ತುಪ್ಪ ಹಾಕಿ ಮಾಡುವ ಪ್ರತಿ ಪದಾರ್ಥ ಎಲ್ಲರಿಗೂ ಇಷ್ಟವಾಗದೇ ಇರದು..ಎಲ್ಲರ ಅಡುಗೆ ಮನೆಯಲ್ಲೂ ಬೆಣ್ಣೆ ಅಥವಾ ತುಪ್ಪ ಇದ್ದೇ ಇರುತ್ತದೆ. ಬೆಣ್ಣೆ ಹಾಗೂ ತುಪ್ಪದಲ್ಲಿ ಹೆಚ್ಚು ಪೋಷ್ಟಿಕಾಂಶ ವಿರುವುದರಿಂದ ಇದನ್ನು ಅಡುಗೆಗೆ ಬಳಸಲಾಗುತ್ತದೆ. ಇನ್ನು ಬೆಣ್ಣೆ ಅಂದರೆ ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಬೆಣ್ಣೆ ನೋಡಿದ್ರೆ ಸಾಕು ಕೃಷ್ಣನ ಹಾಗೇ ಕದ್ದು ತಿನ್ನುತ್ತಾರೆ. ಬೆಣ್ಣೆಯಲ್ಲಿ ಒಳ್ಳೆಯ ಕೊಬ್ಬಿನಂಶ ಸಹ ಇರುತ್ತದೆ. ಹಾಗೆಯೇ ಕೆಟ್ಟ ಕೊಬ್ಬಿವಂಶ ಸಹ ಇದೆ. ಬೆಣ್ಣೆಯನ್ನು ಸಾಮಾನ್ಯವಾಗಿ ಆಹಾರದ ಜತೆಗೆ ಸೇವಿಸುತ್ತೇವೆ.

ಬೆಣ್ಣೆ ಅಥವಾ ತುಪ್ಪ ಯಾವುದು ಬೆಸ್ಚ್ .. ?
ತುಪ್ಪ ಹಾಗೂ ಬೆಣ್ಣೆ ಎರಡೂ ಆರೋಗ್ಯಕರವಾದ ಆಹಾರಗಳು.. ಎರಡರಲ್ಲೂ ಪೋಷಕಾಂಶಗಳು ಅಧಿಕವಾಗಿರುತ್ತವೆ. ತುಪ್ಪ ಹಾಗೂ ಬಣ್ಣೆ ಅದರದೇ ಆದ ರುಚಿ ಹಾಗೂ ಆರೋಗ್ಯಕರ ಗುಣಗಳನ್ನ ಹೊಂದಿದೆ. ಲ್ಯಾಕ್ಟೋಸ್ ಅಸಮತೋಲನ ಇರುವವರಿಗೆ ಬೆಣ್ಣೆಗಿಂತ ತುಪ್ಪ ಅತ್ಯುತ್ತಮ ಎಂದು ಹೇಳಬಹುದು.
ಬೆಣ್ಣೆಯ ಪ್ರಯೋಜನಗಳೇನು?
ಕೆಲವರಿಗೆ ಬೆಣ್ಣೆ ತಿಂದರೆ ಅಲರ್ಜಿ ಉಂಟಾಗುತ್ತದೆ. ಅದಕ್ಕೆ ಕಾರಣ ಲ್ಯಾಕ್ಟೋಸ್ ಅಂಶ. ಇದರಲ್ಲಿರುವ ಹಾಲಿನ ಪ್ರೋಟೀನ್ ಲ್ಯಾಕ್ಟೋಸ್ ಅಸಮತೋಲನ ಇರುವ ವ್ಯಕ್ತಿಗಳಲ್ಲಿ ಗುಳ್ಳೆಗಳು, ತುರಿಕೆ, ಅಸ್ತಾಮಾ ಉಲ್ಭಣ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ತುಪ್ಪದಲ್ಲಿ ಯಾವುದೇ ಹಾಲಿನ ಪ್ರೋಟೀನ್ ಅಂಶವಿರುವುದಿಲ್ಲ. ಹಾಗಾಗಿ ಲ್ಯಾಕ್ಟೋಸ್ ಅಸಮತೋಲನ ಇರುವವರಿಗೆ ತುಪ್ಪ ಉತ್ತಮ ಎಂದು ಹೇಳಬಹುದು.

100 ಗ್ರಾಂ ತುಪ್ಪದಲ್ಲಿ ಪೋಷಕಾಂಶಗಳೆಷ್ಟು?
100 ಗ್ರಾಂ ತುಪ್ಪದಲ್ಲಿ 1.24 ಗ್ರಾಂ ನೀರು, 87% ಕ್ಯಾಲೋರಿ, 1.28 ಪ್ರೋಟೀಲ್ , 4 ಮಿ.ಗ್ರಾಂ ಕ್ಯಾಲ್ಸಿಯಂ , 3 ಮಿಗ್ರಾಂ ರಂಜಕ ,22.3 ಮೀ.ಗ್ರಾಂ ಖೊಲೈನ್ ಹಾಗೂ ವಿಟಮಿನ್ ಎ. ಬಿ 2 . ವಿಟಮಿನ್ ಬಿ 2 , ವಿಟಮಿನ್ ಬಿ 3 ಅಂಶಗಳಿವೆ. ತುಪ್ಪದಲ್ಲಿ ಕೊಬ್ಬಿನಂಶವಿದ್ದು , ಇದು ಚಯಾಪಚಯ ಕ್ರಿಯೆಗೆ ತುಂಬಾ ಉಪಯೋಗರವಾಗಿದೆ.
ಬೆಣ್ಣೆಯ್ಲಲಿ ಪೋಷಕಾಂಶಗಳೆಷ್ಚು..?
ಬೆಣ್ಣೆಯಲ್ಲಿ 16.17 ಗ್ರಾಂ ನೀರು , ೭೧೭೧ ಕ್ಯಾಲೋರಿ ಶಕ್ತಿ. 1. 85 ಗ್ರಾಂ ಪ್ರೋಟೀನ್ , 24 ಮೀ.ಗ್ರಾಂ ರಂಜಕ , 684 ಮಿ.ಗ್ರಾಂ ಹಾಗೂ ವಿಟಮಿನ್ ಎ , 671 ಮಿ.ಗ್ರಾಂ ರೆಟಿನೋಲ್ , 158 ಮೀ.ಗ್ರಾಂ ಕ್ಯಾರೋಟಿನ್ ಹಾಗೂ ಸ್ವಲ್ಪ ಕೊಬ್ಬಿನಂಶವಿದೆ.
ತುಪ್ಪ ಸೇವಿಸುವುದರಿಂದ ಪ್ರಯೋಜನಗಳೇನು.. ?
ತುಪ್ಪ ತಿನ್ನುವುದರಿಂದ ಗ್ಯಾಸ್ರ್ಚಿಕ್ ಸಮಸ್ಯೆಯಿಂದ ದೂರ ಇರಬಹುದು. ಹಾಲಿನ ಅನೇಕ ಅನಗತ್ಯ ಸತ್ವಗಳು, ತುಪ್ಪದಲ್ಲಿ ಇರುತ್ತವೆ. ತುಪ್ಪ ಹಾನಿಕಾರಕವಲ್ಲ. ಆದ್ರೆ ಅತಿಯಾದರೆ ಅಮೃತವು ವಿಷ. ಹಾಗಾಗಿ ದಿನಕ್ಕೆ 2 ಚಮಚದಷ್ಟು ತುಪ್ಪ ಸೇವಿಸಿದರೆ ಉತ್ತಮ. ಹೀಗೆ ತೆಗೆದುಕೊಳ್ಳುವುದರಿಂದ ನಿಮ್ಮ ಜೀವನ ಶೈಲಿ , ಡಯೆಟ್ ಗೆ ಪೂರಕವಾಗಿ ತುಪ್ಪ ಕೆಲಸ ಮಾಡುತ್ತದೆ. ಕೆಲವರಿಗೆ ತುಪ್ಪ ತಿನ್ನಬಾರದು ಎಂದು ಹೇಳಿರುತ್ತಾರೆ. ಹೀಗಾಗಿಗ ಆಹಾರ ಕ್ರಮ . ಮನೆ ಔಷಧಿ ಪ್ರಯೋಗಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ.

ಜೀರ್ಣಕ್ರಿಯೆಗೆ ತುಪ್ಪ ಒಳ್ಳೆಯದು..!
ಹೊಟ್ಟೆ ಅಪ್ ಸೆಟ್ ಆಗೋದು ಕಾಮನ್. ಅಂಥ ಸಮಯದಲ್ಲಿ ತುಪ್ಪ ಅತ್ಯುತ್ತಮ ಮನೆ ಮದ್ದು ಎಂದು ಹೇಳಲಾಗುತ್ತದೆ. ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ತುಪ್ಪ ಒಳಗೊಂಡಿರುತ್ತದೆ.
ತುಪ್ಪದಲ್ಲಿ ತಿಂಡಿಗಳನ್ನು ಕರಿಯಬಹುದು. ಆದ್ರೆ ಬೆಣ್ಣೆಯನ್ನು ಅಡುಗೆಗೆ ಬಳಸಬದುದೇ ಹೊರೆತು ತಿಂಡಿ ಕರಿಯಲು ಸಾಧ್ಯವಿಲ್ಲ .. ಬೆಣ್ಣೆ ಆಹಾರಕ್ಕೆ ಬಳಸಿದರೆ ಆಹಾರ ರುಚಿಕರವಾಗಿರುತ್ತದೆ. ಆದ್ರೆ ಬೆಣ್ಣೆಯ ಪ್ರತ್ಯೇಕ ರುಚಿ ಸೀಗುವುದಿಲ್ಲ. ವಿಟಮಿನ್ ಇ ಇದ್ದು, ಆ್ಯಂಟಿ ಆಕ್ಯಿಡೆಂಟ್ ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಎಣ್ಣೆಯನ್ನು ಹೆಚ್ಚಿನ ಉಷ್ಣತೆಯಿಂದ ಕಾಯಿಸಿದರೆ ಎಣ್ಣೆಗಳು ಕಾರ್ಸಿನೋಜೆನಿಕ್ ಫ್ರೀ ರಾಡಿಕಲ್ ಬಿಡುಗಡೆ ಮಾಡುತ್ತವೆ. ಹೃದಯ ಆರೋಗ್ಯಕ್ಕು ತುಪ್ಪ ಒಳ್ಳೆಯದು ಎಂದು ಹೇಳಲಾಗುತ್ತದೆ.