ಬೇಸಿಗೆಯಲ್ಲಿ ವಿವಿಧ ಹಣ್ಣುಗಳನ್ನು ತಿನ್ನಲು ಬಯಸುತ್ತೇವೆ. ರಸಭರಿತ ಹಣ್ಣು ಕರ್ಬುಜ ಹಣ್ಣು ಸಹ ಸಕ್ಕರೆ ಮತ್ತು ನೀರಿನಾಂಶದಿಂದ ಕೂಡಿದ್ದು, ರುಚಿಕರವಾದ ಹಣ್ಣಾಗಿದೆ. ಕರ್ಬುಜ ಹಣ್ಣಿನಲ್ಲಿ ಜೀವಸತ್ವಗಳು, ಖನಿಜಾಂಶಗಳು, ವಿಟಮಿನ್ ಎ , ವಿಟಮಿನ್ ಬಿ 6 ಜತೆಗೆ ಆಹಾರದ ನಾರುಗಳು ಮತ್ತು ಫೋಲಿಕ್ ಆಮ್ಲಗಳ ಸಮೃದ್ಧ ಮೂಲವಾಗಿದೆ.

ಎಷ್ಟು ಕ್ಯಾಲೋರಿ ಒಳಗೊಂಡಿದೆ?
ಒಂದು ಬಟ್ಟಲು ಹಣ್ಣಿ 48 ಕ್ಯಾಲೋರಿಗಳನ್ನು ಒಳಗೊಂಡಿದೆ.. ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಸಿ, ಆಂಯಿ ಆಕ್ಸಿಡೆಂಟ್ ಜಾಸ್ತಿ ಪ್ರಮಾಣದಲ್ಲಿದ್ದು , ಇದು ಹೃದಯ ಸಂಬಂಧಿ ಕಾಯಿಲೆಗಳಿಂದಜ ದೂರವಿಡುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುತ್ತದೆ. ಇದು ಪಾರ್ಶ್ವವಾಯು ಕಾಯಿಲೆಗಳನ್ನು ತಡೆಗಟ್ಟುತ್ತದೆ. ನಿಂಬೆ ಹಣ್ಣಿನಲ್ಲಿ ಕರ್ಬೂಜ ಸೇವಿಸಿದರೆ. ಸಂಧಿವಾತ ಕಡಿಮೆಯಾಗುತ್ತದೆ.
ಕರ್ಬೂಜ ಹಣ್ಣಿನ ಲಾಭಗಳು
ಧೂಮಪಾನ ನಿಲ್ಲಿ.ಸಲು ಬಯಸುವವರಿಗೆ
ಕರ್ಬೂಜನಲ್ಲಿ ಹೆಚ್ಚು ಪೋಷಕಾಂಶಗಳಿರುವುದರಿಂದ ಧೂಮಪಾನ ವ್ಯಸನದಿಂದ ಹೊರಬರಲು ಇದು ಸಹಾಯ ಮಾಡುತ್ತದೆ. ಧೂಮಪಾನ ತ್ಯಜಿಸುವರಿಗೆ ನೆರವಾಗುತ್ತದೆ. ಈ ಹಣ್ಣಿನ ಸೇವನೆಯಿದಂ ಶ್ವಾಸಕೋಶಗಳಿಗೆ ಹೆಚ್ಚಿನ ಪೋಷಣೆ ದೊರೆಯುವುದಲ್ಲದೇ, ನಿಕೋಟಿನ್ ಪ್ರಭಾವದಿಂದ ಶೀರ್ಘವಾಗಿ ಹೊರ ಬರಲು ಸಹಾಯ ಮಾಡುತ್ತದೆ.

ಒತ್ತಡ ನಿವಾರಣೆಗೆ
ಕರ್ಬೂಜ ಹಣ್ಣಿನಲ್ಲಿರುವ ರಂಜಕವು ನಿಮಗೆ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಕರ್ಬೂಜ ಹಣ್ಣಿನ ರಸದಲ್ಲಿ ರಂಜಕವು ಹೆಚ್ಚಾಗಿದ್ದು, ಹೃದಯದ ಬಡೆತವನ್ನು ಸುಸ್ಥಿತಿಯಲ್ಲಿಡುತ್ತದೆ. ಮೆದಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ತಲುಪಲು ಸಹಾಯ ಮಾಡುತ್ತದೆ. ಹೀಗಾಗಿ ಮೆದಳಿನ ಕಾರ್ಯವನ್ನು ಸರಾಗವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಸೌಂದರ್ಯ ಹೆಚ್ಚಿಸುತ್ತದೆ
ಸೌಂದರ್ಯ ಹೆಚ್ಚಿಸಲು ಕರ್ಬೂಜದ ಹಣ್ಣು ಬಳಸಬಹುದಾಗಿದೆ. ಕರ್ಬೂಜದ ತಿರುಳು . ಮೂರು ಸ್ಟ್ರಾಬರಿ ಹಣ್ಣು, ದೊಡ್ಡ ಚಮಚಾ ಓಟ್ಸ್, 1 ಚಿಕ್ಕ ಚಮಚಾ , ಜೇನು ಸೇರಿಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮುಖ, ಕುತ್ತಿಗೆ , ಕೈ ಕಾಲುಗಳಿಗೆ ಹಚ್ಚಿ, ೧೫ ನಿಮಿಷ ಬಿಟ್ಟು ತೊೆದುಕೊಳ್ಳಬೇಕು.
ಹಲ್ಲು ನೋವು ನಿವಾರಣೆ
ಕರ್ಬೂಜಾ ಹಣ್ಣು ಹಲ್ಲು ನೋವನ್ನು ನಿವಾರಿಸುತ್ತದೆ. ಹೆಚ್ಚು ಪೋಷಕಾಂಶ ಭರಿತವಾಗಿರುವುದರಿಂದ ಹಲ್ಲು ನೋವಿದ್ದಾಗ, ಸಿಪ್ಪೆಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ, ತಣಿಸಿ ಸೋಸಿ ಸಂಗ್ರಹ ಮಾಡಿದ ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು.
ಮಲಬದ್ಧತೆ ಸಮಸ್ಯೆ ದೂರ
ಕರ್ಬೂಜ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿದೆ. ಹೀಗಾಗಿ ಇದು ಮಲಬದ್ಧತೆಯನ್ನು ತೊಂದರೆಯನ್ನು ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸಿ. ನೈಸರ್ಗಿಕವಾಗಿ ಗುಣಪಡಿಸುತ್ತದೆ.
ಇದರಲ್ಲಿ ಬೀಟಾ ಕ್ಯಾರೋಟಿನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರಾಡಿಕಲ್ ಕಣಗಳನ್ನು ಹಿಮ್ಮೆಟ್ಟಿಸುತ್ತದೆ. ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುತ್ತವೆ. ಹೀಗಾಗಿ ಈ ಹಣ್ಣು ರಕ್ಷಣೆ ಒದಿಗಸುತ್ತದೆ.
ಕೊಲೆಸ್ಟ್ರಾಲ್ ಕಡಿಮೆ
ಈ ಹಣ್ಣಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಕೇಸರಿ ಕರ್ಬೂಜ ಹಣ್ಣುಗಳನ್ನು ಸೇವಿಸುತ್ತಾ ಬಂದರೆ ಬೊಜ್ಜು ನಿವಾರಣೆಯಾಗುತ್ತದೆ.

ಹೃದಯದ ಆರೋಗ್ಯಕ್ಕೆ ಬೆಸ್ಟ್
ಈ ಹಣ್ಣಿನಲ್ಲಿ ಪೋಟ್ಯಾಶಿಯಂ ಹೆಚ್ಚಾಗಿದ್ದು, ಇದು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತ ನಾಳಗಳು ಹಾಗೂ ರಕ್ತ ತೆಳುವಾಗಿರಲು ಸರಾಗವಾಗಿ ಸಂಚರಿಸಲು ನೆರವಾಗುತ್ತದೆ. ಈ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ಹಲವು ಕಾಯಿಲೆಗಳಿಂದ ರಕ್ಷಣ ಒದಗಿಸುತ್ತದೆ.
ತೂಕ ಇಳಿಕೆ ಸುಲಭ
ಸೂಕ ಇಳಿಸಲು ಕರ್ೂಜಾ ಹಣ್ಣು ಸೂಕ್ತವಾದದ್ದು, ತೂಕ ಇಳಿಸುನ ಬಗ್ಗ ಆಲೋಚನೆ ಮಾಡುತ್ತಿದ್ದೀರಾ ಎಂದಾದರೆ, ಕರ್ಬೂಜ ಹಣ್ಣು ಸೇವಿಸಿ. ಕೊಲೆಸ್ಟ್ರಾಲ್ ರಹಿತ ಹಣ್ಣು ಇದಾಗಿದೆ. ಇದು ಸುಮಾರು ೪೮ ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀರಿನಾಂಶವು ಅಧಿಕವಾಗಿರುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ಭಾಸವಾಗುತ್ತದೆ.
ಇನ್ನು ಕರ್ಬೂಜ ಹಣ್ಣು ಮಧುಮೇಹ ರೋಗಿಗಳಿಗೆ ಉತ್ತಮ ಎನ್ನಲಾಗುತ್ತದೆ. ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.
ಇಮ್ಯೂನ್ ಸಿಸ್ಟಮ್ ಹೆಚ್ಚಿಸುತ್ತದೆ.
ಕರ್ಬೂಜ ಹಣ್ಣು ಇಮ್ಯೂನ್ ಸಿಸ್ಟಮ್ ಹೆಚ್ಚಿ,ಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಎ ಹೆಚ್ಚಾಗಿರುವುದರಿಂದ ಇಮ್ಯೂನ್ ಸಿಸ್ಟಮ್ ಹೆಚ್ಚಾಗಲು ಕಾರಣವಾಗುತ್ತದೆ. ದೇಹಕ್ಕೆ ಆಗುವ ಸೋಂಕುಗಳನ್ನು ತಡೆಗಟ್ಟುತ್ತದೆ. ಅವಧಿಗೂ ಮುನ್ನ ಮುಪ್ಪಾಗುವುದನ್ನು ತಡೆಗಟ್ಟುತ್ತದೆ.
ಕಣ್ಣಿನ ಆರೋಗ್ಯಕ್ಕೂ ಕರ್ಬೂಜ ಉತ್ತಮ
ಕಣ್ಣಿನ ಆರೋಗ್ಯಕ್ಕೂ ರಾಮಬಾಣದಂತೆ ಈ ಹಣ್ಣು ಕಾರ್ಯ ನಿರ್ವಹಿಸುತ್ತದೆ. ದೃಷ್ಟಿ ಸಮಸ್ಯೆ.. ಕಣ್ಣಿನ ಹಲವು ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ದೃಷ್ಟಿಯ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.
ಇದು ಬೀಟಾ ಕ್ಯಾರೋಟಿನ್ ಗಳಿಂದ ಸಮೃದ್ಧವಾಗಿದೆ. ಆರೋಗ್ಯದ ದೃಷ್ಟಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಿಂದ ಹಿರಿಕೊಳ್ಳಲ್ಪಟ್ಟಾಗ, ಈ ಬೀಟಾ ಕ್ಯಾರೋಟಿನ್ ವಿಟಮಿನ್ ಎ ಪರಿವರ್ತನೆಗೊಳ್ಳುತ್ತದೆ. ಇದು ಕಣ್ಣಿನ ಪೊರೆ ತಡೆಗಟ್ಟಲು ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಕಣ್ಣಿನ ಪೊರೆ ಬೆಳವಣಿಗೆಯ ಅಪಾಯವನ್ನು ಶೇ ೪೦ ರಷ್ಟು ಕಡಿಮೆ ಮಾಡುತ್ತದೆ.
ಮುಟ್ಟಿನ ಸಮಸ್ಯೆಗಳ ನಿವಾರಣೆ
ಖುತುಚಕ್ರ ಸಂಧರ್ಭದಲ್ಲಿ ಎಲ್ಲಾ ಮಹಿಳೆಯರು ತುಂಬಾ ನೋವು ಅನುಭವಿಸುತ್ತಾರೆ. ವಿಟಮಿನ್ ಸಿ ಮುಟ್ಟಿನ ಹರಿವನ್ನು ನಿಯಂತ್ರಿಸಲು ಮತ್ತು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ಗಣನೀಯ ಮಟ್ಟದಲ್ಲಿ ಕಡಿಮೆ ಮಾಡುತ್ತದೆ. ಇನ್ನು ಮುಟ್ಟಿನ ಸಮಸ್ಯೆಯಿದ್ದರೆ ಕರ್ಬೂಜ ಹಣ್ಣನ್ನು ಬಳಸಬಹುದು.
ಗರ್ಭಿಣಿಯರಿಗೆ ಉತ್ತಮವಾದದ್ದು.
ಗರ್ಭಾವಸ್ಥೆಯಲ್ಲಿ ಕರ್ಬೂಜ ಸುರಕ್ಷಿತ ಆಯ್ಕೆಯೋ ಅಥವಾ ಇಲ್ಲ ಅಂತಾ ಹಲವರು ಯೋಚಿಸುವರಿದ್ದಾರೆ. ಆದ್ರೆ ಕರ್ಬೂಜ ಹಣ್ಣನ್ನು ಗರ್ಭಿಣಿಯರು ಸೇವಿಸಬಹುದಾಗಿದೆ. ಇದು ಅಬೃತದಂತೆ ಕೆಲಸ ಮಾಡುತ್ತದೆ.
೧೨. ಕರ್ಬೂಜ ಬೀಜಗಳನ್ನು ತಿನ್ನುವುದರಿಂದ ಕರುಳಿನ ಹುಳಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕೆಮ್ಮು, ಜ್ವರ , ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ