ಸ್ಲಿಮ್ ಆಗಬೇಕೇ? ಈ ಎಣ್ಣೆಯನ್ನು ಬಳಸಿ!

  • by

ತೂಕ ಇಳಿಸಿಕೊಳ್ಳಲು ನೀವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಆಯಾಸಗೊಂಡಿದ್ದರೆ ಮತ್ತು ನಿಮ್ಮ ಹೆಚ್ಚುವರಿ ಕೊಬ್ಬಿನಲ್ಲಿ ಒಂದು ಇಂಚು ಕಡಿಮೆಯಾಗುವುದನ್ನು ನೀವು ಕಾಣದಿದ್ದರೆ, ನೀವು ಇಲ್ಲಿಯವರೆಗೆ ತೆಂಗಿನ ಎಣ್ಣೆ ಪರಿಹಾರಗಳನ್ನು ಪ್ರಯತ್ನಿಸದಿರಬಹುದು. ಇಂತಹ ಅನೇಕ ಅಂಶಗಳು ತೆಂಗಿನ ಎಣ್ಣೆಯಲ್ಲಿ ಕಂಡುಬರುತ್ತವೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ನೀವು ಎಲ್ಲಾ ವಿಧಾನ ಅನುಸರಿಸಿ, ಆಯಾಸಗೊಂಡಿದ್ದರೆ, ಯೋಚಿಸಬೇಕಿಲ್ಲ. ನೀವು ಯಾವತ್ತೂ ಉಪಯೋಗಿಸದ ತೆಂಗಿನ ಎಣ್ಣೆಯಿಂದ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ತೆಂಗಿನ ಎಣ್ಣೆ ತೂಕ ಇಳಿಸಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ. ಇಲ್ಲಿದೆ ಮಾಹಿತಿ.


Can Coconut Oil ,Help Lose Weight, 

ತೆಂಗಿನ ಎಣ್ಣೆ, ತೂಕ ಇಳಿಕೆ, ಆರೋಗ್ಯ ಪ್ರಯೋಜನ

ತೆಂಗಿನ ಎಣ್ಣೆ ಕೂದಲು ಮತ್ತು ಚರ್ಮವನ್ನು ಪೋಷಿಸುತ್ತದೆ. ಆದ್ರೆ ಹೆಚ್ಚಿನ ಕೊಬ್ಬನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆ ಬಳಸಬಹುದು. ತೆಂಗಿನ ಎಣ್ಣೆಯಲ್ಲಿ ಸಾಕಷ್ಟು ಪರಿಹಾರಗಳಿವೆ. ತೆಂಗಿನ ಎಣ್ಣೆ ದೇಹವನ್ನು ವಿಶ್ರಾಂತಿ ಮಾಡುವುದರ ಜತೆಗೆ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. 

ತೆಂಗಿನ ಎಣ್ಣೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರೀಯಗೊಳಿಸುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ನಿಯಂತ್ರಣದಲ್ಲಿಡುತ್ತದೆ. ತೆಂಗಿನ ಎಣ್ಣೆಯಲ್ಲಿ ಉದ್ದವಾದ ಕೊಬ್ಬಿನಾಮ್ಲಗಳಿದ್ದು, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. 

ಇನ್ನು ಅಡುಗೆಗೆ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ತುಂಬಾ ಪ್ರಯೋಜನಕಾರಿ. ನಿಮ್ಮ ದೈನಂದಿನ ಬಳಕೆಯಲ್ಲಿ ಅಡುಗೆ ಎಣ್ಣೆ ಬದಲು, ತೆಂಗಿನ ಎಣ್ಣೆಯನ್ನು ಬಳಸಬಹುದು. ಆಹಾರದಲ್ಲಿ ತೆಂಗಿನ ಎಣ್ಣೆ ಬಳಸುವುದರಿಂದ ಕೊಬ್ಬು ಕಡಿಮೆ ಸಂಗ್ರಹವಾಗುತ್ತದೆ. 

ತೆಂಗಿನ ಎಣ್ಣೆ ಮತ್ತು ಜೇನುತುಪ್ಪ 

ತೂಕ ನಷ್ಟಕ್ಕೆ ಜೇನುತುಪ್ಪವನ್ನು ಸಹ ಬಳಸಲಾಗುತ್ತದೆ. ತೆಂಗಿನ ಎಣ್ಣೆಯ ಜತೆಗೆ ಜೇನುತುಪ್ಪವನ್ನು ಸೇವಿಸುವುದರಿಂದ ದೀರ್ಘ ಸಮಯದವರೆಗೂ ಹಸಿವಾಗುವುದಿಲ್ಲ. ತೆಂಗಿನ ಎಣ್ಣೆ ಮತ್ತು ಜೇನುತುಪ್ಪ ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ೧ ಗ್ಲಾಸ್ ಬಿಸಿನೀರಿನಲ್ಲಿ ಸೇರಿಸಿ. ಬೆಳಿಗ್ಗೆ ಈ ಮಿಶ್ರಣವನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಬಹುದು. 

Can Coconut Oil ,Help Lose Weight, 

ತೆಂಗಿನ ಎಣ್ಣೆ, ತೂಕ ಇಳಿಕೆ, ಆರೋಗ್ಯ ಪ್ರಯೋಜನ

ತೆಂಗಿನ ಎಣ್ಣೆ ಹಾಗೂ ಗ್ರೀನ್ ಟೀನ

ತೂಕ ಇಳಿಸಿಕೊಳ್ಳಲು ಬಯಸುವವರು, ಗ್ರೀನ್ ಟೀ ಸೇವಿಸುವುದು ತುಂಬಾ ಪ್ರಯೋಜನಕಾರಿ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಜತೆಗೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಹೆಚ್ಚು ಹಸಿವಾಗುವುದಿಲ್ಲ. ಇದರಿಂದ ಕಾಲ ಕಾಲಕ್ಕೆ ತೆಗೆದುಕೊಳ್ಳುವುದರಿಂದ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. 

ಇನ್ನು ಹೊಟ್ಟೆಯ ಭಾಗದಲ್ಲಿ ಹೆಚ್ಚು ಬೊಜ್ಜು ಇರುವವವರು ತೆಂಗಿನ ಎಣ್ಣೆಯನ್ನು ಈ ರೀತಿಯಾಗಿ ಉಪಯೋಗಿಸಬಹುದು.

ನೀವು ಕಚ್ಚಾ ತೆಂಗಿನಎಣ್ಣೆಯನ್ನು ನಿಯಮಿತವಾಗಿ ಬಳಸಿದರೆ, ಸರಿಯಾಗಿ ಬಳಸಿದರೆ, ೧ ತಿಂಗಳೊಳಗೆ ೪ ರಿಂದ ೬ ಪೌಂಡ್ ಗಳಷ್ಟು ತೂಕ ಇಳಿಸಬಹುದು. ಅಂದರೆ ತೆಂಗಿನ ಎಣ್ಣೆ ಜೀವಕೋಶಗಳನ್ನು ಪೋಷಿಸಲು ನೆರವಾಗುತ್ತದೆ. ಇದು ತಕ್ಷಣಕ್ಕೆ ಕೊಬ್ಬನ್ನು ನಿಯಂತ್ರಿಸುತ್ತದೆ. ಕೊಬ್ಬು ಸಂಗ್ರಹವಾದಾಗ ಬೊಜ್ಜು ಉಂಟಾಗುತ್ತದೆ. ಕಚ್ಚಾ ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಆಹಾರ ವನ್ನು ಸೇವಿಸಿದಾಗ ಅದು ನೇರವಾಗಿ ಯಕೃತ್ತನ್ನು ತಲುಪಿ, ಜೀವಕೋಶಗಳಲ್ಲಿ ಹರಡಿ, ಕೊಬ್ಬಿನ ಕಣಗಳನ್ನು ಅದರ ಕಡೆಗೆ ಎಳೆಯುತ್ತದೆ. 

ತೆಂಗಿನ ಎಣ್ಣೆ ಶಕ್ತಿ ಹೆಚ್ಚಿಸುತ್ತದೆ. 

ತೆಂಗಿನ ಎಣ್ಣೆ ಜೀರ್ಣಿಸಿಕೊಳ್ಳಲು ಸುಲಭ. ಏಕೆಂದರೆ ಇದರಲ್ಲಿ ಕಡಿಮೆ ಕೊಬ್ಬಿನಾಮ್ಲಗಳಿವೆ. ತೆಂಗಿನ ಎಣ್ಣೆ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಎನರ್ಜಿ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಆಹಾರದಲ್ಲಿ ಪ್ರತಿ ದಿನ ಎರಡು ಅಥವಾ ಮೂರು ಚಮಚ ತೆಂಗಿನ ಎಣ್ಣೆಯನ್ನು ಬಳಸಬಹುದು. 

ಹಸಿವನ್ನು ನಿಯಂತ್ರಿಸಲು 

ತೆಂಗಿನ ಎಣ್ಣೆಯಿಂದ ತಯಾರಿಸಿದ ಆಹಾರ ಸೇವಿಸಿದರೆ, ನಿಮ್ಮ ಹಸಿವು ನಿವಾರಣೆಯಾಗುತ್ತದೆ. ಇದರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಗಳು ಇರುವುದರಿಂದ ಇದು ಹೆಚ್ಚಿನ ಕ್ಯಾಲೋರಿಗಳನ್ು ಹೊಂದಿರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ೨-೩ ಬಾರಿ ಸೇವಿಸುವುದರಿಂದ ೧ ವಾರದೊಳಗೆ ತಿಂಡಿ, ಸ್ನ್ಯಾಕ್ಸ್ ಹೆಚ್ಚಾಗಿ ಸೇವಿಸುವ ಅಭ್ಯಾಸವನ್ನು ಸುಲಭವಾಗಿ ನಿಯಂತ್ರಿಸಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ