ಸೂಪ್ ಎಂದರೆ ಎಲ್ಲರಿಗೂ ಇಷ್ಟವಾಗುವ ಪದಾರ್ಥ.. ಹವಾಮಾನ ಹೇಗೆ ಏರಲಿ.. ಸೂಪ್ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ದೇಹವನ್ನು ಸಧೃಢವಾಗಿರಲು ಮತ್ತು ಪೌಷ್ಟಿಕಾಂಶವನ್ನು ಹೆಚ್ಚಿಸಲು ನಿಮ್ಮ ನೆಚ್ಚಿನ ಸೂಪ್ ಗಳನ್ನು ಮನೆಯಲ್ಲೇ ತಯಾರಿಸಿ ಸವಿಯಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸೂಪ್ ಮಹತ್ವದ ಪಾತ್ರ ವಹಿಸುತ್ತದೆ.ಕಡಿಮೆ ಮಸಾಲೆಯುಕ್ತ, ಪೌಷ್ಟಿಕ ಮತ್ತು ರುಚಿಕರವಾದ ಈಸೂಪ್ ಗಳು ಉತ್ಕರ್ಷಣಾ ನಿರೋಧಕಗಳಿಂದ ಕೂಡಿವೆ. ಅಲ್ಲದೇ ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಿಸಿಕೊಳ್ಳಲು ಸುಲಭವಾದ ತರಕಾರಿ ಸೂಪ್ ಗಳು ದೇಹಕ್ಕೆ ವಿಟಮಿನ್ ಮತ್ತು ಫೈಬರ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಸೂಪ್ ಹೇಗೆ ತಯಾರಿಸಬಹುದು. ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

ಸೂಪ್ ಗಳ ಆರೋಗ್ಯಕರ ಪಾಕ ವಿಧಾನಗಳು ಹೀಗಿವೆ..!
ಔಷಧಿಯಾಗಿ ಸೂಪ್ ಬಳಕೆ..!
ಸೂಪ್ ನು ಔಷಧಿಯಾಗಿ ಬಳಸಲಾಗುತ್ತದೆ. ಆಗಾಗ್ಗೆ ಹೊಟ್ಟೆ ನೋವು ಅಥವಾ ಆಹಾರವನ್ನು ಅಗಿಯುವಲ್ಲಿ ತೊಂದರೆ ಇದೆ ಎಂದು ಹೇಳುವವರು, ಸೂಪ್ ಸೇವಿಸುವುದು ಒಳ್ಳೆಯದು. ವೈದ್ಯರು ಲಘು ಆಹಾರ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಕಾರಣವೆಂದರೆ ಸುಲಭವಾಗಿ ಜೀರ್ಣವಾಗುತ್ತದೆ. ಇದಲ್ಲದೇ ಇದು ರಕ್ತದೋತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸೂಪ್ ನಲ್ಲಿ ಖನಿಜಗಳು ಹಾಗೂ ಜೀವಸತ್ವಗಳು ಇರುವುದರಿಂದ ಇದು ನಮ್ಮ ದೇಹವನ್ನು ಡಿ ಹೈಡ್ರೇಷನ್ ನಿಂದ ರಕ್ಷಿಸುತ್ತದೆ. ನಿಮಗೆ ಶೀತ ಅಥವಾ ಜ್ವರ ಇದ್ದರೆ, ತರಕಾರಿ ಸೂಪ್ ಉತ್ತಮ ಎಂದು ಹೇಳಲಾಗುತ್ತದೆ.
ಹೆಚ್ಚಿನ ಫೈಬರ್…!
ಮಕ್ಕಳು ಹೆಚ್ಚಿನ ತರಕಾರಿಗಳನ್ನು ವಿಶೇಷವಾಗಿ ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದರಿಂದ ದೂರ ವಿರುತ್ತಾರೆ. ಮಕ್ಕಳ ಬೆಳವಣಿಗೆಗೆ ಹೆಚ್ಚು ಪ್ರೋಟೀನ್ ಹಾಗೂ ಖನಿಜ ಅಗತ್ಯವಿರುತ್ತದೆ. ಅದರಲ್ಲೂ ಮಕ್ಕಳಿಗೆ ಹೆಚ್ಚು ಅಗತ್ಯವಿದೆ. ಆದ್ರೆ ಸೂಪ್ ನಲ್ಲಿ ಎಲ್ಲಾ ತರಕಾರಿಗಳನ್ನು ಬಳಸಬಹುದು.

ತೂಕ ನಷ್ಟಕ್ಕೂ ಸೂಪ್ ಪರಿಣಾಮಕಾರಿ
ತೂಕವನ್ನು ಇಳಿಕೆ ಮಾಡಲು ಬಯಸುವವರು, ಸೂಪ್ ಸೇವಿಸುವುದು ಉತ್ತಮ, ಎಲೆಕೋಸು ಸೂಪ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸೂಬ್ ಕೊಬ್ಬು ನಿಯಂತ್ರಣದಲ್ಲಿಡುವುದಲ್ಲದೇ, ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ.
ಸೌಂದರ್ಯ ಹೆಚ್ಚಿಸುತ್ತೆ ಸೂಪ್…
ಆರೋಗ್ಯದ ಜತೆಗೆ ಸೂಪ್ ಸೌಂದರ್ಯ ಹೆಚ್ಚಿಸುತ್ತದೆ. ಸೂಪ್ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಫೈಬರ್ ಹಾಗಬ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚು ಪಡೆಯಬಹುದು. ಅಕಾಲಿಕ ವಯಸ್ಸಾಗುವಿಕೆಯನ್ನು ಇದು ತಡೆಗಟ್ಟುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ನಿಮ್ಮ ದೇಹ ಸಧೃಡವಾಗಿಡಲು ಹಾಗೂ ಆರೋಗ್ಯಕರವಾಗಿಡಲು ನೆರವಾಗುತ್ತದೆ.
ಪಪ್ಪಾಯಿ ಸೂಪ್

ತಯಾರಿಸುವ ವಿಧಾನ..!
ಪ್ರೆಷರ್ ಪ್ಯಾನ್ ಒಲೆ ಮೇಲೆ ಇಟ್ಟು ಬೆಣ್ಣೆ ಹಾಕಿ ಕರಗಿಸಿ. ನಂತರ ಹೆಚ್ಚಿದ ನೀರುಳ್ಳಿಯನ್ನು ಹುರಿಯಿರಿ. ಅರ್ಧದಷ್ಟನ್ನು ತೆಗೆದು ಬದಿಗಿರಿ. ಬಳಿಕ ಹೆಚ್ಚಿದ ಕ್ಯಾರೆಟ್ ಹೋಳುಗಳು ಹಾಗೂ ಪಪ್ಪಾಯಿ ಹೋಳುಗಳು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹುರಿಯಿರಿ.ಮುಳುಗುವಷ್ಟು ನೀರು ಹಾಕಿ. ಜಜ್ಜಿದ ಶುಂಠಿ ಹಾಗೂ ಜೀರಿಗೆಗಳನ್ನು ಒಂದು ತೆಳು ಬಟ್ಟೆಯಲ್ಲಿ ಕುಟ್ಟಿ. ಇದರಲ್ಲಿ ಮುಳುಗಿಸಿ ಚೆನ್ನಾಗಿ ಬೇಯಿಸಿ. ಆರಿದ ಬಳಿಕ ಬಟ್ಟೆ ಗಂಟನ್ನು ತೆಗೆದಿರಿಸಿ, ಮಿಕ್ಸಿಗೆ ಹಾಕಿ ತಿರುವಿ ಸೋಸಿ. ಬೇಕಾದಷ್ಟು ನೀರು ಹಾಕಿ ಪುನಃ ಕುದಿಸಿ. ಉಪ್ಪು ಕರಿಮೆಣಸಿನ ಪುಡಿ ಹಾಕಿ ಉಳಿದ ಹುರಿದಿಟ್ಟ ನೀರುಳ್ಳಿಯನ್ನು ಹಾಕಿ. ಬೇಕಿದ್ದರೆ ತುರಿದ ಪನ್ನೀರ್ ಹಾಕಿ ಅಲಂಕರಿಸಿ.
ಪುದೀನಾ ಸೂಪ್
ಮಾಡುವ ವಿಧಾನ…!
ಒಗ್ಗರಣೆ ಪ್ಯಾನ್ ನಲ್ಲಿ ಎಣ್ಣೆ ಹಾಕಿ ಕಾಯಿಸಿ. ನಂತರ ಇದಕ್ಕೆ ಜೀರಿಗೆ , ಪುದೀನಾ , ಶುಂಠಿ ಪೇಸ್ಟ್ , ಕೊತ್ತಂಬರಿ ಮತ್ತು ಒಣಮೆಣಸಿನಕಾಯಿ ಹಾಕಿ ಕೈಯಾಡಿಸುತ್ತಿರಬೇಕು. 2 ನಿಮಿಷ ಬಿಟ್ಟು ಅವು ಚೆನ್ನಾಗಿ ಮಿಶ್ರಣ ಆದ ಮೇಲೆ ಅದಕ್ಕೆ ಮೂರು ಕಪ್ ನೀರು ಸೇರಿಸಿ. ಹುಣಸೆ ಹಣ್ಣಿನ ರಸ, ಬೆಲ್ಲ, ಉಪ್ಪು ಸೇರಿಸಿ ಕುದಿಸಬೇಕು. ಇಷ್ಟು ಮಾಡಿದರೆ ಆರೋಗ್ಯಕರ ಪುದೀನಾ ಸೂಪ್ ಸವಿಯಲು ಸಿದ್ಧ.
ತರಕಾರಿ ಸೂಪ್
ಬಾಣಲೆಯಲ್ಲಿ ಬೆಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಸ್ಪ್ರಿಂಗ್ ಆನಿಯನ್ , ಜಜ್ಜಿದ ಶುಂಠಿ ಹಾಕಿ ಕೈಯಾಡಿಸಿ , ಚೆನ್ನಾಗಿ ಫ್ರೈ ಆಗಿ ಬೆಂದ ಮೇಲೆ ಕತ್ತರಿಸಿ ಇಟ್ಟ ತರಕಾರಿಗಳನ್ನು ಹಾಕಿ ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹಾಕಿ ಕುದಿಸಿ. ಕುದಿ ಬಂದ ಮೇಲೆ ಕೊತ್ತಂಬರಿ ಸೊಪ್ಪು , ಉಪ್ಪು, ಕಾಳುಮೆಣಸು , ನಿಂಬೆರಸ ಸೇರಿಸಿ ಮಿಶ್ರಣ ಮಾಡಿ.