ಬೇಸಿಗೆ ಕಾಲದಲ್ಲಿ ತಂಪಾದ ಮೊಸರು ಹಾಗೂ ಮಜ್ಜಿಗೆಯನ್ನು ಇಷ್ಟಪಡುತ್ತಾರೆ. ಪ್ರತಿ ದಿನ ಮೊಸರು ತಿಂದರೆ ಶೀತ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಮೊಸರು ಹಾಗೂ ಮಜ್ಜಿಗೆ ಸೇವನೆಯಿಂದ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ.
ನಿಮಗೆ ವಾಕರಿಕೆ ಹಾಗೂ ಎದೆಯೂರಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಮಜ್ಜಿಗೆ ಅಥವಾ ಮೊಸರು ತೆಗೆದುಕೊಂಡರೆ, ಆಗ ನೀವು ಈ ಸಮಸ್ಯೆಯನ್ನು ಹೊಗಲಾಡಿಸಬಹುದು.ಮೊಸರು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ವಿಶೇಷವಾಗಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಉಪಹಾರಕ್ಕಾಗಿ ಮೊಸರು ಮತ್ತು ಮಜ್ಜಿಗೆಯನ್ನು ಸೇವಿಸಿ. ನೀವು ಉಪಹಾರಕ್ಕಾಗಿ ಪರಾಟಾ ತಯಾರಿಸುತ್ತಿದ್ದರೆ, ರೈತಾಗೆ ಸೌತೆಕಾಯಿ, ಟೊಮ್ಯಾಟೋ , ಕಲ್ಲು ಉಪ್ಪು ಮತ್ತು ಮೆಣಸು ಸೇರಿಸಿ ಸವಿಯಬಹುದು.

ಮಜ್ಜಿಗೆಯನ್ನು ತಯಾರಿಸುತ್ತಿದ್ದರೆ, ಇದಕ್ಕೆ ಪುದೀನಾ, ಕೊತ್ತಂಬರಿ, ಕರಿಬೇವು ಎಲೆಗಳನ್ನು ಪುಡಿ ಮಾಡಿ, ಮಿಶ್ರಣ ಮಾಡಬಹುದು.
ದೇಹಕ್ಕೆ ಮೊಸರು ಹೆಚ್ಚು ಶಕ್ತಿಯನ್ನು ನೀಡುತ್ತದೆ ಹಾಗೂ ತೂಕವನ್ನು ನಿಯಂತ್ರಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಹೆಚ್ಚಿನ ದೈಹಿಕ ಸಮಸ್ಯೆಗಳು ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆಯ ಹಾಗಾಗಿ ಮೊಸರು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಬಹುದು.
ಮಜ್ಜಿಗೆಯನ್ನು ಹೆಚ್ಚು ತಂಪು ಪಾನೀಯವಾಗಿ ಉಪಯೋಗಿಸಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವನ್ನು ತಂಪಾಗಿಡುವುದಲ್ಲದೇ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ರೋಗ ಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಪೂರೈಸುತ್ತದೆ. ಬ್ಯಾಕ್ಟೇರಿಯಾ , ಕಾರ್ಬೋಹೈಡ್ರೇಟ್ ಮತ್ತು ಲ್ಯಾಕ್ಟೋಸ್ ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಮಜ್ಜಿಗೆಯನ್ನು ತಯಾರಿಸುವುದು ತುಂಬಾ ಅವಶ್ಯಕ.
ಮಜ್ಜಿಗೆಯಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ..!
ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ
ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಮಜ್ಜಿಗೆ ಬಹಳ ಉಪಯುಕ್ತ ಎಂದು ಹೇಳಬಹುದು. ಏಕೆಂದರೆ ಪ್ರೋಬಾಟಿಕ್ ಗಳಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಕರುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆ್ಯಸಿಡಿಟಿ ಸಮಸ್ಯೆಗೆ ರಾಮಬಾಣ!
ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಆ್ಯಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಆ್ಯಸಿಡಿಟಿ ಸಮಸ್ಯೆ ಯಿಂದ ಆರೋಗ್ಯ ಮತ್ತಷ್ಟು ಹದಗೆಡುವ ಸಂಭವ ಹೆಚ್ಚು. ಹಾಗಾಗಿ ಮಜ್ಜಿಗೆಯನ್ನು ಸೇವಿಸುವುದರಿಂದ ಆ್ಯಸಿಡಿಟಿಗೆ ತಕ್ಷಣ ಪರಿಹಾರ ಸೀಗುತ್ತದೆ. ಹೊಟ್ಟೆಯ ಕಿರಿಕಿರಿಗೆ ಪರಿಹಾರ ನೀಡುತ್ತದೆ ಎಂದು ಹೇಳಬಹುದು. ಮಸಾಲೆಯುಕ್ತ ಆಹಾರಗಳು ನಮ್ಮ ಕಿಬ್ಬೊಟ್ಟೆಯ ಉಬ್ಬುವಿಕೆಗೆ ಕಾರಣವಾಗುತ್ತವೆ. 1 ಲೋಟ ಮಜ್ಜಿಗೆಯನ್ನು ಕುಡಿಯುವುದರಿಂದ ಅನೇಕ ಮಸಾಲೆ ಪದಾರ್ಥಗಳ ಸೇವನೆಯಿಂದ ಉಂಟಾಗುವ ಪರಿಣಾಮವನ್ನು ತಡೆಯುತ್ತದೆ.
ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ..!
ಮಜ್ಜಿಗೆಯಲ್ಲಿ ಬಯೋ ಆ್ಯಕ್ಟಿವ್ ಪ್ರೋಟೀನ್ ಇದ್ದು, ಇದು ದೇಹದಲ್ಲಿನ ಕೊಲೆಸ್ರ್ಟಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೇರಿಯಾ ವಿರೋಧಿ ಹಲವು ರೋಗಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತೂಕ ನಷ್ಟಕ್ಕೆ ಸಹಾಯಕಾರಿ
ನಿಯಮಿತವಾಗಿ ಮಜ್ಜಿಗೆಯನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಜ್ಜಿಗೆಯಲ್ಲಿ ಕ್ಯಾಲೋರಿ ಮತ್ತು ಕೊಬ್ಬು ತುಂಬಾ ಕಡಿಮೆ ಇರುವುದರಿಂದ ಇದು ಫ್ಯಾಟ್ ಬರ್ನ್ ಆಗಿ ಕಾರ್ಯ ನಿರ್ವಹಿಸುತ್ತದೆ.ಬೇಸಿಗೆಯಲ್ಲಿ ಹಲವು ಜನರು ಬೆವರುತ್ತಾರೆ. ಹಲವರು ನೀರ್ಜಲಿಕರಣ ಸಮಸ್ಯೆ ಎದುರಿಸುತ್ತಿರುತ್ತಾರೆ. ಆದ್ರೆ ಮಜ್ಜಿಗೆಯನ್ನು ಸೇವಿಸುವುದರಿಂದ ದೇಹದ ನೀರಿನ ಕೊರೆತೆಯನ್ನು ನೀಗಿಸಬಹುದು.
ಮಜ್ಜಿಗೆ ಹಾಗೂ ಜೇನುತುಪ್ಪ
ಮಜ್ಜಿಗೆ ಹಾಗೂ ಜೇನುತುಪ್ಪದ ಮಿಶ್ರಣ ದೇಹದ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಮೆದುಳಿನ ಕಾರ್ಯಗಳನ್ನು ಸರಿಯಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಮೆಮೊರಿ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೊಸರು ಸೇವಿಸದ್ರೆ ಯಾವೆಲ್ಲಾ ಪ್ರಯೋಜನಗಳಿವೆ..?
ಬೇಸಿಗೆಯಲ್ಲಿ ಹೆಚ್ಚುವರಿ ಕಾಳಜಿ ವಹಿಸುವುದು ಮುಖ್ಯ. ನಿಂಬೆ ಪಾನಕ ಹಾಗೂ ಕಲ್ಲಂಗಡಿ ಹಣ್ಣನ್ನು ಸೇವಿಸುತ್ತೇವೆ. ಆದ್ದರಿಂದ ಬೇಸಿಗೆಯಲ್ಲಿ ನಾವು ಸದ್ಯ ಫಿಟ್ ಆಗಿರಬೇಕು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಮೊಸರು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಬಹುದು. ಮೊಸರು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ
ಮೊಸರಿನಲ್ಲಿ ಪ್ರೋಬಯಾಟಿಕ್ ಹೆಚ್ಚಾಗಿರುವುದರಿಂದ, ಇದು ರೋಗ ನಿರೋಧಕ ವ್ಯವಸ್ಥೆಗೆ ಬಹಳ ಪ್ರಯೋಜನಕಾರಿಯಾಗಿದೆ. ಪ್ರೋಬಯಾಟಿಕ್ ಗಳು ಬ್ಯಾಕ್ಟೇರಿಯಾ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಹೃದ್ರೋಗಕ್ಕೆ ಮುಖ್ಯ ಕಾರಣ ಹೆಚ್ಚುತ್ತಿರುವ ಕೊಲೆಸ್ಟ್ರಾಲ್. ಮೊಸರು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ
ರಕ್ತದೋತ್ತಡವನ್ನು ಕಡಿಮೆ ಮಾಡುತ್ತದೆ.
ಮೊಸರಿನಲ್ಲಿ ವಿಟಮಿನ್ ಸಿ ಹಾಗೂ ಡಿ ಅತ್ಯುತ್ತಮ ಮೂಲವೆಂದೇ ಹೇಳಬಹುದು. ಮೂಳೆ ಹಾಗೂ ಹಲ್ಲಗಳನ್ನ ಬಲವಾಗಿಡಲು ಮೊಸರು ನೆರವಾಗುತ್ತದೆ.