸುಂದರವಾಗಿ ಕಾಣುತ್ತವೆ. ಮತ್ತು ಚರ್ಮದ ಮೇಲೆ ಗುಳ್ಳೆಗಳನ್ನು ತಡೆಯುತ್ತದೆ.
ನಿಂಬೆ ಎಣ್ಣೆ
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಇದು ಹೊಕ್ಕುಳಕ್ಕೆ ನಿಂಬೆ ಎಣ್ಣೆ ಹಚ್ಚುವುದರಿಂದ ತುಟಿಗಳು ಶುಷ್ಕತೆ ನಿವಾರಣೆಯಾಗುತ್ತದೆ. ತುಟಿಗಳು ಮೃದುವಾಗುವುದಲ್ಲದೇ, ಹೊಕ್ಕುಳಲ್ಲಿ ನಿಂಬೆ ಎಣ್ಣೆಯನ್ನು ಹಚ್ಚುವುದರಿಂದ ಚರ್ಮವು
ಸ್ವಚ್ಛವಾಗುವುದಲ್ಲದೇ, ಸುಂದರವಾಗಿ ಕಾಣಿಸುತ್ತದೆ. ನಿಂಬೆ ಎಣ್ಣೆಯು ಚರ್ಮದ ಕಲೆಗಳನ್ನು ನಿವಾರಿಸುತ್ತದೆ.
ಆಲಿವ್ ಎಣ್ಣೆ
ಆಲಿವ್ ಎಣ್ಣೆ ಹಚ್ಚುವುದರಿಂದ ಚರ್ಮ ಹಾಗೂ ತುಟಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಲಿವ್ ಎಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚುವುದರಿಂದ ತುಟಿಗಳು ಸುಂದರವಾಗುತ್ತವೆ. ಚರ್ಮವು ಹೊಳೆಯುತ್ತದೆ.
ಅಲೋವೆರಾ ಜ್ಯೂಸ್
ಅಲೋವೆರಾ ಜ್ಯೂಸ್ ಉಪಯೋಗಿಸುವುದರಿಂದ ಹಲವು ಆರೋಗ್ಯಕಾರಿ ಪ್ರಯೋಜನಕಾರಿಗಳನ್ನು ಹೊಂದಿದೆ. ಅಲೋವೆರಾ ಜ್ಯೂಸ್ ಡ್ರೈ ತುಟಿಗಳನ್ನು ನಿವಾರಣೆ ಮಾಡುವುದಲ್ಲದೇ, ಇದು ಚರ್ಮವನ್ನು ರಕ್ಷಿಸುತ್ತದೆ. ತುಟಿಗಳ ಮೃದುತ್ವ ಹೆಚ್ಚಿಸುತ್ತದೆ. ಅಲೋವೆರಾ ಜ್ಯೂಸ್ ಹಚ್ಚುವುದರಿಂದ ಡೆಡ್ ಸ್ಕಿನ್ ನಿವಾರಣೆಗೆ ಸಹಾಯ ಮಾಡುತ್ತದೆ. ಅಲೋವೆರಾ ಜ್ಯೂಸ್ ರಾತ್ರಿ ವೇಳೆ ತುಟಿಗಳಿಗೆ ಹಚ್ಚಿ, ಬೆಳಿಗ್ಗೆ ತೊಳೆಯಬೇಕು.